' ಮನ ಕಲಕಿದ ಎರಡು ಸಾವಿನ ಸುದ್ದಿಗಳು '

' ಮನ ಕಲಕಿದ ಎರಡು ಸಾವಿನ ಸುದ್ದಿಗಳು '

ಚಿತ್ರ

                            

 

     ಎಂದಿನಂತೆ ಮುಂಜಾನೆ ಇಂದಿನ ದಿನ ಪತ್ರಿಕೆಯ ಮುಖಪುಟ ಅವಲೊಕಿಸಿದಾಗ ಅಗ್ರ ಪುಟದ ಸೌಭಾಗ್ಯ ಪಡೆದ ಮೋದಿಯ ಕೋರಿಯಾ ದೇಶದ  ಭೇಟಿ ಜೊತೆಗೆ ದ್ವಿತೀಯ ಪೀಯೂಸಿ ಪರೀಕ್ಷೆಯ ಫಲಿತಾಂಶಗಳ ಸುದ್ದಿಗಳ ಮಧ್ಯೆ ಇಬ್ಬರು ಅಮಾಯಕ ಹೆಣ್ಣು ಮಕ್ಕಳ ಸುದ್ದಿ ಸ್ಥಾನ ಪಡೆದುದು ಒಂದು ರೀತಿಯ ಅಚ್ಚರಿಯ ಸುದ್ದಿ ಎನಿಸಿತು. ಒಂದು ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಗೌತಮಿಯ ಸುದ್ದಿಯಾದರೆ ಇನ್ನೊಂದು ಅತ್ಯಾಚಾರ ಸಂತ್ರಸ್ಥೆ 67 ವರ್ಷ ವಯಸ್ಸಿನ ಅರುಣಾ ಶಾನಬಾಗ ದೀರ್ಘ ಕಾಲದ ಯಾತನೆಯಿಂದ ಮುಕ್ತಳಾಗಿ ಇಹಲೋಕ ತ್ಯಜಿಸಿದ ಸುದ್ದಿ. ಆದರೆ ಪ್ರಥಮ ದಜೇಯಲ್ಲಿ ಪಾಸಾದ ಸಂತಸ ಅನುಭವಿಸಲು ಆಕೆಯೆ ಇಂದು ಬದುಕಿಲ್ಲ, ಕಳೆದ ಮಾರ್ಚ 31 ರಂದು ಬೆಂಗಳೂರಿನ ರೆಸಿಡೆನ್ಸಿಯಲ್ ಪಿಯೂ ಕಾಲೇಜಿನ  ಅಟಂಡರ್ ಮಹೇಶನ ಗುಂಡಿಗೆ ಬಲಿಯಾಗಿ ಬಿಟ್ಟಿದ್ದಾಳೆ. ಇವೆರಡೂ ಸ್ವಲ್ಪವಾದರೂ ಹೃದಯವಂತಿಕೆ ಇರುವವರ ಮನ ಕಲಕದೆ ಇರಲಾರವು. ಇಂದಿಗೂ ಪ್ರಿಂಟ್ ಮೇಡಿಯಾಗಳು ತಮ್ಮ ಬದ್ಧತೆಯನ್ನು ಆಗಾಗ ಮೆರೆಯುತ್ತವೆ ಎನ್ನುವುದಕ್ಕೆ ಸಾಕ್ಷಿ ಇವೆರಡು ಸುದ್ದಿಗಳು.. 

 

