ಪ್ರೇಮದ ಅಮಲು
ಬರಹ
ಈ ಪ್ರೇಮ ನಂಬಿದರೆ ಬರಿ ಕಣ್ಣೀರಿನ ಗೋಳು
ಹೀಗೇಕೆ ಆಯಿತು ನನ್ನ (ಯೌವ್ವನದ)ಹದಿನೆಂಟರ ಬಾಳು
ಈ ಬಾಳೆಲ್ಲ ಬರಿ ವ್ಯತೆಯು ಬರಿ ಕಣ್ಣೀರಿನ ಕಥೆಯು "ಪ"
ಪ್ರೀತಿಯೆ ಸತ್ಯ ನೀತಿಯೆ ಧರ್ಮ
ಎಂದು ನಾ ತಿಳಿದೆ ಆ ಆ ಆ
ಪ್ರೇಮವು ಅಮರ ಪ್ರೀತಿಯು ಮದುರ
ಎಂದು ನಾ ತಿಳಿದೆ ಆ ಆ ಆ
ಹೆಣ್ಣಿನ ಪ್ರೀತಿಯ ನಂಬಿ ಮೋಸಹೋದೆ
ನನ್ನ ಬದುಕಲ್ಲಿ ಕತ್ತಲೆ ತುಂಬಿದೆ "ಈ ಪ್ರೇಮ"
ಕಂಡೆ ಹೆಣ್ಣಲಿ ಪ್ರೇಮಾನುರಾಗ
ಹೊಮ್ಮಿ ಬಂತು ಪ್ರೀತಿ ಸುಯೋಗ
ಎಂದು ನಾ ತಿಳಿದೆ ಆ ಆ ಆ
ಎಲ್ಲವ ತೊರೆದು ನಾ ಬಂದೆ
ಪ್ರೇಮದ ಸುಖವ ನಾ ಕಾಣಲೆಂದೆ
ಪ್ರೀತಿಯ ಮೋಹಕೆ ಸಿಲುಕಿ ಪ್ರೇಮವೆ ಆಸರೆ ಎಂದೆ
ಬಾಳಲ್ಲಿ ನಾ ಬಲು ನೊಂದೆ ಬದುಕು ಸಾಕೆಂದೆ "ಈ ಪ್ರೇಮ"
-ವಿ ಕೃಷ್ಣಮೊರ್ತಿ ಅಜ್ಜಹಳ್ಳಿ ಬಿ ಎಂ ಎಸ್ ಸಿ ಇ ಬೆಂಗಳೂರು-೧೯