ಧೀರೆ..ಧೀರೆ ರೋಮ್ಯಾನ್ಸ್​​..!

ಧೀರೆ..ಧೀರೆ ರೋಮ್ಯಾನ್ಸ್​​..!

ಕ್ಲಾಸಿಕ್ ಹಾಡು...ಸೂಪರ್ ನೋಡು..!ಆಗಿನ ಹಾಡಿಗೆ ಈಗೀನ ಸುಂದರ ಸ್ಪರ್ಶ.90 ರ ಆಶಿಕಿ ಚಿತ್ರ ಹಾಡು ಮರುಸೃಷ್ಠಿ. ಧೀರೆ..ಧೀರೆ ಸಾಂಗ್ ಆಯ್ತು ವೈರಲ್..! ಹನಿ ಸಿಂಗ್ ಸಂಗೀತ ಮತ್ತು ಹಾಡು.ಗುಲ್ಶನ್ ಕುಮಾರ್ ಹೊಸ ಹಾಡು ಡೆಡಿಕೇಟ್​.ಹೃತಿಕ್-ಸೋನಂ ಮೇಲೆ ಹಾಡು ಚಿತ್ರಿತ.ಟರ್ಕಿಯ ಸುಂದರ ತಾಣದಲ್ಲಿ ಶೂಟಿಂಗ್​.ಅಹ್ಮದ್ ಖಾನ್ ಹಾಡಿನ ಡೈರೆಕ್ಟರ್​.
-----
ಹಾಡು ಹಳೇಯದಾದರೇನೂ ಭಾವ ನವನವೀನ. ಅದನ್ನ ಚೆನ್ನಾಗಿ ಮಾಡಿದರೆ ಮಾತ್ರ. ಆ ಒಂದು ಮಾತನ್ನ ಸಾಕ್ಷೀಕರಿಸೋವಂತೆ ಈಗೊಂದು ಹಾಡು ಮರುಸೃಷ್ಟಿಯಾಗಿದೆ. 90 ರ ದಶಕದ ಆ ಹಾಡು ಆಶಿಕಿ ಚಿತ್ರದ್ದು. ಕುಮಾರ್ ಸಾನು ಹಾಡಿದ್ದರು. ಅನುರಾಧಾ ಪೋಡ್ವಾಲ್ ಜೊತೆಯಾಗಿದ್ದಾರೆ.ಮೊದಲು ಆ ಗೀತೆ ಬಗ್ಗೆ  ತಿಳಿಯೋಣ ಬನ್ನಿ.

ಧೀರೆ...ಧೀರೆ ಸೇ ಮೇರೆ ಜಿಂದಗಿಮೇ ಆನಾ...!
ಆಶಿಕಿ ಸಿನಿಮಾ. 1990 ಆಗಸ್ಟ್-17 ರಂದು ತೆರೆ ಕಂಡಿತ್ತು. ಸರಿ ಸುಮಾರು 12 ಹಾಡುಗಳಿದ್ದ ಚಿತ್ರ ಇದು.  ಇಡೀ ಚಿತ್ರದಲ್ಲಿ ಹಾಡುಗಳದ್ದೇ ದರ್ಬಾರು. ಪ್ರತಿ ಸನ್ನಿವೇಶಕ್ಕೂ ಒಂದೊಂದು ಹಾಡು. ಒಂದು ಭಾವ.ಒಂದೊಂದು ಸೌಂದರ್ಯ. ಧೀರೆ..ಧೀರೆ ಹಾಡನ್ನೇ ತೆಗೆದುಕೊಳ್ಳೀ ಎಷ್ಟು ಮದುರವಾಗಿದೆ.

ಫೀಲ್ ಗುಡ್..ಫೀಲ್ ಲವ್ಲಿ..ಲವ್ಲಿ...!
90 ದಶಕದ ಮುಂಬೈ ನಗರಿಯ ಜೂಹು ಬೀಚ್​ ಬಳಿಯೂ ಈ ಹಾಡು ಚಿತ್ರೀಕರಣವಾಗಿತ್ತು. ಶಾಂತ ಚಿತ್ತ ಭಾವ ಮೂಡಿಸೋ ಈ ಗೀತೆ, ಪ್ರೀತಿ-ಪ್ರೇಮದ ಅಲೆಯೋರಿಗೆ ಪ್ರೀತಿಯ ಪಾಠದಂತೆ ಕೇಳಿಸಿತ್ತು. ರಾಹುಲ್ ರಾಯ್ ಮತ್ತು ಅನು ಅಗರವಾಲ್ ಈ ಹಾಡಲ್ಲಿ ಪ್ರೀತಿಯ ಪರಿಯನ್ನ, ಪಾತ್ರಗಳಾಗಿ ಪರಸ್ಪರ ವ್ಯಕ್ತಪಡಿಸಿಕೊಂಡಿದ್ದರು.

ಈ ಗೀತೆಯಲ್ಲಿ ಅನು ಅಗರವಾಲ್ ಲುಕ್ಸ್ ಸೋ ಬ್ಯೂಟಿಫುಲ್​..!
ನದೀಮ್-ಶ್ರವಣ ಸಂಗೀತದಲ್ಲಿ ಬಂದ ಈ ಗೀತೆಯ ತುಂಬಾ ಪ್ಯಾಪೂಲರ್ ಆಗಿತ್ತು. ಯುವಕರೆಲ್ಲ ಈ ಹಾಡನ್ನ ಗುನುಗಿದ್ದರು. ಪದಗಳ ಅರ್ಥ ತಿಳಿಯದ್ದೇ ಇದ್ದರೂ, ಸಂಗೀತ ಮನಸ್ಸಿನಲ್ಲಿ ಉಳಿದಿತ್ತು. ರವಿ ಮಲ್ಲಿಕ್ ಆಗ ಈ ಗೀತೆಯನ್ನ ಬರೆದುಕೊಟ್ಟಿದ್ದರು..

ಹಾಡಿನ ಸಾಲುಗಳು ನಿಧಾನವಾಗಿ ಹೃದಯಕ್ಕೆ ಇಳಿಯುತ್ತವೆ..!
ಧೀರೆ..ಧೀರೆಸೆ ಹಾಡು ಈಗ ಮತ್ತೆ ಗುಂಗು ಹಿಡಿಸಿದೆ. ಅಪ್ ಲೋಡ್ ಮಾಡಿದ ದಿನದಿಂದಲೂ ಕ್ರೆಜ್ ಹೆಚ್ಚಿಸಿರೋ ಈ ಗೀತೆಯನ್ನ ನಾಲ್ಕೇ ನಾಲ್ಕು ದಿನಕ್ಕೆ 5 ಮಿಲಿಯನ್ ಜನ ವೀಕ್ಷಿಸಿದ್ದಾರೆ.ಜನಕ್ಕೆ ಅಷ್ಟು ಇಷ್ಟವಾಗಿರೋ ಈ ಗೀತೆ ಆಶಿಕಿ ಚಿತ್ರದ ಗೀತೆ ಏನೋ ಹೌದು. ಆದರೆ, ಇದು ರೀಕ್ರಿಯೇಟೆಡ್ ಸಾಂಗ್. ಹಳೇ ಹಾಡಿಗೆ ನಿಜಕ್ಕೂ ಹೊಸ ರೂಪವೇ ಬಂದಿದೆ.

ಧೀರೆ..ಧೀರೆ ಸೆ ಹಾಡು...ಹೊಸ..ಹೊಸ ರೂಪ..!
ಧೀರೆ..ಧೀರೆ ಸೇ. ಇದು ಒಂಟಿ ವೀಡಿಯೋ ಹಾಡಿನ ಟೈಟಲ್. ಹಾಗಂತ ಇಡಿ ಹಾಡಿನ ರಿಲೀಕೂ ಹಂಗೇ ಶುರುವಾಗುತ್ತದೆ ಅನ್ಕೋಬೇಡಿ. ಹಳೇ ಹಾಡಿನ ಲಿರಿಕನ್ನೇ ಗಾಯಕ ಹನಿ ಸಿಂಗ್ ಚೇಂಜ್ ಮಾಡಿದ್ದಾರೆ. ಆರಂಭದಲ್ಲಿ ಹಿಂಗೆ ಪಂಜಾಬಿ ಲೈನ್ಸ್ ಬರುತ್ತವೆ.

