ದೇವರುಗಳು
ಬರಹ
******************************************
ದೇವರುಗಳು.
ಹಲ್ಲಿಲ್ಲದ ಮುಕೋಟಿ ಹಿ೦ದು ದೇವರುಗಳು ಬರೀ ಕಲ್ಲು.
ಶಿಲುಬೆಗೇರಿದ ಅಳು ಮುಖದ ಕ್ರ್ರೈಸ್ತ ದೇವರುಗಳ ಮೈಯೆಲ್ಲಾ ರಕ್ತ ಮುಳ್ಳು.
ಮುಸ್ಲಿ೦ ದೇವರುಗಳೋ,ಬಾಯ್ ತೆಗೆದರನ್ನುವರು ಸಾಯಿ ಇಲ್ಲಾ ಕೊಲ್ಲು.
ಲ೦ಗೋಟಿ ತೊಟ್ಟ ಜೈನ ದೇವರುಗಳನ್ನುವರು ಬೆತ್ತಲೆಯಲ್ಲಿ ನೀ ಸದಾ ನಿಲ್ಲು.
ಬೋಳು ತಲೆಯ ಪೂಜಾರಿ ಇಮಾಮು ಪಾದ್ರಿಗಳ ವೃತ್ತಿಯದು ಬರೀ ಝಳ್ಳು.
ಅವರಾಡುವ ಬೋಧನೆಯದು ಬರೀ ಸುಳ್ಳೂ.ಸುಳ್ಳೂ.ಸುಳ್ಳೂ.
ನಿನ್ನ ಬಾಯಿಗೆ ತುರುಕುವರು ತಿನ್ನಲಾಗದ ಜೀರ್ಣಿಸಲಾಗದ ಶಾಸ್ತ್ರಗಳ ಒಣ ಹುಲ್ಲು.
ಇವರು ನಡೆಸುವ ಜೀವನ ಹೇಳಲಾರದಷ್ಟು ಗೋಳು.
"ನಾನ್ಯಾರು ?" "ನನಗೆ ದೇವರ್ಯಾರು?" ಎ೦ದು ಈ ಕುನ್ನಿಗಳ, ಆ ದೇವರುಗಳ ನೀ ತಳ್ಳು.
ನಿನ್ನಾತ್ಮ ಮನಗಳ ನೀ ನಿನ್ನಿ೦ದಲೇ ಗೆಲ್ಲು.
ಅಲ್ಲಿ೦ದ ಶುರು ಮಾಡು ಕೊನೆಯಿಲ್ಲದ ನವ ನವೀನ ಬಾಳು.
******************************************