     ಸೂಕ್ಷ್ಮವಾಗಿ ಗಮನಿಸಿದರೆ ಈ ಎರಡೂ ಸಾವುಗಳಲ್ಲಿ ಕೆಲವು ಸ್ಥೂಲ ಸಾಮ್ಯತೆಗಳು ಕಂಡು ಬರುತ್ತವೆ. ಇಬ್ಬರೂ ಸಾಮಾನ್ಯ ಕುಟುಮಬದಿಂದ ಬಂದವರಾಗಿದ್ದರು ಜೊತೆಗೆ ಅನ್ಯಾಯವನ್ನು ಪ್ರತಿಭಟಿಸುವವರಾಗಿದ್ದರು ಎನ್ನುವುದರ ಜೊತೆಗೆ ಅವರಿಬ್ಬರೂ ಮಹಿಳೆಯರಾಗಿದ್ದರು ಎನ್ನುವುದು ಗಮನಿಸ ಬೇಕಾದ ಸಂಗತಿ. ಗೌತಮಿ ಬೆಂಗಳೂರಿನ ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯಾಗಿದ್ದು ಪದೆ ಪದೆ ಹೊತ್ತಲ್ಲದ ಹೊತ್ತಿನಲ್ಲಿ ಆ ಹಾಸ್ಟೆಲ್‍ಗೆ ಬಂದು ಅಲ್ಲಿನ ವಿದ್ಯಾರ್ಥಿನಿಗಳ ಜೊತೆಗೆ ಅಸಭ್ಯತೆಯಿಂದ ವರ್ತಿಸುವುದು ದುರಹಂಕಾರದ ವರ್ತನೆ ತೋರುವುದು ಮಾಡುತ್ತಿದ್ದ ಅಟೆಂಡರ್ ತನ್ನ ವರ್ತನೆಯನ್ನು  ಪ್ರತಿಭಟಿಸಿದ ಗೌತಮಿಗೆ ದೊರೆತದ್ದು ಆತನಿಂದ ಗುಂಡಿನ ದಾಳಿ ಆ ಪರಿಣಾಮದಿಂದಾದ ಸಾವು. ಇನ್ನೊಬ್ಬಾಕೆ ಅರುಣಾ ಶಾನಭಾಗಳ ಈ ದುರಂತಮಯ ಸಾವಿಗೆ ಕಾರಣನಾದಾತ ಸಹ ಅವಳು ಕೆಲಸ ಮಾಡುತ್ತಿದ್ದ ಮೂಬೈನ ಕೆಇಎಂ ಆಸ್ಪತ್ರೆಯ ವಾರ್ಡ ಬಾಯ್ ಸೋಹನಲಾಲ್ ವಾಲ್ಮಿಕಿ ಎನ್ನುವಾತ. ಆತನದು ಸಹ ಹೆಚ್ಚು ಕಡಿಮೆ ಮಹೇಶನ ಮನಸ್ಥಿತಿಯಂತಹವನೆ. ಇವರ ಇಂತಹ ಕ್ರೂರ ಮನಸ್ಥಿತಿಗೆ ಕಾರಣವೇನು ಬಾಲ್ಯದಲ್ಲಿ ಅವರ ಮನೆಂಗಳಲ್ಲಿ ಮತ್ತು ಅವರು ಬದುಕುತ್ತಿದ್ದ ಪರಿಸರಗಳಲ್ಲಿ ನೈತಿಕ ನಡವಳಿಕೆಯ ಕೊರತೆಯೆ, ಅವರ ಗುಣ ಸ್ವಭಾವಗಳೆ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳ ಬಗೆಗಿನ ಉಡಾಪೆಯೆ ಇವಲ್ಲದೆ ಬೇರೆ ಏನಾದರೂ ಕಾರಣಗಳೀವೆಯೆ. ಈ ಬಡಪಾಯಿ ಬಲಿಪಶುಗಳು ಪ್ರತಿಸ್ಟಿತ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಗಳಲ್ಲಿ ಕೆಲಸ ನಿರ್ವಸಹಿಸುತ್ತಿದ್ದರು ಅದೇ ರೀತಿ ಅವರ ಸಾವುಗಳಿಗೆ ಕಾರಣಕರ್ತರಾದವರೂ ಸಹ ಅದೇ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ಎನ್ನುವುದು ಬಹಳ ಖೇದದ ಸಂಗತಿ. ಇಂತಹ ಪಾತಕ ಮನಸ್ಥಿತಿಯ ಕ್ರಿಮಿನಲ್ ಮನಸ್ಥಿತಿಯವರ ಬಗೆಗೆ ಒಂದಿನಿತೂ ಕಾಳಜಿ ವಹಿಸದ ಆ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರು ಕಾರಣರಾಗುತ್ತಾರೆ. 

