ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಒಬ್ಬ ನರಮನುಷ್ಯ ಅರ್ಥಾತ್ ಹುಲುಮಾನವ ಸತ್ತು ಯಮಲೋಕಕ್ಕೆ ಹೋದ. ಅಲ್ಲಿ ಅವನ ಪಾಪ ಪುಣ್ಯಗಳ ಲೆಕ್ಕವನ್ನು ನೋಡಲಾಗಿ ಎರಡೂ ಸಮನಾಗಿ ತೂಗಿದವು. ಇದನ್ನು ನೋಡಿದ ಯಮರಾಜ ಅವನ ಮುಂದೆ ಹೀಗೆ ಆಯ್ಕೆಯನ್ನಿಟ್ಟ, "ಮಾನವನೇ, ನೀನು ಪಾಪ-ಪುಣ್ಯಗಳೆರಡನ್ನೂ ಸಮನಾಗಿ ಮಾಡಿರುವುದರಿಂದ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವ ಆಯ್ಕೆಯನ್ನು ನಿನಗೇ ಬಿಟ್ಟಿದ್ದೇನೆ". ಇದನ್ನು ಕೇಳಿದ ನರಮಾನವ ಮೊದಲು ಅವೆರಡೂ ಲೋಕಗಳನ್ನು ಒಮ್ಮೆ ನೋಡಿ ತಾನು ನಿರ್ಣಯ ಕೈಗೊಳ್ಳುವುದಾಗಿ ಹೇಳಿದಾಗ ಅದಕ್ಕೆ ಯಮ ತನ್ನ ಒಪ್ಪಿಗೆಯನ್ನು ಕೊಟ್ಟ. ಮೊದಲು ಈ ಹುಲುಮಾನವ ಸ್ವರ್ಗದ ಬಾಗಿಲಿಗೆ ಬಂದು ನೋಡಿದ; ಅಲ್ಲೆಲ್ಲಾ ಋಷಿಮುನಿಗಳು ತಪಸ್ಸು ಮಾಡುತ್ತಾ ಧ್ಯಾನಮಗ್ನರಾಗಿ ಕುಳಿತಿದ್ದರು. ಅವನಿಗೆ ತಾನೆಂದುಕೊಂಡ ರಂಭೆ, ಊರ್ವಶಿ, ಮೇನಕೆಯರಾರು ಕಣ್ಣಿಗೆ ಬೀಳಲಿಲ್ಲ. ಸರಿಯೆಂದುಕೊಂಡು ನರಕದ ಬಾಗಿಲಿಗೆ ಬಂದರೆ ಅವನ ಆಶ್ಚರ್ಯಕ್ಕೆ, ಅಲ್ಲಿ ಸುಂದರವಾದ ಸ್ತ್ರೀಯರು ನಾಟ್ಯ ಮಾಡುತ್ತಿದ್ದರು ಮತ್ತು ಉಳಿದವರು ತಿಂದು-ಕುಡಿದು ಮಜಾ ಮಾಡುವ ದೃಶ್ಯ ಅವನ ಕಣ್ಣಿಗೆ ಬಿತ್ತು. ಅದನ್ನು ನೋಡಿದವನೇ ಯಮಕಿಂಕರರಿಗೆ ಹೇಳಿದ, "ಸ್ವರ್ಗಕ್ಕಿಂತ ನರಕವೇ ಬಹಳ ಚೆನ್ನಾಗಿದೆ; ನಾನು ಇಲ್ಲೇ ಇರಲು ಇಷ್ಟ ಪಡುತ್ತೇನೆ". ನಿನ್ನಿಷ್ಟವೆಂದು ಹೇಳಿ ಆ ಯಮಕಿಂಕರರು ಅವನನ್ನು ನರಕದೊಳಕ್ಕೆ ಬಿಟ್ಟು ಹೊರಟು ಹೋದರು. ಈ ಹುಲುಮಾನವ ಒಳಗೆ ಹೋದದ್ದೇ ತಡ, ಅವನು ನರಕದ ಬಗ್ಗೆ ಕೇಳಿ ತಿಳಿದಿದ್ದ ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಹಾಕಿ ಬೇಯಿಸುವುದು, ಕಾದ ಸಲಾಕೆಯಿಂದ ಚುಚ್ಚುವುದು, ಮುಳ್ಳಿನ ಚಾಟಿಯಿಂದ ಹೊಡೆಯುವುದು ಮುಂತಾದ ಕಠೋರವಾದ ಶಿಕ್ಷೆಗಳು ಕಣ್ಣಿಗೆ ಬಿದ್ದವು. ಕೂಡಲೇ ನರಮನುಷ್ಯ ಚೀರಾಡಲಾರಂಭಿಸಿದ, "ಎಲ್ಲಾ ಮೋಸ, ಬಾಗಿಲಲ್ಲಿ ತೋರಿಸಿದ್ದೇ ಒಂದು ಆದರೆ ಒಳಗೆ ಇರುವುದೇ ಒಂದು". ಅವನನ್ನು ನೋಡಿ, ಶಿಕ್ಷೆ ಜಾರಿ ಮಾಡುವ ಮುಖ್ಯ ಅಧಿಕಾರಿ ಹೇಳಿದ, "ನೀನು ಬಾಗಿಲಲ್ಲಿ ನೋಡಿದ್ದು ನಮ್ಮ ಪಬ್ಲಿಸಿಟಿ ವಿಭಾಗವನ್ನ?!!"
