ಗ್ರ್ಯಾಮಿ ಗೆದ್ದ ರಿಕ್ಕಿ...!

ಗ್ರ್ಯಾಮಿ ಗೆದ್ದ ರಿಕ್ಕಿ...!

ಗ್ರ್ಯಾಮಿ ಗೆದ್ದ ರಿಕ್ಕಿ ಕೇಜ್...! ಕರ್ನಾಟಕಕ್ಕೆ ಬಂತು ಅಂತಾರಾಷ್ಟ್ರೀಯ ಪ್ರಶಸ್ತ ರಿಕ್ಕಿ ಕೇಜ್ ಸಂಗೀತದ ವಿಂಡ್ಸ್ ಆಫ್ ಸಂಸಾರಕ್ಕೆ ಪ್ರಶಸ್ತಿ.   ‘ವಿಂಡ್ಸ್ ಆಫ್ ಸಂಸಾರ’ ವೊಂದು ಆಡಿಯೋ ಆಲ್ಬಂ...!  ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲಿ ಗ್ರ್ಯಾಮಿ ಪ್ರಶಸ್ತಿ. ರಾಜ್ಯ ಸರ್ಕಾರದಿಂದ 25 ಲಕ್ಷ ಬಹುಮಾನ. ಮತ್ತು ಸನ್ಮಾನ..

-----
ಕನ್ನಡದ ನೆಲದಲ್ಲಿ ನೆಲೆಸಿರೋ ಸಂಗೀತ ನಿರ್ದೇಶಕ ರಿಕಿ ಕೇಜ್, ಅಂತಾರಾಷ್ಟ್ರೀಯ ಮಟ್ಟದ ಗ್ರ್ಯಾಮಿ ಪಶಸ್ತಿ ಪಡೆದು ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ತಮ್ಮ ಸಂಗೀತದಲ್ಲಿ ಮೂಡಿರೋ 14 ಹಾಡುಗಳ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂ ಗೆ ಪ್ರಶಸ್ತಿ ಬಂದಿದಕ್ಕೆ ಸುವರ್ಣ ನ್ಯೂಸ್ ಜೊತೆಗೆ ಖುಷಿ ಹಂಚಿಕೊಂಡಿದ್ದಾರೆ....

ರಿಕ್ಕಿ ಕೇಜ್ ಕಳೆದ ಭಾನುವಾರ ಲಾಜ್ ಏಂಜಲಿಸ್ ನಲ್ಲಿ ನಡೆದ 57  ನೇಯ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ್ಯೂ ಏಜ್ ಬೆಸ್ಟ್ ಆಲ್ಬಂ ಕ್ಯಾಟಗರಿಯಲ್ಲಿ ರಿಕ್ಕಿ ಕೇಜ್ ಸಂಗೀತದ ‘ವಿಂಡ್ಸ್ ಆಫ್ ಸಂಸಾರ’ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಸುಮಾರು ತಿಂಗಳ ಹಿಂದೇನೆ ವಿಂಡ್ಸ್ ಆಫ್ ಸಂಸಾರ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಆಗಲೇ ತುಂಬಾ ಸಂತಸ ಪಟ್ಟಿದ್ದರು ರಿಕ್ಕಿ...

ರಿಕ್ಕಿ ಕೇಜ್ ಸಂಗೀತದಲ್ಲಿ ಬಂದಿರೊ, ವಿಂಡ್ಸ್ ಆಫ್ ಸಂಸಾರ ಆಲ್ಬಂ ನಲ್ಲಿ 14 ಹಾಡುಗಳಿವೆ. ಅವುಗಳಲ್ಲಿ ಕೆಲವನ್ನ ವೀಡಿಯೋ ಕೂಡ ಮಾಡಲಾಗಿದೆ. ಹಾಗೆ ವೀಡಿಯೋ ಮಾಡಿರೋ ಆಲ್ಬಂ ಸಾಂಗ್​ ನಲ್ಲಿ ಮಹಾತ್ಮಾ ಗಾಂಧಿಜೀಯ ಆದರ್ಶವಿರೋ ಒಂದು ಹಾಡು ಇದೆ..ಸಂಸಾರದ ವಿರಹ-ವೇದನೆಯನ್ನ ಕಟ್ಟಿಕೊಡೋ ಗೀತೆನೂ ಇದೆ. ಆದರೆ, ರಿಕ್ಕಿ ತಮ್ಮ ಈ ಆಲ್ಬಂಗೆ ಎಂದೂ ಅಂತಾರಾಷ್ಟ್ರೀಯ ಮಟ್ಟದ  ಗ್ರ್ಯಾಮಿ ಪ್ರಶಸ್ತಿ ಬರುತ್ತದೆಂದು ಅಂದು ಕೊಂಡಿರಲಿಲ್ಲ. ಆದರೆ, ಅದನ್ನ ಪಡೆಯೋವಾಗ ಆದ ಆ ಅತ್ಯದ್ಭುತ ಕ್ಷಣವನ್ನ ಹಂಚಿಕೊಂಡ್ರು ರಿಕ್ಕಿ...

ರಿಕ್ಕಿ ಸಂಗೀತದ ವಿಂಡ್ಸ್ ಆಫ್ ಸಂಸಾರದ ಆಲ್ಬಂ ಗೆ ದಕ್ಷಿಣ ಆಫ್ರಿಕಾದ ಕೊಳುವಾದಕ ವೋಟರ್ ಕೆಲ್ಮನ್ ಕೊಳಲುವಾದನ, ಮತ್ತಷ್ಟು ಶಕ್ತಿ ತುಂಬಿದೆ. ಕೇಳುವ ಮನಸ್ಸುಗಳಿಗೆ ಭಾವವನ್ನ ಕಟ್ಟಿಕಡೋ ಕೆಲಸ ಮಾಡ್ತದೆ. ಒಂದು ರೀತಿ ಕನ್ನಡದ ನೆಲದಲ್ಲಿರೋ ರಿಕ್ಕಿ ಕೇಜ್ ಕರ್ನಾಟಕಕ್ಕೆ ತಮ್ಮ ವಿಂಡ್ಸ್ ಆಫ್ ಸಂಸಾರದ ಮೂಲಕ ಗ್ರ್ಯಾಮಿ ಅವಾರ್ಡ್ ತಂದಿದ್ದಾರೆ...ಗುಡ್ ಲಕ್ ಮಿಸ್ಟರ್ ರಿಕ್ಕಿ. ನಿಮ್ಮ ಖ್ಯಾತಿ ಗಾಂಧಿನಗರದ ಮಂದಿಗೂ ತಿಳಿಯಲಿ....

-ರೇವನ್ ಪಿ.ಜೇವೂರ್

Comments