ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತಾ ಸಪ್ತಾಹ

ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತಾ ಸಪ್ತಾಹ

ಜಾಗತಿಕ ಹವಮಾನ ಬದಲಾಣೆಯಿಂದ ನೀರಿನ ಸಮಸ್ಯೆ ಉಲ್ಬಣವಾಗಿದೆ ಅದರಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯು ಬೀಕರವಾಗುತ್ತದೆ ಅದರಲ್ಲೂ ಗ್ರಾಮೀಣ ಭಾಗದಲ್ಲಿಯಂತ ನೀರಿನ ಸಮಸ್ಯೆ ನಗರ ಪ್ರದೇಶಕ್ಕಿಂತ ಭಿಗಡಾಯಿಸುತ್ತದೆ ಏಕೆಂದರೇ ಗ್ರಾಮೀಣ ಭಾಗದಲ್ಲಿ ಸರಕಾರವು ದೂರದೃಷ್ಠಿಯುಳ್ಳ ಯೋಜನೆಯನ್ನು ಅನುಷ್ಠಾನಗೋಳಿಸದೆ ಇರುವದರಿಂದ ನೀರಿನ ತೊಂದರೇ ತುಂಬಾ ಹದಗೆಡುತ್ತದೆ ಅದರಲ್ಲೂ ಕುಡಿಯುವ ನೀರು ಶುದ್ಧವಾಗಿರದೆ ಬರಿ ಲವಣಾಂಶಗಳು ಅಂದರೇ ಜೀವಕ್ಕೆ ಘಾತಕ ಲವಣಾಂಶಗಳು ಪ್ಲೋರೈಡ್,ಆರ್ಸೆನಿಕ್ ನಂತ ಲವಣಾಂಶಗಳ ಪ್ರಮಾಣ ಕೆಲವು ಪ್ರದೇಶಗಳಲ್ಲಿ ಮೀತಿಮೀರಿದೆ ಹಾಗೂ ಪೂರೈಕೆಯಾಗುವ ನೀರು ಗ್ರಾಮೀಣ ಪ್ರದೇಶದಲ್ಲಿ ಕಲುಷಿತವಾಗುವುದು ಇದರಿಂದ ಮಾರಣಾಂತಿಕ ಕಾಯಿಲೆಗಳು ಹರಡುವುದು ಸಾಮಾನ್ಯವಾಗಿದೆ ಕಾರಣ ಸರಕಾರವು ಇದೆ ಉದ್ಧೇಶದಿಂದ ಗ್ರಾಮೀಣ ಭಾರತದಲ್ಲಿ ಬಯಲು ಮಲ ವಿಸರ್ಜನೆಯು ದೊಡ್ಡ ಪಿಡುಗಾಗಿದೆ ನಾವು ಮಂಗಳನ ಅಂಗಳಕ್ಕೆ ಕಾಲಿಟ್ಟರೂ ನಮ್ಮ ದೇಶದ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಇಲ್ಲದೇ ಇರುವಂತದು ದೊಡ್ಡ ದುರಂತ ಈಗ ಸರಕಾರವು ನಿರ್ಮಲ ಭಾರತ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಲು ಪ್ರೋತ್ಸಾಹ ಧನವನ್ನು ನೀಡಿ ಬಯಲು ಮಲ ವಿಸರ್ಜನೆ ಮುಕ್ತ ಗ್ರಾಮಗಳನ್ನಾಗಿ ಮಾಡಿ ಕುಡಿಯುವ ನೀರು ಕಲುಷಿತವಾಗದಂತೆ ಜನರಿಗೆ ತಿಳಿ ಹೇಳುವ ಉದ್ಧೇಶದಿಂದ ನಮ್ಮ ರಾಜ್ಯದಲ್ಲಿ ದಿನಾಂಕ:16-03-2015 ರಿಂದ 24-03-2015 ರ ವರೆಗೆ ವಿವಿಧ ಚಟುವಟಿಕೆಗಳ ಮೂಲಕ ಗ್ರಾಮೀಣರಲ್ಲಿ ಜಾಗ್ರತಿ ಮೂಡಿಸುವದರೊಂದಿಗೆ ಒಟ್ಟಾರೇ ಮಾಲಿನ್ಯ ರಹಿತ ಗ್ರಾಮಗಳನ್ನಾಗಿ ಮಾಡಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವುದೆ ಈ ಸಪ್ತಾಹದ ಉದ್ದೇಶವಾಗಿದೆ ತದನಿಮಿತ್ಯ ಇದರ ಭಾಗವಾಗಿ ನಮ್ಮ ಪಂಚಾಯತಿಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ನಮ್ಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ನಾಗಮ್ಮನವರು ಕಾರ್ಯಕ್ರಮ ಉದ್ಘಾಟಿಸಿದರು ಸರಕಾರದ ಆಶಯ ನೇರವೇರಲಿ ಎಂದು ತಾವುಗಳು ಹಾರೈಸಿ ಹಾಗೂ ಗ್ರಾಮೀಣ ಜನರಿಗೆ ಸರಕಾರ ಸೌಲಭ್ಯವೆಷ್ಟು ಮುಖ್ಯವೋ ಅಷ್ಟೆ ಶೌಚಾಲ ನಿರ್ಮಾಣ ಮಾಡಿಕೊಳ್ಳುವುದು ತಮ್ಮ ಕರ್ತವ್ಯವೆನ್ನುವ ಮನೋಭಾವನೆ ಬರಲಿ ಎನ್ನುವುದೇ ನಮ್ಮ ಆಶಯವಾಗಿದೆ ಈ ಕಾರ್ಯಕ್ರಮದಲ್ಲಿ ನನಗೆ ಪ್ರಾಸ್ಥಾವಿಕ ಮಾತನಾಡುವ ಅವಕಾಶ ಬಂದಿದ್ದರಿಂದ ಸದರಿ ಕಾರ್ಯಕ್ರಮದ ಚಿತ್ರಣವನ್ನು ಸಂಪದ ಓದುಗರಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