ಭಾರತದ‌ ಶ್ರೇಷ್ಟ ವಾಸ್ತುಶಿಲ್ಪಿ

ಭಾರತದ‌ ಶ್ರೇಷ್ಟ ವಾಸ್ತುಶಿಲ್ಪಿ

         ಭಾರತದ‌ ಶ್ರೇಷ್ಟ ವಾಸ್ತುಶಿಲ್ಪಿ    

                     ಚ್ರಾಲ್ಸ್ ಕೊರಿಯ್ (Charles Correa) ಎಂಬ ಹೆಸರು  ವಿಶ್ವದ‌ ಮತ್ತು  ಭಾರತದ ಇತಿಹಾಸದ ಪುಟಗಳಲ್ಲಿ ಸುಪ್ರಸಿದ್ಧ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿ  ಸೇರಿಕೊಂಡಿತು.ಅವರೊಬ್ಬರು  ಭಾರತ ಮಾತೇಯ ಹೆಮ್ಮೆಯ ಪುತ್ರ,ಭಾರತದ ಹೆಸರನ್ನು  ಜಗತ್ತಿನಾದಂತ್ಯ ಸುಪ್ರಸಿದ್ಧ ಗೊಳಿಸಿದ್ದಾರೆ. ಸ್ವಾತಂತ್ರ್ಯ ನಂತರದ ಭಾರತದ ಆಧುನಿಕ  ವಾಸ್ತುಶಿಲ್ಪಿ,ಅವರು  ಆಧುನಿಕ ನಗರಗಳಲ್ಲಿಯು ಬಡವರು ಬದುಕುವ ಹಾಗೆ ವಾಸ್ತುಶಿಲ್ಪ ನಿಮಿ೯ಸುವಲ್ಲಿ ಪ್ರಸಿದ್ಧವಾಗಿದ್ದರು.ಚ್ರಾಲ್ಸ್ ಕೊರಿಯ್ ಅವರು  ತಮ್ಮ ವಾಸ್ತುಶಿಲ್ಪಗಳಲ್ಲಿ  ಸಾಂಪ್ರದಾಯಿಕ ವಿಧಾನಗಳಿಗಾಗಿ ಮತ್ತು ಸಾಂಪ್ರದಾಯಿಕ  ವಸ್ತುಗಳು ಬಳಸುವದರಲ್ಲಿ ಪ್ರಸಿದ್ಧವಾಗಿದ್ದರು.ಅವರು   ಭಾರತದಲ್ಲಿ  ಮಾತ್ರವಲ್ಲದೆ ಜಗತ್ತಿನ ಅನೇಕ ದೇಶಗಳಲ್ಲಿ  ತಮ್ಮ ಶೈಲಿಯಲ್ಲಿ ಕಟ್ಟಡಗಳನ್ನು  ನಿಮಿ೯ಸಿ,ಆ ದೇಶಗಳ ಸರಕಾರಗಳಿಂದ ಗೌರವ,ಪ್ರಶಸ್ತಿಗಳನ್ಮು ಪಡೆದಿದ್ದಾರೆ. ಚ್ರಾಲ್ಸ್ ಕೊರಿಯ್ ಅವರ ಪೂಣ೯ ಹೆಸರು ಚ್ರಾಲ್ಸ್ ಮಾಕ್ರ ಕೊರಿಯ್, ಇವರು ನಮ್ಮ ನೆರೆ  ರಾಜ್ಯದ ತೆಲಂಗಾಣದ,ಸಿಕಿಂದರಬಾದ್ ಎಲ್ಲಿ ೧ ಸೆಪ್ಟೆಂಬರ್ ೧೯೩೦ ರಲ್ಲಿ ಜನಿಸಿದರು. ಅವರು ತಮ್ಮ ಕಾಲೇಜು  ಶಿಕ್ಷಣವನ್ನು ಮುಂಬೈಯ St.Xavier's college ನಲ್ಲಿ ಮುಗಿಸಿದರು. ಮುಂದಿನ ಉನ್ನತ ಶಿಕ್ಷಣವನ್ನು University of Michigan in Ann Arbor ಮತ್ತು Massachusetts Institute of technology in Cambridge, Massachusetts ಯಲ್ಲಿ ೧೯೫೩ ರಿಂದ ೧೯೫೫ ಮುಗಿಸಿದರು.

