ಜಾಗ್ರತೆ !!
ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು
ಎಂತದೋ ಮೇಣದಂತ ಮಣ್ಣಾಕಿಸಿ ದಾರಿ ಮೆದುವಾಗಿಸಿದೇನೆ , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ .
ನಾನಿಲ್ಲದ ಪಯಣ, ಒಂಟಿತನ ಕಾಡಬಹುದು , ರಸ್ತೆ ಬದಿಯ ಮರಗಳೆಲ್ಲ ಮಾತು ಕೊಟ್ಟಿವೆ ಒಂದಷ್ಟು ಎಲೆ ಉದುರಿಸಿ ನಿನ್ನ ಹಿಂದೆ ಕಳಿಸುವುದೆಂದು ,ಗಾಳಿಗಂಟಿ ನಿನ್ನ ಹಿಂಬಾಲಿಸೀತು , ಬೆಚ್ಚಬೇಡ . ತಾ ಅನಾಥವಾದರು ನಿನ್ನಗಾಗಿ ಉರುಳುತ್ತವೆ , ಅಲಲ್ಲಿ ನೇವರಿಸು ಅವುಗಳ, ನಿನ್ನ ತಾಯ್ತನ ಜರುಗಲಿ .
ಆ ದಾರಿ ಎಷ್ಟು ದೂರದ್ದೋ ನಾ ಅರಿಯೆ , ನೀನೆ ಆರಿಸಿದ್ದು , ನನಗೆ ಗೊತ್ತು ನೀನು ಆ ದಾರಿಗೆ ಅಪರಿಚಿತೆ .
ನನ್ನ ಕಣ್ಣೋಟಕ್ಕೆ ಮಿತಿ ಇದೆ ಮಿತಿ ಮೀರಿ ದಿಟ್ತಿಸುತ್ತಿರುವೆ , ಇನ್ನು ಸ್ವಲ್ಪ ಮುಂದೆ ಹೋದ ಮೇಲೆ ನೀ ಕಾಣುವುದಿಲ್ಲ ,ನಾ ಕಾಯಲಾರೆ , ಜಾಗ್ರತೆ !!
ನನ್ನ ಕಣ್ಣಿಗೆ ನಡೆದು ಹೋದದ್ದು ನೀನಾ , ಇಲ್ಲ ದಾರಿಯ ಎಂಬುದು ಬದುಕು ಪೂರ ಬಿಡಿಸಬೇಕಾದ ಒಗಟು .
ಒಮ್ಮೊಮ್ಮೆ ಕಾಲು ನಿಂತಲ್ಲೇ ಅಂಟಿದಕ್ಕೆ ಖೇದವಿದೆ , ಆದರೆ ಸ್ತಂಬನ ಹಿತ ಎನ್ನಿಸಿದೆ , ಇಲ್ಲಿ ನೀ ಕೊಟ್ಟದ್ದು , ಇಟ್ಟದ್ದು , ಬಿಟ್ಟದ್ದು ಎಲ್ಲ ಇದೆ ನಿನ್ನ ಹೊರತು .
ನೀನು ಕನಸುಗಳಲ್ಲಿ ಬರುವೆ ಎಂದು ಮಾತು ಕೊಟ್ಟಿದ್ದೆ , ನೆನಪಿಲ್ಲವ ? ಇರಲಿ ನೀ ಹೊರಟಾಗ ನನ್ನ ನಿದ್ದೆ ನಿನ್ನ ಕಾಲಿಗಂಟಿ ಹೊರಟ್ಟದ್ದು ನೆನಪಿದೆಯ ?? ಸಾದ್ಯವಾದರೆ ಹಿಂತಿರುಗಿಸು :(
ಕನಸಿಲ್ಲದ ನನಗೆ ನೀ ನೆನಪಿನ್ನಲ್ಲೇ ಸಂಭವಿಸುವೆ , ಆದರೂ ನನಗೆ ಕನಸೆಡೆಗೆ ಮೋಹ ,ಅಲ್ಲಿ ನಾಳೆ ನಿನ್ನಿಲ್ಲದೆ ನೀ ಹುಟ್ಟಬಲ್ಲೆ , ಪ್ರಾಯಶಾ .
ನಿದ್ದೆಗೆ ಇಲ್ಲೊಂದು ತಪ್ಪಸ್ಸು ನಡೆಯುತ್ತಿದೆ , ಕಲ್ಪನೆಗಳಿಗಿಂತ ಕನಸು ಹಿತ ಎಂಬ ನಿಜವಷ್ಟೆ ಕಾರಣ . ಕಲ್ಪನೆಗೆ ಮಿತಿ ಇದೆ ಬುದ್ದಿಯದ್ದು , ಕನಸಿಗೆ ?? ಹಾ .ಅ ವೇಗ , ಆ ವಿಸ್ತೀರ್ಣ , ಸಾಟಿ ಇಲ್ಲ .
ನಿದೆರೆ ಹಿಂತಿರುಗಿಸು .
ನಾಳೆಯ ಬೇಡಿಕೆಗೆ ತಾನೇ ನಾನು ನನ್ನ ನಿನ್ನೆಗಳ ನಿನಗೆ ಲಂಚಇತ್ತದ್ದು ?
ಒಂದು ಕ್ಷಣ ಯೋಚಿಸಿದರೆ ಮನುಕುಲ ಇಂದಿನೆಡೆಗೆ ಎಸೆಯುವ ಎಲ್ಲ ಕಸುವು ನಾಳೆಯ ಅಸ್ಪಷ್ಟತೆಯ ನಿಖರತೆಗೆ ತಾನೇ ??ನಿನಗೆ ಸ್ವಾರ್ಥ ಕಂಡಿತ್ತ ? ಇರಲಿ ಇಲ್ಲೊಂದು ದೀಪ ಕತ್ತಲಲ್ಲಿ ಕಳೆದಿದೆ ಹುಡುಕಲು ಕಣ್ಣಿಲ್ಲದ ನಾನು ಹರಕೆ ಹೊತ್ತಿರುವೆ , ಉಸಿರ ದೀಪ ಉರಿವವರೆಗೂ ಹುಡುಕೋಣವಾಗಲಿ .
ಇರಲಿ , ನಿನಗೆ ಸಂತಸ ,ಗೆಲುವು ಅಷ್ಟೇ ನಾ ಬಯಸಿದ್ದ ವರ , ನಿನ್ನ ಸಂಗಾತ ನಾನು ಎಂದು ಬೇಡಲೇ ಇಲ್ಲ , ಇಂದು ದೈವ ದೂರುವುದು ತಪ್ಪಾದೀತು , ನಾನು ನಿಸ್ವಾರ್ಥಿ ??
ನೀ ನಡೆದು ಹೋದ ದಾರಿ ವಿಚಿತ್ರ , ಅದಕ್ಕೆ ಹುಟ್ಟು , ಸಾವು ದ್ವಂದ್ವದ್ದು .
ಇಲ್ಲಿ ನಿಂತ ನನಗೆ ನೀ ಯಾವುದೊ ತೀರಕ್ಕೆ ಹರಿದು ಹೋದ ನದಿ , ನಾನು ಎಲ್ಲೋ ದಾರಿ ಮಧ್ಯೆ ಆಸರೆಯಾಗಿದ್ದ ದಡ ??
ಇಲ್ಲ ನದಿ ಎನ್ನಲಾರೆ ಅವು ಏಕ ಮುಖಿ . ನೀನು ನಡೆಯುತ್ತಿರವ ದಾರಿಗೆ ಹುಟ್ಟಿದೆ ನೀನು ದಿಶೆ ಬದಲಿಸಿದರೆ ನಾನು ನೀ ಸೇರಬೇಕಾದ ತೀರ :)ನದಿಯಲ್ಲ ನೀ ...
ದಾರಿಯುದ್ದ ನಾ ಕೊಟ್ಟ ಕವನಗಳ ಹೋದುವೆಯ ?? ಅದೊಂದ ಮಾಡದಿರು . ನೀನು ಬೆಳಕು ನನ್ನ ಕವನದಿ ನನ್ನ ಬಾಳ ಕತ್ತಲು ಕಂಡೀತು , ನೀ ಇಲ್ಲಿ ಮತ್ತೆ ಹರಿಯಬಾರದು , ನಿನ್ನ ದಾರಿಯ ತೀರದಲ್ಲಿ ನೀ ಬಯಸಿದ ನಿಧಿ ನಿಕ್ಷೆಪಕ್ಕೆ ವಿರಹವಾದೀತು .
ನಿನ್ನ ಮರೆವ ನೋವು ನನ್ನ ಶತ್ರುವಿಗು ಬೇಡ ಎಂದು ವರ ಪಡೆದಿದ್ದೇನೆ , ನನಗು ಗೊತ್ತು ನೀನು ಬರಲಾರೆ ,
ಹಾಗೆ ಸುಮ್ಮನೆ ಸ್ವಗ್ತಿಸುತ್ತೆನೆ , ಆತ್ಮ ರತಿ ...