ಸತ್ಯಲಕ್ಷ್ಮಿ ಸತ್ತಲಕ್ಷ್ಮಿ ಆದ ಬಗೆ

ಸತ್ಯಲಕ್ಷ್ಮಿ ಸತ್ತಲಕ್ಷ್ಮಿ ಆದ ಬಗೆ

ಸತ್ಯಲಕ್ಷ್ಮಿ ಸತ್ತಲಕ್ಷ್ಮಿ ಆದ ಬಗೆ

ಮನಸಿನಲ್ಲಿ ಏನೋ ತಳಮಳ ಆಕೆಗೂ ನಮಗೂ ಹೇಳಿಕೊಳ್ಳುವಂತಹ ಸಂಬಂಧವೇನೂ ಇಲ್ಲ. ಇವತ್ತು ಬೆಳಿಗ್ಗೆ ಆಕೆ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಒಂದೆಡೆ ದುಖ; ಮತ್ತೊಂದೆಡೆ ಸಮಾಧಾನ.
ಸತ್ಯಲಕ್ಷ್ಮಿ ಬಡ ಕುಟುಂಬ ಒಂದರಲ್ಲಿ ಜನಿಸಿದವಳು, ತವರು ಮನೆಯಲ್ಲಿನ ಪರಿಸ್ತಿತಿ ಹೇಗೋ ಏನೋ ಗೊತ್ತಿಲ್ಲ. ಅತ್ತೆಯ ಮನೆಯಲ್ಲಂತೂ ಒಂದು ಕ್ಷಣವೂ ಸುಖ ಹೋಗಲಿ ನೆಮ್ಮದಿಯಾಗಿಯೂ ಇರಲಿಲ್ಲ. ಒಳ್ಳೆಯ ಮನಸಿನ ಹೆಂಗಸು. ದೇವರ ನಾಮಗಳನ್ನು ಚನ್ನಾಗಿ ಹಾಡುತ್ತಿದ್ದರು. ಕನಿಕರವಿಲ್ಲದ ದುಷ್ಟ ಮನಸಿನ ಅತ್ತೆ (ಆಕೆಯ ಹೆಸರು ಮಾತ್ರ ಲೋಕ ಮಾತೆಯ ಹೆಸರು ) ಪ್ರೀತಿ ತೋರಿಸದ ಗಂಡ, ಮಮತೆ ತೋರದ ಮಗ, ನಿಕೃಷ್ಟದಿಂದ ಕಾಣುವ ಸೊಸೆ ಇವರೆಲ್ಲರ ನಡುವೆ ಸುಖವಾಗಿರಲು ಸಾಧ್ಯವೇ ?
ಮದುವೆಯಾಗಿ ಬಂದ ದಿನದಿಂದಲೂ ಅತ್ತೆಯ ಕಿರುಕುಳ, ಗಂಡನ ಬೈಗುಳ ಹೊಡೆತ ತಪ್ಪಿದಲ್ಲ , ಆಕೆ ಏನು ಮಾಡಿದರೂ ತಪ್ಪು ಮಾಡದಿದ್ದರೂ ತಪ್ಪು, ಅಷ್ಟು ದುಡಿಸಿಕೊಂಡರೂ ಹೊಟ್ಟೆ ತುಂಬಾ ಊಟ ಹಾಕುತ್ತಿರಲಿಲ್ಲ. ಹೊರಗಾದ ಸಮಯದಲ್ಲಂತೂ ಮನೆಯೊಳಗೇ ಸೇರಿಸುತ್ತಿರಲಿಲ್ಲ , ನಾಲ್ಕನೇ ದಿನ ಸೂರ್ಯ ಹುಟ್ಟುವ ಮುಂಚೆ ಕೊಳಕ್ಕೆ ಹೋಗಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲೇ ಮನೆಗೆ ಬರಬೇಕು, ಅತ್ತೆ ಮತ್ತು ಆಕೆಯ ಗಂಡನಿಗೆ ಆಕೆಯನ್ನು ಮೂದಲಿಸುವುದು ಹೊಡೆಯುವುದು ಬಾಯಿಗೆ ಬಂದಂತೆ ಬಯ್ಯುವುದು ಇವಿಷ್ಟು ಮಾಡದಿದ್ದರೆ ಸಮಾಧಾನ ಇರಲಿಲ್ಲ. ಹಾಗೆಯೇ ಒಂದು ಹೆಣ್ಣು ಮಗುವಾಯಿತು, ಮತ್ತಷ್ಟು ಕಿರುಕುಳ ಜಾಸ್ತಿಯಾಯಿತು ಹೆಣ್ಣು ಮಗು ಹೆತ್ತಳು ಎಂದು ಮುಂದೆ ಕಾರಣವೇನೂ ಗೊತ್ತಿಲ್ಲ ಆ ಮಗು ಸತ್ತು ಹೋಗುತ್ತದೆ . ನಂತರ ಒಂದು ಗಂಡು ಮಗುವಾಗುತ್ತದೆ ಆದರೂ ಗಂಡು ಮಗು ಹೆತ್ತಳು ಎಂದು ಪ್ರೀತಿಯನ್ನೇನು ತೋರಿಸಲ್ಲಿಲ್ಲ ಬದಲಾಗಿ ಮಗುವಿಗೆ ತಾಯಿಯ ಮೇಲೆ ಅಸಡ್ಡೆ, ತಿರಸ್ಕಾರ ಮನೋಭಾವನೆ ಬರುವಂತೆ ಬೆಳೆಸುತ್ತಾರೆ. ಆದರೂ ಆ ತಾಯಿಗೆ ತನ್ನ ಮಗನ ಮೇಲೆ ಅಪಾರವಾದ ಪ್ರೀತಿ ಇರುತ್ತದೆ . ಹೀಗೆ ಕಾಲಚಕ್ರ ಉರುಳಿ ಮಗ ದುಡಿಯಲು ಪ್ರಾರಂಭಿಸುತ್ತಾನೆ . ಮದುವೆಯನ್ನು ಮಾಡುತ್ತಾರೆ. ಇಷ್ಟಾದರೂ ನಮ್ಮ ಸತ್ಯಲಕ್ಷ್ಮಿಯಾ ಮೇಲೆ ಮನೆಯವರ ಭಾವನೆ ಬದಲಾಗುವುದಿಲ್ಲ.

