ಸುಳ್ಳೇ ಸರಿ...

ಸುಳ್ಳೇ ಸರಿ...

ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು   ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ  ಹೆಸರ ??  ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ ಪ್ರಶ್ನೆ ಮಲತಾಯಿಯ ಮಗು ..

ಬದುಕು ಅಧ್ಯಾತ್ಮದ , ಧೈವಾನುಭುತಿಯ  ಅವಕಾಶವ ? ಇಲ್ಲ ಸಾವಿನೆಡೆಗೆ ಮನುಜ ಮಾಡಿಕೊಳ್ಳುವ ಸಣ್ಣ ಪೂರ್ವ ಸಿದ್ದತೆಯ ?
ಪ್ರೀತಿ , ಸಂಬಂದ ,ಸ್ನೇಹ ,ದ್ವೇಷದ ಅವಶೇಷಗಳ ಕೆಳಗೆ ಮನುಕುಲ ಹುಡುಕುವುದು ತಾತ್ಕಾಲಿಕ ಮರೆವ , ನಶೆಯ ನಿಶೆಯ?
ಸಣ್ಣ  ಮಂಪರ ?ಮುಗಿದು ಹೋಗುವ ಆ ಜೋಂಪು , ದಿಟ್ಟಿಸಿ ನೋಡುವ ವಾಸ್ತವ , ಬಿಡದೆ ಕಾಡುವ ವ್ಯರಾಗ್ಯ !!  ನಡುವೆ ಸುಡುವ ಹೊಸ ಬಂಧಗಳು,  ಅವುಗಳ ತುಸು ಹಿಂದೆ ನಿಂತು ಅಣಕಿಸುವ ಹಳೆಯ ಅವಶೇಷದ ಧೂಳು .....

ಏತ ಹೋಗಲೋ ನಾನು ಸುತ್ತಲು ಕವಿದವನೇ
ಇತ್ತ ಬಾರದಿರೆಂಬ ದಾರಿಯೆಡೆಗೆ .... !!

ಇಂದು ನಿನ್ನೆಯೆದಲ್ಲ ಕಣ್ಣಿನ ದಣಿವು ,ದಿಟ್ಟಿಸೋ ಕಸುವು , ಆದರು ಮುಂಜಾವ ಕರೆಗೆ ನನ್ನ ಆರಂಬಿಸಿ , ಕತ್ತಲ ನಿದ್ದೆಗೆ ಜಾರಿಸಿ ಎಂತದೋ ಸುಂಕಕೆ , ಋಣಕ್ಕೆ ಸಿಲುಕಿ ನನ್ನ ಜೊತೆ ಸಾಗುವ ಬಗೆ...
ನನ್ನ ಬಿಟ್ಟು ಹೋಗಿ ಕ್ಷಣವೂ ದೂರವಿರದೆ ಮತ್ತೆ ಬಿಗಿದಪ್ಪುವ ಉಸಿರ ಬುಗ್ಗೆ ..,
ಸದಾ ನನ್ನೊಳಗೆ ಮೀಟುವ ,ನನ್ನ ಭಾವಗೀತೆಗಳಿಗೆ ಹಿನ್ನೆಲೆಯಾಗಿ ನನ್ನಾ ಕಾಲ ಚಕ್ರದೊಡನೆ ನೂಕುವ ಹೃದಯ ..,
ನನ್ನ ನಾನತ್ವಕ್ಕೆ , ಉಳಿವಿಗೆ , ಅಸ್ತಿತ್ವವೆ ಉದ್ದೇಶದಂತಿರುವ ಈ ದೇಹ ...,

ಈ ಪಯಣ ಎಲ್ಲಿಗೋ ಇರಬಹುದೆಂಬ ಸಮರ್ಥನೆ ಕೊಡುತಿದೆ.

ಎಲ್ಲರ ಬದುಕು ಈಗಿರಲಾರದೇನೋ ? :(
 ಪ್ರೀತಿಯ ಜೊಂಪು ಇಳಿಯದೆ ಬದುಕೆಲ್ಲ ಮಿಂದವರು ,
ಸಾಧನೆಯ ಎತ್ತು ದಾರಿ ಸವೆಸಿ ಆಯಸು ಕಳೆದು ...
ವಾಸ್ತವದೊಳಗೆ ವಾಸ್ತವಗಳ ಕೋಟೆ ಕಟ್ಟಿ ಮೆರೆದವರು ಇಲ್ಲೇ ಬದುಕಿದಾರಂತೆ .., ಸುಳ್ಳೇ ಸರಿ , ದ್ವಂದ್ವ ಮೀರಿ ಬದುಕಿದರಲ್ಲವೇ ನಿರ್ದಿಷ್ಟತೆ ??
 

Rating
No votes yet