ಬಿ.ಜೆ.ಪಿ. ಗೆ ದಾಳಿ ತಡೆಯಲು ಇಚ್ಚಾಶಕ್ತಿಯಿಲ್ಲವೆ ?

ಬಿ.ಜೆ.ಪಿ. ಗೆ ದಾಳಿ ತಡೆಯಲು ಇಚ್ಚಾಶಕ್ತಿಯಿಲ್ಲವೆ ?

ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಮತ್ತು ಕೋಮುದಾಳಿಗಳಿಗೆ ಕಾರಣ ಹುಡುಕಿ ದೇಶದ ಐಕ್ಯತೆಯನ್ನು ಕಾಪಡಲು ಹಾಗೂ ಆ ಕ್ರೌರ್ಯ ಮತ್ತೆ ಬರದಂತೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ರಾಷ್ಟ್ರೀಯ ಸಮಗ್ರತಾ ಮಂಡಳಿಯನ್ನು ರಚಿಸಲಾಗಿದೆ. ದುರಂತವೆಂಬತೆ ಬಿಜೆಪಿ ನೇತೃತ್ವದ ಹಿಂದಿನ NDA  ಸರಕಾರ ತನ್ನ ಆರು ವರ್ಷಗಳ ಅವಧಿಯಲ್ಲಿ ಒಮ್ಮೆಯು ಸಭೆಯನ್ನು ನಡೆಸಿಲ್ಲ.2011 ಮತ್ತು 2013 ರ ನಡುವೆ ಕೇವಲ ಒಂದು ಸಭೆಯನ್ನು ಮಾತ್ರ ಸೇರಲಾಗಿದೆ. 2011 ರಲ್ಲಿ ನಡೆದ ಸಭೆಯಲ್ಲಿ ಸಿ.ಪಿ. ಐ(ಎಂ) ಪಕ್ಷವು "ಪರಸ್ಥಿತಿಯನ್ನು ಮುಂಚಿತವಾಗಿ ಅರ್ಥಮಾಡಿಕೊಂಡು ಮಧ್ಯಪ್ರವೇಶಿಸಬೇಕು ಇಲ್ಲದಿದ್ದಲ್ಲಿ ದಾಳಿಗಳನ್ನು ತಡೆಯಲು ಅಸಾಧ್ಯವಾಗುತ್ತದೆ"ಎಂದು ಒತ್ತಾಯಿಸಿದಾಗ ಪ್ರತಿ ವರ್ಷ ಸಭೆ ಸೇರುವ ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ. ಆದರೆ ಪ್ರತಿ ವರ್ಷ ಸಭೆಯನ್ನು ನಡೆಸದೆ ದಾಳಿಗಳು ನಡೆದಾಗ ಮಾತ್ರ ಸಭೆ ಸೇರಲಾಗುತ್ತಿದೆ. ಬಹುಷಃ ಇದರ ಉಲ್ಲಘನೆಯ ಪರಿಣಾಮ ದಾಳಿ ನಡೆಸಿದ ನಿರ್ದಿಷ್ಟ ವ್ಯಕ್ತಿಗಳನ್ನು ಬಂಧಿಸಲು ಹಿನ್ನಡೆ ಯಾಗುತ್ತಿದೆ. ವಿಶೇಷವಾಗಿ ಬಿಜೆಪಿ ಪಕ್ಷವು ದೇಶದ ಸಮಗ್ರತೆಯಿಂದ ದೂರ ಉಳಿದೆದೆ. ಇಲ್ಲಿಯವರೆಗೆ ನಡೆದ ಯಾವುದೇ ಸಭೆಗಳಿಗೆ ಬಿಜೆಪಿ ಪಕ್ಷದ ಅಧ್ಯಕ್ಷರಾಗಲಿ, ಬಿಜೆಪಿ ಸರಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳಾಗಲಿ ಭಾಗವಹಿಸಿಲ್ಲ.
ಇನ್ನಿಲ್ಲದ ಗುಲ್ಲೆಬ್ಬಿಸಿ ಭಯೋತ್ಪಾದನೆಗೆ ಧರ್ಮದ ಮಸಿಬಳೆಯುವ ಬಿಜೆಪಿ ಸಭೆಯಿಂದ ದೂರ ಉಳಿಯುತ್ತಿರುವುದು ಯಾಕೆ? ದಾಳಿಹೆಸರಲ್ಲಿ ರಾಜಕೀಯ ದಾಳ ಹಾಕುತ್ತಿರುವ ಬಿಜೆಪಿಗೆ, ರಕ್ತದ ಕೊಳೆಯಲ್ಲಿ ಪ್ರಧಾನಿ ಹುದ್ದೆಗೇರಿದ ಮೋದಿಯ ನಿಜವಾದ ಮುಖವಾಡವನ್ನು ಕಳಚಿಡುವ ಪ್ರಯತ್ನವನ್ನು ಮಾಡಬೇಕಿದೆ. ದಾಳಿಯನ್ನು ನಿಯಂತ್ರಿಸುವ ಸಭೆಗೆ ಗೈರಾಗುವುದು ಎಂದಾದರೆ ದಾಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗುವುದಿಲ್ಲವೆ ?