ಹನಿ ಸಿಂಗ್ ಬರೆದ ಲಿರಿಕ್ಕು...!
ಧೀರೆ..ಧೀರೆ ಸೇ ಹಾಡಲ್ಲಿ ಕೇವಲ ಲಿರಿಕ್ ಅಲ್ಲ. ಟ್ಯೂನ್ ಕೂಡ ಬದಲಾಗಿದೆ. ಕೇಳುಗರಿ ಇದು ಹಳೇ ಹಾಡಿನ ಒಂದಷ್ಟು ಭಾವ ಕೊಡುತ್ತದೆ. ಆದರೆ, ನೋಡುಗರಿಗೆ ಹೊಸ ಕಥೆಯನ್ನೇ ಹೇಳುತ್ತದೆ. ಯಾಕೆಂದರೆ, ಇಲ್ಲಿ ನಟ ಹೃತಿಕ್ ರೋಷನ್ ಮತ್ತು ಸೋನಂ ಕಪೂರ್ ನವನವೀನ ಕಥೆಗೆ ಅಭಿನಯಿಸಿದ್ದಾರೆ..

ಗ್ರೀಕ್ ಗಾಡ್ ಹೃತಿಕ್...ಬ್ಯೂಟಿಫುಲ್ ಸೋನಂ ಅಭಿನಯ..!
ಆದರೆ, ಈ ಕ್ಲಾಸಿಕ್ ಹಾಡಿಗೆ ಈಗ ಯಾಕೆ ಹೊಸ ರೂಪ ಅನ್ನೊ ಪ್ರಶ್ನೆ ಮೂಡುತ್ತದೆ. ಉತ್ತರವಾಗಿ ಅಲ್ಲಿ ಬರೋದು ಅರ್ಪಣೆ . ಚಿತ್ರದ ನಿರ್ಮಾಪಕ ಮತ್ತು ಟಿಸೀರಿಸ್ ಮಾಲೀಕ ದಿವಂಗತ ಗುಲ್ಶನ್ ಕುಮಾರ್ ಸವಿ ನನೆಪಿಗಾಗಿ ಅವರ ಪುತ್ರ ಭೂಷಣ್​ ಕುಮಾರ್ ಈ ಗೀತೆಯನ್ನ ರೀಕ್ರಿಯೇಟ್ ಮಾಡಿದ್ದಾರೆ. ಟರ್ಕಿಯ ಸುಂದರ ತಾಣದಲ್ಲಿ ಇದು ಚಿತ್ರಿಕರಣವಾಗಿದೆ..

ಟರ್ಕಿಯ ಸುಂದರ ತಾಣದಲ್ಲಿ ಧೀರೆ..ಧೀರೆ ಹಾಡು...!
ಸೆಪ್ಟೆಂಬ್-1 ರಂದು ಈ ಗೀತೆ ರಿಲೀಸ್ ಆಗಿದೆ. ಜನರ ಮೆಚ್ಚುಗೇನೂ ಪಡೀತಿದೆ. ಯುವಕರಂತೂ ಹಳೇ ಹಾಡಿನ ಗುಂಗಿನೊಂದಿಗೆ ಈ ಹೊಸ ಹಾಡಿಗೂ ತಲೆದೂಗುತ್ತಿದ್ದಾರೆ. ಗುನುಗುತ್ತಿದ್ದಾರೆ.ನೀವೂ ಇನ್ನೊಮ್ಮೆ ..ಮತ್ತೊಮ್ಮೆ ಕೇಳೀ ಎಂಜಾಯ್ ಮಾಡಿ. ಯುಟ್ಯೂಬ್ ಮುಖ ಪುಟದಲ್ಲಿ ಧೀರೆ..ಧೀರೆ ವೀಡಿಯೋ ಹಾಡು ರಾರಾಜಿಸುತ್ತಿದೆ..
-ರೇವನ್