           ಅವರು ತಮ್ಮ ವೃತ್ತಿ  ಜೀವನವನ್ನು  ೧೯೫೮ ರಲ್ಲಿ ಮುಂಬೈಯಲ್ಲಿ ಆರಂಭಿಸಿದರು. ಚ್ರಾಲ್ಸ್ ಕೋರಿಯ್  ಅವರ ವಾಸ್ತುಶಿಲ್ಪದಲ್ಲಿ ಮೂಡಿಬಂದ ಮೊದಲ ಕಟ್ಟಡ ವೆಂದರೆ ಮಹಾತ್ಮ ಗಾಂಧೀಜಿಯವರ ವಸ್ತುಗಳ ನೆನಪಿನ ವಸ್ತುಸಂಗ್ರಹಾಲಯ  "Mahatma Gandhi memorial museum" ವನ್ನು ,ಮಹಾತ್ಮ ಗಾಂಧಿಜಿಯವರ Sabarmati Ashram, Ahmedabad ,ದಲ್ಲಿ ನಿಮಿ೯ಸಿದರು.ಅದನ್ನು  ಅವರು ತಮ್ಮ 28 ನೇ  ವಯಸ್ಸಿನಲ್ಲಿಯೆ  ನಿಮಿ೯ಸಿದರು.ಇಲ್ಲಿಂದ ಶುರು ಮಾಡಿದ ಅವರ ಅದ್ಭುತ ವಾಸ್ತುಶಿಲ್ಪಗಳ ಕಟ್ಟಡಗಳನ್ನು ನಿಮಿ೯ಸುವ ಪಯಣ ,ಅವರು ಮತ್ತೆ  ಯಾವತ್ತೂ ಹಿಂದೆ  ತಿರುಗಿ ನೋಡಲಿಲ್ಲ.

                  ಅವರ ವಾಸ್ತುಶಿಲ್ಪದಲ್ಲಿ ನಿಮಿ೯ಸಿದ ಪ್ರಮುಖ ಕಟ್ಟಡಗಳೆಂದರೆ ರಾಜಸ್ತಾನದ ಜೈಪುರದಲ್ಲಿನ Jawahar Kala Kendra,ಮಧ್ಯಪ್ರದೇಶದ ಬೋಪಾಲ್ ದಲ್ಲಿನ Madya Pradesh Legislative Assembly ಹಾಗೂ  ಅಲ್ಲಿನ Bharata Bhavan,ನವದೆಹಲಿಯಲ್ಲಿನ British Council, ಚೆನೈಯಲ್ಲಿನ Mahindra and Mahindra Ltd ಅವರ Mahindra Research Valley , Kolkata ದಲ್ಲಿನ Salt lake city,ನವೀ ಮುಂಬೈ ಪ್ಲಾನಿಂಗ್ ಕಮಿಟಿ ಮುಖ್ಯಸ್ಥರಾಗಿದರು,ಕೇರಳದ Malabar Cements Township ,ಮುಂಬೈಯ ಧಾರಾವಿಯಲ್ಲಿನ Low-cost Housing,  ಗುಜರಾತಿನ ಭಾವನಗರದಲ್ಲಿನ Twin houses, ಗುಜರಾತಿನ ಅಹಮದಬಾದ್ ದಿನ Ramakrishna House, ಗೋವಾದಲ್ಲಿನ Verem House,ಮುಂಬೈಯಲ್ಲಿನ The Cairn Bungalow, ಮುಂಬೈಯ ಬೋರಿಯಲ್ಲಿನ Jeevan Bima Nagar Township, ನವದೆಹಲಿಯಲ್ಲಿನ LIC ಆ ಕೇಂದ್ರ ಕಚೇರಿ Jeevan Bharati, ನವ ದೆಹಲಿಯಲ್ಲಿನ National Crafts Museum, ಕೇರಳದಲ್ಲಿನ Kovalam Beach Resort,ಗೋವಾದಲ್ಲಿನ Cidade de Goa Hotel ಹಾಗೂ  Dona Sylvia hotel,ನವ ದೆಹಲಿಯ ರಾಜಘಾಟದಲ್ಲಿನ Gandhi Darshan Museums,  ಹೈದರಬಾದದಿನ Buddhapurnima Lakefront Development, ಪೂನೆಯಲ್ಲಿನ Cantonement Church, ಮುಂಬೈಯಲ್ಲಿನ Salvacao church, City Museum , ಗೋವಾದಲ್ಲಿನ Madgaon Station,ಇನ್ನೂ  ಅನೇಕ ಕಟ್ಟಡಗಳನ್ನು  ನಿಮಾ೯ಣ ಮಾಡಿದ್ದಾರೆ.

