ಅಕ್ಷಯಾಂಬರ

ಅಕ್ಷಯಾಂಬರ

ಬಹಳ ದಿನಗಳ ನಂತರ ರಂಗಶಂಕರದಲ್ಲಿ ಗೆಳೆಯರೊಡನೆ ವಾರಾಂತ್ಯದಲ್ಲಿ
ನೋಡಿದ ನಾಟಕ ಅಕ್ಷಯಾಂಬರ.ಯಕ್ಷಗಾನದ ಪಾತ್ರಧಾರಿಗಳ ಹಿನ್ನಲೆಯಲ್ಲಿ ಮೂಡಿಬರುವ ಈ ನಾಟಕದ ವಿಶೇಷತೆವೆಂದರೆ ನಾಟಕದೊಂದಿಗೆ ಯಕ್ಷಗಾನವನ್ನು ನೋಡಿದ ಅನುಭವ .ಹೆಣ್ಣು ರಂಗದ ಮೇಲೆಯೂ ಜೀವನದಲ್ಲಿಯೂ ಗಂಡಿನ ಪಾತ್ರವನ್ನು ನಿರ್ವಹಿಸಬಲ್ಲಳು,ಗಂಡು ಹೆಣ್ಣಿನ ಪಾತ್ರವನ್ನು ಹೆಣ್ಣಿಗಿಂತ ಚೆನ್ನಾಗಿ ನಿಭಾಹಿಸಬಲ್ಲ ಯಂಬುದು ನಾಟಕದ ತಿರುಳು .ಯಕ್ಷಗಾನದ ಹೆಣ್ಣು ಪಾತ್ರಧಾರಿಯಾಗಿ ಗೆಳೆಯ Prasad Cherkadyದು ಯಾವ ನಟಿಗೂ ಕಡಿಮೆಇಲ್ಲದ ಅಭಿನಯ. ನಾಟಕದ ಕೂನೆಯಲ್ಲಿ ಯಕ್ಷಗಾನದ ಪರದೆಯಿಂದೆ ಗಂಡು ಪಾತ್ರಧಾರಿಯ ಹೆಣ್ಣಿನ ಮುಂದೆ ಸೋಲೊಪ್ಪಿಕೊಳ್ಳುವ ಪ್ರಸಾದನ ಅಭಿನಯ ನಾಟಕದ highlight ಗಳಲ್ಲೊಂದು .ಒಟ್ಟಿನಲ್ಲಿ ಬಹಳ ದಿನಗಳ ನಂತರ ಒಂದೂಳ್ಳೇ ನಾಟಕ ನೋಡಿದಂತಾಯಿತು