ಡಿಜಿಟಲ್ ಆಡಳಿತಕ್ಕೆಜೈ

ಡಿಜಿಟಲ್ ಆಡಳಿತಕ್ಕೆಜೈ

ಡಿಜಿಟಲ್ ಆಡಳಿತಕ್ಕೆಜೈ
ಒಂದಿಷ್ಟು ತಿಂಗಳ ಹಿಂದೆ , ಆಗ ಮೋದಿ ಬಂದಿರಲಿಲ್ಲ ಬಿಡಿ , ಆಧಾರ್ ಕಾರ್ಡನ್ನು ಅವರು ಟೀಕಿಸುತ್ತಿದ್ದ ಕಾಲ, ಅಧಾರ ಕಾಂಗ್ರೆಸಿಗೆ ಅಧಾರವಾಗಬಹುದೆಂದು ಭ್ರಮಿಸಿದ ದಿನಕ್ಕೆ ಸ್ವಲ್ಪ ಮುಂಚೆ ಗ್ಯಾಸ್ ಡೀಲರ್ ಬಳಿ ಹೋಗಿದ್ದೆ. ಅಧಾರ ಕಾರ್ಡ್ ರಿಜಿಸ್ಟ್ರೇಷನ್ ಕಡ್ಡಾಯ ಇಲ್ಲದಿದ್ದರೆ ಗ್ಯಾಸ್ ಇಲ್ಲ ಅಂದರು ಅವರು,
ಗ್ಯಾಸ್ ಇಲ್ಲದಿದ್ಧರೆ ಮನೆಯಲ್ಲಿ ಊಟವಿಲ್ಲ ಅಂತಾರಲ್ಲ, ಹಾಗಾಗಿ ಒಂದು ದಿನ ರಜಾ ಹಾಕಿ ಹೋಗಿದ್ದೆ.
ಅವರು ಕೊಟ್ಟ ಫಾರ್ಮ್ ಮೇಲೆ ಆಧಾರ್ ಕಾರ್ಡ್ ಇಟ್ಟು ಜೆರಾಕ್ಸ್ ಮಾಡಿಸಿ, ಫಾರ್ಮ್ ತುಂಬಿಸಿಕೊಟ್ಟು, ಎಲ್ಲ ಮುಗಿಸಿ, ಬತ್ತೆ ಬ್ಯಾಂಕಿಗೆ ಹೋಗಿ ಫಾರ್ಮ್ ಕೊಟ್ಟು ನನ್ನ ಅಧಾರ ಕಾರ್ಡ್ ನಂಬರ್ ರಿಜಿಸ್ಟರ್ ಮಾಡಿಸಿ , ನೆಮ್ಮದಿಯಿಂದ ಬಂದಿದ್ದೆ.
ಮತ್ತೆ ನಮ್ಮದಿ ಕಲಸಿಹೋಯಿತು, ಮೋದಿ ಬಂದರು, ಅಧಾರ್ ಉತ್ತಮ ಕಾರ್ಯಕ್ರಮ ಅಂದುಬಿಟ್ಟರು.
ಮೊನ್ನೆ ಪುನಃ ಮೆಸೇಜ್ ಬಂದಿತ್ತು, ನಿಮ್ಮ ಅಧಾರ್ ಕಾರ್ಡ್ ರಿಜಿಸ್ಟರ್ ಮಾಡಿಸಿ ಇಲ್ಲ ನಿಮ್ಮ ಬ್ಯಾಂಕ್ ಪಾಸ್ ಬುಕ್ ಚೆಕ್ ಬುಕ್ ಎಲ್ಲ ತನ್ನಿ ಅಂತ ,
ಶಿವನೇ … ಎಂದು ಪುನಃ ಹೋದೆ
ಬ್ಯಾಂಕಿನಲ್ಲಿ ಹೋಗಿ ಫಾರ್ಮ್ ಕೊಟ್ಟರೆ , ಎಷ್ಟು ಸಾರಿ ಕೊಡೋದು, ಆಗಲೆ ನಿಮ್ಮ ಅಧಾರ್ ಬ್ಯಾಂಕ್ ಅಕೌಂಟಿಗೆ ಕನೆಕ್ಟ್ ಆಗಿದೆ ಅಂದರು.
ಸರಿ ಗ್ಯಾಸ್ ಡೀಲರ್ ಹತ್ತಿರ ದೌಡು,
ಪುನಃ ಅದೇ ಹುಡುಗಿ ಕುಳಿತಿದ್ದಳು,
ಹೇಳಿದೆ
‘ನಾವಾಗಲೇ ಅಧಾರ್ ಕಾರ್ಡ್ ಕೊಟ್ಟಾಗಿದೆ, ಪುನಃ ಕೊಡಬೇಕಾ ‘
‘ಎಲ್ಲಿ ನಿಮ್ಮ ಬಿಲ್ ಕೊಡಿ ‘
ಕೊಟ್ಟೆ
ಪರಿಶೀಲಿಸಿದ ಆಕೆ,
ಬ್ಯಾಂಕ್ ಅಕೌಂಟ್ ಅಧಾರ್ ನಂ ಹಾಗು ಗ್ಯಾಸಿನ ಕಸ್ಟಮರ್ ಐಡಿ ‘ಲಿಂಕ್’ ಆಗಿಲ್ಲ
ಅಂದಳು,
‘ಸರಿ ಲಿಂಕ್ ಮಾಡೋರು ಯಾರು? ‘
ಅಕೆಗೆ ?
ಗೊತ್ತಿಲ್ಲ.
ನನಗೆ ?
ಗೊತ್ತಿಲ್ಲ.
‘ಸರಿ ಈಗ ಏನು ಮಾಡೋದು?”
ಆಕೆ ನನ್ನ ಎದುರಿಗೆ ಮತ್ತೊಂದು ಫಾರಂ ಬಿಸಾಕಿದಳು ಫಾರಂ – ೪,
ಇದನ್ನು ತುಂಬಿಸಿ, ಬ್ಯಾಂಕ್ ಅಕೌಂಟ್ ,ಚೆಕ್ ಪುಸ್ತಕ, ಗ್ಯಾಸ್ ಡಾಕ್ಯುಮೆಂಟ್ ಎಲ್ಲ ಒಂದೊಂದು ಜೆರಾಕ಼್ ಮಾಡಿಸಿ ತನ್ನಿ
ಡೆತ್ ಸರ್ಟಿಫಿಕೇಟ್ ?
ಛೇ ಅದೇನು ಬೇಡ … ಅಂದಳು
ಸರಿ ಮತ್ತೆ ಫಾರಂ ತುಂಬಿಸಿದೆ
(ಸಾರ್ ಸಾಯುವಾಗಲು ಈ ಫಾರ್ಂ ಯಾರು ತುಂಬಿಸ್ತಾರೆ , ತುಂಬಿಯೇ ಸಾಯಬೇಕಾ – ಥೂ ದೂರ ಹೋಗು ಉಪ್ಪಿದಾದ ಎಂಬಿಬಿಎಸ್)
ತುಂಬಿಸಿದ ಫಾರಂ ಗೆ ಎಲ್ಲ ಪ್ರತಿಗಳನ್ನು ಲಗತ್ತಿಸಿ ಕೊಟ್ಟಾಗ ಅದಕ್ಕೆ ಒಂದು ರಸೀತಿ ಕೊಟ್ಟರು.
ಸರಿ ಎಲ್ಲ ಆಯ್ತು, ಮತ್ತೆ ಏನು ಮಾಡಬೇಕು ?
ಏನು ಇಲ್ಲ ಮನೆಗೆ ಹೋಗೋದು ಅಷ್ಟೆ.
ಸರಿ ಈಗ ಕೊಟ್ಟಿರುವ ದಾಖಲೆಗಳು ಮತ್ತೆ ಲಿಂಕ್ ಆಗದಿದ್ದರೆ ಏನು ಮಾಡಬೇಕು
ಲಿಂಕ್ ಆಗದಿದ್ದರೆ ಏನು ?
ಆ ಹುಡುಗಿ ಬ್ಲಿಂಕ್ ಮಾಡಿದಳು
ಅವಳಿಗೆ ಗೊತ್ತಿಲ್ಲ
ನನಗೆ ?
ನನಗೂ ಗೊತ್ತಿಲ್ಲ .
ನಿಮಗೆ ?
ಗೊತ್ತಿರಲ್ಲ ಬಿಡಿ
ಮೋದಿಜಿಗೆ ಜೈ
ಸಿದ್ರಾಮಣ್ಣಂಗೆ ಜೈ
ಡಿಜಿಟಲ್ ಆಡಳಿತಕ್ಕೆ ಜೈ .

