ಹ್ಯಾಟ್ರಿಕ್​ ‘ಶಿವ’ ಪ್ರಭಾವ....!

ಹ್ಯಾಟ್ರಿಕ್​ ‘ಶಿವ’ ಪ್ರಭಾವ....!

 ಶಿವಣ್ಣನ ‘ಪಾತ್ರ’ ಪ್ರಭಾವ..! ಬೆಳ್ಳಿ ತೆರೆ ಮೇಲೆ ಶಿವನ ಪ್ರಭಾವ. ಜೋಗಿ..ಓಂ ಚಿತ್ರದ ಸನ್ನಿವೇಶ ಅನುಕರಣೆ.ಜೋಗಿ ಪಾತ್ರದಲ್ಲಿ ಮಿಂಚಿದ ಸಾಧು ಕೋಕಿಲಾ.‘ಹ್ಯಾಟ್ರಿಕ್ ಹೊಡಿಮಗಾ’ದಲ್ಲಿ ಸಾಧು ‘ಜೋಗಿ’ ಗೆಟಪ್​. ಹುಬ್ಬಳ್ಳಿ ಚಿತ್ರದಲ್ಲಿ ‘ಓಂ’ ಪಾತ್ರ ಮತ್ತು ಸನ್ನಿವೇಶಅನುಕರಣೆ.ಜೋಗಿ ಚಿತ್ರದ ಎಮೋಷ್ನಲ್ ಹಾಡಿಗೆ ಸಾಧು ಕುಣಿತ
----
ಬೆಳ್ಳಿ ತೆರೆ ಮೇಲೆ ಬರೋ ನಾಯಕ ಏನೇ ಮಾಡಲಿ. ಅದು ಅಭಿಮಾನಿಗಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅದನ್ನ ಅನುಕರಣೆ ಮಾಡೋರು ಎಲ್ಲೆಡೆ ಸಿಗ್ತಾರೆ. ಆದರೆ, ಹ್ಯಾಟ್ರಿಕ್ ಹೀರೋ ಶಿವರಾಜ್  ಕುಮಾರ್ ಇತರ ಎಲ್ಲ ನಾಯಕರಿಗಿಂತಲೂ ವಿಶೇಷ. ಯಾಕೆಂದ್ರೆ, ಶಿವರಾಜ್ ಕುಮಾರ್ ಅಭಿನಯಿಸಿದ ಪಾತ್ರಗಳೇ ಮತ್ತೊಂದು ಚಿತ್ರಕ್ಕೆ ವಿಷ್ಯಗಳಾಗಿವೆ. ಬೇರೆ..ಬೇರೆ ಪಾತ್ರಗಳಾಗಿ ಪ್ರಭಾವ ಬೀರಿವೆ. ಅಂತ ಒಂದು ಸ್ಟೋರಿ ಹೇಳುತ್ತೇವೆ.
 ಬನ್ನಿ....
ಕನ್ನಡ ಚಿತ್ರರಂಗದಲ್ಲಿ ‘ಜೋಗಿ’ ಸಿನಿಮಾ ಮಾಡಿದ ಮೋಡಿ ಅಂತಿಂತದ್ದಲ್ಲ. ಅದೆಷ್ಟು ಅಂದ್ರೆ, ಜೋಗಿ ಚಿತ್ರ ತೆರೆ ಕಂಡಾಗ, ಎಲ್ಲೆಡೆ ಬಹುತೇಕ ಅಭಿಮಾನಿಗಳು, ಜೋಗಿ ಥರ ಹೇರ್ ಸ್ಟೈಲ್ ಮಾಡಿಕೊಂಡಿದ್ದರು. ಅದರಲ್ಲೂ ಶಿವರಾಜ್ ಕುಮಾರ್  ಹಾಗೂ ಅರುಂಧತಿ ನಾಗ್ ಕಾಣಿಸಿಕೊಂಡಿರೋ ಹಾಡಂತೂ ಎಲ್ಲರ ಮನ ತಟ್ಟಿತ್ತು.

