ಬಾಶೋನ ಹಯಕುಗಳು

ಬಾಶೋನ ಹಯಕುಗಳು

ಬಿದಿರಮೆಳೆ

ಮೇಲೆ ತಿಂಗಳ ಹಾಳೆ

ಕೋಗಿಲೆ ಗಾನ

 

ರಣರಂಗದೆ

ಮೆರೆದ ವೀರರಿಗೆ

ಹುಲ್ಲಿನಗೋರಿ

 

ಶರದೃತು ರಾ

ತ್ರಿಯ ನೀರವ ರಸ್ತೆ

ಒಂಟಿ ಪ್ರಯಾಣ

 

ಚಂದಿರನ ತೋ

ರೆ  ಮುಗಿಲುಗೊಂಚಲ

ಕಣ್ಣಾ ಮುಚ್ಚಾಲೆ

 

ಮೆತ್ತಿಕೊಂಡಾಳೋ

ಸೀತಾಳೆ ಸುಗಂಧವ

ಪಾತರಗಿತ್ತಿ

 

ಬಂದ ವಸಂತ

ಬೆಟ್ಟದ ಮೇಲೆಲ್ಲ ಮಂ

ಜಿನಲಂಕಾರ

 

 

ಕೊರೆವ ಚಳಿ

ನೆರೆಯವನು ತಾಳಿ

ಕೊಳ್ಳುವನೇನು?

 

ಹಳೆಯ ಕೊಳ

ಬುಳು ಬುಳುಕ್ ಸದ್ದು

ಕಪ್ಪೆ ಜಿಗಿತ‌

Rating
No votes yet

Comments

Submitted by ajitmb Thu, 05/21/2015 - 16:46

ಬಂದ ವಸಂತ
ಬೆಟ್ಟದ ಮೇಲೆಲ್ಲ ಮಂಜಿನಲಂಕಾರ
ಕೊರೆವ ಚಳಿ ನೆರೆಯವನು ತಾಳಿ
ಕೊಳ್ಳುವನೇನು?
---> ನಡುವಿನ ವ್ಯತ್ಯಾಸವೇನು

Submitted by modmani Fri, 05/29/2015 - 19:46

In reply to by ajitmb

ಅಜಿತ ಎಂ. ಬಿ. ಅವರೇ
ಅವೆರಡೂ ಬೇರೆ ಬೇರೆ ಪದ್ಯಗಳು .
ವಸಂತ ಬಂದಾಗ ಬೆಟ್ಟದ ಮೇಲೆಲ್ಲಾ ಮಂಜಿನ ಅಲಂಕಾರ ನಡೆಯುತ್ತದೆ. ಬೆಳಗಿನ ಜಾವದ ಹಿಮ ಕಮ್ಮಿಯಾಗುವ ಸಮಯವಾದರೂ ಅದು ಪ್ರಕೃತಿಯ ಸೊಬಗನ್ನು ವರ್ಣಿಸುವ ಪದ್ಯ
ಎರಡನೆಯದು, ಕೊರೆವ ಚಳಿಯನ್ನು ತಾಳಲಾಗದ ಕವಿ ಪಕ್ಕದ ಮನೆಯವನು ಹೇಗೆ ತಾಳಿಕೊಳ್ಳುತ್ತಾನೆ ಎಂದು ಯೋಚಿಸಿ, ಚಳಿ ತಡೆಯಲು ಧೈರ್ಯ ತಂದುಕೊಂಡ ಎನ್ನುವ ಅರ್ಥವೂ ಆಗಬಹುದು, ಅಥವಾ ಸಮಸ್ತಾಲೋಕ ಸುಖಿನೋ ಭವಂತು ಎನ್ನುವ ಉಕ್ತಿಯಂತೆ, ಅನ್ಯರ ಕಷ್ಟಕ್ಕೆ ಮರುಗುವ ಸಹೃದಯತೆಯೂ ಆಗಬಹುದು.
ಹಯಕುಗಳ ಸ್ವಾರಸ್ಯವೇ ಅದು, ಕೇವಲ ಮೂರು ಸಾಲುಗಳಲ್ಲಿ ಒಟ್ಟು ಹದಿನೇಳು ಅಕ್ಷರಗಳಲ್ಲಿ, ಹಿಡಿದಿಟ್ಟ ಶಬ್ದಗಳು ನಾನಾರ್ಥವನ್ನು ಓದುಗರ ಹೃದಯದಲ್ಲಿ ಹೊಮ್ಮಿಸುವುದು.
ಮೇಲಿನ ಅನುವಾದ ನನ್ನದಾಗಿರುವುದರಿಂದ ರಸಭಂಗ ಕಂಡುಬಂದರೆ ನಾನೇ ಹೊಣೆ.