ಹುಡುಗ ಮತ್ತು ಬುದ್ಧಿಜೀವಿ

ಹುಡುಗ ಮತ್ತು ಬುದ್ಧಿಜೀವಿ

ಹುಡುಗ ಮತ್ತು ಬುದ್ಧಿಜೀವಿ
.
ಹುಡುಗನೊಬ್ಬ ಹೊಟೇಲಿನಿಂದ ತಿಂಡಿಪೊಟ್ಟಣ ತೆಗೆದುಕೊಂಡು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ.ಹಸಿವಿನಿಂದ ಬಳಲಿ ಮಲಗಿದ್ದ ನಾಯಿಮರಿಯೊಂದು ಈ ಹುಡುಗನನ್ನು ನೋಡಿದ ಕೂಡಲೇ ಬಾಲ ಅಲ್ಲಾಡಿಸಿಕೊಂಡು ಹತ್ತಿರಕ್ಕೆ ಬರುತ್ತದೆ.ಅ ಹುಡುಗನಿಗೆ ನಾಯಿಮರಿಯನ್ನು ನೋಡಿದ ಕೂಡಲೆ ಏನನ್ನಿಸಿತೋ ಏನೋ,ತನ್ನಲ್ಲಿದ್ದ ತಿಂಡಿಪೊಟ್ಟಣವನ್ನು ಅದಕ್ಕೆ ಹಾಕುತ್ತಾನೆ.ಇದನ್ನು ಅಲ್ಲೆ ಪಕ್ಕದಲ್ಲಿ ಕೆದರಿದ ಕೂದಲಿನ ಜೊತೆಗೆ ಫ್ರೆಂಚ್ ಗಡ್ಡಬಿಟ್ಟುಕೊಂಡು ಸಿಗರೇಟ್ ಸೇದುತ್ತ ನಿಂತಿದ್ದ ಬುದ್ಧಿಜೀವಿಯೊಬ್ಬ ಗಮನಿಸುತ್ತಿರುತ್ತಾನೆ.ಅವನು ಈ ಹುಡುಗನನ್ನು ಹತ್ತಿರಕ್ಕೆ ಕರೆದು,'ನೀನು ತಿನ್ನುವ ಆಹಾರವನ್ನು ಅ ಬೀದಿ ನಾಯಿಮರಿಗೆ ಹಾಕಿದೆಯಲ್ಲ.ಅದು ಇಂದಲ್ಲ ನಾಳೆ ಹಸಿವಿನಿಂದ ಸತ್ತೆ ಸಾಯುತ್ತೆ.ನೀನು ತಿನ್ನುವ ಆಹಾರವನ್ನು ಅದಕ್ಕೆ ಹಾಕುವ ಮೂರ್ಖ ಕೆಲಸ ಮಾಡಿದೆಯಲ್ವ.ಇವತ್ತೇನೋ ನೀನು ಆಹಾರ ಕೊಟ್ಟೆ,ನಾಳೆಯೂ ಬಂದು ಅದಕ್ಕೆ ಆಹಾರ ಹಾಕುತ್ತೀಯಾ..?'ಎಂದು ಕೇಳಿದರು.ಅದಕ್ಕೆ ಅ ಹುಡುಗ ಈ ಬುಜೀಯನ್ನು ನೋಡಿ ನಗುತ್ತಾ ಹೀಗೆಂದ...'ನಾಳೆ ನನ್ನಂತವರು ಯಾರಾದರೂ ಅ ನಾಯಿಮರಿಗೆ ಆಹಾರ ನೀಡಬಹುದು.ಇಷ್ಟಕ್ಕೂ ಈ ದೇಶದಲ್ಲಿರುವವರಿಗೆಲ್ಲ ನಿಮ್ಮಂತಹ "ಮಹಾನ್ ಬುದ್ಧಿ" ಇರೋದಿಲ್ಲ' ಅಂದನಂತೆ.ಇದನ್ನು ಕೇಳಿದ ಬುಜೀಗೆ ತನ್ನ ಚಪ್ಪಲಿಯಲ್ಲಿ ತಾನೇ ಹೊಡೆದುಕೊಂಡಂತಹ ಅನುಭವವಾಯಿತು.ಹುಡುಗನಿಂದಾದ ಈ ಅವಮಾನದಿಂದ ತಲೆತಗ್ಗಿಸಿ ಹೋದ ಬುಜೀ ಮತ್ತೆ ತಲೆಎತ್ತಿದ್ದು ಪಕ್ಕದ ಬಾರಿನಲ್ಲಿ ಗುಂಡುಹಾಕಲು ಕುಳಿತಾಗಲೇ...!!
#sklines

-@ಯೆಸ್ಕೆ

Rating
No votes yet

Comments