ಜನರ ಮನ ಗೆದ್ದ ಈ ಹಾಡಿನ ಆರಂಭಿಕ ದೃಶ್ಯ ಮತ್ತು ಕುಣಿತ ಮತ್ತೊಂದು ಚಿತ್ರದ ಸೀನ್ ಆಯ್ತು. ಆ ಚಿತ್ರದ ಹೆಸರೇ ಹ್ಯಾಟ್ರಿಕ್ ಹೊಡೀಮಗ. ಶಿವರಾಜ್​ ಕುಮಾರ್ ಈ ಚಿತ್ರದ ಹೀರೋ. ಆದರೆ, ಇಲ್ಲಿ ಜೋಗಿ ಥರ ಕಾಣಿಸಿಕೊಂಡೋರು ಸಾಧು ಕೋಕಿಲಾ. ಅಮ್ಮನ ಪಾತ್ರದಲ್ಲಿ ನಟಿ ಜಯಮ್ಮ ಇದ್ದರು..
ಜೋಗಿ ಚಿತ್ರದ ಶಿವಣ್ಣನ ಮನೋಜ್ಷ ಅಭಿನಯ, ಪಾತ್ರ ಬೀರಿರೋ ಪ್ರಭಾವ ತುಂಬಾನೆ ಇದೆ. ಚಿತ್ರದ ಪ್ರತಿ ಸೀನ್, ಪ್ರತಿ ಡೈಲಾಗ್, ಕಾಸ್ಯೂಮ್, ಲಾಂಗ್ ಹಿಡಿಯೋ ಸ್ಟೈಲ್ ಎಲ್ಲವೂ ಅನುಕರಣೆ ಆಗಿವೆ. ಹ್ಯಾಟ್ರಿಕ್ ಹೊಡೀಮಗ ಇಡೀ ಚಿತ್ರದಲ್ಲಂತೂ ಸಾಧು ಕೋಕಿಲಾ, ಜೋಗಿಯನ್ನ ಮೈಮೇಲೆ ಎಳೆದುಕೊಂಡಿದ್ದಾರೆ ನೋಡಿ...
ಹ್ಯಾಟ್ರಿಕ್ ಹೊಡೀಮಗ ಚಿತ್ರದ ಸಾಧು ಕೋಕಿಲ ಹಫ್ತಾ ಕೇಳೋ ವಿಷ್ಯೂಲ್ ಫ್ಲೋ...

ಶಿವರಾಜ್ ಕುಮಾರ್ ಅಭಿನಯದ ‘ಓಂ’ ಸಿನಿಮಾದ ದಾಖಲೆ ಯಾರೂ ಮುರಿಯೋಕೆ ಸಾಧ್ಯವೇ ಇಲ್ಲ ಬಿಡಿ. ಯಾಕೆಂದ್ರೆ, ಓಂ ಇನ್ನೂ ಪ್ರದರ್ಶನ ಕಾಣ್ತಿದೆ. ಅಂತಹ ಓಂ ಚಿತ್ರದ ಶಿವಣ್ಣನ ಪಾತ್ರ ಎಲ್ಲರನ್ನೂ ಕಾಡಿತ್ತು.
ಪ್ರೇಮಾ ಪುಟ್ಟ ಬಟ್ಟೆ ಹಾಕಿಕೊಂಡಾಗ, ಶಿವಣ್ಣನ ಚೇಲಾಗಳು ಅವಳನ್ನ ಕರೆದೊಯ್ತು ಬೇರೆ ಬಟ್ಟ ಹಾಕಿಸೋ ಸೀನ್​ ವಿಷ್ಯೂಲ್ ಫ್ಲೋ..
ಓಂ ಚಿತ್ರದ ಈ ವಿಶೇಷ ಸನ್ನಿವೇಶ ಪ್ರೇಮಿಯ ಉತ್ಕಟತೆಯನ್ನ ತೋರಿತ್ತು. ಹಂಗತ ಈ ಸನ್ನಿವೇಶವನ್ನ ಹಂಗೆ ಬಿಡಲು ಸಾಧ್ಯವೇ. ನಟ ಸಾಧು ಕೋಕಿಲಾ, ಹುಬ್ಬಳಿ ಹೆಸರಿನ ಚಿತ್ರದಲ್ಲಿ ಓಂ ಚಿತ್ರದ ಸತ್ಯನ ಗೆಟಪ್ ಹಾಕಿಯೇ ಬಿಟ್ಟರು. ಪ್ರೀತಿಸೋ ರಕ್ಷಿತಾ ಪುಟ್ಟ ಬಟ್ಟೆ ಧರಿಸಿದಾಗ, ಚೇಲಾಗಳು ರಕ್ಷಿತಾರನ್ನ ಸಾಧು ಬಳಿ ಕರೆ ತಂದೇ ಬಿಟ್ಟರು..
ಶಿವರಾಜ್ ಕುಮಾರ್ ಅಭಿನಯ ಕಲೆನೆ ಹಂಗೆ. ಎಂತವರನ್ನೂ ಹಿಡಿದಿಡುತ್ತದೆ. ಅನುಕರಣೆ ಮಾಡೋವಂತೆ ಮಾಡಿ ಬಿಡುತ್ತದೆ. ಅದು ಶಿವನ ಖದರ್. ವರ್ಷ...ವರ್ಷವೂ ವಿಶೇಷ ಪಾತ್ರಗಳ ಮೂಲಕ ಜನರ ಪ್ರೀತಿಯನ್ನ ಗಳಿಸುತ್ತಲೇ ಸಾಗ್ತಿರೋ ಶಿವಣ್ಣನ ಬರ್ತ್ ಡೇ ಸ್ಪೆಷಲ್ ಆಗಿ, ನಮ್ಮ ಈ ಸ್ಟೆಷಲ್ ಸ್ಟೋರಿ . ಹ್ಯಾಪಿ ಬರ್ತ್ ಡೇ ಶಿವಣ್ಣ..

-ರೇವನ್

Comments