 

     ಇತ್ತೀಚೆಗೆ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವುದು ಸಾರ್ವಜನಿಕರ ಮತ್ತು ಸಾಮಾಜಿಕ ವಿಶ್ಲೇಷಕರ ಅಭಿಮತ. ಇದು ಬರಿ ಕೆಳಸ್ಥರದ ಜನರ ವರ್ತನೆ ಮಾತ್ರವಲ್ಲ ಎಲ್ಲ ದೊಡ್ಡವರೂ ಮತ್ತು ಅಧಿಕಾರಸ್ಥರು ಸಾರ್ವಜನಿಕರು ,ರಾಜಕಾರಣಿಗಳು, ಸ್ವಾಮಿಗಳು ಮತ್ತು ಸನ್ಯಾಸಿಗಳು ಸಹ ಇದ್ದಾರೆ. ಇದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕಲಾರಂಗ ಮತ್ತು ಕ್ರೀಡಾರಂಗ ಮುಂತಾದವು ಸಹ ಹೊರತಲ್ಲದಿರುವುದು ಆತಂಕ ಹುಟ್ಟಿಸುತ್ತಿರುವ ಸಂಗತಿ. ಗೌತಮಿಯ ಕೊಲೆ ಕುರಿತು ಮಾತನಾಡುವ ಆರೋಪಿ ಮಹೇಶ ಆಕೆ ತನಗೆ ಬೆಲೆ ಕೊಡುತ್ತಿರಲಿಲ್ಲ ಅವಮಾನಿಸುತ್ತಿದ್ದಳು ಎನ್ನುವ ಕಾರಣಕ್ಕಾಗಿ ತಾನು ಮಾಡಿದ ಕೊಲೆಯನ್ನು ಸಮರ್ಥಿಸಿ ಕೊಳ್ಳುವ ಪ್ರಯತ್ನ ಮಾಡಿದರೆ ತನ್ನ ತಪ್ಪುಗಳ ಬಗೆಗೆ ಆತನಿಗೆ ಆತ್ಮ ಶೋಧನೆ ಎನ್ನುವುದೆ ಇಲ್ಲ ಎನಿಸುತ್ತದೆ. ಇನ್ನೋದು ಪ್ರಕರಣದ ಆರೋಪಿ ಆಸ್ಪತ್ರೆಯ ವಾರ್ಡ ಬಾಯ್ ಸೋಹನ್‍ಲಾಲ್ ವಾಲ್ಮಿಕಿಯು ಅರುÀಣಾ ಈತನ ಕರ್ತವ್ಯ ಚ್ಯುತಿಯ ಬಗೆಗೆ ಪ್ರತಿಭಟನೆಯ ಜೊತೆಗೆ ಖಂಡಿಸುತ್ತಿದ್ದುದು ಮತ್ತು ಮೇಲಾದಿಕಾರಿಗಳ: ಗಮನಕ್ಕೆ ತಂದುದರಿಂದ ಕೆರಳಿದ ಆತ ಆಕೆಯ ಮೇಲೆ ಅತ್ಯಾಚಾರ ಮಾಡಿ ನಾಯಿಗೆ ಕಟ್ಟುವ ಸರಪಳಿಯಿಂದ ಆಕೆಯ ಕುತ್ತಿಗೆಗೆ ಬಿಗಿದುದು ಆ ಕಾರಣದಿಂದಾಗಿ ಆಕೆಯ ಮೆದುಳಿಗೆ ಹಾನಿಯಾಗಿ ಶಾಶ್ವತ ಕೋಮಾಕ್ಕೆ ಜಾರಿದ ಆಕೆ ಇಂದು ಅದೇ ಸ್ಥಿತಿಯಲ್ಲಿ ಮರಣ ಹೊಂದಿದ್ದಾಳೆ. ಈ ಪ್ರಕರಣದಲ್ಲಿ ಆರು ವರ್ಷ ಶಿಕ್ಷೆ ಯನ್ನು ಅನುಭವಿಸಿ ಅದೇ ಆಸ್ಪತ್ರೆಗೆ ಮರಳಿ ಬಂದು ಕೆಲಸ ಕೇಳುವ ಆತನ ಅಸೂಕ್ಷ್ಮ ಮನಸ್ಥಿತಿ ಎಂಹದು ಎಂಬುದು ಮನವರಿಕೆಯಾಗುತ್ತದೆ. ಇಂತಹ ಅಮಾನವೀಯ ಮನಸ್ಥಿತಿಯ ಜನಗಳ ಮಧ್ಯೆ ಅವಲ ದೀರ್ಘ ಕಾಲದ ಬದುಕಿನುದ್ದಕ್ಕೂ ಆಕೆಯ ಶುಶ್ರೂಷೆ ಮಾಡಿದ ಆ ಆಸ್ಪತ್ರೆಯ ಸುಶ್ರೂಷಾ ಸಿಬ್ಬಂದಿ ಜೊತೆಗೆ ಆಕೆಯ ಆರೋಗ್ಯ ಸುಧಾರಿಸಿ ಆಕೆ ನೈಜ ಸ್ಥಿತಿಗೆ ಬರಬಹುದು ಎಂದು ಆಶಾಭಾವದಿಂದ ನಾಲ್ಕು ವರ್ಷಗಳ ಕಾಲ ಕಾದ ಆಕೆಯ ಫಿಯಾನ್ಸಿ ಅದೇ ಆಸ್ಪತ್ರೆಯ ಡಾ. ಸಂದೀಪ ಸರದೇಸಾಯಿ ನಂತರ ಹಿರಿಯರ ಒತ್ತಡಕ್ಕೆ ಮಣಿದು ಬೇರೆ ಮದುವೆಯಾದರೂ ಆಕೆಯ ಕೊನೆಯ ಕ್ಷಣದವರೆಗೂ ಆಕೆಯ ನೆರಳಾಗಿ ನಿಂತ ಆತನ ವರ್ತನೆ ಇಂದಿನ ಜನತೆಗೆ ಒಂದು ಮಾದರಿ ಎನ್ನಬಹುದು. 