Rating
No votes yet

Comments

Submitted by ಗಣೇಶ Sun, 12/21/2014 - 23:20

:) :)
ಪಾರ್ಥರೆ,
ಏನೇ ಸೌಕರ್ಯ ಮಾಡಿಕೊಡಿ, ಅಲ್ಲಿ ಕಂಪ್ಯೂಟರ್‌ಗೆ ಎಂಟ್ರಿ ಮಾಡುವವ ಸರಿ ಇದ್ದರೆ ತಾನೆ,,
ಮೊಬೈಲಲ್ಲಿ/ಆನ್‌ಲೈನಲ್ಲಿ ಆರಾಮ ಮನೆಯಲ್ಲಿದ್ದೇ ಈ ಕೆಲಸ ಮಾಡಬಹುದಿತ್ತು-
ಮೊದಲಿಗೆ ಆಧಾರ್‌ಗೆ-ಎಲ್ ಪಿ ಜಿ ಲಿಂಕ್ ಮಾಡಲು - http://indane.co.in/aadhaar-seeding.php
ನಂತರ ನಿಮ್ಮ ಆಧಾರ್ ನಂಬರ್ ಲಿಂಕ್ ಆಗಿದೆಯಾ? ಯಾವ ಬ್ಯಾಂಕ್ ಎಂದು ತಿಳಕೊಳ್ಳಲು - *99*99# ಒತ್ತಿ, ಅದು ಕನೆಕ್ಟ್ ಆಗಿ ಕೇಳಿದಾಗ ನಿಮ್ಮ ಆಧಾರ್ ನಂಬರ್ ಒತ್ತಿದರೆ ಯಾವ ಬ್ಯಾಂಕ್‌ನೊಂದಿಗೆ ಎಂದು ತಿಳಿಸುವುದು- http://indane.co.in/images/QSAM_Knowledge_Warehouse.pdf
ನಾನು ವಿವರ ಕೊಟ್ಟಿದ್ದು ಕೆನರಾ ಬ್ಯಾಂಕ್ ನದ್ದು, ಆದರೆ ಲಿಂಕ್ ಆಗಿರುವುದು ಜಾಸ್ತಿ ಉಪಯೋಗಿಸದೇ ಇರುವ ಬಿಒಬಿ! ಒಳ್ಳೆಯದೇ ಆಯ್ತು...ಗ್ಯಾಸ್ ತುಂಬಿಸಿದ ಹಾಗೇ ಅಲ್ಲಿ ಎಕೌಂಟ್‌ಗೆ ಹಣಬೀಳುವುದು..ಆ ಅಕೌಂಟ್ ಸಹ ಚಾಲ್ತಿಯಲ್ಲಿರುವುದು ಅಂದುಕೊಂಡೆ. :)