ವಾಂಛೆ ...

ವಾಂಛೆ ...

ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ,  ಒಂದು ರೂಂನಷ್ಟು ಅಗಲ ..
ಆ  ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್   ಪಿ ಯು  ..ಕೆಮಿಸ್ಟ್ರಿಯದ್ದು
ಒಮ್ಮೆಗೆ ನೆನಪು ಹತ್ತು ವರುಷ ಜಾರಿತ್ತು ... 
ಕಾಲು ಮುರಿದು ವರುಷ ಹಾಳಗಿತ್ತು , ಇನೆನ್ನು ಹೊಸ ಬ್ಯಾಚ್ ನಲ್ಲಿ ಸೇರಿ ಇಂಜಿನಿಯರ್ ಹಾಗುವ ಕನಸು , ಆ ಕ್ಷಣದಲ್ಲಿ ನಡೆಯುತ್ತಿದ್ದ  ಸಿ ಇ ಟಿ ಪರೀಕ್ಷೆಯ ಗೊಂದಲ , ಹೆಚ್ಚಗಬಹುದಾದ ಫೀಸ್ ನೆನೆದು ನಮ್ಮ ಅಂತಸ್ತು ಅನುಮತಿಸುವುದಿಲ್ಲ ಎಂದು ವಿನಾಕಾರಣ ಅಳುತಿದದ್ದು . ಅಪ್ಪ ಅಮ್ಮನ ಮೇಲೆ ಎಂತದೋ ಕಿಚ್ಚು ,  ಬಡತನದ ಬೇಸರಿಕೆ ಅಸಹಯಕತೆಯದ್ದು , ಅದರ ವಿನ್ನ: ಮತ್ತಾವ ಸೆಳೆವು ಸಿರಿತನವ ಅಹ್ವನಿಸದು .. ಇಂದು ಅದ್ಯಾವ ನೆನಪು ಮಾಸಲೊಲ್ಲದು ..
ಬಡತನ ಕಳೆದು , ಹತ್ತು ವರುಷ ಕಳೆದು ,  ಮಧ್ಯದಲ್ಲಿ  ಹುಟ್ಟಿ ನಶಿಸಿ ಹೋದ ಆಕಾಂಕ್ಷೆಗಳ ಮೂಟೆ ಕಳೆದು,
ಕೂತು  ಬದುಕ ಅವಲೋಕಿಸಿದರೆ ಮತ್ತವೇ ಅಸಹಾಯಕತೆ , ಅಂದು ಬಡತನದ್ದು ಇಂದು ಖಾಲಿತನದ್ದು ...
ಕುರುಡಬಿಕ್ಷು ಬದುಕು,  ಮತ್ತೆ ಮತ್ತೆ  ನಾಹಿ ಎಂದವರ ಮುಂದೆ ನಿಂತು ಕೈ ಚಾಚುತ್ತದೆ , ಕರೆದು ಕೊಟ್ಟವರನ್ನು ನೆನಪಿಡದ ಸ್ಮ್ರತಿ ಅವರನ್ನೇ  ದೂಷಿಸಿ ಎಡುವುತ್ತದೆ. ..
ಎಲ್ಲ ಇರುವವರಿಲ್ಲ , 
ಇಲ್ಲಿ,
ಇರುವವರೆಲ್ಲ ,
ಉಳಿದು ಹೋದವರೇ ,
ಕಳೆದು ಹೋದವರೇ , 
ಯಾರೋ ಮರೆತು 
ಯಾರನ್ನೋ ನೆನೆದು ,
ನೆಂದು ಹೋದವರೇ .
.
ಮಾರಾಟವಾಗದೆ ಉಳಿದ ಸರಕು ..
ಅಂಗಡಿಯವನ ಮಾತಲ್ಲಿ 
ಗಿರಾಕಿಯೆದುರು  
ಮೆರಗುಗಳು ..
ಅವನಿಗೂ ಅರಿವಿದೆ 
ಇವು ಬೋರ್ಗರೆದು 
ಹರಿದು ಹೋದ ನದಿ 
ಕೊನೆಯಲಿ ಉಳಿಸಿದ 
ಪಾಚಿಯ 
ವಸಹಾತುಗಳು..
 ಮದ್ಯ ವಯಸಿನ ಆಯಾಮಗಳಲ್ಲಿ ಹೋರಾಟ ಆವರಿಸಿ ಬದುಕು ಪಯಣವಾಗಿ ಮತ್ತರಿಗೋ ಬದುಕುವ ಬ್ರಮೆ , ಯೌವನದ ಕಿಚ್ಚಲ್ಲಿ ಪ್ರೀತಿ ,ಸ್ನೇಹ , ಸಂಪತ್ತಿನ  ಮೋಹ ,  ಅನಿರ್ದಿಷ್ಟ ಬೆಳಕು ,... 
ನನ್ನದು ಇದಾವು ಅಲ್ಲದ ವಯೋಮಿತಿ , ಬದುಕಿಗೆ ಇಡುವ ಪ್ರತಿ ಗುರಿ ಜಯದ ಪ್ರತಿಬಿಂಬ ಎಂಬ ಯೌವನದ ಕನವುಗಳು ಸಣ್ಣಗೆ ಜಾರುತ್ತಿವೆ . 
ಬದುಕಿನೆಡೆಗೆ ವಿಮುಖನಾಗದ ಹೊರತು ಬದುಕಿನೆಡೆಗೆ ಆಕರ್ಷಣೆ ಬಾರದು .
 ಕೆಲಸದ ಆತ್ಮ ರತಿ ಇನ್ನು ಮುಂದೆ ವಿಜ್ರಮ್ಬಿಸಬೇಕಿದೆ , ಆ ಉತ್ಸಾಹ ಸುಳ್ಳೇ ಮೂಡಿಸುವ ದಾರಿಯಲ್ಲಿ ಸಂಸಾರದ ಬೆಳವಣಿಗೆ , ನನ್ನ ಮನೆಗೆ ಸ್ತಿಮಿತವಾಗುವ ಲೋಕ  ಕಲ್ಯಾಣ!!
ಎಂತದೋ ಸೆಳೆವಿದೆ ವಿಕ್ರತ ವಾನ್ಚೆಯಿದೆ , ಪ್ರಶ್ನೆಗಳೆಡೆಗೆ .. ಉತ್ತರದ ಪರ್ವದ ಹೊತ್ತಿಗೆ ಮುಪ್ಪು ಅವಾರಿಸದಿರಲಿ , ..
ಏಕಾಂತದ ಏಕತಾನತೆಗೆ ಮೈ , ಮನಸ್ಸು ಒಡ್ಡದ ಹೊರತು ಪ್ರಶ್ನೆಗಳು ಸಂಬವಿಸವು ...
ಇರಲಿ ಬಾಳು ಪಯಣದ ಹಬ್ಬ , ದಾರಿಯ ನಕ್ಷೆ ಬದಲಾಗುವುದು ನಿರೀಕ್ಷಿತ , ಒಮ್ಮೊಮ್ಮೆ ಬೆಳಕಿನಂತ ಬದುಕೆಡೆಗೆ ತಿರಸ್ಕರ , ನೀರಿನಂತಿದರೆ ಎಷ್ಟು ಚಂದವಿತು , ಇಂತದ್ದೆ ದಾರಿ ಇಂತದ್ದೆ ಹುಟ್ಟು , ಬೆಳಕಿಗೆ ಅಂತದಾವುದು ಇಲ್ಲ ,ಹುಟ್ಟುವುದ ಹೊರತು ಮತ್ತಾವುದರ ನಿಖರತೆ ಇಲ್ಲ .
ಬದುಕು ಬೆಳಕಿನಂತೆ ಕಾಲು ನಡೆಷ್ಟು ಕಾಲ ಸವೆಸಿ ಎಲ್ಲೋ ಮುಗಿದು ಹೋಗುವುದು .
ಬದುಕ ವಿಸ್ತಾರಗಳ ಆಳ ಅಗಲ ಅರಿವ ಹೊತ್ತಿಗೆ ವಿರಕ್ತಿಯ ಭಾವ .ಇಸ್ಕ್ಕನ್ ದೇವಸ್ಥಾನದ ಇಕ್ಕೆಲಗಳಲ್ಲಿ , ಪರಮಹಂಸರ ವಚನ ವೇದಗಳಲ್ಲಿ , ರಮಣರ ಮೌನದಲ್ಲಿ, ಹುಡುಕಾಡದ  ಜಾಗವಿಲ್ಲ , ನಿರ್ಲಿಪ್ತತೆ  ಎಂಬುದು ಸಾದಿಸಲಾಗದ ಮೌನಕ್ಕೆ ಅರಸಿ  ದಿನ ಕಳೆಯುತ್ತಿವೆ .
ಯಾವುದನ್ನೂ ಯೋಚಿಸದೆ ಹಾಗೆ ಸುಮ್ಮನೆ ಮನಸ್ಸಿಗೆ ಅವರಿಸಲೆಂದು ಕಾಯುವ ಮೌನವ ಅಧ್ಯಾತ್ಮ ?? ದೇವರ ಕುರಿತು ಎಷ್ಟು ಓದಿದರು ಪ್ರಶ್ನೆಗಳ ಹೊರತು ಮತ್ತೇನು ಮೂಡದು , ಉತ್ತರ ತಿಳಿದವರಿಲ್ಲ , ಹಾಗುವ ಎಲ್ಲ ವಿಸ್ಮಯ ,   ದುರಂತಗಲಿಗೆಲ್ಲ ಕರ್ಮದ ಹೆಸರಿಟ್ಟು ,  ಮುಗುಳ್ನಕ್ಕು ನಡೆಯುವ ಹಾದಿ ಎಲ್ಲಿಹುದೋ ಕಾಣೆ