 

     ಇವೆರಡು ಸುದ್ದಿಗಳ ಮಧ್ಯೆ ಮುಂಬೈನ  ಕಿರು ತೆರೆಯ ನಟಿಯೊಬ್ಬಳನ್ನು ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿ ಕೊಡುವುದಾಗಿ ನಂಬಸಿಿ ಬೆಂಗಳೂರಿಗೆ ಕರೆಸಿಕೊಂಡು ಪಾನಿಯದಲ್ಲಿ ಮತ್ತು ಪದಾರ್ಥ ಬೆರೆಸಿ ಆಕೆಯು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿ ಹೆದರಿಸಿದ ಕಾಮುಕರ ಮೇಲೆ ಆಕೆ ದೂರು ದಾಖಲಿಸಿ ಅವರುಗಳು ನ್ಯಾಯಾಲಯದ ಕಟ ಕಟೆಗೆ ಬರುವಂತೆ ಮಾಡಿದ ಆಕೆಯ ಧೈರ್ಯವನ್ನು ಮೆಚ್ಚಲೆ ಬೇಕು. ಮೊದಲಿಗೆ ಮರ್ಯಾದೆಗೆ ಅಂಜಿ ಇಂತಹ ಪ್ರಕರಣಗಳ ದಾಖಲೆಗೆ ಬಲಿಪಶುಗಳಾದ ಹೆಣ್ಣುಮಕ್ಕಳು ಬರುತ್ತಿರಲಿಲ್ಲ, ಈಗ ಮಹಿಳೆ ಬದಲಾಗಿದ್ದಾಳೆ, ಧೈರ್ಯದಿಂದ ಪ್ರಕರಣ ದಾಖಲಿಸಲು ಮುಂದೆ ಬರುತ್ತಿದ್ದಾಳೆ ಆರೋಪಿಗಳು ಶಿಕ್ಷೆಗೆ ಒಳ ಪಡದೆ ಬೇರೆ ದಾರಿ ಇಲ್ಲ. ಈ ಪ್ರತಿಭಟನೆಯ ಮನಸ್ಥಿತಿ ಅತ್ಯಾಚಾರ ದೌರ್ಜನ್ಯಕ್ಕೊಳಗಾದ ಮಹಿಳೆಯರಲ್ಲಿ ಬರುವುದರ ಜೊತೆಗೆ ಸಾಕ್ಷಿಗಳು ಬಲವಾದ ಸಾಕ್ಷ್ಯ ನೀಡಿ ಆರೋಪಿಗಳು ಶಿಕ್ಷೆಗೆ ಒಳಪಡುವಂತೆ ಮಾಡಿದರೆ ಮಾತ್ರ ಕಾಮ ಪಿಪಾಸಿಗಳ ವರ್ತನೆಗೆ ಕಡಿವಾಳ ಹಾಕಲು ಸಾಧ್ಯ. ಇದರ ಜೊತೆಗೆ ಜೈಲಿಗೆ ಹೋಗಿ ಬಂದವರ ಕುರಿತ ವೈಭವೀಕರಣ ಅವರನ್ನು ಮೆರೆಸುವುದು ನಿಲ್ಲಬೇಕು. ಅದರಂತೆ ಇಂತಹ ಆರೋಪಿತರನ್ನು ತುಚ್ಛವಾಗಿ ಕಾಣುವ ವಾತಾವರಣ ನಿರ್ಮಾನವಾಗಬೇಕು ಅಂದಾಗ ಮಾತ್ರ ಬದಲಾವಣೆ ಸಾಧ್ಯವೇನೋ. ತಾವು ನಂಬಿದ ತತ್ವಗಳಿಗಾಗಿ ಜೀವ ತೆತ್ತ ಆ ಆತ್ಮಗಳಿಗೆ ಶಾಂತಿ ದೊರಕಲಿ ಎನ್ನು ಸದಾಶಯದೊಂದಿಗೆ..

