ಅಸಹಾಯಕ....

ಅಸಹಾಯಕ....

ಈ ಕಥೆಗೆ ಹತ್ತು ವರುಶ ಸುಮಾರು ವಯಸ್ಸು ... ಆತ ಕೂಲಿಯವನು, ಕಟ್ಟುಮಸ್ತಾದ ಕಪ್ಪು ದೇಹ ವಯಸ್ಸು ಮೂವತೈದರ ಹಾಸು ಪಾಸು. ಸುಮಾರು ಹನೊನ್ದು ,ಹೊತ್ತು! ಯಾರೊ ಹೆಗಲ ಮೇಲೆ ಎರಿಕೊ೦ಡು ಬ೦ದ ಬ೦ದವನಿಗೆ ಈತ ನಿತ್ಯ ತನೊಟ್ಟಿಗೆ ಮೂಟೆ ಹೊರುವಾಗ ಕೈ ಚಾಚಿದಗ ಬೀಡಿ,ಬೆನ್ಕಿ ಪೊಟ್ಟನ ಕೊಡುವ ಪರಿಚಯಸ್ತ ಅಷ್ಟೇ !ಬಡತನ ವೈಶಲ್ಯ ದೊಡ್ಡದು ನೀಡುವ ಭಾಗ್ಯ ಸಿಕ್ಕರೆ ಪೂರ ಧಾರಳ ಆತ ಒಬ್ಬನೆ ತನ್ನ ಸಹಕರ್ಮಿಯನ್ನ ಕರೆದು ಆಸ್ಪತ್ರೆಗೆ ಬನ್ದಿದ್ದ.. ಅಲ್ಲಿಗೆ ಅವನ ಕೆಲಸ ಮುಗಿದನ್ತೆ .
ಮುನ್ದೆ ಎಲ್ಲ ದುಡ್ಡಿನದು ವ್ಯವಹಾರ ,ಸಿಸ್ಟರ್ ಕರೆದು ಬೆಡ್ ಯವುದೂ ಎನ್ದು ಕೇಳಿ ಮಲಗಿಸಿ ಸಮಧನ ಮತನಾಡಿ ಹೊರಟು ನಿ೦ತ . ಮಲಗಿದಾತ ಸಣ್ಣ ದನಿಯಲ್ಲಿ ಅ೦ಗಲಾಚಿ ತನ್ನ ಹೆ೦ಡತಿಯ ಕರೆಸುವನ್ತೆ ಕೇಳಿಕೊ೦ಡ.

ಆಮೇಲೆ ಎಲ್ಲ ನಿಶಬ್ಧ,ನೀರವ...
ಬೆಳಗ್ಗೆ ಎ೦ನ್ದಿನತೆ ಹಾಲು ಬ್ರೆಡ್ಡು ವಾರ್ಡಿಗೆ ಬ೦ದಾಗ ಸೂರ್ಯೊದಯ ,ಇನ್ನು ನನಗೆ ರಾತ್ರಿಯದೆ ಯೋಚನೆ ನಡೆದದ್ದು ನಿಜವ ಯಾಕೊ ಅರಿಯೆ ಅ ವ್ಯಕ್ತಿ ಅನ್ಗಲಾಚಿ ತನ್ನ ಹೆ೦ಡತಿಯ ಕೆಳಿಕೊನ್ಡದು ಸಣ್ಣಗೆ ನನೊಳಗೆ ಎನ್ತದೊ ನೋವ ಹರಿಸಿತ್ತು.
ಪಕ್ಕ ತಿರುಗಿದೆ ಅದೆ ವ್ಯಕ್ತಿ ! ಬೆಡ್ಡಿನ ತುದಿಗೆ ಅ೦ಟಿ ಒ೦ದು ಸಣ್ಣ ವಯಸ್ಸಿನ ಹೆ೦ಗಸು ನಿ೦ತಿತ್ತು.ಪಕ್ಕ ಸುಮಾರು ೫ ವರುಶ ವಯಸ್ಸಿನ ಹೆಣ್ಣು ಮಗು ...
ಡಾಕ್ಟರ್ ಬರುವುದ ಕಾಯುತ ಇದ ಅವರ ಕಣ್ಣಲಿದ ಭಯ ! ಆತನಿಗೆ ಯಾವ ನೊವು ಇಲ್ಲ...
ಡಾಕ್ತರ್ ಗೆ ಹೇಳುತ್ತಿದ " ಕಾಲಿನಿನ್ದ ಕೆಳಗೆ ಮರಗಟ್ಟಿದೆ ,ನೊವು ಅಗವಲ್ದು ಮೂಟೆ ಹೊರ್ವಾಗ ಸ್ವಲ್ಪ ಜಾರಿದ್ದು ನೆನಪು ಆಮೇಲೆ ಕಾಲೆ ಎಳಿಯಕಾಗ್ಲಿಲ್ಲ ಸಾರ್ "
ಡಾಕ್ಟರ್ ಜೊತೆ ಬ೦ದ ಇನ್ನೊಬ್ಬ ವೈದ್ಯನಿಗೆ ಹೇಳಿದ್ದು ಕೇಳಿಸಿತು ಸ್ಪೈನಲ್ ಕಾರ್ಡ್ ಹೊಗಿದೆ.
ಆತನ ಹೆ೦ಡತಿ ವೈದ್ಯರನ್ನೆ ದಿಟ್ಟಿಸಿ ನೊಡ್ತಿದ್ಲು, ಅವ್ರು ಅವ್ಲನ್ನ ಗಮನಿಸಲೂ ಇಲ್ಲ ರೂಮಿನ್ದ ಹೊರಗೆ ಹೊರಟ್ರು.
ಯಾರೊ ನೊಡ್ಡಕ್ಕೆ ಅನ್ತ ಬ೦ದ್ರು , ಮತ್ಯರೊ ದೊಸೆ ತನ್ದು ಕೊಟ್ರು ..
ಪರ್ಸೆಲ್ ತೆಗೆದು ಅವನ ಬಾಯಿ ತುತ್ತು ಇಡುತ ಅವಳು ಭೊರ್ಗರೆದಳು ಅವನು ಅವಳಿಗೆ ಸಮಾಧಾನದ ಮಾತ ಬಾಯ ತೆರೆಯದೆ ಕಣ್ಣಲ್ಲೆ ಹೇಳುತ್ತಿದ್ದ ,
ಅವನಿಗೆ ಅರಿವಾಗದೆ ಮೂತ್ರ ವಿಸರ್ಜನೆಯಾಗಲು ಆಕೆ ಬೆಡ್ ಪಾನ್ ಇಡಲು ಮುನ್ದಾದಳು, ಆತ ಆಕೆಗೆ ಕಾಣದನ್ತೆ ಅವಳಿಗೆ ವಿಮುಖನಾದ ,ಆತನ ಕಣ್ಣು ಭರ್ತಿ ..!!