ನಿಷ್ಟುರ

ನಿಷ್ಟುರ

                      ನಿಷ್ಟುರ
 
    ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು
    ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ 
    ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ
    ನನ್ನ ಬಗ್ಗೆಯೇ ಇರುವ ಕೀಳು ಆತ್ಮ ಗೌರವದಿಂದೋ 
    ಎಂದು ತಪ್ಪು ತಿಳಿಯ ಬೇಡ  ನನ್ನ ಬಂಧು ಮಿತ್ರನೇ
 
    ನನ್ನ ತಾಳ್ಮೆ, ಸಹನೆಯ ತಪ್ಪು ತಿಳಿದು ನನ್ನ ಲಘುವಾಗಿ
    ತೆಗೆದು ಕೊಳ್ಳಬೇಡ ನನ್ನ  ಬಂಧು ಮಿತ್ರನೇ
    ನಾ ತೋರುವ ಸಹಿಷ್ಣುತೆಗೆ ಇರುವ ಕಾರಣವೆಂದರೆ
    ನಾ ನಮ್ಮ ಸಂಬಂಧಕ್ಕೆ ಕೊಡುವ ಬೆಲೆ ಹಾಗು ಅದನ್ನು
    ಉಳಿಸಿಕೊಳ್ಳುಲು ನಾ ಮಾಡುತ್ತಿರುವ ತ್ಯಾಗ, ತಾಳ್ಮೆ 
 
    ನಾ ನಮ್ಮಗಳ ಸಂಬಂಧಕ್ಕೆ ಬೆಲೆ ಕೊಡುವ ಬದಲು
    ತಿರುಗಿ ಸಿಡಿದೆದ್ದಿ ನಿಂತರೆ,  ನಿಷ್ಟುರ ಕಟ್ಟಿಕೊಂಡು,
    ನಮ್ಮೀ ಧೀರ್ಘ ಕಾಲದ ಸಂಬಂಧ ಕ್ಷಣ ಮಾತ್ರಕೆ
    ಮುರಿದು ಬಿದ್ದು, ಜೀವನ ಪೂರ್ತಿ ಒಬ್ಬರನೊಬ್ಬರ
    ಮುಖ ನೋಡದೆ, ಸಂಬಂಧ ಹಳಸೀತು ಎಚ್ಚರ.
 
    ಕೋಪದಲ್ಲಿ ಕೊಯ್ದ ಮೂಗ, ಕೋಪವಿಳಿದ ಮೇಲೆ
    ಬರಲಾರದೆಂಬಂತೆ, ನಮ್ಮ ಸಂಬಂಧ ಉಳಿಸಲು
    ನಮ್ಮಿಬ್ಬರಲ್ಲಿಯೂ ಇರಲಿ ಸಹನೆ, ತಾಳ್ಮೆ, ತ್ಯಾಗ
    ಇವೇ  ನಮ್ಮ ದೀರ್ಘ ಕಾಲದ ಬಂಧುತ್ವ, ಸ್ನೇಹ
    ಉಳಿಸಲು ಇರುವ ಅತ್ಯುತ್ತಮ ರಾಜ ಮಾರ್ಗಗಳು.
 
    - ತೇಜಸ್ವಿ ಎ ಸಿ

Rating
No votes yet

Comments

Submitted by Tejaswi_ac Sat, 11/29/2014 - 00:11

In reply to by kavinagaraj

ಧನ್ಯವಾದಗಳು ಕವಿ ನಾಗರಾಜರೆ. ಈ ಸಂದೇಶವು ಎಲ್ಲರಿಗೂ ತಲುಪಲಿ ಎಂಬುದು ನನ್ನ ಉದ್ದೇಶ.

Submitted by ravindra n angadi Tue, 12/02/2014 - 16:00

ನೀವು ಬರೆದ ನಿಷ್ಟುರ ಕವನ ತುಂಬಾ ಚೆನ್ನಾಗಿದೆ. ಎಲ್ಲರೂ ಈ ಕವಿತೆಯ ಸಾರಾಂಶ ಅರಿತು ಬಾಳುವಂತಾಗಲಿ.
ಧನ್ಯವಾದಗಳು