ತಂದೆ ಎಂದರೆ ಯಾರು?
ಚಾಣಕ್ಯನ ಪ್ರಕಾರ:-
अन्नदाता भयत्राता, यस्य कन्या विवाहिता ।
जनिता चोपनेता च, पञ्चैते पितरः स्मृताः ॥
ಅನ್ನದಾತಾ ಭಯತ್ರಾತಾ ಯಸ್ಯ ಕನ್ಯಾ ವಿವಾಹಿತಾ |
ಜನಿತಾ ಚೋಪನೇತಾ ಚ, ಪಂಚೇತೇ ಪಿತರಹ್ ಸ್ಮೃತಾಹ್ ||
ಅನ್ನವನ್ನು ನೀಡುವವನು, ಭಯವನ್ನು ನೀಗುವವನು
ಕನ್ಯೆಯನ್ನು ವಿವಾಹ ಮಾಡಿಕೊಟ್ಟವನು
ಜನ್ಮದಾತನು ಮತ್ತು ಶಿಕ್ಷಣಕ್ಕೆ ಹಾದಿ ತೋರಿದವನು
ಈ ಐವರು "ತಂದೆ" ಎನಿಸಿಕೊಳ್ಳಲೋಗ್ಯರಾದವರು
ಕೆಲವೆಡೆ ಮಂತ್ರದಾತ ಮತ್ತು ಜೇಷ್ಟ ಭ್ರಾತೃವನ್ನೂ ಐವರೊಡನೆ ಸೇರಿಸಿ ಏಳಕ್ಕೆ ಏರಿಸಿಸಲಾಗಿದೆ.
ಸೀದಾಸಾದವಾಗಿ ಹೇಳುವುದಾದರೆ ಭುವಿಗೆ ತಂದು 'ನಾ ನಿನ್ನ ತಂದೆ' ಎಂದ ಮಾತ್ರಕ್ಕೆ ಆತ 'ತಂದೆ' ಅಲ್ಲ. ಅವ 'ತಂದ' ಅಷ್ಟೇ! ತಂದವನು ನೆರವೇರಿಸುವ ಕರ್ತವ್ಯಗಳಿಂದ 'ತಂದೆ'ಯಾಗುತ್ತಾನೆ.
ತಂದೆಯಾದವನ ಆದ್ಯಕರ್ತವ್ಯಗಳಿಂದ ಎಚ್ಚೆತ್ತುಕೊಂಡವ ಆ ಮಗು ತನ್ನ ತಂದೆ ಎಂದು ಗುರುತಿಸುತ್ತಾನೆ ... ಅರ್ಥಾತ್, ಮಗುವಿನ ಜನನವಾದ ಮೇಲೆಯೇ ಆತನನ್ನು 'ತಂದೆ' ಎಂದು ಜಗ ಗುರುತಿಸುವುದು. ಮಗುವಿನಿಂದ ತಂದೆ - Child is the Father of Man,
ತಂದೆಯ ಕರ್ತವ್ಯ ನೆರವೇರಿಸಿ ಮಗುವಿಗೆ ಮಾದರಿಯಾಗುವುದು ಒಂದು ಯೋಗವೇ ಸರಿ. ಹಾಗಾಗಿ 'ವಿಶ್ವ ಯೋಗ ದಿನ' ಎಂದು ಇಂದು ಗುರುತಿಸಲಾಗಿದೆ ಎಂದುಕೊಳ್ಳೋಣ !
ಈ ದಿಶೆಯಲ್ಲಿ ಒಂದು ಸಣ್ಣ ಘಟನೆ ಹೇಳಬೇಕೆಂದೆನಿಸಿದೆ ....
ಹೀಗೇ ಯಾವುದೋ ತಪ್ಪು ಮಾಡಿದ್ದಕ್ಕೆ ನಮ್ಮ ತಂದೆಯವರಿಗೆ ಮನಸ್ಸಿಗೆ ಬೇಸರವಾಯಿತು ... ಅವರು ಹೊಡೆದದ್ದು ನೆನಪೇ ಇಲ್ಲ ಬಿಡಿ ... ಬೇಸರಿಸಿಕೊಂಡೇ ಬೈದರು "ದಿನೇ ದನೇ ವಯಸ್ಸು ಏರಿದಂತೆ ಜವಾಬ್ದಾರಿ ಇಲ್ಲದೇ ಇರೋದಕ್ಕೆ ಅಶಿಕ್ಷಿತರಾಗಿರೋದೇ ಕಾರಣ' ಅಂತ ! ನನಗೆ ಭಯಂಕರ ದು:ಖ ಆಯ್ತು ... ಬೈದದ್ದಕ್ಕಲ್ಲ ... 'ಅಶಿಕ್ಷಿತರು' ಅಂದರೆ ಏನು ಅಂತ ಅರಿವಾಗದೆ ದು:ಖವಾಗಿತ್ತು ... ಕೇಳೋ ಧೈರ್ಯ ಇರಲಿಲ್ಲ ಬಿಡಿ ... ಇದು ಅಂದಿನವರ ಭಾಷಾ ಪ್ರಯೋಗ .. ಬೈಗುಳದಲ್ಲೂ !!!
Comments
ಉ: ತಂದೆ ಎಂದರೆ ಯಾರು?
ಅಪ್ಪನ ನೆನಪು ಮೂಡಿತು. ಧನ್ಯವಾದ, ಭಲ್ಲೆಯವರೇ.
ಈಗಿನ ಕೆಲವರು ಅಪ್ಪ ಎನ್ನುವುದಕ್ಕೆ ಇನ್ನೊಂದು ಅರ್ಥವನ್ನೂ ಕಂಡಿದ್ದಾರೆ. 'ತೀಟೆ ತೀರಿಸಿಕೊಂಡು ಅಪ್ಪನಾದವನು' ಎನ್ನುವ ಮಕ್ಕಳೂ ಇರುತ್ತಾರೆ.
In reply to ಉ: ತಂದೆ ಎಂದರೆ ಯಾರು? by kavinagaraj
ಉ: ತಂದೆ ಎಂದರೆ ಯಾರು?
ಎಲ್ಲ ಸಂಬಂಧಗಳೂ ಏನೇನೋ ಅರ್ಥ ಕೂಡಿಸಿಕೊಂಡು ಹೊರಗೆ ಮಾತನಾಡುವಾಗ ಒಮ್ಮೊಮ್ಮೆ ಭಯವೇ ಆಗುತ್ತೆ :-( ಯಾರು ನಾವಾಡಿದ ಮಾತಿಗೆ ಏನು ಅರ್ಥ ಕಲ್ಪಿಸಿಕೊಂಡು ನಗುವರೋ ಎಂದು !