" ಸುಖ ಏಲ್ಲಿದೆ ? "
ಮನುಷ್ಯ ಸುಖವ ಬಯಸಿ ದುಡಿಯುವನು
ಹಗಲಿರಳು ದುಡಿದು ಹಣವ ಗಳಿಸುವನು
ಆಸೆಗಳೆಂಬ ಬಿಸಿಲುಗುದುರೆ ಬೆನ್ನುಹತ್ತಿ ಓಡುವನು
ಹಣವ ಗಳಿಸಿವ ಆತುರದಲ್ಲಿ ಸುಖವ ಮರೆವನು
ಹಣವ ಗಳಿಸಿದ ಬಳಿಕ ಸುಖವ ಅರೆಸುವನು
ಹಣವಿಲ್ಲದ ಕಡು ಬಡವನಿಗೂ ಸುಖವಿಲ್ಲ
ಹಣವುಳ್ಳ ಆಗರ್ಭ ಶ್ರೀಮಂತನಿಗೂ ಸುಖವಿಲ್ಲ
ಹಾಗಾದರೆ ಎಲ್ಲರು ಬಯಸುವ ಸುಖ ಎಲ್ಲಿದೆ?
ಭೂಮಿಯಲ್ಲಿ ನಿಜವಾದ ಸುಖಿಗಳು ಯಾರು
ಸುಖ ಎಂಬ ಈ ಎರಡು ಅಕ್ಷರದಲ್ಲಿ ಏನಿದೆ ?
ಸುಖ ದ:ಖ ಎರಡು ಒಂದೇ ನಾಣ್ಯದ ಮುಖಗಳು
ರಾತ್ರಿ ಕಳೆದ ಮೇಲೆ ಹಗಲು ಬರಲೇಬೇಕು
ದು:ಖ ಕಳೆದ ಮೇಲೆ ಸುಖವು ಬರಲೇಬೇಕು
ದು:ಖ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ
ನಡೆಯುವನೆ ನಿಜವಾದ ಸುಖಿ.
Comments
ಉ: " ಸುಖ ಏಲ್ಲಿದೆ ? "
ಸುಂದರ ವಿಚಾರ.
In reply to ಉ: " ಸುಖ ಏಲ್ಲಿದೆ ? " by kavinagaraj
ಉ: " ಸುಖ ಏಲ್ಲಿದೆ ? "
ಕವಿ ನಾಗರಾಜ್ ರವರಿಗೆ ನಮಸ್ಕಾರಗಳು,
ಕವನ ಸೂಸುವ ವಿಚಾರ ಸುಂದರವಾಗಿದೆ ಎಂದು ನುಡಿದು ಪ್ರೋತ್ಸಾಹಿಸಿದ್ದಕ್ಕೆ ಅನಂತ ಧನ್ಯವಾದಗಳು. :) :)
ಉ: " ಸುಖ ಏಲ್ಲಿದೆ ? "
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಸುಖ ಎಲ್ಲಿದೆ ಕವನ ಚೆನ್ನಾಗಿ ಮೂಡಿ ಬಂದಿದೆ, ಸುಖದ ವ್ಯಾಖ್ಯಾನ ಅಷ್ಟು ಸುಲಭಕ್ಕೆ ಸಿಗುವಂತಹುದಲ್ಲ, ಅದರ ಅನೇಕ ಮಜಉಗಳನ್ನು ಚೆನ್ನಾಗಿ ನಿರೂಪಿಸಿದ್ದೀರಿ, ಧನ್ಯವಾದಗಳು.
In reply to ಉ: " ಸುಖ ಏಲ್ಲಿದೆ ? " by H A Patil
ಉ: " ಸುಖ ಏಲ್ಲಿದೆ ? "
ನಮಸ್ಕಾರ ಸರ್
ನಿಮ್ಮ ಪ್ರೋತ್ಸಾಹವೆ ನನಗೆ ಶ್ರೀರಕ್ಷೆ ಸರ್
ಧನ್ಯವಾದಗಳು.