ವಿರೋದಿಸುವುದೊಂದೇ ವಿರೋದ ಪಕ್ಷದ ಕೆಲಸವೇ?

ವಿರೋದಿಸುವುದೊಂದೇ ವಿರೋದ ಪಕ್ಷದ ಕೆಲಸವೇ?

                ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ,ಗುಜರಾತ್, ಪಶ್ಚಿಮ ಬಂಗಾಳ, ಒರಿಸ್ಸಾ ,ಮಧ್ಯಪ್ರದೇಶ  ಭೀಕರ ಮಳೆಯಿಂದ ತತ್ತರಿಸಿದವೆ.ಅಲ್ಲಿನ ಎಷ್ಟೋ ಹಳ್ಳಿಗಳು ಜಲಾವೃತಗೊಂಡಿದಾವೆ.ಇನ್ನೂ ದಕ್ಷಿಣ  ಭಾರತದಲ್ಲಿ ಭೀಕರ ಬರಗಾಲದಿಂದ ಸಾವಿರಾರು ರೈತರು  ಆತ್ಮಹತ್ಯೆ  ಮಾಡಿಕೊಳ್ಳುತ್ತಿದ್ದಾರೆ. ದೇಶದ ಮುಖ್ಯವಾದ ಸಮಸ್ಯೆಗಳಾದ ನಿರುದ್ಯೋಗ, ಬಡತನ,ಶುದ್ದ ಕುಡಿಯುವ ನೀರಿನ ಸಮಸ್ಯೆ,ಭ್ರಷ್ಟಾಚಾರ, ಭಯೋತ್ಪಾದನೆ, ಪಾಕಿಸ್ತಾನವು ಪದೇ ಪದೇ ಗಡಿ ರೇಖೆಯಲ್ಲಿ ಕದನ ವಿರಾಮ ಉಲಂಘಣೆ ಮಾಡುತ್ತಿದೆ, ನದಿಗಳ ಜೋಡಣೆ, ನದಿಗಳ ಹುಳು ತೆಗೆಯುವುದು, ,ಮಹಿಳೆಯರ ಸುರಕ್ಷತೆ,ಹೀಗೆ  ಪಟ್ಟಿ ಮಾಡುತ್ತಾ ಹೋದರೆ ಮುಗಿಯೋದಿಲ್ಲ.
                    ಚರ್ಚಿಸಲು ಇಷ್ಟೆಲ್ಲಾ ಸಮಸ್ಯೆಗಳಿವೆ  ಆದರೆ ಈ ವರ್ಷದ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಎರಡು ಸದನಗಳಲ್ಲಿ ಒಂದು  ದಿನವೂ ಯಾವುದೇ ವಿಷಯದ ಬಗ್ಗೆ ಚರ್ಚೆ  ನಡೆಯಲಿಲ್ಲ .ವಿರೋಧ ಪಕ್ಷಗಳ ಸದಸ್ಯರು ಲಲಿತ ಮೋದಿ ಪ್ರಕರಣದಲ್ಲಿ  ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜರವರ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇರವರ ,ಹಾಗೂ  ವ್ಯಾಪಂ  ಹಗರಣದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಪೃಥ್ವಿರಾಜ ಸಿಂಗ್ ಛವಾಣರವರ ರಾಜೀನಾಮೆಗೆ ಪಟ್ಟು ಹಿಡಿದು ಸಂಸತ್ತಿನಲ್ಲಿ ಗದ್ದಲವನೆಬ್ಬಿಸಿ ಪ್ರತಿಭಟನೆ ನಡೆಸಿದರು. ಆದರೆ ಆಡಳಿತರೂಡ ಎನ್.ಡಿ.ಎ ಸರಕಾರವು ಮೂವರನ್ನು ಕ್ಲೀನ್ ಚೀಟ್  ನೀಡಿ ವಿರೋಧ ಪಕ್ಷಗಳ ಬೇಡಿಕೆಯನ್ನು ತಲಿಹಾಕಿತ್ತು.ಇವರಿಬ್ಬರ ಜಗಳದಲ್ಲಿ ಇಡೀ ಸಂಸತ್ತಿನ  ಮಳೆಗಾಲದ ಅಧಿವೇಶನವನ್ನು ಒಂದು ದಿನವೂ ಯಾವ ಚರ್ಚೆಯು ನಡೆಯದೆ ಹಾಳಾಯಿತು. 

