ಬೆಳಕು

ಬೆಳಕು

ಬೆಳಕು 

ಜಗದಾಸೆಯ ಕೂಪದಲಿ ಬಿದ್ದು 
ಬೇಕುಬೇಡಗಳ ವ್ಯತ್ಯಾಸ ತಿಳಿಯದೆ 
ಕಂಡದ್ದೆಲ್ಲಾ ಬೇಕೇ ಬೇಕೆಂಬ ಹುಚ್ಚು ಮೋಹಕ್ಕೆ 
ಬಲಿಯಾಗಿ ಕಲೆಹಾಕುತ್ತಾ ಹಾಕುತ್ತಾ ಸಾಗುವಾಗ.... 
ದಿನದಿಂದ ದಿನಕ್ಕೆ ಎಲ್ಲವೂ ನೀರಸವೆನಿಸಲು 
ಅವ್ಯಕ್ತ ಭಯ ಎದೆಯಾಳದಲ್ಲಿ ಕಾಡಲು ಪ್ರಾರಂಭ. 
ರೋಗದ ಭಯ, ವೃದ್ದಾಪ್ಯದ ಭಯ, ಸಾವಿನ ಭಯ.
ವಿಚಲಿತ ಮನಸು, ಕಾಣದಾ ನಾಳೆಗೆ ಹೆದರಿ 
ಸುಖದ ಇಂದಿನಾ ಕ್ಷಣಗಳನು ಬಲಿಕೊಟ್ಟು, ಭಯದಿ  ಉಳಿಸಿ, 
ನಾಳಿನಾ ಕುಡಿಕೆಗೆ ಸುರಿದು ಚಾತಕ ಪಕ್ಷಿಯಂತೆ ಕಾದೆ. 
ಆ ನಾಳೆ ಇಂದಾದ ಬಳಿಕ ಎಂಬ ಪರಿಜ್ಞಾನಬಾರದೆ
ವಾಸ್ತವವನರಿಯದೆ  ಭ್ರಾಮಿಕನಾಗಿ ಬಳಲಿದೆ. 
ನಾನು ನನದೆಂಬ ವಿಪರೀತ ಮೋಹದಲಿ ಅಲೆದಾಡಿ  
ನನ್ನೆಲ್ಲಾ ಭ್ರಾಂತಿಗಳ ಒಡೆತನದಿಂದ ಮೆರೆದಾಡಿ, ದಣಿದು, 
ಮಿಗಿಲಾದ ಕಾಣದಾ ಆ  ಶಕ್ತಿಯೊಂದರ ನಿಯಂತ್ರಣ ಅರಿಯದೆ ಹುಚ್ಚನಾದೆ. 
ಹುಡುಕಾಟದಲಿ ಬಳಲಿ, ಸಂಪೂರ್ಣ ಶರಣಾಗಿ, ಮೌನಿಯಾದೆ. 
ಅರಿವಾಗಿ, ಗುರುವಾಗಿ,ಶಕ್ತಿಯಾಗಿ  ಆಂತರ್ಯದಲಿ ಮೂಡಿದ್ದು 
 ನಾನಲ್ಲ,  ಕೇವಲ ನೀನೆಂಬ  ಸತ್ಯ.....  ದಿವ್ಯ ಚೈತನ್ಯದ  ಬೆಳಕು. 
 

Comments

Submitted by kavinagaraj Sat, 11/29/2014 - 17:15

'ಸಂಪ್ರಶ್ನ'ನ ಕುರಿತು ಎಲ್ಲಾ ಪ್ರಶ್ನೆಗಳೂ ಮುಗಿದ ಮೇಲೆ ಉಳಿಯುವ ಮೌನವೂ 'ಅನಿರ್ವಚನೀಯ' ಸಂಭಾಷಣೆಯೇ! ಇಲ್ಲೇ 'ದಾರಿ' ಸಿಕ್ಕುವುದು!