 

ಚಿತ್ರಕೃಪೆ : ಅಂತರ್ ಜಾಲ

Rating
No votes yet

Comments

Submitted by nageshamysore Wed, 05/20/2015 - 19:08

ಮನ ಕಲಕಿದ ಸುದ್ದಿಯಷ್ಟೆ ಮನ ಮುಟ್ಟಿದ್ದು, ಆ ಸುದ್ದಿಯತ್ತ ಗಮನ ಹರಿಸಿ, ನಮ್ಮ ಗಮನ ಸೆಳೆದ ತಮ್ಮ ಎಕ್ಸ್ ರೆಯಂತಹ ದೃಷ್ಟಿಕೋನ. ವಿಚಾರಪೂರ್ಣ ಲೇಖನ - ಪ್ರಿಂಟ್ ಮೀಡಿಯಾ ಓದಲಾಗದ ನನ್ನಂತಹವರಿಗೆ ಅವುಗಳತ್ತ ದೃಷ್ಟಿ ಹರಿಸಲೊಂದು ಅವಕಾಶ :-)

Submitted by partha1059 Wed, 05/20/2015 - 20:00

In reply to by nageshamysore

ಪಾಟಿಲಸರ್
ನಿಮ್ಮ ಅಭಿಪ್ರಾಯ ನಿಜ
ಹಾಗೆ ಮತ್ತೊಂದು ಬೇಸರ ಎಂದರೆ ಮಾಧ್ಯಮಗಳ ಪಕ್ಷಪಾತ ರೀತಿಯ ನಡುವಳಿಕೆ

Submitted by H A Patil Thu, 05/21/2015 - 09:39

In reply to by partha1059

ಪಾರ್ಥಸಾರಥಿಯವರಿಗೆ ವಂದನೆಗಳು.
ತಮ್ಮ ಪ್ರತಿಕ್ರಿಯೆ ಓದಿದೆ, ತಮ್ಮ ಅಬಿಪ್ರಾಯ ನಿಜ. ನಾನು ನಿನ್ನೆ ಬಹುತೆಕ ಒಂದೆರಡನ್ನು ಬಿಟ್ಟು ಎಲ್ಲ ಪತ್ರಿಕೆಗಳನ್ನು ನೋಡಿದೆ. ಕೆಲವು ವಿವರವಾಗಿ ಬರೆದಿವೆ ಇನ್ನು ಕೆಲವು ಬರಿ ಕಾಟಾಚಾರದ ವರದಿಗೆ ಸೀಮಿತಗೊಂಡಿವೆ. ಪ್ರತಿಕ್ರಿಯಿಸಿದ್ದಕ್ಕೆ ದನ್ಯವಾದಗಳು.