         ಸಂಸತ್ತಿನಲ್ಲಿ ಪ್ರತಿ ದಿನವು ಗಲಾಟೆ, ಗದ್ದಲ, ಪ್ರತಿಭಟನೆ, ಅಧಿವೇಶವನದಿಂದ ಹೊರನಡೆಯುವುದು ,ಮೂಲಕ ಸಂಸತ್ತಿನ ಅಮೂಲ್ಯವಾದ ಸಮಯವನ್ನು ವ್ಯರ್ಥವಾಯಿತು.ಚರ್ಚೆಯನ್ನು ಮಾಡುವ ಮನಸ್ಸು ಯಾವ ಪಕ್ಷಗಳಿಗು ಇರಲಿಲ್ಲ. ರಾಷ್ಟ್ರಪತಿಯವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ನಾಡಿನ ಜನತೆಯನ್ನು ಉದ್ದೇಶಿಸಿ ನೀಡುವ ಭಾಷಣದಲ್ಲಿಯು ಸಂಸತ್ತಿನಲ್ಲಿ ಸದಸ್ಯರ ನಡುವಳಿಕೆ ಬಗ್ಗೆ ತುಂಬಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.ಸಂಸತ್ತು ಒಂದು ಯುದ್ಧ ಭೂಮಿಯನ್ನಾಗಿ  ಪರಿವರ್ತನೆಗೊಂಡಿ,ಯಾವುದೇ ಸಮಸ್ಯೆಯ ಬಗ್ಗೆ ಚರ್ಚೆ ನಡೆಯದೆ ಹಾಳಾಗಿರುವದಕ್ಕೆ ತುಂಬಾ  ವಿಷಾದ ವ್ಯಕ್ತಪಡಿಸಿದ್ದಾರೆ.

        ಎರಡು ಸದನಗಳ ಒಂದು ನಿಮಿಷದ ವೆಚ್ಚ ೨.೫೦ ಲಕ್ಷ ರೂಪಾಯಿಗಳು, ಒಂದು ಅಧಿವೇಶನದ ಒಟ್ಟು ಹಣದ ವೆಚ್ಚ ೨೬೦ ಕೋಟಿ ರೂಪಾಯಿ,ಇಷ್ಟೊಂದು ತೆರಿಗೆದಾರರ ಹಣವು ಹಾಳಾಯಿತು. ಇದಕ್ಕೆ ಯಾರು ಕಾರಣರು ಮತದಾನ ಮಾಡಿ ಇವರನ್ನು ಆಯ್ಕೆ ಮಾಡಿದ ನಾವೆಲ್ಲರಾ?  ಅಥವಾ ನಮ್ಮ ಮಹಾನ್ ನಾಯಕರುಗಲ್ಲಾ? ಉತ್ತರ ನೀವೆ ಕಂಡುಕೊಳ್ಳಬೇಕು.

         ಭಾರತದ ಸಂವಿಧಾನದ ಪ್ರಕಾರ ವಿರೋಧ ಪಕ್ಷ ವೆಂದರೆ  ಲೋಕ ಸಭೆಯಲ್ಲಿ ಯಾವ ಪಕ್ಷವು  ಆಡಳಿತ ಪಕ್ಷಕ್ಕಿಂತ ಹಾಗೂ ಸಮ್ಮಿಶ್ರಣದ ಪಕ್ಷಗಳಿಗಿಂತ ಹೆಚ್ಚು  ಸೀಟುಗಳನ್ನು  ಹೊಂದಿರುತ್ತದೆಯೊ  ಅದನ್ನು ವಿರೋಧ ಪಕ್ಷವೆಂದು  ಕರೆಯುತ್ತಾರೆ. ಒಂದು ಪಕ್ಷವು ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು  ಕನಿಷ್ಠ ಶೇಕಡಾ ೧೦ ರಷ್ಟು ಸೀಟುಗಳನ್ನು  ಹೊಂದಿರಬೇಕು. ಅಂದರೆ ನಮ್ಮ ಲೋಕಸಭೆಯಲ್ಲಿ ಒಟ್ಟು ೫೪೩ ಸೀಟುಗಳಿಗೆ ಚುನಾವಣೆ ನಡೆಯುತ್ತದೆ.ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ಒಂದು ಪಕ್ಷವು ಒಟ್ಟು ೫೪ ಸೀಟುಗಳು ಗೆಲ್ಲಬೇಕು.

ವಿರೋಧ ಪಕ್ಷದ ಕರ್ತವ್ಯಗಳು ಮತ್ತು ಜವಾಬ್ದಾರಿಗಳು
೧) ಆಡಳಿತ ಪಕ್ಷದ ವೈಫಲ್ಯವನ್ನು ಟೀಕಿಸುವುದು ಮತ್ತು ಅದನ್ನು ಜನರ ಮುಂದೆ ತರುವುದು.
೨) ಸರಕಾರದ ದಬ್ಬಾಳಿಕೆ ಪ್ರವೃತಿಗಳನ್ನು ವಿರೋಧ ಮಾಡುವುದು.
೩) ಸರಕಾರದ ಒಳ್ಳೆಯ ಕೆಲಸವನ್ನು ಬೆಂಬಲಿಸುವುದು.
೪) ಸರಕಾರದ ತಪ್ಪು ನಿರ್ಧಾರಗಳನ್ನು ವಿರೋಧ ಮಾಡುವುದು ಮತ್ತು ಜನಾಭಿಪ್ರಾಯವನ್ನು ಸಂಗ್ರಹಿಸಿವುದು.
೫) ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುವುದು.
೬) ಸರಕಾರವು ಸಾಮಾನ್ಯ ಜನರ ಪರವಾಗಿ ಆಡಳಿತ ನಡೆಸುವ ಹಾಗೆ ನೋಡಿಕೊಳ್ಳುವುದು.
೭) ಸರಕಾರವು ಸಾಮಾನ್ಯ ಜನರ ಆಸಕ್ತಿಯ ವಿರುದ್ಧ ನಡೆಯದಾಗೆ ನೋಡಿಕೊಳ್ಳುವುದು.
೮) ಸರಕಾರದ ಒಳ್ಳೆಯ ಜನಪರ ನೀತಿಗಳನ್ನು, ದೇಶದ ಅಭಿವೃದ್ಧಿಗೆ  ಅತ್ಯವಶ್ಯಕವಾದ ನೀತಿಗಳನ್ನು ಮತ್ತು ದೇಶದ ವಿಷಯ ಬಂದಾಗ  ಪಕ್ಷ ಭೇದವನ್ನು ಮರೆತು ಸರಕಾರವನ್ನು    ಬೆಂಬಲಿಸುವುದು. 
              ಇಂಗ್ಲಿಷ್ ನಲ್ಲಿ ಒಂದು ಗಾದೆಯಿದೆ "Opposition is a watch dog of the government ". ಆದರೆ ಇಂದಿನ ವಿರೋಧ ಪಕ್ಷಗಳು ನಡೆದುಕೊಳ್ಳುವ ರೀತಿಯೆ ಬೇರೆಯಾಗಿದೆ.
ಇಂದಿನ ವಿರೋಧ ಪಕ್ಷವೆಂದರೆ - ಸರಕಾರವು ಏನೇ  ಮಾಡಿದರು ಮತ್ತು ಮಾಡಲು ಯೋಚಿಸಿದರು  ವಿರೋಧ ಮಾಡುವುದು .ಒಟ್ಟಾರೆ ಸರಕಾರವನ್ನು ವಿರೋಧಿಸುವದು.