ದೈವತ್ವದ ನಂಬುಗೆಯ ಹೊರತು ಮತ್ತವುದು ಹಿಡಿದಿಡಲಾಗದ ಚಂಚಲತೆ , ಯಾವ ದೈವವ ಎಲ್ಲಿ ಹುಡುಕಲಿ ಎಂಬ ದ್ವಂದ್ವ , ಇಷ್ಟಂತೂ ಸತ್ಯ , ದೈವ ಕಾಣುವವರ , ಭಾವಿಸುವವರ , ಮನಕ್ಕೆ ಬಿಟ್ಟ ವಿಚಾರ , ಎಲ್ಲರೊಳಗೂ , ಇರುವ ಎಲ್ಲರಲ್ಲೂ ಪ್ರವಹಿಸುವ ಅಂಶ . ಧರ್ಮ ,ಜಾತಿ , ಸಾಕಾರ ,ನಿರಾಕರ , ದ್ವೈತ .ಅದ್ವೈತ ಇವುಗಲೆಲ್ಲದರಲ್ಲೂ ಅರಳುವ ಸತ್ಯ, ತಿರಸ್ಕರಿಸಲು ಕಾರಣ ಇರದು , ಪರಾಮರ್ಶಿಸಲು ತಾಳ್ಮೆ ...
ಹೊತ್ತು ಮುಳುಗುವ ಮುಂಚೆ ಬೆಳಗಾಗಲಿ ಅದಾವ ಸತ್ಯವೋ , ವ್ಯರಾಗ್ಯದಿಂದಿಚಗಿನ ಪ್ರಪಂಚದಲಿ ಒಮ್ಮೆ ಅರಳಿ .....