ಮಗನಿಗೆ ತಾಯಿಯ ಮೇಲೆ ಪ್ರೀತಿ ಇದ್ದಾರೆ ತಾನೇ ಸೊಸೆಗೂ ಇರುವುದು. ಅವಳಿಗೂ ಅದೇ ಭಾವನೆ, ಆಕೆ ಎಲ್ಲರನ್ನೂ ಮೀರಿಸಿದವಳು. ತನ್ನ ಅತ್ತೆ ಹೋಗಲಿ ತನ್ನ ಮಾವ ಹಾಗು ಆತನ ತಾಯಿಯನ್ನು ತಿರಸ್ಕಾರ ಭಾವದಿಂದ ನೋಡಲು ಪ್ರಾರಂಭಿಸುತ್ತಾಳೆ. ತಾನು ತನ್ನ ಗಂಡ ತನ್ನ ಮಕ್ಕಳು ಇಸ್ಟೇ ಅವಳ ಪ್ರಪಂಚ. ತನ್ನ ಗಂಡನ ತಂದೆ ತಾಯಿಗೂ ಅಜ್ಜಿಗೂ ಅನ್ನ ಹಾಕದೆ ಬೈದು ಜಗಳವಾಡುತಿರುತ್ತಾಳೆ.

ನಮ್ಮ ಸತ್ಯಲಕ್ಷ್ಮಿಗೆ ಇದು ಮಾಮುಲಾದರು ಆಕೆಯ ಗಂಡನಿಗೆ ಮತ್ತು ಅತ್ತೆಗೆ ಸಹಿಸಲು ಸಾಧ್ಯವಾಗುತಿರಲಿಲ್ಲ. ತಮ್ಮ ಮನೆಗೆ ತಂದ ಒಂದು ಹೆಣ್ಣಿಗೆ ಇವರು ಎಷ್ಟು ಕಷ್ಟ ಕೊಟ್ಟರೋ ಅದೇ ಕಷ್ಟವನ್ನು ಈಗ ಇವರೂ ಅನುಭವಿಸುವಂತಾಗಿದೆ. ಇದನ್ನು ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದು ಆಯಿತು.ಅವರ ಕತೆ ಹಾಳಾಗಿ ಹೋಗಲಿ, ಎನೇ ಆದರು ನಮ್ಮ ಸತ್ಯಲಕ್ಷ್ಮಿಯ ಕತೆ ಬದಲಾಗಲಿಲ್ಲ

ಸೀರೆ ತೆಗೆದು ನೈಟಿ ಹಾಕಿದ್ದಾಯಿತು, ಸೌಭಾಗ್ಯವತಿ ಆಗಿದ್ದಾಗಲೇ ಕೇಶ ಮುಂಡನ ಮಾಡಿಸಿದ್ದಾಯಿತು, ಕೊಟ್ಟಿಗೆಯಲ್ಲಿ ಮಲಗಿಸಿದ್ದಾಯಿತು, ಹೊಟ್ಟೆಗೆ ಹಾಕಲಿಲ್ಲ, ಬೇರೆಯವರು ಆಕೆಗೆ ಏನಾದರು ಕೊಟ್ಟರೂ ಅದನ್ನು ಸಹಿಸುತ್ತಿರಲಿಲ್ಲ ಆ ಸೊಸೆ , ಹೊಟ್ಟೆಗಿಲ್ಲದೆ ದೇಹ ಕ್ರುಶವಾಯಿತು ಇದು ಬೆಳಿಗ್ಗೆ ಸತ್ಯ ಲಕ್ಷ್ಮಿಯ ಪ್ರಾಣಪಕ್ಷಿ ಈ ಬಂಧನವನ್ನು ಬಿಡಿಸಿಕೊಂಡು ಹಾರಿಹೋಯಿತು.

"ಕಾಂತಿ ಯಾವಾಗ್ ಬಂದ್ಯೋ ಅಮ್ಮ ಬಂದ್ಲೇನೂ, ತಿನ್ನುಕ್ಕೆ ಏನಾದರೂ ತನ್ದ್ಕೊಡೋ " ಅಂತ ಅವರು ಪ್ರೀತಿಇಂದ ದೀನ ಭಾವದಿಂದ ಕೇಳುತಿದ್ದುದು ಇನ್ನು ನನ್ನ ಕಿವಿಯಲ್ಲಿದೆ .
ಆ ಜಗದಂಬೆಯಲ್ಲಿ ನನ್ನ ಪ್ರಾರ್ಥನೆ ಮುಂದಿನ ಜನ್ಮದಲ್ಲಾದರೂ ಆಕೆಗೆ ಒಳ್ಳೆಯ ಗಂಡ ಮಗ ಸಿಗಲಿ

ಹೆಂಡತಿಯನ್ನು ಪ್ರೀತಿ ಇಂದ ಕಾಣದ ಇಂಥ ಗಂಡಸರಿಗೆ ದಿಕ್ಕಾರವಿರಲಿ
ಮನೆಗೆ ಬಂದ ಸೊಸೆಯನ್ನು ಮಗಳಂತೆ ಕಾಣದೆ ಶತ್ರುವಿನಂತೆ ಕಾಣುವ ಇಂಥಾ ಅತ್ತೆಯರಿಗೆ ದಿಕ್ಕಾರವಿರಲೀ
ಎಲ್ಲಕಿಂತ ಹೆಚ್ಚ್ಹಾಗಿ
ತಾಯಿಯನ್ನು ಈ ರೀತಿ ನಡೆಸಿಕೊಂಡ ಮಕ್ಕಳಿಗೆ ದಿಕ್ಕಾರವಿರಲಿ

Comments