ಪ್ರೀತಿಯ ನಗು
ಆದಿನ ಕಾಣದೆ ಹೋದೆ ಈ ಪ್ರೀತಿಯ, ಬೆಳದಿಂಗಳ ರಾತ್ರಿಯಲಿ.
ಆದರೂ ಹುಡುಕಿದೆ ನಾ ನಿನ್ನ ಮನದಂಗಳದಲಿ.
ಎಂದಾದರೂ ನಿ ಬಂದು ನನ್ನ ಸೇರುವೆ ಎಂಬ ಆಸೆಯಲಿ
ಕಾದಿದ್ದೆ ನಾ ಹಗಲಿರುಳು,
ಆದರೆ ನೀ ಬರಲಿಲ್ಲ, ಆಸೆ ಕೈಗೂಡಲಿಲ್ಲ.
ಪ್ರೀತಿಯಲಿ ನಾ ತೇಲಲಿಲ್ಲ, ದು:ಖದಲಿ ನಾ ಅತ್ತೇನಲ್ಲ.
ಮರುದಿನ ಆ ಬೆಳಗಿನ ಹೊಸ ಕಿರಣ ಬಂದು
ನನ್ನ ಮನದ ಕದವ ತಟ್ಟಿದಾಗ ,
ಹೊಸ ಆಸೆಯು ಚಿಗುರಿ,ಬಾಗಿಲ ಬಳಿ ನಿಂತಾಗ ನೀ ಬರಲಿಲ್ಲಾ.
ಮನವೆಂಬ ಹೂ,ಭ್ರಮರಕ್ಕಾಗಿ ದು:ಖಿಸಿತ್ತಲ್ಲಾ
ಹೂ ಮುದುಡುವ ಸಮಯದಲಿ ಬಂದೆ ನೀ ಅಲ್ಲಿ
ಆಸೆಯೂ ಚಿಗುರಿತು, ಮತ್ತೆ ಹೂ ಅರಳಿತು.
ನೀ ಪ್ರೀತಿಯ ನಗೂ ಚೆಲ್ಲಿದಾಗ ಮನವೂ ಹೇಳಿತಾಗ
ಈ ಒಂದು ನಗುವಿಗಲ್ಲವೇ,ನೀ ಹಗಲಿರುಳು ಕಾದಿದ್ದೆಯಲ್ಲ.
-ಗುರುರಾಜ ಎಣ್ಣಿ
Rating