             ಬಿ.ಜೆ.ಪಿ ಯು ವಿರೋಧ ಪಕ್ಷದಲ್ಲಿಯಿದಾಗ ಯು.ಪಿ.ಏ (UPA) ಸರಕಾರವು ಜಾರಿಗೆ ತರಲು ಯೋಚಿಸಿದ  ಏಪ್.ಡಿ.ಐ (Foreign Direct Investment – FDI) ನೀತಿಯನ್ನು ವಿರೋಧಿಸಿ  ಒಂದು ದಿನದ  ಭಾರತ ಬಂದ್  ಕರೆ ನೀಡಿ,ದೇಶಾದ್ಯಂತ ಹೋರಾಟ ಮಾಡಿತ್ತು.ಆದರೆ  ಅದೆ ಬಿ.ಜೆ.ಪಿ ಪಕ್ಷವು ಇಂದು  ಅಧಿಕಾರದಲ್ಲಿ ಬಂದಮೇಲೆ  ವಿಮಾ ಕ್ಷೇತ್ರದಲ್ಲಿ,ರಕ್ಷಣಾ ಕ್ಷೇತ್ರದಲ್ಲಿ, ಇಂಡಿಯನ್ ರೈಲ್ವೆಯಲ್ಲಿ,ಚಿಲ್ಲರೆ ಮಾರುಕಟ್ಟೆಯಲ್ಲಿ ಹೀಗೆ ಹಲವಾರು ಕ್ಷೇತ್ರದಲ್ಲಿ ಏಪ್.ಡಿ.ಐ ಅನುಮತಿ ನೀಡಿದೆ.
                ಜಿ.ಎಸ್.ಟಿ (Goods and Services Tax – GST)  ಬಿಲ್  ನ್ನು ಕೂಡ ಬಿ.ಜೆ.ಪಿ ಯು  ವಿರೋಧ ಪಕ್ಷದಲ್ಲಿದಾಗ ವ್ಯಾಪಕವಾಗಿ ವಿರೋಧಿಸಿತ್ತು  ಆದರೆ ಅದೇ ಬಿ.ಜೆ.ಪಿ ಇಂದು ಜಿ.ಎಸ್.ಟಿ ಬಿಲ್ ಯನ್ನು ಜಾರಿ ತರಲು ಹೊರಟಿದೆ . ಎಂತಹ ವಿರ್ಪಯಾಸ ನೋಡಿ ಇಂದು ಕಾಂಗ್ರೆಸ್ ಪಕ್ಷವು ತನ್ನದೇ ಬಿಲ್ ಯನ್ನು ವಿರೋಧಿಸುತ್ತಿದೆ.

           ಯು.ಪಿ.ಎ ಸರಕಾರವು ಜಾರಿಗೆ ತಂದ ಆಧಾರ ಕಾರ್ಡ್ ಯೋಜನೆಯನ್ನು ಬಿ.ಜೆ.ಪಿ ಯು   ವಿರೋಧಿಸಿ, ಅದನ್ನು ಒಂದು ಉಪಯೋಗಕ್ಕೆ ಬಾರದ ಯೋಜನೆ ಎಂದಿತ್ತು.ಇಂದು ತನ್ನ ಎಲ್ಲಾ ಯೋಜನೆಗಳ ಉಪಯೋಗ ಪಡೆದುಕೊಳ್ಳಲು ಅರ್ಹ  ಫಲಾನುಭವಿಗಳು   ಕಡ್ಡಾಯವಾಗಿ  ಆಧಾರ ಕಾರ್ಡವನ್ನು ನೀಡಬೇಕು ಎಂದು ಹೇಳುತ್ತಿದೆ.  
          ಪ್ರಧಾನ ಮಂತ್ರಿ ಮೋದಿಯವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ ಯು.ಪಿ.ಎ ಸರಕಾರದ ಜನಪ್ರಿಯ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದೋಗ್ಯ ಖಾತ್ರಿ ಯೋಜನೆ(MNREGA) ಕಾಂಗ್ರೆಸಿನ ವೈಫಲ್ಯಕ್ಕೆ, ನಾಯಕತ್ವದ ವೈಫಲ್ಯಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಅದನ್ನು ನಾವು ಯಾವತ್ತೂ ರದ್ದು ಮಾಡೋದಿಲ್ಲ ಎಂದು ಹೇಳಿದರು. ಕೆಲವು ತಿಂಗಳ ನಂತರವೇ ಅವರದೇ ಸರಕಾರವು MNREGA ಯೋಜನೆಯಿಂದ ೩೦% ಬಡತನ ನಿರ್ಮೂಲನೆಗೆ ಸಹಾಯವಾಗಿದೆ ಎಂದು ವರದಿಯನ್ನು ನೀಡಿತ್ತು.

