ನನ್ನಾತ್ಮ ನಗುತ್ತಿದೆ ಗಹಗಹಿಸಿ
ಸತ್ತ ನನ್ನ ಆತ್ಮಕ್ಕೆ ಬೆಂಕಿ ಇಟ್ಟು ಅಳುತ್ತಿದ್ದಾರೆ ಜನ,
ಆದರೆ
ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು,
ನಿನ್ನೆಯ ನೆನಪುಗಳ ಜೊತೆ ಅವಿರತವಾಗಿ ಗುದ್ದಾಡಿ
ನಾಳೆಯ ಕನಸುಗಳ ಜೊತೆ ಅಧ್ಭುತವಾಗಿ ಒದ್ದಾಡಿ
ಇವತ್ತನ್ನು ಕೊಲೆ ಮಾಡಿ ಬೆಂಕಿಯಲಿ ದಹಿಸಿ ತಿಂದ
ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು,
ನಿಜರ್ೀವ ಆಗಸದ ನಕ್ಷತ್ರಕ್ಕೆ ತಲೆಎತ್ತಿ ಕೈಮುಗಿದು
ಅರೆಜೀವ ಭೂಮಿಯ ಅಧರಕ್ಕೆ ತಲೆಬಾಗಿ ಹಾಲೆರೆದು
ಜೀವಂತ ಜೀವಗಳನು ಕೊಚ್ಚಿ-ಕೊಚ್ಚಿ ಹಸಿರಕ್ತ ಸವಿದ
ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು,
ಕತ್ತಲಿಗೆ ಆದ್ರ್ರ ಬೆಳಕಿನ ಕೋಳ ತೊಡಿಸಿ, ಬಂದಿಸಿ
ಎಲ್ಲೆಲ್ಲೂ ಬೆಳಕು ಹರಿಸುವ ಹುನ್ನಾರದಲಿ ತಹತಹಿಸಿ
ಎಲ್ಲರ ಅಂತರಾತ್ಮವನು ನಗ್ನ ಕಾಂಚಾಣದಲಿ ಹಿಡಿದಿಟ್ಟ
ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು,
ಜಡ ದೇಹದೊಳಗೆ ಮಿಸುಕಾಡದಂತೆ ಜೀವಂತವಾಗಿದ್ದು.
ಬಡವರ ಬೆವರಿನಲಿ ಹುಟ್ಟಿದ ಅನ್ನವ ಗಬಗಬನೆ ತಿಂದು
ಗಜಮುಂಡನಂತೆ ಬೆಳೆದು, ಸದಾಕಾಲ ಸುಖಿಸಿ ನಿದ್ರಿಸುತ್ತಿದ್ದ
ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು,
ಗ್ರಹ-ಗ್ರಹಗಳಿಗೆ ಸರಪಳಿ ಹಾಕಿ, ಎಳೆದು ಗೂಟಕ್ಕೆ ಕಟ್ಟಿ
ಮಂಗಳ ಬುದಗಳಿಗೆ ಗಟ್ಟಿಯಾದ ಬಣ್ಣದ ಸೇತುವೆ ಕಟ್ಟಿ
ಮನೆಯೊಳಗೆ ಮನದೊಳಗೆ ಒಬ್ಬಂಟಿಯಾಗಿ ಕೊರಗಿ ಸತ್ತ
ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು,
ಬೆಣ್ಣೆ ಪಡೆಯಲು ಬದುಕಿನ ಹಾಲಿಗೆ, ತೆವಲಿನ ಹುಳಿ ಹಿಂಡಿ,
ಕಡೆ-ಕಡೆದು ಕೊನೆಗೆ ದೇಹ ಸವೆಯುವ ಸಮಯದಲಿ ದಕ್ಕಿದ
ಒಂಚೂರು ಬೆಣ್ಣೆಯನು ಮನಸಾರೆ ನೆಕ್ಕಲು ಅಸಹಾಯಕವಾದ
ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು,
-ಜೀ ಕೇ ನ
Comments
ಉ: ನನ್ನಾತ್ಮ ನಗುತ್ತಿದೆ ಗಹಗಹಿಸಿ
:)