ಮೊಸರು ಬಜ್ಜಿ (ಆಲೂಗೆಡ್ಡೆ ಮೊಸರು ಬಜ್ಜಿ) - ರಾಯತ!

Submitted by rasikathe on Tue, 05/05/2015 - 04:45
No votes yet
ಬೇಕಿರುವ ಸಾಮಗ್ರಿ

ಮೊಸರು ಬಜ್ಜಿ (ಆಲೂಗೆಡ್ಡೆ ಮೊಸರು ಬಜ್ಜಿ) - ರಾಯತ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ನಾವೆಲ್ಲ ಈಚೀಚೆಗೆ "ರಾಯತ" ವನ್ನು ಸುಲಭವಾಗಿ ತಯಾರಿಸುವ ವಿಧಾನವನ್ನು ಉಪಯೋಗಿಸಿ ಮಾಡುತ್ತಾ ಇದ್ದೇವೆ. ಅರ್ಥಾತ್ ಸೌತೆಕಾಯಿ, ಈರುಳ್ಳಿ, ಟೊಮ್ಯಾಟೊ, ಕ್ಯಾರಟ್, ಹಸಿರು ಮೆಣಸಿನಕಾಯಿ ಎಲ್ಲ ಹೆಚ್ಚಿ ಮೊಸರಿಗೆ ಹಾಕುವುದು. ತುಂಬಾ ಅನುಕೂಲ ಮತ್ತು ರುಚಿಯಾಗೂ ಇರುತ್ತದೆ. ನಮ್ಮ ಅಮ್ಮಂದಿರ ಕಾಲದಲ್ಲಿ ಹಬ್ಬ - ಹರಿದಿನ ಅಂದರೆ, ಈರುಳ್ಳಿ ಹಾಕಿ ರಾಯತ ಮಾಡುತ್ತಿರಲಿಲ್ಲ. ವಾಂಗೀ ಬಾತ್, ಚಿತ್ರಾನ್ನ ಅಥವಾ ಯಾವುದೇ ಕಲಸಿದ ಅನ್ನದ ಜೊತೆಗೆ ಆಲೂಗೆಡ್ಡೆ ಯಿಂದ ರಾಯತ ಮಾಡುತ್ತಿದ್ದರು.

ಆಲೂಗೆಡ್ಡೆ ಮೊಸರು ಬಜ್ಜಿ: ಬೇಕಾಗುವ ಸಾಮಾಗ್ರಿ.....

ಆಲೂಗೆಡ್ಡೆ: ೨-೩

ಹಸಿರು ಮೆಣಸಿನಕಾಯಿ: ೩-೫ (ಬಾಳಕ ಮೆಣಸಿನಕಾಯಿ ಒಗ್ಗರಣೆಗೆ ಹಾಕಿದರೆ ಇದರ ರುಚಿ ಇನ್ನೂ ಹೆಚ್ಚುತ್ತದೆ)

ಕರಿಬೇವು: ೧-೨ ಎಸಳು

ಕೊತ್ತಂಬರಿ: ೫-೬ ಎಸಳು

ಉಪ್ಪು : ರುಚಿಗೆ ತಕ್ಕಷ್ಟು

ಇಂಗು : ಚಿಟೆಗೆ

ಸಾಸಿವೆ : ಒಗ್ಗರಣೆಗೆ (ಸಣ್ಣ ಚಮಚದಲ್ಲಿ)

ಒಗ್ಗರಣೆಗೆ ಬೇಕಾಗುವಷ್ಟು ಎಣ್ಣೆ

ಮೊಸರು: ಮನೆಯಲ್ಲಿ ಮಾಡಿದ ಮೊಸರು ಅಥವಾ ಬಟರ್ ಮಿಲ್ಕ್ ಆಗಬಹುದು.

ಆಲೂಗೆಡ್ಡೆಯನ್ನು ಇಡೀದಾಗಿ ಬೇಯಿಸಿಕೊಳ್ಳಿ. ಸಿಪ್ಪೇ ತೆಗೆದು ಸಣ್ಣದಾಗಿ ಕತ್ತರಿಸಿ ಒಂದು ಗುಂಡಾಲಿನಲ್ಲಿ (ಬೌಲ್) ನಲ್ಲಿ ಹಾಕಿ. ಈಗ ಬಾಣಲೆಯಲ್ಲಿ ೧-೨ ಚಮಚ ಎಣ್ಣೆ ಹಾಕಿ, ಸಾಸಿವೆ ಚಿಟಗಿಸಿ, ಹಸಿರು ಮೆಣಸಿನಕಾಯಿ (ಕತ್ತರಿಸಿದ), ಕರಿಬೇವು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ. ಚಿಟಿಗೆ ಅರಿಸಿನ ಕೂಡ ಹಾಕಬಹುದು ಒಗ್ಗರಣೆಗೆ. ಈ ಒಗ್ಗರಣೆಯನ್ನು ಕತ್ತರಿಸಿದ ಆಲೂಗೆಡ್ಡೆಗೆ ಮೊಸರು ಹಾಕಿದ ಮೇಲೆ ಹಾಕಿ ಕೂಡಿಸಿ. ಕತ್ತರಿಸಿದ ಕೊತ್ತಂಬರಿಯನ್ನು ಮೇಲೆ ಸಿಂಪಡಿಸಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೂಡಿಸಿ. ಮನೆಯ ಮೊಸರಾದರೆ ಗಟ್ಟಿಯಾಗಿರುತ್ತದೆ. ಬಟರ್ ಮಿಲ್ಕ್ ಆದರೆ ಸ್ವಲ್ಪ ನೀರಾಗಿರುತ್ತದೆ. ಬಾಳಕದ ಮೆಣಸಿನಕಾಯಿ ಇದ್ದರೆ, ಅದನ್ನೇ ಒಗ್ಗರಣೆಗೆ ಹಾಕಿದರೆ, ರುಚಿ ಇನ್ನೂ ಹೆಚ್ಚುತ್ತದೆ. ಈಗ ನಿಮ್ಮ ಮೊಸರು ಬಜ್ಜಿ ತಯಾರು. ಇದನ್ನು ಕಲಸಿದ ಅನ್ನದ ಜೊತೆಗೆ, ಹಾಗೂ ಸಾರಿನ ಜೊತೆ ನೆಂಚುಕೊಳ್ಳಲು ಮತ್ತು ಚಪಾತಿ - ರೊಟ್ಟಿಗಳ ಜೊತೆಯಲ್ಲೂ ಸವಿಯಬಹುದು.

 

 

ತಯಾರಿಸುವ ವಿಧಾನ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet

Comments