ಬಂದಿದಿನಿ ಗುರುಗಳೇ,,,,,,,,,,,,,,,,,,,

ಬಂದಿದಿನಿ ಗುರುಗಳೇ,,,,,,,,,,,,,,,,,,,

ಈ ಚಿತ್ರದ ಬಗ್ಗೆ ಬರೆಯಲಿಲ್ಲ ಅಂದ್ರೆ ಬಹುಷಃ ನಾನು ನನ್ನ ಬಾಲ್ಯದ ನೆನಪುಗಳಿಗೆ ಮೋಸ ಮಾಡಿದ ಹಾಗೆ, ಇಪ್ಪತ್ತು ನಿಮಿಷಗಳ ಕಾಲ, ನಾನು ಬಾಲ್ಯದಲ್ಲಿ ವಿಹರಿಸಿ ವಾಸ್ತವಕ್ಕೆ ಬಂದಂತಿತ್ತು, ಮಧುರ ಅನುಭವಗಳನ್ನು ಕಟ್ಟಿಕೊಟ್ಟು, ಚಡ್ಡಿಯ ವಯಸ್ಸಿನ ನಿರಾಳತೆಯನ್ನು ಸ್ವಚ್ಚಂದತೆಯನ್ನು ನನ್ನ ವಾಸ್ತವದ ಬುತ್ತಿಗೆ ತುಂಬಿದ ದೃಶ್ಯಾವಳಿಗಳು,,,,,,, ನಾನು ಹೇಳ ಹೊರಟಿರುವುದು ಪ್ರೆಸೆಂಟ್ ಸಾರ್ ಎಂಬ ಕಿರುಚಿತ್ರದ ಬಗ್ಗೆ,

ನೆನಪುಗಳ ಕಿಟಕಿ ತೆರೆದು, ಆ ಹಳ್ಳಿಯ ಸೊಗಡಿಗೆ ಕರೆದೊಯ್ಯ್ಯುವುದರ ಜೊತೆಗೆ, ಕನ್ನಡದ ಉಳಿವಿನ ಪ್ರಶ್ನೆಯಾಗಿ, ಕನ್ನಡ ಶಾಲೆಯ ಉಳಿವಿನ ಪ್ರಶ್ನೆಯಾಗಿ, ನಮ್ಮನ್ನು ಕಾಡುತ್ತದೆ ಸಿನಿಮಾ,,,,,, ಕನ್ನಡ ಅಕ್ಷರಗಳನ್ನು ತಪ್ಪಾಗಿ ಬರೆಯುವ ಗೊಂಬೆಯ ಹುಡುಗ ಸಿದ್ದನಿಗೆ ಶಾಲಾ ಮಾಸ್ತರು ಹೇಳುವ ಮಾತುಗಳು ಮನ ಕಲಕುತ್ತವೆ,

ಇಂದಿನ ಜಾಗತೀಕರಣದಲ್ಲಿ ಮಕ್ಕಳು ಹುಟ್ಟಿದಾಗಿನಿಂದಲೇ, ಅವರ ಬಾಲ್ಯವನ್ನು ಬಾಲ್ಕನಿಗೆ ಸೀಮಿತವಾಗಿಸಿ, ಇಂಗ್ಲಿಷ್ ಅಕ್ಷರಗಳನ್ನು ತಿನಿಸಿ, ಅಮೇರಿಕದ ಕಂಪನಿಗೆ ತಯಾರು ಮಾಡುವ ಹೆತ್ತವರ ಕಣ್ಣಿಗೆ ಈ ಸಿನಿಮಾದ ಹಾಡಿನ ಸಾಲುಗಳು ದೃಷ್ಟಿ ನೀಡಬಹುದು, ಮುಪ್ಪಿನ ಕಾಲದಲ್ಲಿ ಕನ್ನಡದ ಹಳ್ಳಿಗಳಲ್ಲಿ ಕನ್ನಡದ ಮಕ್ಕಳೂ ಮುದುಕರಾಗಿ ಕನ್ನಡದ ಮಣ್ಣಲ್ಲಿಯೇ ಗೊಬ್ಬರವಾಗಬಹುದು.

ಎದೆ ಕಲಕುವ ಸಾಲುಗಳು
“ಎಳೆತನದ ನಲಿತಗಳೇ
ಗೆಳೆತನದ ಸೆಳೆತಗಳೇ
ಯಾಕೆ ನನ್ನ ತೊರೆದಿರಿ ??
ಯಾಕೆ ದೂರವಾದಿರಿ ??

ಚಿತ್ರದ ಮೂರನೇ ನಿಮಿಷದಲ್ಲಿ, ಸರ್ಕಾರ / ಶಿಕ್ಷಕ / ಮತ್ತು ಮಗು ಇವು ಮೂರರ ಸಂಗಮ,,,,, ಚಿತ್ರದ ಸಂಪೂರ್ಣ ಆಶಯವನ್ನು ತಿಳಿಸಿ ಕೊಡುತ್ತದೆ,,,,

ನೀವು ಹೆತ್ತ ಮಕ್ಕಳಿಗೆ ನಿಮ್ಮ ಎದೆಯ ಹಾಲನ್ನೇ ಕುಡಿಸಿ, ಆಂಗ್ಲಾ ಮಾಂಗ್ಲ ಸಾಂಗ್ಲ ದವರ ಎದೆಹಾಲು ಬೇಕಿಲ್ಲ ಎಂದು, ಸದ್ದಿಲ್ಲದೇ ಸದ್ದು ಮಾಡುತ್ತಾ ಕೆನ್ನೆಗೆ ಚಟೀರನೆ ಬಾರಿಸಿ ಹೇಳುವ ಸಿನಿಮಾ ಇದು.

ಚಿತ್ರದ ಕೊಂಡಿ : https://www.youtube.com/watch?v=uHyQVLDvEc0

ಸುಮ್ಮನೆ ನಗಲು :
ಇಲ್ಲಿ ಹುಡುಗನ ಹೆಸರನ್ನು ಸಿದ್ದು ಅಂತ ಇಟ್ಟ ಒಳಮರ್ಮ ಅರ್ಥ ಮಾಡಿಕೊಳ್ಳಬೇಕು, ಹಾಗೆಯೇ ಸಿದ್ದುವಿಗೆ ಶಿಕ್ಷಕರು ಹೇಳುವ ಮಾತುಗಳನ್ನೂ ಅರ್ಥಮಾಡಿಕೊಳ್ಳಬೇಕು, ಬಹಳ ನಾಜೂಕಾಗಿ ವಿಷಯವನ್ನು ತಲುಪಿಸುವವರಿಗೆ ತಲುಪಿಸಿದ್ದಾರೆ, ಕಥೆಗಾರ “ನನ್ನ ಹೆಸರಿನ ಸಾಗರ್” ಹಾಗು ನಿರ್ದೇಶಕ “ಆಕರ್ಶ ಕಮಲಾ” ಅವರು.

ಲಾಸ್ಟ್ ಡಿಶುಂ: ಹೆತ್ತ ಮಕ್ಕಳನ್ನು ಇಂಗ್ಲೀಷಿಗೆ ಮಾರಿಕೊಂಡ ಮಹಾ ತಾಯಿ-ಅಪ್ಪಂದಿರೆ,,,,,,, ನಮ್ಮ ಕನ್ನಡ ಸಿನಿಮಾ ನೋಡಲು ಮರೆಯದಿರೆ,,,,, ಮರೆಯದಿರೇ,,,,,, ಮರೆಯದಿರೇ,,,,,,,,

–ನವೀನ್ ಕುಮಾರ್ ಜಿ ಕೆ

Comments