ನಮ್ಮೂರು...ನನ್ನ ನೆನಪು....!
ಅವಳ ನೆನಪು. ನನ್ನ ಸಂಗಾತಿ. ಅಣ್ಣ-ಅತ್ತಿಗೆ ಮತ್ತು ನಮ್ಮ ಇಬ್ಬರು ಹೆಣ್ಣುಮಕ್ಕಳು. ಮಠಕ್ಕೆ ಹೊರಟ ಆ ದಿನ ಮುಸಂಜೆ. ಆ ಸಂಜೆಯಲ್ಲಿ ಕಾಡಿದ ಎಂದೂ ಸಿಗದ ಅವಳ ಗಾಢ ನೆನಪು. ನಾನು ಇರೋ ವರೆಗೂ ಆಕೆ ನನ್ನಲ್ಲಿ ಶಾಶ್ವತ. ಅದು ನನ್ನ ಮೊದಲು ಪ್ರೀತಿ. ಆ ಪ್ರೀತಿ ವಿಷಯ ನನ್ನವಳಿಗೂ ತಿಳಿದಿದೆ ಅನ್ನೋದು ಧೈರ್ಯ. ಆ ನೆನಪುಗಳನ್ನ ಆಕೆಯ ಆ ಮುಖವನ್ನ ಮತ್ತೆ ನೆನಪಿಸಲು ನೆರವಾರದ ಸಿದ್ಧಾರೂಢ ಮಠ ಮತ್ತು ಸಿದ್ಧಾರೂಢರಿಗೆ ನನ್ನ ನಮನ. ಕಾರಣ, ಆಕೆ ಸಿದ್ಧಾರೂಢರ ಅತಿ ದೊಡ್ಡ ಭಕ್ತೆ. ಪ್ರತಿ ಸೋಮವಾರ ಆಕೆ ಅಲ್ಲಿಗೆ ಬರುತ್ತಿದ್ದಳು. ನಾನೂ ಆಗ ಅವಳ ನೋಡಲು ಹೋಗ್ತಿದೆ..
------
ಸಂಜೆ 6 ಗಂಟೆ ಹೊತ್ತು. ಅಣ್ಣ ಅತ್ತಿಗೆ ಇದ್ದರು. ದೊಡ್ಡಣ್ಣನ ಮಕ್ಕಳು ಶೃತಿ- ಲಕ್ಷ್ಮೀನೂ ಇದ್ದರು. ನನ್ನ ಸಂಗಾತಿ ಶ್ರೀ ಹತ್ತಿರವೇ ಇದ್ದಳು. ಒಂದೇ ಸಮನೆ ಅವಳದು ಒಂದೇ ಆಸೆ. ಮಠಕ್ಕೆ ಹೋಗಬೇಕು ಅನ್ನೋ ಮಹದಾಸ. ಅದು ಅಂದು ಸಾಕಾರಗೊಂಡಿತ್ತು. ಮನೆಯಿಂದಲೇ ಒಂದೇ ರಿಕ್ಷಾದಲ್ಲಿ 6 ಜನ ಹೊರಟೆವು. ಹೆಚ್ಚು ಕಡಿಮೆ 20 ನಿಮಿಷ ಆಗಿರಬೇಕು. ಸಿದ್ಧಾರೂಢ ಮಠಕ್ಕೆ ತಲುಪಿದ್ದೇವು. ನಾನು ಅಟೋ ಚಾರ್ಜ್ ಕೊಡಬೇಕು ಅಂದು ಕೊಂಡೇ. ಅಷ್ಟರಲ್ಲಿ ಅಣ್ಣ ರಾಜು ಕೊಟ್ಟೆ ಬಿಟ್ಟಿದ್ದ. ಸರಿ ಬಿಡು ಅಂತ ಮುಂದೆ ಹೊರಟೆವು.
ಎಲ್ಲರಿಗೂ ಸಿದ್ಧಾರೂಢ ಮಠ ನೋಡೋ ಆಸೆ. ನನ್ನ ಮನಸ್ಸು ಇನ್ನೆಲ್ಲೋ ಕೇಂದ್ರಿಕೃತವಾಗಿತ್ತು. ಮನಸ್ಸಿನ ಆಳವನ್ನ ತಿಳಿಗೊಳಿಸಿ ನೋಡಿದಾಗ, ಅಲ್ಲಿ ಬೆಚ್ಚಗೆ ಕುಳಿತ ಆಕೆ ನೆನಪು. ಆಕೆ ಗೋಸ್ಕರ ಅಲ್ಲಿಗೆ ಸದಾ ಹೋಗುತ್ತಿದದ್ದು.ಅಲ್ಲಿಯೇ ಇದ್ದ ಜಿಮ್ಗೂ ಹೋಗೋದು. ಅವಳು ಬರೋವರೆಗೂ ಅಲ್ಲಿಯೇ ಕಾಯೋದು, ಇದೆಲ್ಲ ಇತ್ತು.
ಆ ನೆನಪು ಹಂಗೆ ಹಸಿರಾಗಿ ಎದೆ ತಾಕಿದವು. ತಟ್ಟನ್ನೆ ಯಾರೋ ಎಚ್ಚರಿಸಿದಂಗಾಯ್ತು. ಅದು ನನ್ನಾಕೆ ಸ್ಪರ್ಶ. ಎಲ್ಲಿದ್ದೀರಿ ಅಂದಳು. ಆಗಾ ನಾನು ಫೋಟೋ ನೆಪ ಹೇಳಿಕೊಂಡು, ಒಂದಷ್ಟು ಫೋಟೋ ತೆಗೆದೆ. ಅದು ಈಗ ನೀವೂ ನೋಡ್ತಿರೋ ಬಜಿ ಮಿರ್ಚಿ ಅಂಗಡಿಯದ್ದು ಸೇರಿ. ಸಿದ್ಧಾರೂಢ ಹುಬ್ಬಳ್ಳಿಯ ಫೇಮಸ್ ದೇವರು. ಡಾಕ್ಟರ್ ರಾಜ್ ಕುಮಾರ್ ಇದ್ದಾಗ ಅವರೂ ಇಲ್ಲಿಗೆ ಬಂದು ಹೋದವರು. ರಾಜ್ ಫ್ಯಾಮಿಲಿಯ ಅಪ್ಪು, ಶಿವಣ್ಣ ಕೂಡ ಇದೇ ಮಠಕ್ಕೆ ಬಂದು ಹೋಗ್ತಾರೆ. ಹುಬ್ಬಳ್ಳಿಗೆ ಬಂದರೆ.
ಹುಬ್ಬಳಿಯ ಸಿದ್ಧಾರೂಢ ಮಠದಲ್ಲಿ ಕೆರೆ ಇದೆ. ತೆಪ್ಪದ ತೇರೂ ಎಳೀತಾರೆ. ಅದನ್ನ ನೋಡಿಕೊಂಡು ಗಿರ್ಮಿಟ್ ಮತ್ತು ಬಜಿ ತಿನೋ ಖುಷಿನೇ ಬೇರೆ. ಆ ಖುಷಿ ಇಲ್ಲಿವರೆಗೂ ನನಗೆ ನನ್ನ ಗೆಳೆಯರಿಂದಲೇ ಸಿಗುತ್ತಿತ್ತು. ಈ ಸಲ ಊರಿಗೆ ಹೋದಾಗ, ಮನೆ ಮಂದಿಯೊಂದಿಗೆ ಕುಳಿತಾಗೆ ಸಿಕ್ತು.
