ಕಲಾಕಾರ್​ ಕುತ್ತಾ..!

ಕಲಾಕಾರ್​ ಕುತ್ತಾ..!

ಬುಗಿ ‘ಉಗ್ಗಿ’ ಶ್ವಾನ...!!  ಚೇತೋ ಹಾರಿ ಶ್ವಾನದ ಸೂಪರ್ ಸ್ಟೋರಿ..! ಸೂಪರ್ ಸ್ಟಾರ್​ ಶ್ವಾನ ‘ಉಗ್ಗಿ’  ಸೂಪರ್ ಕಹಾನಿ.ಅಭಿನಯ ಗೊತ್ತಿರೋ ಪ್ರತಿಭಾವಂತ ಶ್ವಾನ. ಉಗ್ಗಿ ಈಗಿಲ್ಲ ಆದರೆ, ಸಿನಿಮಾದಲ್ಲಿ ಇನ್ನೂ ಜೀವಂತ.
----
ಬೆಳ್ಳಿ ತೆರೆ ಮೇಲೆ ಅನೇಕ ಸೂಪರ್ ಸ್ಟಾರ್​ಗಳು ಬಂದು ಹೋಗಿದ್ದಾರೆ. ತಮ್ಮ ಪ್ರತಿಭೆಯಿಂದಲೂ  ಶಾಶ್ವತ ಜಾಗ ಮಾಡಿಕೊಂಡಿದ್ದಾರೆ. ಆದರೆ ನಾವು ನಿಮಗೆ ಒಬ್ಬ ಸೂಪರ್ ಸ್ಟಾರ್​​ನ ಪರಿಚಯ ಮಾಡಿಸ್ತಿವೀ. ಈತನಿಗೆ ಮಾತು ಬರೋದಿಲ್ಲ. ಮನುಷ್ಯರ ರೂಪವೂ ಇವನಿಗಿಲ್ಲ. ಇರೋದು ನಾಲ್ಕು ಕಾಲು. ಹೇಳೋ ಮಾತು ಅರ್ಥ ಆಗುತ್ತದೆ. ಆತನ ಹೆಸರು ಉಗ್ಗಿ. ಹಾಲಿವುಡ್​ನಲ್ಲಿ ಈತ ಸೂಪರ್ ಸ್ಟಾರ್​...ಬನ್ನಿ ಮೀಟ್ ಮಾಡೋಣ..
ಉಗ್ಗಿ ಹೆಸರಿನ ಶ್ವಾನದ ವಿಷ್ಯೂಲ್ ಫ್ಲೋ..
ಇದೇನಿದು. ಶ್ವಾನದ ಫೋಟೋ ತೋರ್ತೀದ್ದಿ ಅನ್ಕೋಬೇಡಿ. ನಾವು ಹೇಳಿದ್ದು ಇದೇ ಸೂಪರ್ ಸ್ಟಾರ್​ ಬಗ್ಗೆ. ಈ ಸೂಪರ್ ಸ್ಟಾರ್ ಎಷ್ಟು ಫೇಮಸ್ ಅಂದ್ರೆ, ಫುಟ್​ ಪ್ರಿಂಟ್​ ಜತನದಿಂದ ಇಡೋವಷ್ಟು ಈತ ಫೇಮಸ್. ಇನ್ನೂ ಒಂದು ವಿಚಾರ ಹೇಳೊದಾದರೆ, ಈತನದೇ ಒಂದು ಜೀವನ ಚರಿತ್ರೆ ಪುಸ್ತಕ ಹೊರ ಬಿದ್ದಿದೆ. ಮೈ ಸ್ಟೋರಿ ಅನ್ನೋ ಈ ಪುಸ್ತಕ ತಯಾರಿ ಹ್ಯಾಗಿತ್ತು ಅನ್ನೋದಕ್ಕೆ ಒಂದು ವೀಡಿಯೋನೂ ಇದೆ..
ಈ ಸೂಪರ್ ಸ್ಟಾರ್ ಅಂತಿಂತ ಕಲಾವಿದ ಅಲ್ಲ. ಒಂದೇ ಒಂದು ಸನ್ನೆಗೆ ಮನೋಜ್ಷ ಅಭಿನಯವನ್ನೇ ತೋರಬಲ್ಲ. ಅಭಿನಯಿಸಿದ್ದ ಚಿತ್ರಗಳು ಪ್ರಶಂಸೆಗೂ ಒಳಪಟ್ಟಿವೆ. ಫ್ರೆಂಚ್ ಸಿನಿಮಾ ‘ದಿ ಆರ್ಟಿಸ್ಟ್’ ಅಂತೂ ಐದು ವಿಭಾಗದಲ್ಲಿ ಆಸ್ಕರ್ ಪಡೆದಿದೆ. ಅಂತಹ ಅದ್ಭುತ ಚಿತ್ರದಲ್ಲಿ ಈ ಸೂಪರ್ ಸ್ಟಾರ್ ಉಗ್ಗಿ ಅಭಿನಯ ಪ್ರಶಂಸನೀಯ....
ದಿ ಆರ್ಟಿಸ್ಟ್ ಚಿತ್ರಕ್ಕೆ ಆಸ್ಕರ್ ಬಂದಾಗ, ತಂಡದ ಜೊತೆಗೆ ಉಗ್ಗಿ ಕೂಡ ಹೋಗಿದ್ದ. ರೆಡ್ ಕಾರ್ಪೆಟ್​ ಮೇಲೆ ಈತ ಬಲು ಠೀವಿಯಿಂದಲೇ ಹೆಜ್ಜೆ ಹಾಕಿದ್ದ. ಆ ವೈಭವ ನೋಡಬೇಕು. ಎರಡು ಕಣ್ಣುಗಳೂ ಸಾಲದು..
