ಏಳು,ಬೀಳಿನ‌ ಸುತ್ತ‌..

ಏಳು,ಬೀಳಿನ‌ ಸುತ್ತ‌..

ಪ್ರಸ್ತುತ ಕಾಲದಲ್ಲಿ ಭಾರತದ ಹಲವಾರು ವಿವಿಧ ರೀತಿಯ ಜನಾಂಗಗಳು, ಪಂಗಡಗಳು ಸಮ್ಮಿಳಿಸಿಕೊಂಡು ತನ್ನದೇ ಆದ ವೈಭವಪೂರ್ಣ ಸಂಸ್ಕ್ರಿತಿಯನ್ನು ಬೆಳೆಸಿದೆ.ವಿವಿಧ ರೀತಿಯ ಜನರನ್ನೊಳಗೊಂಡ ಭಾರತ ಇಂದು ತನ್ನ ಪ್ರಜಾಪ್ರಭುತ್ವ ಮತ್ತು ಏಕೀಕರಣದಿಂದಾಗಿ ತನ್ನದೇ ಆದ ವಿಶಿಷ್ಟವಾದ ಮತ್ತು ಉನ್ನತವಾದ ಸಂಸ್ಕ್ರಿತಿಯನ್ನು ಕಟ್ಟಿಕೊಂಡು ಪ್ರಪಂಚದಲ್ಲೇ ಎಲ್ಲಾ ದೇಶಗಳಿಗೆ ಸವಾಲೊಡ್ಡಿ ನಿಂತಿದೆ. ಈ ರೀತಿಯ ವೈಭವಪೂರ್ಣ ಮತ್ತು ಅತೀ ಪ್ರಭುದ್ದವಾದ ಸಂಸ್ಕ್ರಿತಿಯನ್ನು ಬೆಳೆಸಿಕೊಡಿರುವ ಭಾರತದ ಉನ್ನತವಾದ ಪರಂಪರೆಗೆ ಮರುಳಾಗಿ ಅದೆಷ್ಟೋ ಅನಿವಾಸಿಗಳು ಭಾರತದ ಅಂದವನ್ನು ಸವಿಯಲು ಪ್ರತೀ ದಿನ ಲೆಕ್ಕವಿಲ್ಲದಂತೆ ಮುಗಿಬೀಳುತ್ತಿದ್ದಾರೆ.

ಇಂತಹಾ ಪ್ರಬಲವಾದ ಮಾರ್ಪಾಡುವಿನಿಂದಾಗಿ ಭಾರತ ಇಂದು ಅಭಿವ್ರದ್ದಿಯತ್ತ ಸಾಗುತ್ತಿದೆ. ಇಂತಹಾ ಸಂಪದ್ಭರಿತ ರಾಷ್ಟ್ರವನ್ನು ಅನೇಕ ಧೀಮಂತ ನಾಯಕರುಗಳು ತಮ್ಮ ಕಾರ್ಯ ಸಾಧನೆಯಿಂದ ಉನ್ನತ ಪ್ರಗತಿಯತ್ತ ಕೊಂಡೊಯ್ದಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಭಾರತದ ಸಮಗ್ರ ಮುಂದುವರಿಕೆಯಲ್ಲಿ ಕೊಡುಗೆ ನೀಡಿದ ನಾಯಕರುಗಳ ಪ್ರಭಾವ ಪ್ರಮುಖವಾಗಿದೆ. ವಿವಿಧ ಮಜಲುಗಳಲ್ಲಿ ತಮ್ಮ ಉತ್ತಮ ಕಾರ್ಯದಕ್ಷತೆಯ ಪ್ರಭಾವದಿಂದಾಗಿ ಭಾರತವನ್ನು ಕೆಳಮಟ್ಟದ ಸ್ಥಿತಿಗತಿಯಿಂದ ಉನ್ನತಮಟ್ಟಕ್ಕೆ ತಂದೊಡ್ಡಿದ್ದಾರೆ.ಅವರಲ್ಲಿ ಮೂಡಿದ ದೇಶಪ್ರೇಮದ ಬೀಜಗಳು , ಅದರ ಕಾರಣದಿಂದಲೇ ಭಾರತ ಪ್ರಗತಿಯತ್ತ ಸಾಗಿದೆ. ಇಂತಹ ಧೀಮಂತ ನಾಯಕರುಗಳಲ್ಲಿ ನಮ್ಮ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ರವರೂ ಒಬ್ಬರು.