Submitted by H A Patil Thu, 05/21/2015 - 09:34

In reply to by nageshamysore

ನಾಗೇಶ ಮೈಸೂರುರವರಿಗೆ ವಂದನೆಗಳು
ಈ ಬರಹ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಮಹಿಳೆಯರು ಎಲ್ಲ ಸ್ತರಗಳಲ್ಲೂ ಎಲ್ಲ ವರ್ಗಗಳಲ್ಲೂ ಎಲ್ಲ ರಂಗಗಳಲ್ಲೂ ಲೈಂಗಿಕ ಕಿರುಕುಳ ಮತ್ತು ಕೆಲವು ಸಲ ಅತ್ಯಾಚಾರಕ್ಕೆ ಒಳಗಾಗುವ ಪ್ರಕರಣಗಳ ಕುರಿತು ನೋಡುತ್ತ ಕೆಳುತ್ತ ಮತ್ತೂ ಓದುತ್ತ ಬಂದ ನನಗೆ ಯಾಕೋ ಅ ಎರಡು ಘಟನೆಗಳ ಕುರಿತು ನನಗಾದ ನೋವನ್ನು ಬರಹದ ಮೂಲಕ ಅಬಿವ್ಯಕ್ತಗೊಳಿಸಬೇಕು ಎನಿಸಿತು ಹೀಗಾಗಿ ಈ ಬರಹ ದನ್ಯವಾದಗಳು.

Submitted by Lakshmikanth Itnal 1 Thu, 05/21/2015 - 01:00

ಹಿರಿಯರಾದ ಹೆಚ್ ಎ ಪಾಟೀಲ್ ಸರ್, ಒಳ್ಳೆಯ ಸಕಾಲಿಕ ಚಿಂತನಶೀಲ ಬರಹ. ದಿನನಿತ್ಯವೂ ಅದೆಷ್ಟು ಅರುಣಾಗಳು, ಗೌತಮಿಯರು ವ್ಯವಸ್ಥೆಯ ಕ್ರೂರ ಪಾಶಕ್ಕೆ , ಮಾನವನ ರಕ್ಕಸೀ ಪ್ರವೃತ್ತಿಗೆ ಬಲಿಯಾಗುತ್ತಿರುವರೋ. .. ಶೋಷಿತರಿಗೆ ನನ್ನ ವಾತ್ಸಲ್ಯಪೂರಿತ ಸಾಂತ್ವನಗಳು, ಒಂದೊಳ್ಳೆಯ ಲೇಖನ ಸರ್ , ಮನತಟ್ಟಿತು. ಧನ್ಯವಾದಗಳು.

Submitted by H A Patil Thu, 05/21/2015 - 09:42

In reply to by Lakshmikanth Itnal 1

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಬರಹದ ಅಂತರಂಗದ ದ್ವನಿಗೆ ಸಹಮತಿಸಿದ ನಿಮಗೆ ಧನ್ಯವಾದಗಳು.

Submitted by kavinagaraj Thu, 05/21/2015 - 15:04

ನಮಸ್ತೆ, ಪಾಟೀಲರೇ. ನೈತಿಕ ಅಧಃಪತನದತ್ತ ಇಂದಿನ ಯುವಪೀಳಿಗೆ ದಾಪುಗಾಲಿಡುತ್ತಿದೆ. ನೈತಿಕತೆ, ಸಂಸ್ಕಾರಗಳನ್ನು ಪೋಷಿಸುವ ಶಿಕ್ಷಣ ಪದ್ಧತಿ ಜಾರಿಗೆ ಬರುವವರೆಗೆ, ಆಡಳಿತದ ಚುಕ್ಕಾಣಿ ಹಿಡಿದವರು ನಿಜವಾಗಿ ದೇಶದ ಬಗ್ಗೆ ಕಳಕಳಿಯುಳ್ಳವರಾಗುವವರೆಗೆ ಪರಿಸ್ಥಿತಿ ಸುಧಾರಿಸದು.