Comments
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
;(((
ಭರ್ಜರಿ ಆಫರ್ - 50% ಡಿಸ್ಕೌಂಟು ಎಂದು ಹೊರಗಡೆ ಬೋರ್ಡು ಹಾಕಿ -ಒಳಗಡೆ ನುಣ್ಣಗೆ ಸುಲಿವ ಆಧುನಿಕ ದಗಾಕೋರರ ನೆನಪು ಬಂತು ...
ಜೀ ಹೊಸ ವರ್ಷಕ್ಕೆ ಒಂದೊಳ್ಳೆ ಜೋಕು -ಇದು ನನಗೆ ಫ್ರೆಶ್ ..ಮೊದಲು ಓದಿಲ್ಲ ...
ಶುಭವಾಗಲಿ
ನನ್ನಿ
\|/
In reply to ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ by venkatb83
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಸಪ್ತಗಿರಿಗಳೆ,
ಇದು ಜಮಾನಾದ ಜೋಕು ಇದು ಸುಮಾರು ೧೫-೨೦ ವರ್ಷದ ಹಿಂದಿನದು - ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಅಷ್ಟೇ :)

ಓದಿದಾಗ ನಗು ತಂತಾನೇ ಬಂದುಬಿಡುತ್ತದೆ! :))
In reply to ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ by kavinagaraj
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಧನ್ಯವಾದಗಳು, ಕವಿಗಳೆ.
In reply to ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ by kavinagaraj
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಧನ್ಯವಾದಗಳು, ಕವಿಗಳೆ.
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಸ್ವರ್ಗದವರು ಯಾಕೆ ನಮ್ಮ ಸರ್ಕಾರಿ ಪ್ರವಾಸೋದ್ಯಮದಂತೆ ("ತಾಜ್ ಮಹಲ್" ಚಿತ್ರ ತೋರಿಸಿ ಇಂಡಿಯಾಕ್ಕೆ ಬನ್ನಿ..)ಇದ್ದಾರೆ?
ಇರುವವರೂ -"ಋಷಿಮುನಿಗಳು ತಪಸ್ಸು ಮಾಡುತ್ತಾ ಧ್ಯಾನಮಗ್ನರಾಗಿ ಕುಳಿತಿದ್ದರು." ಕಣ್ಣು ತೆರೆದರೆ ನೇರ ನರಕದೆಡೆಗೆ ಹೆಜ್ಜೆ ಹಾಕಿಯಾರು. ಸ್ವರ್ಗ ಭಣಭಣ..
In reply to ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ by ಗಣೇಶ
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಗಣೇಶ್ ಜಿ,
ಬಣ್ಣಬಣ್ಣದ ಸಿನಿಮಾ ಲೋಕದಲ್ಲಿ, ಈಗ ಐಟಂ ಸಾಂಗುಗಳನ್ನು ತೋರಿಸಿ ಇಲ್ಲೇ ಸ್ವರ್ಗ ಸೃಷ್ಟಿಸುತ್ತಿದ್ದಾರಲ್ಲ, ಹಾಗಾಗಿ ಸ್ವರ್ಗಕ್ಕೆ ಹೋಗಲು ಯಾರೂ ಇಷ್ಟಪಡುತ್ತಿಲ್ಲ, ಹಾಗಾಗಿ ಸ್ವರ್ಗ ಬಣಬಣವಾಗಿದೆ :)
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಬಂಡ್ರಿಯವರೆ ಮತ್ತೆ ತಮ್ಮ ಜಮಾನದ ಜೋಕುಗಳ ಸರಣಿ ಆರಂಭಿಸಿದ್ದೀರಿ. ಸಂಪದಿಗರನ್ನು ಕ್ಷಣಕಾಲ ಹರ್ಷಚಿತ್ತರನ್ನಾಗಿಸಿ ಸಂತೋಷವನ್ನುಂಟುಮಾಡುವ ಈ ಕಾಯಕ ಮುಂದುವರೆಸಿ.
ವಂದನೆಗಳು
ರಮೇಶ ಕಾಮತ್
In reply to ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ by swara kamath
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಹೌದು ಕಾಮತ್ ಸರ್, ಅದೇಕೋ ಅಲ್ಪವಿರಾಮ ಹೋಗಿ ಈಗಿನ ಸೀರಿಯಲ್ ನಡುವಿನ ವಿರಾಮದ ತರಹ ದೀರ್ಘ ವಿರಾಮವಾಗಿತ್ತು, ಇನ್ನು ಮೇಲೆ ನಿಯಮಿತವಾಗಿರಲು ಪ್ರಯತ್ನಿಸುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ಹ್ಹ ಹ್ಹ,,,,,,,,,,, ಆಧುನಿಕತೆಯ ವ್ಯಾಪಾರಕ್ಕೆ ಕೈಗನ್ನಡಿ ಶ್ರೀದರರೆ,,,,
In reply to ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ by naveengkn
ಉ: ಜಮಾನಾದ ಜೋಕುಗಳು ೨೬: ಯಾವುದು ಮೇಲು - ಸ್ವರ್ಗವೋ, ನರಕವೋ
ನಿಮ್ಮ ಮಾತು ನಿಜ ನವೀನ್, ಅಂದಿಗಿಂತ ಇಂದಿಗೆ ಹೆಚ್ಚು ಸೂಕ್ತವೆನಿಸುತ್ತಿದೆ :)