ಪೂಜಾರಿಗಳ ಸುಲಿಯುವ ಪ್ರವ್ಱತ್ತಿ
ನಾನು ಮೊನ್ನೆ ನಮ್ಮ ಅಪ್ಪನ ಮನೆ ವಾರ್ಷಿಕ ದೇವತಾ ಕಾರ್ಯಕ್ರಮಕ್ಕೆ ಹೋಗಿದ್ದೆ.ಪ್ರತೀ ವರ್ಷ ನಾವು ಈ ದಿನ ದೇವರಿಗೆ ಕಾಯಿಡುವುದು ವಾಡಿಕೆ.(ಹವ್ಯಕ ಹೆಣ್ಣು ಮಕ್ಕಳು ಮದುವೆಯಾದ ನಂತರ ಪ್ರತೀ ವರ್ಷ ದೀಪಾವಳಿಯ ಮರುದಿನ ತವರುಮನೆಯ ದೇವರಿಗೆ ಕಾಯಿ ಇಡುವುದು ವಾಡಿಕೆ)
ನನ್ನೆಜಮಾನರಿಗೆ ಕೆಲವು ಸಂಪ್ರದಾಯಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ.ಹಾಗಾಗಿ ನಾನು ಅವರಿಗೆ ಮೊದಲು ವೀಳ್ಯದೆಲೆ ಇರಿಸಿಕೊಳ್ಳಿ, ಹಾಗೆ.. ಹೀಗೆ ಅಂತ ಹೇಳುತ್ತಿದ್ದೆ.ಅದೇ ವೇಳೆಗೆ ಆ ಊರಿನ ದೇವಸ್ಥಾನದ ಪೂಜಾರಿ ಬಂದರು.ಬಂದವರೇ ನಮ್ಮವರಿಗೆ ಹಾಗೆ ಮಾಡಿ...ಹೀಗೆ ಮಾಡಿ ಅಂತ ಹೇಳುತ್ತಾ ಏನೇನೋ ಮಂತ್ರ ಬೇರೆ ಹೇಳಿಸಿ ಕಾಯಿ ಇಡಿಸಿದರು.ಆಮೇಲೆ ಅಲ್ಲಿದ್ದವರೊಬ್ಬರು ದಕ್ಷಿಣೆ ಕೊಡಬೇಕು ಅಂದರು.ನಮ್ಮವರು 50 ರೂ.ತೆಗೆದು ಕೊಟ್ಟರು!ಅವರು ಇಸಿದುಕೊಂಡರು!! ಹಾಗಾಗಿ ನಾವು 30 ವರ್ಷದಿಂದ ಕಾಯಿಡುತ್ತಾ ಬಂದವರು ಈ ವರ್ಷ 50 ರೂ. ಕೊಟ್ಟು ಕಾಯಿಟ್ಟಂತಾಯಿತು!!!
ಇಂದಿನ ದಿನಮಾನಗಳಲ್ಲಿ ಎಲ್ಲೆಲ್ಲೂ ಮೋಸ ವಂಚನೆ ನೋಡುವುದು ನಮಗೆ ರೂಡಿಯಾಗಿಬಿಟ್ಟಿದೆ.ಆದರೆ ಕೊನೇ ಪಕ್ಷ ದೇವರ ವಿಷಯಯದಲ್ಲಾದರೂ ಸ್ವಲ್ಪ ಪ್ರಾಮಾಣಿಕತೆ ತೋರಿಸಬಾರದೇ.ಕೇವಲ ದೇವರ ಮುಂದೆ ಎರಡು ಎಲೆಪಟ್ಟಿ ಇಟ್ಟು ಕಾಯಿಡುವುದಕ್ಕೂ ಅವರವರ ಬೋಳೇತನವನ್ನು ಉಪಯೋಗಿಸಿಕೊಂಡು ಸುಲುಯುವ ಪ್ರವ್ಱತ್ತಿ ಮುಂದೊಂದು ದಿನಿ ನಾವು ದೇವರ ಮೇಲಿನ ನಂಬಿಕೆಯಿಂದಾದರೂ ಒತ್ತಡದ ಬದುಕಿನಲ್ಲಿ ಕೊಂಚ ನೆಮ್ಮದಿ ಕಾಣೋಣ ಎಂಬ ನಮ್ಮ ನಂಬಿಕೆಯನ್ನೂ ಹುಸಿಯಾಗಿಸಬಹುದು.
ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕತೆಯಿದ್ದಿದ್ದರೆ ನಾವೆಷ್ಟು ನಿರಾಳವಾಗಿರಬಹುದಿತ್ತಲ್ಲವೇ?
Comments
ಉ: ಪೂಜಾರಿಗಳ ಸುಲಿಯುವ ಪ್ರವ್ಱತ್ತಿ
ದೇವರಿಗೆ ಮಧ್ಯವರ್ತಿಗಳ ಅಗತ್ಯವಿಲ್ಲ. ಈ ಪೂಜಾರಿಗಳು ಮಧ್ಯವರ್ತಿಗಳು. ಅವರನ್ನು ಬಿಟ್ಟು ನೀವು ಶ್ರದ್ಧೆಯಿಂದ ನಿಮ್ಮ ಕಾರ್ಯ ಮಾಡಿದರೆ ಸಾಕಾಗುತ್ತದೆ. ಕಾರ್ಯದ ರೀತಿ ಮತ್ತು ಸ್ಥಳ ಬದಲಾಯಿಸಿಕೊಳ್ಳಬಹುದು.