ಉಗ್ಗಿ ಪ್ರತಿಭಾವಂತ ಶ್ವಾನ. ಜಾಕ್ ರಸ್ಸಲ್ ಟೆರ್ರಿರ್ ಜಾತಿಗೆ (Jack Russell Terrier) ಸೇರಿದ್ದವ ಅಂತಹ ಹೆಚ್ಚೇನೂ ಎತ್ತರವಲ್ಲದ ಉಗ್ಗಿ, ಕೇವಲ 7.3 ಕೆಜಿ. ಹುಟ್ಟಿದ್ದು ಕ್ಯಾಲಿಫೊರ್ನಿಯಾ. ವೃತ್ತಿಯಿಂದ ಆಕ್ಟರ್​. ವಯಸ್ಸು 13.ಅಭಿನಯಿಸಿದ್ದ ಚಿತ್ರಗಳು, ದಿ ಆರ್ಟಿಸ್ಟ್ ಮತ್ತು ವಾಟರ್ ಫಾರ್ ಎಲಿಫೆಂಟ್ಸ್. ಪುಟ್ಟ ಪರದೆಯಲ್ಲೂ ಕಾಣಿಸಿಕೊಂಡಾಗಿದೇ ಉಗ್ಗಿ. ಆದರೆ, ಈಗ ಈ ಉಗ್ಗಿ ನಮ್ಮ ನಡುವೆ ಇಲ್ಲ....
ಉಗ್ಗಿ ಸತ್ತು ಹೋಗಿದ್ದಾನೆ. ಕೇವಲ 13 ವರ್ಷಕ್ಕೆನೇ ಈತ ತೀರಿ ಹೋಗಿದ್ದಾನೆ. ಜನನೇಂದ್ರಿಯದ ಗ್ರಂಥಿಯಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿತ್ತು. ಅದರಿಂದ ಬಳಲಿ ಆಗಸ್ಟ್-7 ರಂದು ನಿಧನ ಹೊಂದಿದ್ದಾನೆ. ಈತನ ಮಾಲೀಕ ಒಮರ್ ವೋನ್ ಮುಲ್ಲರ್, ಫೇಸ್ ಬುಕ್​ ನಲ್ಲಿ ಈತನ ನಿಧನ ವಾರ್ತೆಯನ್ನ ತಿಳಿಸಿದ್ದಾರೆ. ತಿಳಿಸಿದ ಕೂಡಲೇ ಉಗ್ಗಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ..
ಉಗ್ಗಿ ಎಲ್ಲ ಶ್ವಾನದ ಥರದ ಶ್ವಾನ ಅಲ್ಲವೇ ಅಲ್ಲ. ತುಂಬಾ ತುಂಟ. ಭಯ ಅನ್ನೋದು ಈತನ ಬಳಿಯೂ ಸುಳಿಯುತ್ತಿರಲಿಲ್ಲ. ಏನೇ ಸದ್ದಾದರೂ ಹೆದರುತ್ತಿರಲಿಲ್ಲ. ಈ ನೇಚರ್​ ನಿಂದಲೇ, ಈ ಮೊದಲಿನ ಈತನ ಇಬ್ಬರು ಮಾಲೀಕರು ಈತನನ್ನ ಅನಿಮಲ್ ಸೆಲ್ಟರ್​ಗೆ ಕಳಿಸೋರಿದ್ದರು. ತರಬೇತುದಾರ ಓಮರ್ ಈತನನ್ನ ಸಾಕಿ ತರಬೇತಿಯನ್ನೂ ಕೊಟ್ಟ. ಅದಕ್ಕೇನೆ, ದಿ ಆರ್ಟಿಸ್ಟ್ ಚಿತ್ರದಲ್ಲಿ ಉಗ್ಗಿ ಲೀಲಾಜಾಲವಾಗಿ ಅಭಿನಯಿಸೋಕೆ ಸಾಧ್ಯವಾಗಿದ್ದು...
ಉಗ್ಗಿ ಇನ್ನಿಲ್ಲ ಅನ್ನೋ ಬೇಸರ ಎಲ್ಲ ಉಗ್ಗಿ ಪ್ರೇಮಿಗಳಲ್ಲೂ ಇದೆ. ಆದರೆ, ಉಗ್ಗಿ  ಮಾಲೀಕ ಒಮರ್ ವೋನ್​ ಮುಲ್ಲರ್ ಉಗ್ಗಿಯನ್ನ ಮಿಸ್ ಮಾಡಿಕೊಳ್ತಿದ್ದಾರೆ. ತುಂಬಾನೇ...
-ರೇವನ್

Comments