ಎ.ಪಿ.ಜೆ ಅಬ್ದುಲ್ ಕಲಾಂ ಭಾರತದ ಸಮಗ್ರ ಏಳಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದರು. ತಮ್ಮ ಉನ್ನತವಾದ ಕಾರ್ಯದಕ್ಷತೆಗೆ ಅವರಿಗೆ ‘ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಎಂಬ ಕೀರ್ತಿ ಬಂದಿತು. ಅಕ್ಟೋಬರ್ 15, 1931  ರಲ್ಲಿ ಜನಿಸಿದರು. ರಾಷ್ಟ್ರಪತಿ ಸ್ಥಾನ ಪಡೆಯುವ ಮೊದಲೇ ಭಾರತರತ್ನ ಪಡೆದ ಕಲಾಂ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪಡೆದರು. ಇದುವರೆಗೆ 30 ವಿಶ್ವವಿದ್ಯಾನಿಲಯಗಳು ಅವರಿಗೆ ಡಾಕ್ಟರೇಟ್ ಗೌರವವನ್ನು ನೀಡಿದೆ. ಸ್ವತಃ ಒಬ್ಬ ವಿಜ್ಣಾನಿಯಾಗಿ ತಮ್ಮ ನಾಯಕತ್ವ ಅವಧಿಯಲ್ಲಿ ಭಾರತದ ಸಮಗ್ರ ಅಭಿವ್ರದ್ದಿಗೆ ಶ್ರಮಿಸಿದ ಅಬ್ದುಲ್ ಕಲಾಂ ಭಾರತದ ಉನ್ನತ ಅಭಿವ್ರದ್ದಿಗೆ ಕನಸನ್ನು ಕಂಡವರಾಗಿದ್ದಾರೆ.

ಅವರ ಚಿಂತನೆಗಳು ನಿಜಕ್ಕೂ ಜನರಲ್ಲಿ ಒಂದು ಒಳ್ಳೆಯ ಪರಿಣಾಮವನ್ನು ಬೀರಿದೆ ಎಂಬುವುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಅಧಿಕಾರದ ಕೊನೆಯ ಗಳಿಗೆಯಲ್ಲಿ ಆಡಿದ ಮಾತನ್ನು ಸರಿಯಾಗಿ ಆಲಿಸಿದರೆ ನಿಜಕ್ಕೂ ನಮ್ಮ ದೇಶದ ನೀತಿ-ನಿಯಮಗಳ ಉಲ್ಲಂಘನೆ, ದೇಶದ ಪ್ರಗತಿಯತ್ತ ಜನರ ಪ್ರಭಾವ ಮತ್ತು ದೇಶದ ಸಮಗ್ರ ಏಳು-ಬೀಳಿನ ಬಗ್ಗೆ ಅರಿವಾಗುತ್ತದೆ. ಅವರು ತಮ್ಮ ಅಧಿಕಾರದ ಕೊನೆಯ ಅವಧಿಯಲ್ಲಿ ಆಡಿದ ಮಾತು ಈ ರೀತಿಯಾಗಿದೆ.

‘ಇನ್ನು ಹತ್ತು  ನಿಮಿಷ ಇದೆಯೇ? ನಿಮ್ಮ ದೇಶಕ್ಕಾಗಿ ಹತ್ತು ನಿಮಿಷ! "ನೀವೆನ್ನುತ್ತೀರಿ ಸರ್ಕಾರ ಅಸಮರ್ಥವೆಂದು, ನೀವೆನ್ನುತ್ತೀರಿ ಮುನ್ಸಿಪಾಲಿಟಿ ಕಸ ಎತ್ತುವುದಿಲ್ಲವೆಂದು, ನೀವೆನ್ನುತ್ತೀರಿ ನಿಮ್ಮ ಕಾನೂನು ಬಹಳ ಹಳೆಯದೆಂದು, ನೀವೆನ್ನುತ್ತೀರಿ ಫೋನುಗಳು ನಡೆಯುವುದಿಲ್ಲವೆಂದು, ರೈಲ್ವೆ ನಗೆಪಾಟಾಲಾಗಿದೆ, ವಿಮಾನ ಸಂಚಾರ ಜಗತ್ತಿನಲ್ಲೇ ಕಳಪೆ, ಅಂಚೆಯಂತೂ ತಲುಪಲೇ ಇಲ್ಲವೆಂದು ನೀವೆನ್ನುತ್ತೀರಿ ದೇಶ ನರಿ-ನಾಯಿಗಳ ಪಾಲಾಗಿದೆಯೆಂದು. ನೀವೆನ್ನುತ್ತೀರಿ.. ನೀವೆನ್ನುತ್ತೀರಿ..ಅನ್ನುತ್ತೀರಿ...

ಆದೆರೆ ನೀವೇನು ಮಾಡುತ್ತೀರಿ?.. ಸಿಂಗಾಪುರಕ್ಕೆ ಹೋಗುವ ಒಬ್ಬ ಭಾರತೀಯನನ್ನು ತೆಗೆದುಕೊಳ್ಳಿ, ಅವನ ಹೆಸರು ನಿಮ್ಮದೇ ಇರಲಿ. ಅವನು ನೀವೇ ಎಂದುಕೊಳ್ಳಿ. ನೀವು ಸಿಂಗಾಪುರ ವಿಮಾನ ನಿಲ್ದಾಣದ ಹೊರಗೆ ಬರುತ್ತೀರಿ. ಇಲ್ಲಿಯಂತೆ ಅಲ್ಲಿ ನೀವು ಸಿಗರೇಟ್ ತುಂಡುಗಳನ್ನು ರಸ್ತೆಗೆ ಎಸೆಯುವುದಿಲ್ಲ.  ಅವರ ಭೂಗತ ಸಂಚಾರ ವ್ಯವಸ್ಥೆಯ ಬಗ್ಗೆ ಅವರಷ್ಟೇ ನಿಮಗೂ ಹೆಮ್ಮೆ ಬರುತ್ತದೆ. ಸುಮಾರು 60 ರೂಪಾಯಿ ಹಣ ತೆತ್ತು ಆರ್ಚಡ್ ರಸ್ಥೆಯಲ್ಲಿ ಡ್ರೈವ್ ಗೆ ಹೋಗುತ್ತೀರಿ. ದುಬಾಯಿಗೆ ಹೋದರೆ ರಮ್ಜಾನ್ ತಿಂಗಳಲ್ಲಿ ಹೊರಗೆ ತಿಂಡಿ ತಿನ್ನಲು ಧೈರ್ಯ ಬರುವುದಿಲ್ಲ. ಝೆಡ್ಡಾ ಗೆ ಹೋದರೆ ತಲೆ ಮುಚ್ಚಿಕೊಳ್ಳದೇ ಹೊರಗೆ ಹೋಗುವುದಿಲ್ಲ. ಲಂಡನ್ ಗೆ ಹೋದರೆ ಅಲ್ಲಿನ ಟೆಲಿಫೋನ್ ಎಕ್ಸ್-ಚೇಂಜ್ ನ ಕಾರಕೂನನಿಗೆ ತಿಂಗಳಿಗೆ ಹತ್ತು ಪೌಂಡ್ ಕೊಟ್ಟು ನಿಮ್ಮ ಟೆಲಿಫೋನ್ ಖರ್ಚನ್ನು ಬೇರೆಯವರ ತಲೆಗೆ ಕಟ್ಟುವಂತೆ ಹೇಳುವುದಿಲ್ಲ. ವಾಶಿಂಗ್ಟನ್ ನಲ್ಲಿ ಗಂಟೆಗೆ 55 ಮೈಲಿಗಿಂತ ಹೆಚ್ಚು ವೇಗದಲ್ಲಿ ಕಾರು ಓಡಿಸಲು ನಿಮಗೆ ಧೈರ್ಯ ಬರುವುದಿಲ್ಲ. ಅಲ್ಲಿನ ಟ್ರಾಫಿಕ್ ಪೋಲೀಸರಿಗೆ ‘ಜಾನ್ತಾ ಹೆ ಸಾಲಾ, ಮೈ ಕೋನ್ ಹೂಂ,(ನಾನು ಯಾರು ಗೊತ್ತೇ ನಿನಗೆ?) ಎಂದು ಹೇಳುವುದಿಲ್ಲ.