ಬಜಿ ಮಿರ್ಚಿ ತಿನೋದೇ ಒಂದು ಸೊಗಸು. ಆ ಸೊಗಸು ಫೋಟೋ ತೆಗೆದಾಗಲೂ ಆಗುತ್ತದೆ ಅಂತ ನನ್ನಗೆ ಅನ್ನಿಸಿರಲಿಲ್ಲ. ಅದನ್ನ ಫೋಟೋ ತೆಗೆದ ಮೇಲೆ ತಿಳಿಯೋಕೆ ಸಾಧ್ಯವಾಯ್ತು. ಫೋಟೋ ತೆಗೆಯೋವಾಗ ನನ್ನಾಕೆಯೋ ಅಥವಾ ಅತ್ತಿಗೆಹಯೋ ಬಜಿ ಸರಿಯಿಲ್ಲ ಅಂದ್ರು. ಆದೆ, ರುಚಿ ಇಲ್ಲದ ಬಜಿಗಳು ನನ್ನ ಫೋನ್ ಕ್ಯಾಮೆರಾಕೆ ಚೆನ್ನಾಗಿಯೇ ಸಿಕ್ಕಿದ್ದವು. ಗರಿ..ಗರಿಯಾಗಿ..
ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢರ ದರುಶನ ಮಾಡೋದು ಒಂದು ನೆಮ್ಮದಿ. ಸಿದ್ಧಾರೂಢರು ಕಾಲ್ಪನಿಕ ಮನುಷ್ಯರಲ್ಲ. ಹಿಂದೆ ನಮ್ಮ-ನಿಮ್ಮಂತೆ ಬಾಳಿದವರು. ಆದರೆ, ದೇವಮಾನುಷ್ಯರು. ಅವರ ಸನ್ನಿಧಿಯಲ್ಲಿ ಕುಳಿತಾಗ ನಮ್ಮವರೇ ಅನಿಸಿ ಬಿಡ್ತಾರೆ. ವಿಶಾಲವಾದ ಜಾಗದಲ್ಲಿ ಇರೋ ಸಿದ್ಧಾರೂಢರು, ಅದು ಹೇಗೋ ಮನಸ್ಸಿಗೆ ನೆಮ್ಮದಿಯನ್ನ ಕೊಡ್ತಾರೆ.
ಮಠದ ಈ ಖುಷಿಯನ್ನ ಶಾಶ್ವತವಾಗಿಡಲೆಂದೇ ಹಲವು ಫೋಟೋಗಳನ್ನ ತೆಗೆದೆ. ಮನೆಯವರನ್ನೂ ಸೇರಿಸಿ ಕ್ಲಿಕ್ಕಿಸಿದ ಸುಮಾರು ಫೋಟೋಗಳು ಫೇಸ್ ಬುಕ್ ನಲ್ಲಿವೆ. ಜೀ ಮೇಲ್ ನಲ್ಲೂ ಸುರಕ್ಷಿತವಾಗಿವೆ. ಈ ಲೇಖನ ಬರೆಯೋ ಹೊತ್ತಿಗೆ ನಾನು ಹುಬ್ಬಳಿಗೆ ಹೋಗಿ ಬಂದು, ಎರಡು ದಿನವಾಗಿತ್ತು. ಎರಡು ದಿನವಾದರೂ, ಮೇಲೆ ಬರೆದ ಅಷ್ಟೂ ನೆನಪುಗಳು ತಾಜಾ ಆಗಿದ್ದವು. ಬರೆದ ಮೇಲೆ ಮಸ್ತಿಸ್ಕದಿಂದ ಮನಸ್ಸಿನ ಆಳದಲ್ಲಿ, ಆಕೆಯ ನೆನಪಿನೊಂದಿಗೆ ಅಡಕವಾಗಿ ಉಳಿದು..ಹೊಳೆಯುತ್ತಿವೆ..
-ರೇವನ್
Comments
ಉ: ನಮ್ಮೂರು...ನನ್ನ ನೆನಪು....!
ನಿಮ್ಮ ಮೊದಲ ಪ್ರೀತಿಯ ಬಗ್ಗೆ ಪ್ರತಿಕ್ರಿಯೆ ಇಲ್ಲ. ಉಳಿದ ಸಂಗತಿಗಳು ಪ್ರೀತಿಯೊಂದಿಗೇ ತಳಕು ಹಾಕಿಕೊಂಡಿವೆ. :)