ಜಾಗರೂಕ ಶಿವ
ಜಾಗರೂಕ ಶಿವ
ಲೋಕ ರೀತಿ ಬಲ್ಲವ
ದೂರದೆಲ್ಲೊ ಇರುವ
ಶಿವರಾತ್ರಿಗಷ್ಟೆ ಬರುವ ||
ಬೇಕು ಬೇಡಗಳ ಯಾದಿ
ದೂರು ಪಟ್ಟಿಗಳ ಫಿರ್ಯಾದಿ
ಜಾಡಿಸೆ ಕಾದಿಹ ಜನ
ಕೈಗೆ ಸಿಗನವ ಜಾಣ ||
ಹೂ ಪತ್ರೆ ಎಸೆವ ಜನ
ಕಣ್ಕಿತ್ತು ಕೊಟ್ಟವರ ಧ್ಯಾನ
ಬಿಲ್ವವನೇನೊ ಇರಿಸಿ
ಬೇಡುವರೆಲ್ಲ ಜಗದ ಖುಷಿ ||
ನಿನದೆ ನಿರ್ಮಾಣ ನಿಜ
ಸುಖದುಃಖ ಬೆರೆತ ಸಹಜ
ನಿರ್ವಾಣದತ್ತ ನೀನಿಟ್ಟೆ ಗುರಿ
ಐಹಿಕದೈಶ್ವರ್ಯ ನಮ್ಮ ಪರಿ ||
ಅಹುದು ನೀನೆಲ್ಲೊ ನಾವೆಲ್ಲೊ
ನಿಜದ ಭಕ್ತರು ಇಹರಲ್ಲೊ
ಅದಕೆ ಮರೆಯದೆ ಪ್ರತಿ ವರ್ಷ
ಶಿವರಾತ್ರಿಗೆ ನೀಡುತಿಹ ದರ್ಶ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಜಾಗರೂಕ ಶಿವ
ನಿಮ್ಮ 'ಶಿವ' ಜಾಣ ಶಿವನಿರಬೇಕು! :)
In reply to ಉ: ಜಾಗರೂಕ ಶಿವ by kavinagaraj
ಉ: ಜಾಗರೂಕ ಶಿವ
ಕವಿಗಳೆ ನಮಸ್ಕಾರ. ಜಾಗರೂಕನು ಹೌದು, ಜಾಣನೂ ಹೌದು. ಯಾರೇನೆ ಅನ್ನಲಿ, ಬರೆಯಲಿ ತಲೆ ಕೆಡಿಸಿಕೊಳ್ಳದೆ ತುಟಿ ಬಿಗಿ ಹಿಡಿದು ಮೌನವಾಗಿ ಕುಳಿತುಬಿಟ್ಟಿರುತ್ತಾನೆ. ವಾದ ವಿವಾದಗಳೆಲ್ಲ ಬರಿ ನಮಗೆ ಮಾತ್ರವೆ :-)