ಕಲಿಸೋದು ಒಂದು ಕಲೆ

ಕಲಿಸೋದು ಒಂದು ಕಲೆ

ಕಲಿಸೋದು ಒಂದು ಕಲೆ

ಒಂದು ದಿನ ಭಾಗಶಃ ಕಿವುಡನಾಗಿದ್ದ ನಾಲ್ಕೂವರೆ ವರ್ಷದ ಬಾಲಕ ಶಾಲೆಯಿಂದ ಬಂದ.ಅವನ ಕಿಸೆಯಲ್ಲಿ ಮಾಸ್ತರರು ಕೊಟ್ಟು ಕಳಿಸಿದ ಚೀಟಿಯಿತ್ತು.ಅದರಲ್ಲಿ ಹೀಗೆ ಬರೆದಿತ್ತು-'ನಿಮ್ಮ ಮಗ ಕಲಿಯಲಾಗದಷ್ಟು ದಡ್ಡ.ದಯವಿಟ್ಟು ಅವನನ್ನು ಶಾಲೆ ಬಿಡಿಸಿ ಕರೆದುಕೊಂಡು ಹೋಗಿ'.ಈ ಚೀಟಿಯನ್ನು ಓದಿದ ಅವನ ತಾಯಿ ಮಾಸ್ತರರಿಗೆ ಬರೆದಳು-'ನನ್ನ ಮಗ ಕಲಿಯಲಾಗದಷ್ಟು ದಡ್ಡ ಖಂಡಿತ ಅಲ್ಲ.ಇನ್ನು ಮುಂದೆ ನಾನೇ ಅವನಿಗೆ ಶಿಕ್ಷಣ ನೀಡುವೆ'.ಮಗ ಮನೆಯಲ್ಲೇ ಶಿಕ್ಷಣ ಮುಂದುವರೆಸಿದ.ತಾಯಿ ಶಿಕ್ಷಕಿಯಾದಳು.ಮನೆಯೇ ಶಾಲೆಯಾಯಿತು.ಅವನು ಮುಂದೊಂದು ದಿನ ಮಹಾನ್ ವಿಜ್ಞಾನಿಯಾದ.ಆತನ ಹೆಸರು ಥಾಮಸ್ ಆಲ್ವಾ ಎಡಿಸನ್..!ಈತ ಶಾಲೆಯಲ್ಲಿ ಓದಿದ್ದು ಕೇವಲ ಮೂರೇ ತಿಂಗಳು! !

ಜಗತ್ತಿನಲ್ಲಿ ದಡ್ಡ ಮಗು ಅಂತ ಇರಲ್ಲ, ಆದರೆ ಅವರಿಗೆ ಕಲಿಸುವಂತಹ ಬುದ್ಧಿವಂತಿಕೆ ಎಲ್ಲರಲ್ಲು ಇರಲ್ಲ ಅಷ್ಟೇ. ....

-@ಯೆಸ್ಕೆ

Comments

Submitted by kavinagaraj Wed, 12/17/2014 - 18:44

ಉತ್ತಮ ಮಾಹಿತಿ. ಈಗಲೂ ಶಾಲೆಗೆ ಕಳಿಸದೇ ಉತ್ತಮ ಮಕ್ಕಳನ್ನು ಬೆಳೆಸಿದವರು, ಬೆಳೆಸುತ್ತಿರುವವರು ಇದ್ದಾರೆ.