Submitted by H A Patil Fri, 05/22/2015 - 08:11

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ತಮ್ಮ ಅಭಿಪ್ರಾಯ ಸರಿಯಿದೆ, ಸುಮಾರು ಐವತ್ತು ವರ್ಷಗಳ ಹಿಂದೆ ಕುಟುಂಬಗಳು ಮತ್ತು ಸಮಾಜಗಳು ಈ ರೀತಿ ನೈತಿಕ ಅಧಃಪತನ ಹೊಂದಿರಲಿಲ್ಲ, ಯುವ ಸಮುದಾಯದ ಮೇಲೆ ಒಂದು ರೀತಿಯ ನೈತಿಕ ಮೌಲ್ಯಗಳ ನಿಯಂತ್ರಣವಿತ್ತು ಈಗ ಅದು ಇಲ್ಲ, ಈಗಿನದೊಂದು ರೀತಿಯ ಉಚ್ರ್ಂಕಲ ವರ್ತನೆಯ ಸಮಾಜ, ಶಿಕ್ಷಣದ ಜೊತೆಗೆ ವ್ಯಕ್ತಿ ಕುಟುಂಬ ಮತ್ತು ಸಮಾಜಗಳು ಈ ಜವಾಬ್ದಾರಿಯನ್ನು ಹೊರಲೆ ಬೇಕಾದ ಅನಿವಾರ್ಯತೆಯಿದೆ ದನ್ಯವಾದಗಳು.

Submitted by Amaresh patil Tue, 06/02/2015 - 19:41

ಪಾಟೀಲರೆ ನಿಮ್ಮ ಲೇಖನ ಓದುವ ಪೂರ್ವದಲ್ಲಿ ದಿನಪತ್ರಿಕೆಯಲ್ಲಿ ನಿನ್ನೆ ದಿನಾಂಕ:01-06-2015 ರಂದು ಮುಂಬೈನ ಕೆ.ಇ.ಎಮ್.ಆಸ್ಪತ್ರೆಯಲ್ಲಿ ಅರುಣಾ ಶಾನಬಾಗರ 68 ನೇ ಜನ್ಮದಿನಾಚರಣೆಯನ್ನು ಮಾಡಿದ್ದನ್ನು ಓದಿದೆ ಅದಕ್ಕೂ ಮುಂಚೆ ಪ್ರಜಾವಾಣಿ ಪತ್ರಿಕೆಯಲ್ಲಿ “ಕಡೆಗೋಲು” ಅಂಕಣದಲ್ಲಿ ಮಾನ್ಯ ಸಿ.ಜಿ ಮಂಜುಳಾರವರು ಅರುಣಾ ಶಾನಬಾಗರ ಬಗ್ಗೆ ಬರೆದ ಲೇಖನ ಓದಿ ಮನಸ್ಸಿಗೆ ನೋವಾಯಿತು ಅರುಣಾರವರ ಮೇಲೆಯಾದ ಅಮಾನವಿಯ ದಾಳಿ, ಅತ್ಯಚಾರವನ್ನು ನೆನೆದು ನಮ್ಮ ನಡುವೆಯೇ ಅಂದು ಹಾಗೂ ಇಂದು ಎಂಥೆಂಥ ನೀಚರಿದ್ದಾರೇ ಇದ್ದಾರಲ್ಲ ಎಂದು ಹೆಸಿಗೆಯಾಗುತ್ತದೆ , ನಿಮ್ಮ ಲೇಖನ ನನಗೆ ಮೆಚ್ಚುಗೆಯಾಯಿತು ಧನ್ಯವಾದಗಳು

Submitted by H A Patil Thu, 06/04/2015 - 10:39

In reply to by Amaresh patil

ಅಮರೇಶ ಪಾಟೀಲರಿಗೆ ವಂದನೆಗಳು
ಬಹಳ ದಿನಗಳ ನಂತರ ಸಂಪದಕ್ಕೆ ಮರಳಿದ್ದೀರಿ ತಮ್ಮ ಪ್ತತಿಕ್ರಿಯೆ ಓದಿದೆ ಲೇಖನದ ಮೆಚ್ಚುಗೆಗೆ ಧನ್ಯವಾದಗಳು