ಆಸ್ಟ್ರೇಲಿಯ, ನ್ಯೂಜಿಲೆಂಡ್ ಗೆ ಹೋಗಿ ಎಳನೀರು ಕುಡಿದರೆ ಕಸದ ಡಬ್ಬಿ ಬಿಟ್ಟು ಬೇರೆಲ್ಲಿಯೂ ಎಸೆಯುವುದಿಲ್ಲ. ಪಾನ್ ತಿಂದು ಟೋಕಿಯೋದ ರಸ್ತೆಗಳಲ್ಲಿ ಉಗುಳುವುದಿಲ್ಲ. ಬೋಸ್ಟನ್ ನಲ್ಲಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದಿಲ್ಲ. ನಕಲಿ ಸರ್ಟಿಫಿಕೇಟು ತೋರಿಸಿ ಜಾಗಗಿಟ್ಟಿಸುವುದಿಲ್ಲ. ನಾನು ನಿಮ್ಮ ಬಗ್ಗೆಯೇ ಹೇಳುತ್ತಿದ್ದೇನೆ, ನೀವು ಪರದೇಶಗಳಿಗೆ ಹೋಗಿ ಅಲ್ಲಿನ ಕಾನೂನುಗಳನ್ನು ಗೌರವಿಸುತ್ತೀರಿ, ನಿಮ್ಮ ದೇಶದಲ್ಲಿಯೇ ಏಕೆ ಸಾಧ್ಯವಿಲ್ಲ?. ಮರಳಿ ಭಾರತಕ್ಕೆ ಬಂದ ತಕ್ಷಣ ರಸ್ತೆಗಳಲ್ಲಿ ಕಸ-ಕಡ್ಡಿ ಎಸೆಯುತ್ತೀರಿ. ಪರದೇಶದಲ್ಲಿ ಮಾದರಿ ಜನತೆಯಾಗುವ ನೀವು ಭಾರತದಲ್ಲಿ ಯಾಕಾಗುವುದಿಲ್ಲ?.

ಮೇಲಿನ ಮಾತುಗಳನ್ನು ಸರಿಯಾಗಿ ಆಳಿಸಿ ನೋಡಿದರೆ ನಮಗೆ ನಿಜಕ್ಕೂ ಮುಜುಗರವಾಗುತ್ತದೆ. ನಾವು ಅದೆಷ್ಟೋ ಸಾರಿ ಸಿಗರೇಟ್ ತುಂಡುಗಳನ್ನು ರಸ್ತೆಗೆ ಎಸೆದಿದ್ದೇವೆ, ಕೋಲ್ಡ್ ಡ್ರಿಂಗ್ಸ್ ಮತ್ತಿತರ ಚಾಕಲೇಟ್ ಹಾಳೆಗಳನ್ನು ರಸ್ತೆಗೆ ಎಸೆದಿದ್ದೇವೆ. ಮನೆಯಂಗಳದಲ್ಲಿರುವ ಕಸಗಳನ್ನು ಕಸದ ದೊಡ್ದಿಗೆ ಎಸೆಯುವ ಬದಲು ನೀರು ಹರಿಯುವ ಚರಂಡಿಗೆ ಎಸೆದು ಚರಂಡಿಯ ನೀರು ರಸ್ತೆಯಲ್ಲಿ ಹರಿಯುವಂತೆ ಮಾಡಿದ್ದೇವೆ. ವಾಹನ ಚಲಾಯಿಸುವಾಗ ನಿಯಮಗಳನ್ನು ಉಲ್ಲಂಘಿಸಿದ್ದೇವೆ.. ನಮ್ಮ ದ್ಯೆನಂದಿನ ಬದುಕಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ನೀತಿ‍,ನಿಯಮಗಳನ್ನು ಪಾಲಿಸಿದರೆ ಅದು ಈ ಸಮಾಜಕ್ಕೆ ಉತ್ತಮ ಉಪಕಾರವಾದೀತು. ನಮ್ಮಿಂದಾಗುವ‌ ಚಿಕ್ಕ‌,ಚಿಕ್ಕ ಉಪಕಾರಗಳು ಖಂಡಿತವಾಗಿಯೂ ಈ ಸಮಾಜಕ್ಕೆ ನೀಡುವ ಉತ್ತಮಕೊಡುಗೆಗಳಾಗಿವೆ. ಖಂಡಿತವಾಗಿಯೂ ಕಲಾಂ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.

Comments

Submitted by santhosha shastry Fri, 10/16/2015 - 23:17

ನಿಜ ಸರ್, ನಾವು ನೆಟ್ಟಗೆ ಇದ್ರೆ ಅಷ್ಟೇ ಸಾಕು, ಉಳಿದದ್ದು ತಾನೇ ತಾನಾಗಿ ಸರಿ ಹೋಗುತ್ತದೆ. ಇದು ಆಗ್ಲಿ ಅಂತ ಆಶಿಸುವ.