ಎಲೆ ತಾವರೆ, ಹೂದಾವರೆ...

ಎಲೆ ತಾವರೆ, ಹೂದಾವರೆ...

ಈಗಿನ್ನೂ ಮುಂಗಾರುಮಳೆ ಪ್ರಾರಂಭವಾಗಿದೆ. ಹೆಚ್ಚಾಗಿ ಎಲ್ಲಾ ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಆದರೆ ಈ ಒಂದು ಕೆರೆ ಮಾತ್ರ ನೋಡಿ ಅದು ಹೇಗೆ ಮಳೆಯ ಹಂಗಿಲ್ಲ ಎಂಬಂತೆ ನೀರುತುಂಬಿ ತಾವರೆತುಂಬಿ ಕಂಗೊಳಿಸುತ್ತಿದೆ. ಶಿಕಾರಿಪುರ ತಾಲೂಕಿನ ಕಲ್ಮನೆ ಯ ಸಮೀಪದ ಈ ‘ತಾವರೆಕೆರೆ’ ತುಂಬ ಸಾವಿರಾರು ತಾವರೆಗಳು. ಮರಿದುಂಬಿಯಂತೆ ದಡದ ತುಂಬ ಸುತ್ತಿ ಸುತ್ತಿ ತೆಗೆದ ಚಿತ್ರಗಳಲ್ಲಿ ಕೆಲವು ಇಲ್ಲಿವೆ. ಕಾರ್ಮೋಡಗಳು ತುಂಬಿದ್ದರೂ ಮಳೆಯೇನೂ ಬರುತ್ತಿರಲಿಲ್ಲ, ದೈವಕ್ಕೆ.
ಚಿತ್ರ ತೆಗೆಯುತ್ತಾ ನೆನಪಾಗಿದ್ದು ಒಂದು ದಾಸರ ಪದ: ಮಧುಕರ ವೃತ್ತಿ ನನ್ನದು..ಪದುಮನಾಭನ ಪಾದ ಪದುಮ ಮಧುಪವೆಂಬ...

http://raaghava-haagesummane.blogspot.com/

Rating
No votes yet