            ಬಿ.ಜೆ.ಪಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ನಮ್ಮ ಜನತೆಯನ್ನು ಮೂರ್ಖರನಾಗಿ ಮಾಡುತ್ತಿವೆ. ಆಡಳಿತ ಪಕ್ಷವು ಏನೇ ಮಾಡಿದರು ವಿರೋಧ ಮಾಡುವುದೆ ವಿರೋಧ ಪಕ್ಷದ ಕೆಲಸವನ್ನಾಗಿದೆ. ಬಿ.ಜೆ.ಪಿ ಯವರು ವಿರೋಧ ಪಕ್ಷದಲ್ಲಿದಾಗ  "ಬೇವಿನ ಮರವನ್ನು  ನೆಟ್ಟು ಇಂದು ಮಾವಿನ ಹಣ್ಣುಗಳನ್ನು ನಿರೀಕ್ಷಿಸಿದ್ದರೆ ಹೇಗೆ ಸಾಧ್ಯ? " . ಇಂದು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಆದರೂ ತನ್ನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರೆತು  ಉತ್ತಮ ವಿರೋಧ ಪಕ್ಷವನ್ನಾಗಿ  ನಡೆದುಕೊಳ್ಳಲ್ಲಿ ಅಂತ ಆಶಿಸೋನ.ಬಿ.ಜೆ.ಪಿ,ಕಾಂಗ್ರೆಸ್ ಹಾಗೂ ಇತರೆ ಎಲ್ಲಾ ಪಕ್ಷಗಳು  ದೇಶದ ಅಭಿವೃದ್ಧಿಯ ವಿಷಯದಲ್ಲಿ ಒಗ್ಗಟ್ಟಾಗಲ್ಲಿ ಅಂತ ಆಶಿಸೋನ.

Comments

Submitted by Nagaraj Bhadra Fri, 09/18/2015 - 23:20

In reply to by kavinagaraj

ಪ್ರತಿಕ್ರಿಯೆಗೆ ವಂದನೆಗಳು ಕವಿ ನಾಗರಾಜ ಸರ್ ಅವರಿಗೆ.ಹೌದು ಸರ್.ನೀವು ಹೇಳಿರೊದು ನಿಜ ಸರ್.ಬೇರೆ ದಾರೀನೇ ಇಲ್ಲ ಸರ್.ಇಲ್ಲವೆಂದರೆ ಹೀಗೆ ಮೂರ್ಖರಾಗಬೇಕಾಗುತ್ತದೆ ಸರ್.

Submitted by santhosha shastry Sat, 09/19/2015 - 14:53

In reply to by kavinagaraj

ನಾವು ಉದ್ಧಾರ‌ ಆಗ್ಬೇಕೂಂದ್ರೆ ನಮ್ಮ‌ ರಾಜಕೀಯ‌ ಪಕ್ಷಗಳ‌ ಸಂಪೂರ್ಣ ಬದಲಾವಣೆ ಅತ್ಯವಶ್ಯ‌. ಇದಾದಿತೆಂಬ ಆಶಾವಾದ‌ ನನ್ನದು. ಆದ್ರೆ ಯಾವಾಗ‌........?

Submitted by Nagaraj Bhadra Sat, 09/19/2015 - 15:13

In reply to by santhosha shastry

ಪ್ರತಿಕ್ರಿಯೆಗೆ ವಂದನೆಗಳು ಸಂತೋಷ ಸರ್ ಅವರಿಗೆ.ನೀವು ಹೇಳಿದು ನಿಜ ಸರ್. ಆದಷ್ಟು ಬೇಗ ರಾಜಕೀಯ‌ ಪಕ್ಷಗಳ‌ ಸಂಪೂರ್ಣ ಬದಲಾವಣೆ ಅತ್ಯವಶ್ಯ.ಇದಾದಿತೆಂಬದು ಪ್ರತಿಯೊಬ್ಬ ಭಾರತೀಯನ್ನ ಆಶೆ ಸರ್.