ಚಿತ್ರರಂಗದ ನೆನಪುಗಳ ರೂಪಕ-ಅಪರೂಪದ ಪ್ರೇರಕ.!

ಚಿತ್ರರಂಗದ ನೆನಪುಗಳ ರೂಪಕ-ಅಪರೂಪದ ಪ್ರೇರಕ.!

ಚಂದನವನದ ಛಾಯಾಚಿತ್ರಗಳು...      
ಕಪ್ಪು-ಬಿಳುಪು ಅಪರೂಪದ ನೆನಪು..! ಚಂದನವನದ ಛಾಯಾ ಚಿತ್ರ ನೆನಪು..!ಚಿತ್ರಪಥ ಎಂಬ ಅಪರೂಪದ ಚಿತ್ರ ಕೃತಿ.ನಾಲ್ಕು ದಶಕಗಳ ಶ್ರಮದ ಸುಂದರ ನೆನಪು.ಚಿತ್ರ ಪಥ ಕೃತಿ ನೆನಪಿನ ಪ್ರೇರಕ-ರೂಪಕ.ಹಿರಿಯ ಸ್ಥಿರ ಛಾಯಾಗ್ರಾಹಕರ ವಿರಳ ದಾಖಲೆ.ಅಶ್ವತ್ಥ ನಾರಾಯಣ ಸೆರೆಹಿಡಿದ ಕನ್ನಡ ಚಿತ್ರರಂಗ.ಕಾಲವನ್ನ ಸೆರೆ ಹಿಡಿದ ಅಪರೂಪದ ಸರದಾರ.ಚಿತ್ರಪಥ ಪುಸ್ತಕ ಈಗ ಮಾರುಕಟ್ಟೆಯಲ್ಲಿ..!

----
ಚಂದನವದ ನೆನಪುಗಳು. ಕಂಡವರೇ ಧನ್ಯರು. ಕಾರಣದೇ ಇರೋರು,ಬೇಸರ ಮಾಡಿಕೊಳ್ಳಬೇಕಿಲ್ಲ. ಚಿತ್ರ ಪಥ ಹೆಸರಿನ ಅಪರೂಪದ ಚಿತ್ರ ಕೃತಿ ನಿಮ್ಮನ್ನ  ಚಂದನವನದ ಅಪರೂಪದ ಕಪ್ಪು-ಬಿಳುಪು ಕ್ಷಣಕ್ಕೆ ಕರೆದೊಯುತ್ತದೆ. ಬನ್ನಿ, ಆ ದಿನಗಳಿಗೆ ಈ ದಿನ ನಾವೂ ಹೋಗಿ ಬರೋಣ.
-----
ಅಪರೂಪದಲ್ಲಿ ಅಪರೂಪ. ಕಂಡರಿಯದ ಕ್ಷಣಗಳ ಚಿತ್ರಣ. ಈಗೀನ ಹೀರೋಗಳು ಬಾಲ್ಯದಲ್ಲಿ  ಹೇಗಿದ್ದರು ಎಂಬ ನೆನಪುಗಳ ಪ್ರೇರಕ.ಅಪರೂಪದ ಘಳಿಗೆಗಳನ್ನ ಕಟ್ಟಿಕೊಟ್ಟ ಉತ್ಕೃಷ್ಟ ನೆನಪುಗಳ ಚಿತ್ರಕ...
ಚಿತ್ರ ಪಥ ಕೇವಲ ಒಂದು ಪುಸ್ತಕವಲ್ಲ.ಒಂದು ಕಾಲಘಟ್ಟವನ್ನ ಇಂದಿನ ಕಾಲಘಟಕ್ಕೆ ಪರಿಚಯಿಸೋ ಕೆಲಸ.ವಿರಳಾತಿ ವಿರಳ ಭಾವಗಳನ್ನ ಸೆರೆಹಿಡಿದ ಕೃತಿ. ತೆರೆ ಮೇಲೆ ತಾರೆಯರು ತಾರೆಯರಾಗಿಯೇ ಇರುತ್ತಾರೆ. ಆದರೆ, ಈ ಪುಸ್ತಕದಲ್ಲಿ ತಾರೆಯರು ಮನುಷ್ಯರಾದ ಭಾವ-ಭಂಗಿಳಿವೆ.ಮನುಷ್ಯ ಸಹಜ ವರ್ತನೆಗಳು ಸೆರೆಯಾಗಿವೆ.
ರಾಜ್​​ಕುಮಾರ್ ತೆರೆ ಹಿಂದೆ ಹೇಗಿರುತ್ತಿದ್ದರು. ವಿಷ್ಣು-ಭಾರತಿ ಮದುವೆ ದಿನ ತೆಗೆದ ಫೋಟೋ ಹೇಗಿದೆ. ತೂಗಿದೀಪ್ ಶ್ರೀನಿವಾಸ್ ಹಾಗೂ ಮೀನಾ ಅವರ ವಿವಾಹ ಸಂದರ್ಭ, ಗಿರೀಶ್ ಕಾಸರವಳ್ಳಿ-ವೈಶಾಲಿ ಕಾಸರವಳ್ಳಿ, ಸುದರ್ಶನ್-ಶೈಲಾ, ಶ್ರೀನಾಥ್-ಗೀತಾ ಇವರ ಮದುವೆ ಸಡಗ ಹೇಗಿತ್ತು. ಅವೆಲ್ಲವೂ ಚಿತ್ರ ಪಥದಲ್ಲಿ ದಾಖಲಾಗಿವೆ.
ಪುಟ್ಟಣ್ಣನವರ ರಂಗನಾಯಕಿ ಚಿತ್ರವನ್ನ ಬಹತೇಕರು ನೋಡಿದ್ದಾರೆ. ಆದರೆ, ರಂಗನಾಯಕಿ ಚಿತ್ರಕ್ಕೆ ಹಾಕಿದ್ದ ಆ ಸೆಟ್ ಯಾರ ಕಲ್ಪನೆಗೂ ನಿಲುಕಿರೋದಿಲ್ಲ. ಆದರೆ,ರಂಗನಾಯಕಿ ಚಿತ್ರಕ್ಕಾಗಿಯೇ ಕಂಠೀರವ ಸ್ಟುಡಿಯೋದಲ್ಲಿ ಹಾಕಿದ್ದ ಆ ಸೆಟ್​ ನ ಫೋಟೋ ಚಿತ್ರ ಪಥದಲ್ಲಿಯೇ ಇದೆ ನೋಡಿ.ಅಲ್ಲದೇ ಈ ಫೋಟೋ ಕಂಠೀರವ ಸ್ಟುಡಿಯೋದ ಆಗಿನ ವಿಹಂಗಮ ನೋಟವನ್ನೂ ಪರಿಚಯಿಸುತ್ತದೆ.
ಚಿತ್ರ ಪಥ ದಲ್ಲಿ ಇನ್ನೂ ಅಪರೂಪದ ಫೋಟೋಗಳೂ ಇವೆ. ಆಗಿನ ಆ ಫೋಟೋಗಳ ಕಾಲದಲ್ಲಿಯೇ ಡೇಟ್ ವಿಥ್ ಸ್ಟಾರ್​ಗಳ ಕಾನ್ಸೆಪ್ಟ್ ಇತ್ತು. ಅಂತಹ ಒನ್ ಡೇ ಸ್ಟೋರಿಯಲ್ಲಿ ನಟ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಅವ್ರು ಕ್ಯಾಪ್ಚರ್ ಆಗಿದ್ದರು..
ಅಪೂರಪದ ಈ ಎಲ್ಲ ಕ್ಷಣಗಳನ್ನ ಸೆರೆಹಿಡಿದವ್ರು, ಹಿರಿಯ ಸ್ಥಿರ ಛಾಯಾಗ್ರಾಹಕ ಅಶ್ವತ್ಥ ನಾರಾಯಣ. ನಾಲ್ಕು ದಶಕಗಳಲ್ಲಿ ತಮಗೆ ಸಾಧ್ಯವಾದ ಎಲ್ಲ ಅಪರೂಪದ ಸ್ಥಿರ ಚಿತ್ರಗಳನ್ನ ತೆಗೆದ ಅಶ್ವತ್ಥ ನಾರಾಯಣ ಅವರ ಶ್ರಮಕ್ಕೆ ಈಗ ಒಂದು ಅರ್ಥ ಸಿಕ್ಕಿದೆ. ಅದುವೇ ಇಲ್ಲಿವರೆಗೂ ನೀವೂ ನೋಡಿರೋ ವಿಶೇಷ ಪುಸ್ತಕ ಚಿತ್ರ ಪಥ...
ಚಿತ್ರ ಪಥ ಪುಸ್ತಕ ವಿಶೇಷವಾಗಿದೆ. ಒಮ್ಮೆ ನೋಡಿದರೇ, ಮತ್ತೆ..ಮತ್ತೆ ನೋಡಿ ಬಿಡೋವಷ್ಟು ಸೆಳೆತ ಈ ಚಿತ್ರ ಕೃತಿಯಲ್ಲಿ ಕಂಡಿತ ಇದೆ. ನಾವು ಎಂದೂ ನೋಡದೇ ಇರೋ ಹಲವು ಸ್ಥಿರ ಚಿತ್ರಗಳು ಕಣ್ಣಿಗೆ ಕಟ್ಟುತ್ತವೆ. ಒಮ್ಮೆ ತಮ್ಮ ನೆನಪಿನ ಆಳಕ್ಕೆ ಕರೆದೊಯ್ದು ಬಿಡುತ್ತವೆ...
ನೆನಪುಗಳನ್ನ ಕೆದುಕುತ್ತಲೇ, ಹೊಸದೊಂದು ಅನುಭವ ನೀಡುತ್ತಲೇ, ಸಾಗೋ ಈ ಚಿತ್ರ ಫಥ ಅತ್ಯುತ್ತಮ ಕೃತಿ ಅಂತ ನೋಡಿದಾಕ್ಷಣ ಕಂಡಿ ಮನವರಿಕೆ ಆಗುತ್ತದೆ. ಅಂತಹ ಈ ಚಿತ್ರ ಪುಸ್ತಕವನ್ನ ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ವಿಶ್ಲೇಷಿಸಿದ್ದಾರೆ. ವರ್ಣಿಸಿದ್ದಾರೆ.
ಚಿತ್ರ ಪಥದಲ್ಲಿ ಎರಡು ಅಂಶಗಳನ್ನ ಗಮನಿಸಬಹುದು. ಒಂದು ವಿರಳ ಸ್ಥಿರ ಛಾಯಾಚಿತ್ರಗಳು. ಇನ್ನೊಂದು ಪ್ರತಿ ಛಾಯಾಚಿತ್ರಗಳ ಅಡಿಯಲ್ಲಿ ಅದರ ಮಾಹಿತಿ. ಇವು ಇಲ್ಲಿ ಇರೋದ್ರಿಂದ ಚೆಂದನವನದ ಕಪ್ಪು-ಬಿಳುಪು ನೆನಪುಗಳಿಗೆ ನಂಬಲರ್ಹ ಸ್ಪಷ್ಟತೆ ಬಂದಿದೆ..
ಸ್ಥಿರ ಚಿತ್ರ ಛಾಯಾಗ್ರಾಹಕ  ಅಶ್ವತ್ಥ ನಾರಾಯಣ್ ಅವರೇ  ಈ ಚಿತ್ರ ಪಥದ ಚಿತ್ರಗಳ ರೂವಾರಿ. ಕನ್ನಡ ಇಂಡಸ್ಟ್ರೀಯ ಕಲಾವಿದರನ್ನ ಆಪ್ತವಾಗಿ ಕಂಡು, ಅವರಲ್ಲಿಯೇ ಒಬ್ಬರಾಗಿ ಬೆಳೆದು ಬಂದ ಅಶ್ವತ್ಥ ನಾರಾಯಣ ಅವರಲ್ಲಿ, 4 ಲಕ್ಷ ನೆಗೆಟಿವ್ ಗಳಿವೆ. ಅವುಗಳಲ್ಲಿಯೇ ಕೇವಲ 400 ಫೋಟೋಗಳನ್ನ ಚಿತ್ರ ಪಥದಲ್ಲಿ ಬಳಸಲಾಗಿದೆ....
ಅಶ್ವತ್ಥ ನಾರಾಯಣ ಅವರ ಶ್ರಮವನ್ನ ಕರ್ನಾಟಕ ಚಲನ ಚಿತ್ರ ಅಕಾಡಮಿ ಗೌರವಿಸಿದೆ. ಅವರ ಛಾಯಾಚಿತ್ರಗಳನ್ನ ಚಿತ್ರ ಪಥ ಹೆಸರಿನಲ್ಲಿ ಪ್ರಕಟಿಸಿದೆ. ಸದ್ಯ ಮಾರುಕಟ್ಟೆಯಲ್ಲೂ ಲಭ್ಯವಿರೋ ಈ ಚಿತ್ರ ಪಥ ಪುಸ್ತಕ ಸಂಗ್ರಹಯೋಗ್ಯವೂ ಆಗಿದೆ.
-ರೇವನ್ ಪಿ.ಜೇವೂರ್

Comments

Submitted by lpitnal Tue, 07/14/2015 - 19:55

ಅಶ್ವಥ ನಾರಾಯಣ ರವರ ನಾಲ್ಕು ದಶಕಗಳ ಅಪರೂಪದ ಸಿನೇ ರಂಗದ ವ್ಯಕ್ತಿಗಳ ಚಿತ್ರಪಥ ಕನ್ನಡ ಚಿತ್ರರಂಗಕ್ಕೆ, ಚಿತ್ರ ಪ್ರೇಮಿಗಳಿಗೆ, ಕನ್ನಡ ಇತಿಹಾಸಕ್ಕೆ ಬಹುದೊಡ್ಡ ಕೊಡುಗೆ ಎಂದು ಹೇಳಬಹುದು, ಅಶ್ವಥ ನಾರಾಯಣರಿಗೆ, ಪರಿಚಯಿಸಿದ ತಮಗೂ ವಂದನೆಗಳು ಸರ್, ಜೇವೂರ.