ಭಯೋತ್ಪಾದಕನ ಕತೆ

ಭಯೋತ್ಪಾದಕನ ಕತೆ

ಭಯೋತ್ಪಾದಕನ ಕಥೆ

ಭಯೋತ್ಪಾದಕನೊಬ್ಬ ಆತ್ಮಾಹುತಿ ದಾಳಿ ಮಾಡಿಕೊಂಡು ಸತ್ತು ಹೋಗುತ್ತಾನೆ.ಸ್ವರ್ಗದಲ್ಲಿ ತನಗೆ ಸಿಗಬಹುದಾದ 72 ಕನ್ಯೆಯರ ಕನಸನ್ನು ಕಾಣುತ್ತ ಸ್ವರ್ಗದ ದಾರಿಯಲ್ಲಿ ಸಂಚರಿಸುತ್ತಿರುತ್ತಾನೆ.ಸ್ವರ್ಗದ ದಾರಿ ಗಿಡಗಂಟಿ ಪೊದೆಗಳಿಂದ ಮುಚ್ಚಿಹೋಗಿತ್ತು.ಬಹುಶಃ ಈಚೆಗೆ ಸ್ವರ್ಗಕ್ಕೆ ಬರುವವರ ಸಂಖ್ಯೆ ಕಡಿಮೆ ಆಗಿರೋದಕ್ಕೆ ದಾರಿ ಹೀಗಾಗಿದೆ ಅಂದುಕೊಂಡ.ಪೊದೆ ಸರಿಸಿ ಮುಂದೆ ಹೋಗಲು ಪ್ರಯತ್ನಿಸಿದ.ಆಗಲಿಲ್ಲ.ಕಳ್ಳತನ ಮಾಡಿ ಬಂದವನಿಗೆ ತೆರೆಯದ ಸ್ವರ್ಗದ ದಾರಿ ಸಾಮೂಹಿಕ ಹತ್ಯೆ ಮಾಡಿ ಬಂದವನಿಗೆ ತೆರೆಯಿತೇ..? ಭಯೋತ್ಪಾದಕ ಬಂದ ದಾರಿಗೆ ಸುಂಕವಿಲ್ಲವೆಂದು ಕೊನೆಗೆ ನರಕವನ್ನಾದರೂ ಸೇರೋಣವೆಂದು ಅ ದಾರಿಯಲ್ಲಿ ಹೊರಟ.ಯಮಧರ್ಮ ಈತ ಬರೋ ಸುದ್ದಿ ತಿಳಿದು ನರಕದ ದಾರಿಯಲ್ಲಿ 72 ಕಿಂಕರರನ್ನು ನಿಲ್ಲಿಸಿದ್ದ.ಭಯೋತ್ಪಾದಕ ಒಳಗೆ ಬಿಡುವಂತೆ ಕಿಂಕರರಿಗೆ ಆವಾಜ್ ಹಾಕುತ್ತಾನೆ.ಕಿಂಕರರು ಬಿಡಲಿಲ್ಲ.ಇದನ್ನು ಗಮನಿಸುತ್ತಾ ಇದ್ದ ಚಿತ್ರಗುಪ್ತ ಯಮಧರ್ಮನಲ್ಲಿ,'ಇವನನ್ನು ನರಕದೊಳಗೆ ಸೇರಿಸಿ ಮಾಡಿದ ಪಾಪಕ್ಕೆ ತಕ್ಕ ಶಾಸ್ತಿ ಮಾಡುವುದಲ್ಲವೇ..? ಎಂದು ಪ್ರಶ್ನಿಸುತ್ತಾನೆ.ಅದಕ್ಕೆ ಯಮಧರ್ಮ,ಇಂತವರನ್ನು ಒಳಗೆ ಬಿಟ್ಟುಕೊಂಡರೆ ಮುಂದೊಂದು ದಿನ ನಮ್ಮ ನರಕವನ್ನೇ ಸ್ಪೋಟಿಸಿ ಬಿಡಬಹುದು.ಅಂತಹ ವಿಜ್ಞಾನಿಗಳು, ಇಂಜಿನಿಯರ್ಗಳು ಇವರಲ್ಲಿ ಇದ್ದಾರೆ.ಮಕ್ಕಳು ಮರಿಯನ್ನೇ ಬಿಡದ ಇವರು ನಮ್ಮನ್ನು ಬಿಟ್ಟಾರಾ..? ಈ ಪಾಪಿಗಳು ಅಲ್ಲೂ ಸಲ್ಲದೆ ಇಲ್ಲೂ ಸಲ್ಲದೆ ಅಲೆಮಾರಿಗಳಾಗಿ ಹುಚ್ಚರಂತೆ ತಿರುಗಾಡಿಕೊಂಡು ಇರಲಿ.ಇವರಿಗೆ ಅದೆ ಶಿಕ್ಷೆ ಎಂದು ಹೇಳುತ್ತಾನೆ.

-@ಯೆಸ್ಕೆ

Comments