ಕನಸುಗಳು
ಕನಸುಗಳು
ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.
ಹಗಲುಗನಸಲ್ಲವಿದು ಗೆಳತಿ
ಮೃದುವಾದ ಮನಸ್ಸು
ನನ್ನ ಮನಕೆ ನೀನೇ ಒಡತಿ
ಇದು ಆಗಲಿ ನನಸು
ಭಾರದ ಹೆಜ್ಜೆ ಇಡಬೇಡ
ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು
Rating