ಕನ್ನಡ‌ ಸ0ಶೋಧಕರಿಗೆ ನೆರವಾಗುವ‌ ಅದ್ಬುತ‌ ವೆಬ್ ಸೈಟ್

ಕನ್ನಡ‌ ಸ0ಶೋಧಕರಿಗೆ ನೆರವಾಗುವ‌ ಅದ್ಬುತ‌ ವೆಬ್ ಸೈಟ್

ಬರಹ

ಕನ್ನಡದ‌ ಖ್ಯಾತವಿದ್ವಾ0ಸರಾದ‌ ಪ್ರೊ. ಓ. ಎಲ್. ನಾಗಬೂಷ‌ಣ‌ ಸ್ವಾಮ್ಯ್ ಯವರ‌ ಮಾರ್ಗದರ್ಷನದಲ್ಲ ಲೇಖಕ ಮತ್ತು ಎ0ಜಿನಿಯರ್ ಆದ ಶ್ರೀ ವಸುಧೇ0ದ್ರ‌, ಸಾಪ್ಟ್ವೇರ್ ಎ0ಜಿನಿಯರ್ ಓ0ಶಿವಪ್ರಕಾಶ್, ಮತ್ತು ಇನ್ನಿಬ್ಬರು ಸೇರಿಕೊ0ಡು ತು0ಬ ಪರಿಶ್ರಮಪೂರ್ವಕವಾಗಿ ಒ0ದು ವೆಬ್ ಸೈಟನ್ನು ರೂಪಿಸಿದ್ದರೆ. ಅದರ ಲಿ0ಕ್ ಇಲ್ಲಿದೆ. http://kannada.sanchaya.net ಇದರಲ್ಲಿ ಕನ್ನಡ‌ ಸ0ಶೋಧಕರಿಗೆ ಬೇಕಾಗುವ‌ ವಿವಿಧ‌ ಕಾಲದ‌ ಕನ್ನಡ‌ ಸಾಹಿತ್ಯವನ್ನು , ಬೇಕಾದ‌ ವಿಷಯವು ತಕ್ಶ್ಹಣ‌ ಸಿಕ್ಕುವ‌ ಹಾಗೆ ದೊರಕಿಸಿ ಕೊಡುವುದು ಇವರ‌ ಗುರಿ. ಸಧ್ಯಕ್ಕೆ ಇವರು ಇಡೀ ವಚನ‌ ಸಾಹಿತ್ಯವನ್ನು ಇದೇ ವೆಬ್ಸೈಟ್ ನಲ್ಲಿ 'ವಚನ‌ ಸ0ಚಯ‌ ಎ0ಬ‌ ವಿಬಾಗದಲ್ಲಿ ರೂಸಿ ಎಲ್ಲರ‌ ಉಪಯೊಗಕ್ಕೆ ಬಿಟ್ಟಿದ್ದಾರೆ. ಇದೆಷ್ಟು ಅದ್ಬುತವಾಗಿದೆ ಎ0ದರೆ, ನಿಮಗೆ ಯವುದೇ ವಚನದ‌ ಒ0ದು ಸಾಲು ನೆನಪಿದ್ದರೆ ಅದರ‌ ನೆರವಿ0ದ‌ ಆ ವಚನದ‌ ಪೂರ್ತಿ ಪಾಠವನ್ನು ಪಡೆಯಬಹುದು. ಯಾವುದೇ ಒ0ದು ಶಬ್ದ‌ ಯಾವ್ಯಾವ‌ ವಚನಕಾರರಿ0ದ‌ ಎಷ್ಟೆಶ್ಹ್ಟು ವಚನಗಳಲ್ಲಿ ಪ್ರಯೋಗವಾಗಿದೆ ಎ0ದು ತಿಳಿದು, ಅದರಲ್ಲಿ ನಮಗೆ ಬೇಕಾದದ್ದರ ಪೂರ್ಣಪಾಠವನ್ನು ಪಡೆಯಬಹುದು. ಒಬ್ಬ ಲೇಖಕನ ರೆಪರೆನ್ಸ್ ಕೆಲಸವನ್ನು ಇದು ಬಹಳಷ್ಟು ಹಗುರಾಗಿಸಿದೆ.( vachana.sanchaya.net)
ಈ ಮಿತ್ರರು ದಾಸ‌ ಸಾಹಿತ್ಯವನ್ನೂ ಹೀಗೆಯೇ ಅಣಿಗೋಳಿಸಿ ಕೊಡುವ‌ ಕೆಲಸವನ್ನೂ ಕೈಗೊ0ಡಿದ್ದಾರೆ. ಅದು ಮುಕ್ತಾಯ‌ ಹ0ತದಲ್ಲಿದೆ. ಪಒಪನ‌ ಕಾವ್ಯಗಳ‌ ಬಗ್ಗೆಯೂ ಇ0ಥ‌ ಆಲೋಚನೆ ಇಟ್ಟುಕೊ0ಡಿದ್ದಾರೆ.
ಇದನ್ನೆಲ್ಲಾ ಇವರು ಸ್ವ0ತ‌ ವೆಚ್ಚದಿ0ದ‌ ಮಾಡುತ್ತಿದ್ದರೆ. ಸರ್ಕರದ‌ ಇಲಾಖೆಗಳನ್ನು ಬೇಡುವ‌, ಅವರ‌ ಹಿ0ದೆ ತಿರುಗಾಡಿ ಅವರಿಕೆ ಮನವರಿಕೆ ಮಡಿಕೊಡುವ‌ ತಲೆನೋವಿನ‌ ಕೆಲಸ‌ ಯಾರಿಗೆ ಬೇಕು ಎನ್ನುತ್ತಾರೆ.ಆದರೆ ಕನ್ನಡ‌ ಸ0ಸ್ಕ್ಱುತಿ ಇಲಾಖೆ, ಅಭಿವ್ರುದ್ಧಿ ಪ್ರಾಧಿಕಾರ‌ ಇ0ಥದ್ದಕ್ಕಲ್ಲದೆ ಇನ್ಯಾವುದಕ್ಕೆ ನೆರವೀಯಬೇಕು? ಅವರು ಇದನ್ನು ಗಮನಿಸಲಿ. ಸ0ಷೋಧಕರ0ತು ಈ ತ0ಡಕ್ಕೆ ನಮನಗಳನ್ನು ಸಲ್ಲಿಸುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet