ನಾಚಿಕೆ ಇಲ್ಲದ ಸಾಲುಗಳು - 8

ನಾಚಿಕೆ ಇಲ್ಲದ ಸಾಲುಗಳು - 8

ಸೋಮಾರಿತನಕ್ಕಿರುವಷ್ಟು ಚೈತನ್ಯ,,,
ಬೇರಾವುದಕ್ಕೂ ಇಲ್ಲ,
ಬಹಳ ಬೇಗ ಆವರಿಸಿಕೊಂಡುಬಿಡುತ್ತದೆ.

***************************************************
ಯುದ್ಧದಲ್ಲಿ ಸತ್ತವರಾರೂ ಸ್ವರ್ಗ ಸೇರಲಾರರೂ ಎಂದು,
ಎಲ್ಲ ಧರ್ಮ ಗ್ರಂಥಗಳೂ ಬೋದಿಸಬೇಕಿತ್ತು,
ಬಂದೂಕು ತೆಪ್ಪಗಾಗುತ್ತಿತ್ತು.

***************************************************
ಕಣ್ಣಿನಲ್ಲಿ ಕನಸು ಬಚ್ಚಿಡುತ್ತಿದ್ದ ಹುಡುಗಿಯರು 
ಈಗ ಮಾಯವಾಗಿದ್ದಾರೆ,
ಎಲ್ಲರ ಕಣ್ಣಲ್ಲೀಗ ಬರಿಯ ಕನ್ನಡಕ, 

***************************************************
ತಕ್ಷಣಕ್ಕೆ ಜಗತ್ತಿನ ದ್ವೇಶವೆಲ್ಲ 
ಪ್ರೀತಿಯಾಗಿ ಮಾರ್ಪಾಡದರೆ,
ಇಲ್ಲಿ ಪ್ರೇಮ ಬಿಟ್ಟು ಬೇರೇನು ಉಳಿಯುವುದಿಲ್ಲ,,,,

***************************************************
ಶಿಕ್ಷಣ ವ್ಯಾಪಾರ ಆದ ಮೇಲೆ
ಶಿಕ್ಷಕರೂ ವ್ಯವಹರಿಸುತ್ತಿದ್ದಾರೆ,
ಪ್ರಪಂಚ ನೋಟುಗಳ ಮೇಲೆ ನಿಂತಿದೆ 

***************************************************
ಗುಣಿಸಿ ಬಾಗಿಸಿ ಕೂಡಿಸಿ ಕಳೆದ ಮೇಲೂ
ಇರುವುದೊಂದೆ ಬದುಕು, 
ಉಳಿದದ್ದೆಲ್ಲ ಬರಿ ಛಾಯೆ.

***************************************************
ಪ್ರಪಂಚದ ಸುಖಕ್ಕಾಗಿ ಸತ್ತವ, ಬದುಕಿದ್ದಾನೆ
ತನ್ನ ಸುಖಕ್ಕಾಗಿ ಬದುಕಿದವ, ಸತ್ತಿದ್ದಾನೆ 

***************************************************
ಚರ್ಮವನ್ನು ಸದಾ ಹೊಳೆಯುವಂತೆ ಮಾಡುತ್ತಾ
ಬಣ್ಣ ಬಳಿಯುತ್ತಿದ್ದ ತರುಣಿಯೀಗ,
ತಾಯಿಯ ಸುಕ್ಕುಗಟ್ಟಿದ ಚರ್ಮದ ಮುಂದೆ ಸೋತಿದ್ದಾಳೆ 

***************************************************
ತೆವಲುಗಳ ಹಳಿಯಮೇಲೆ ಬದುಕಿನ ಬಂಡಿ 
ಹೋಗಲು ಸಾವಿರಾರು ದಾರಿಗಳು.
ಸ್ಪಷತೆ ಅಪ್ಪನ ಕಾಲದಲ್ಲಿ ಇತ್ತಂತೆ, ಈಗಿಲ್ಲ.

***************************************************
ದಿಗಂಬರನಾದ ಮಹಾಮುನಿ,
ಬಟ್ಟೆ ಹಾಕಿದವರ ಕಂಡು ನಗುತ್ತಿದ್ದಾನೆ,
ಮುಚ್ಚಿಡುವುದು ಏನನ್ನ???? ಎಷ್ಟು ದಿನ!!!!

***************************************************
ಸಿಮೆಂಟಿನ ಗಟ್ಟಿತನಕ್ಕೆ ಸರಿಸಮವಾದ 
ಮಾನವೀಯತೆ ಒಂದು ಬೆಳೆಯಬೇಕಿಲ್ಲಿ.
ಜಗತ್ತು ಗಟ್ಟಿಯಾಗಲು.

- ಜೀ ಕೇ ನ 

Comments

Submitted by kavinagaraj Fri, 09/11/2015 - 08:25

ಎರಡನೆಯದು ಚರ್ಚಾರ್ಹ ವಿಷಯ. ಈಗ ಯುದ್ಧರ ರೀತಿ-ನೀತಿಗಳೇ ಬದಲಾಗಿವೆ. ಪರೋಕ್ಷ ಯುದ್ಧದ ಹಾವಳಿ ಜಾಸ್ತಿ!
ಕೊನೆಯದು: ಈಗ ಸಿಮೆಂಟೂ ಗಟ್ಟಿಯಾಗಿರುವುದಿಲ್ಲ, ಕಲಬೆರಕೆಯಿಂದಾಗಿ!! :)