               ನಮ್ಮ ಕನಾ೯ಟಕದಲ್ಲಿಯು ಅವರ ವಾಸ್ತುಶಿಲ್ಪದಲ್ಲಿ ಅನೇಕ ಕಟ್ಟಡಗಳು ನಿಮಾ೯ಣಗೊಂಡಿವೆ.ಅವುಗಳಲ್ಲಿ  ಕೆಲವುಗಳ ಹೆಸರುಗಳು ಇಲ್ಲಿದ್ದಾವೆ.ಬೆಂಗಳೂರಿನ Bimanagar Township, ಹಿಂದುಳಿದ ಹೈದ್ರಾಬಾದ್  ಕನಾ೯ಟಕದ ಕಲಬುರ್ಗಿ  ಜಿಲ್ಲೆಯ ವಾಡಿಯಲ್ಲಿನ ಸಾವಿರಾರು  ನೀರದೋಗ್ಯಗಳಿಗೆ ಉದೋಗ್ಯ ನೀಡಿದ ACC Cement Township,  ಬೆಂಗಳೂರಿನ Titan Township, Mascarenhas House, Koramangala House,Visvesvaraya Centre,Tata Elxsi, Jawaharlal Nehru Centre.

       ಘಟಪ್ರಭಾ ನದಿಯ ಪ್ರವಾಹದಿಂದ ಮುಳುಗಡೆ ಆಗುತ್ತಿದ್ದ ಬಾಗಲಕೊಟೆ ನಗರವನ್ನು ಬೇರೆ ಕಡೆಗೆ ಶಿಪ್ಟ ಮಾಡುವ ಹೊಣೆಯನ್ನು ಹೊತ್ತಿದ್ದ ಅದಿಂನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗೆಡೆಯವರು. ಅವರಿಗೆ ಆತ್ಮೀಯರಾಗಿ  ಚ್ರಾಲ್ಸ್ ಕೋರಿಯ್ ಅವರಿಗೆ    ಕಾಲ್ ಮಾಡಿ ಆ ಯೋಜನೆಯನ್ನು ನೀಡಿದರು.ಅದೇ ಇಂದಿನ ಬಾಗಲಕೊಟೆಯ ನವನಗರ. 

             ಚ್ರಾಲ್ಸ್ ಕೊರಿಯ್ ಅವರು ಬೇರೆ ದೇಶಗಳಲ್ಲಿವು ಹಲವಾರು  ಕಟ್ಟಡಗಳನ್ನು  ನಿಮಿ೯ಸಿದ್ದಾರೆ.ಅವುಗಳಲ್ಲಿ  ಕೆಲವುಗಳನ್ನು ಹೆಸರುಗಳು ಇಲ್ಲಿದ್ದಾವೆ ಲೀಬಿಯಾದ Steel township, USA ಯಲ್ಲಿನ Neuroscience Centre,Qatar ದೇಶದ Doha ಯಲ್ಲಿನ Museum of Islamic Art,ಕೆನಾಡದ ಟೊರೆಂನೆಟೊ ಯಲ್ಲಿನ High profile Jamatkhana,ಲಂಡನ್ ಯಲ್ಲಿನ Memorial Gates,ಸಿಂಗಾಪೂರ ಯಲ್ಲಿನ Computer Center, Boston ದೇಶದಲ್ಲಿನ McGovern institute for Brain Research, Portugal ದೇಶದಲ್ಲಿನ The Champalimaud center for the unknown in Lisbon.
ನಗರಗಳಲ್ಲಿ  ಒಳ್ಳೆಯ ವಾತಾವರಣ ಮತ್ತು ಬಡವರು ಕಡಿಮೆ ಹಣದಲ್ಲಿ ಒಳ್ಳೆಯ ಮನೆಗಳ ನಿಮಾ೯ಣ  ಹೀಗೆ ನಗರಗಳ ಪ್ಲಾನಿಂಗಗೊಸಕ್ಕರ    ೧೯೮೪ ರಲ್ಲಿ ಚ್ರಾಲ್ಸ್ ಕೊರಿಯ್ ಅವರು ತಮ್ಮದೇ ಆದ “Urban Design Research institute " ಅನ್ನು ಮುಂಬೈಯಲ್ಲಿಪ್ರಾರಂಭಿಸಿದರು.

