ಭಜಿಸಿ ಬದುಕೆಲೊ ಮನುಜ

ಭಜಿಸಿ ಬದುಕೆಲೊ ಮನುಜ

ಚಿತ್ರ

ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ?
ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ?
ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ 
ಬಿಡಿಸುವುದೆ? ಶಿವನಪದಕಮಲವನೆ ನಂಬು!

ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭): 

ಘಟೋ ವಾ ಮೃತ್ಪಿಂಡೋsಪಿ ಅಣುರಪಿ ಚ ಧೂಮೋ ಅಗ್ನಿರಚಲಃ
ಪಟೋ ವಾ ತಂತುರ್ವಾ ಪರಿಹರತಿ ಕಿಂ ಘೋರ ಶಮನಂ
ವೃಥಾ ಕಂಠಕ್ಷೋಭಂ ವಹಸಿ ತರಸಾ ತರ್ಕ ವಚಸಾ
ಪದಾಂಭೋಜಂ ಶಂಭೋರ್ಭಜ ಪರಮಸೌಖ್ಯಂ ವ್ರಜ ಸುಧೀಃ

-ಹಂಸಾನಂದಿ

ಕೊ: ಇವತ್ತು ಶಂಕರ ಜಯಂತಿಯಾದ್ದರಿಂದ ಮಾಡಿದ ಆದಿಶಂಕರರ ಶಿವಾನಂದ ಲಹರಿಯ ಒಂದು ಪದ್ಯದ ಅನುವಾದವಿದು

ಕೊ.ಕೊ: ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಪ್ರಾಸವಿಟ್ಟಿಲ್ಲ. ಮೂಲವು ಶಿಖರಿಣೀ ಎಂಬ ವೃತ್ತದಲ್ಲಿದೆ. ಮೂಲದ ಕೊನೆಯ ಸಾಲನ್ನು, "ಶಿವನಪದಕಮಲವನೆ ನಂಬು" ಎಂದು ಚಿಕ್ಕದಾಗಿ ಅನುವಾದಿಸಬೇಕಾಯ್ತು. ಆದರೂ ಭಾವಕ್ಕೆ ಕುಂದಾಗಿಲ್ಲವೆಂದು ಎಣಿಸುತ್ತೇನೆ.

ಕೊ.ಕೊ.ಕೊ: ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಹರಿಯ ಅನ್ನುವುದೊಂದು ಪ್ರಸಿದ್ಧವಾದ ದಾಸರ ಪದ. ಅದರ ಭಾಗವನ್ನೇ ಇಲ್ಲಿ ತಲೆಬರಹವನ್ನಾಗಿಸಿದ್ದೇನೆ.

ಚಿತ್ರ ಕೃಪೆ: ಹಳೇಬೀಡಿನ ಹೊಯ್ಸಳೇಶ್ವರ ದೇಗುಲದಲ್ಲಿರುವ ನಟರಾಜ ( http://www.agefotostock.com/en/Stock-Images/Rights-Managed/TIP-008LIT01724)

Rating
No votes yet

Comments