              ಅವರು ೨೦೦೫ ರಿಂದ ೨೦೦೮ ವರೆಗೂ  ದೆಹಲಿಯ "Delhi Urban Arts Commission " ನ ಅಧ್ಯಕ್ಷರಾಗಿದ್ದರು.
೧೯೮೫ ರಲ್ಲಿ  ಭಾರತದ ಅಂದಿನ ಪ್ರಧಾನ ಮಂತ್ರಿ  ರಾಜೀವ ಗಾಂಧಿ ಅವರು ಚ್ರಾಲ್ಸ್ ಕೊರಿಯ್ ಅವರನ್ನು  " National Commission of Urbanization " ನ ಅಧ್ಯಕ್ಷರಾಗಿ ನೇಮಿಸಿದರು.   ಅವರು ಭಾರತ ದೇಶಕ್ಕೆ  ನೀಡಿದ ಕೊಡುಗೆಯನ್ನು   ಆಧರಿಸಿ ೧೯೭೨ ರಲ್ಲಿ ಭಾರತ ಸರಕಾರವು ಅವರನ್ನು  ಪದ್ಮಶ್ರೀ ಪ್ರಶಸ್ತಿ  ನೀಡಿ ಗೌರವಿಸಿತ್ತು. ನಂತರ ೨೦೦೬ ರಲ್ಲಿ ದೇಶದ ಎರಡನೆಯ ಅತ್ಯುತ್ತಮ ನಾಗರಿಕ ಪ್ರಶಸ್ತಿ  ಪದ್ಮ ವಿಭೂಣ ನೀಡಿ ಗೌರವಿಸಿತ್ತು. 
             ೨೦೧೧ ರಲ್ಲಿ  ಅಂದಿನ ಗೋವಾ ಸರಕಾರವು, ಗೋವಾ ರಾಜ್ಯದ ಅತ್ಯುತ್ತಮ ನಾಗರಿಕ ಪ್ರಶಸ್ತಿ " Gomat Vibhushan" ನೀಡಿ ಗೌರವಿಸಿತ್ತು. International Union of Architects ಸಂಸ್ಥೆಯು ಪ್ರತಿ ಮೂರು ವಷ್ರಕೊಮ್ಮೆ  ವಾಸ್ತುಶಿಲ್ಪ ಕ್ಷೇತ್ರದಲ್ಲಿ ವಿಶ್ವಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿ ಒಬ್ಬ ವಾಸ್ತುಶಿಲ್ಪಿಗೆ  Gold medal award ಯನ್ನು  ನಿಡುತ್ತದೆ.೧೯೯೦ ರಲ್ಲಿ ಚ್ರಾಲ್ಸ್ ಕೊರಿಯ್ ಅವರು  ವಾಸ್ತುಶಿಲ್ಪ ಕ್ಷೇತ್ರದಲ್ಲಿ ವಿಶ್ವಕೆ  ನೀಡಿದ ಕೊಡುಗೆಯನ್ನು  ಆಧರಿಸಿ    IUA ಸಂಸ್ಥೆಯು Gold Medal Award ಯನ್ನು   ನೀಡಿತ್ತು.ಈ ಅವಾ೯ಡ್ ಅನ್ನು ಪಡೆದ ಭಾರತದ ಒಬ್ಬರೇ  ವಾಸ್ತುಶಿಲ್ಪಿ. Royal Institute of British architects ಅವರು  ೨೦೧೩ ರಲ್ಲಿ ಚ್ರಾಲ್ಸ್ ಕೊರಿಯ್  ಅವರ ವಾಸ್ತುಶಿಲ್ಪಗಳ ಪ್ರದಶ೯ನವನ್ನು ಏಪ೯ಡಿಸಿತ್ತು.
                   ಭಾರತದ ಶ್ರೇಷ್ಠ ವಾಸ್ತುಶಿಲ್ಪಿ ಚ್ರಾಲ್ಸ್  ಕೊರಿಯ್ ಅವರು ಜೂನ್ ೧೬,೨೦೧೫ ರಂದು ಮುಂಬೈಯಲ್ಲಿ ನಿಧನರಾದ್ದರು.ಅವರು ನಿಧನವಾದ ದಿನದಂದು  ಸಂತಾಪ ಸೂಚಿಸಬೇಕಾದ ನಮ್ಮ  ಮಾಧ್ಯಮಗಳು ಇಡೀ  ದಿನ ೧೭೦೦ ಕೋಟಿ ರೂಪಾಯಿ ಹಗರಣವನ್ನು ಮಾಡಿ ದೇಶದಿಂದ ಓಡಿ  ಹೋದ ಲಲಿತ ಮೋದಿಯ ಬಗ್ಗೆ ವರದಿಯನ್ನು  ಪ್ರಸಾರ ಮಾಡಿದು  ವಿಪ೯ಯಾಸವೇ ಸರಿ. ಲಲಿತ ಮೋದಿಯವರು ಕ್ಯಾನ್ಸರ್ ನಿಂದ ನರಳುತ್ತಿರುವ ತಮ್ಮ ಪತ್ನಿಗೆ ಪ್ರೋಚಗಲ್ ನಲ್ಲಿನ  ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಿಸಲು  ಸುಷ್ಮಾ ಸ್ವರಾಜ ಅವರ ಸಹಾಯ ಕೇಳಿದರು ,ಆ ಆಸ್ಪತ್ರೆಯ ವಾಸ್ತುಶಿಲ್ಪಯನ್ನು ನಿಮಿ೯ಸಿದರು ಇದ್ದೇ  ಚ್ರಾಲ್ಸ್  ಕೊರಿಯ್ ಅವರು. ನಮ್ಮ ದೇಶದ ಮಾಧ್ಯಮಗಳು ನಟ,ನಟಿಯರ ಕೌಟುಂಬಿಕ ಜಗಳಗಳ ಸುದ್ದಿಯನ್ನು ಇಡೀ  ಪ್ರಸಾರ ಹಾಗೂ    ZÀZÉð ಮಾಡುವುದರಲ್ಲಿಯೆ ಬ್ಯೂಸಿ ಆಗೋರೊದ್ದು ಎಂತಹ ವಿಪ೯ಯಾಸ.

           ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ ಸರಕಾರದ ಮೊದಲ ಬಜೆಟ್ಟಿನಲ್ಲಿ  ೧೦೦ ಸ್ಮಾಟ್ರ್ ಸಿಟಿಗಳ ನಿಮಾ೯ಣ ಮಾಡುವ ಯೋಜನೆಯನ್ನು  ಘೋಷಣೆ ಮಾಡಿದರು. ಆ ಯೋಜನೆಯಲ್ಲಿ ದೇಶದ ಯಾವ ಯಾವ ರಾಜ್ಯದ ಎಷ್ಟು ನಗರಗಳು,ಯಾವ ನಗರಗಳು,ಆರಿಸಲಾಗಿದೆ ಎಂದು ಘೋಷಣೆ ಮಾಡುವ ಕೆಲವು  ದಿನಗಳ ಮೊದಲೇ ,ನಾವು ನಮ್ಮ ದೇಶದ  ಶ್ರೇಷ್ಠ  ವಾಸ್ತುಶಿಲ್ಪಯನ್ನು ಕಳೆದುಕೊಂಡಿದು  ದುರಾದುಷ್ಡ. ಅವರು ೭೦ ರ ದಶಕದಲ್ಲೇ ನವೀ ಮುಂಬೈಯಂತ ಆಧುನಿಕ ನಗರಗಳ ನಿಮಾ೯ಣ ಮಾಡಿದರು.ಅವರು ಬದುಕಿದ್ದರೆ  ನಮ್ಮ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿಗಳ ನಿಮಾ೯ಣದ ಯೋಜನೆಗೆ ತುಂಬಾ ಸಹಾಯವಾಗುತ್ತಿತ್ತು. ಅವರು ಭಾರತದ ಕೋಟ್ಯಾಂತರ ವಾಸ್ತುಶಿಲ್ಪಿಗಳಿಗೆ ಆದರ್ಶವಾಗಲಿ  ಅಂತ ಆಶಿಸೋನ.

ಅವರ ಆತ್ಮಕ್ಕೆ   ಶಾಂತಿ ನೀಡು  ಅಂತ ಆ ದೇವರಲ್ಲಿ  ಬೇಡಿಕೊಳ್ಳೊನಾ.ಅವರು ಮುಂದಿನ ಜನ್ಮದಲ್ಲಿಯು ಭಾರತ ಮಾತೇಯ ಮಡಿಲಲ್ಲಿ  ಮತ್ತೆ ಹುಟ್ಟಿ ಬರಲಿಲ್ಲ ಎಂದೂ  ಆಶಿಸೋನ.ಭಾರತದ ಶ್ರೇಷ್ಠ ವಾಸ್ತುಶಿಲ್ಪಿಗೆ ನನ್ನದೊಂದು ಸಲಾ೦....

 

 

 

 

Comments

Submitted by kavinagaraj Wed, 07/15/2015 - 14:17

ಭಾರತ ಮೊದಲಿನಿಂದಲೂ ಹಲವಾರು ಶ್ರೇಷ್ಠರನ್ನು ಎಲ್ಲಾ ಕ್ಷೇತ್ರಗಳಲ್ಲೂ ಕಂಡಿದೆ. ಚ್ರಾಲ್ಸ್ ಕೊರಿಯ್ ರವರು ಶ್ರೇಷ್ಠರಲ್ಲಿ ಒಬ್ಬರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿಯಿರಲಿ.