ಚಂದ್ರನ ಎದೆಯೊಳಗೊಂದು ಕನ್ನಡಿಯ ಚೂರು.

ಚಂದ್ರನ ಎದೆಯೊಳಗೊಂದು ಕನ್ನಡಿಯ ಚೂರು.

ಚಂದ್ರನ ಎದೆಯೊಳಗೊಂದು
ಕನ್ನಡಿಯ ಚೂರು ಚುಚ್ಚಿಕೊಂಡಿದೆ,
ಅನ್ನ ಉಣ್ಣುವ ಮಕ್ಕಳು,
ಚಂದ್ರನ ನೋಡುತ್ತಿಲ್ಲವೆಂದು,
ಈಗೇನಿದ್ದರೂ
ಟಿವಿಯದೇ ಸಾಮ್ರಾಜ್ಯ,,,,,,

ತಲೆಗೆ ಕೈ ಇಕ್ಕಿ
ಮೆದುಳನ್ನೇ ಹೊಸಕಿ ಹಾಕುವ
ಮಾಧ್ಯಮಗಳ ಭಯೋತ್ಪಾದನೆಗೆ,
ಮಕ್ಕಳ ಸಮೇತ, ದೊಡ್ಡವರೂ ಬಲಿ,,,,
ಇದು ಯಾವ ಮಾಧ್ಯಮಗಳಲೂ ಸುದ್ದಿಯಾಗಿಲ್ಲ,,

ಎಷ್ಟು ನಾಜೂಕಿನ ಭಕ್ಷಕರು ನೋಡಿ,
ಎಲ್ಲರ ಸಮಯವನು,
ಅವಿರತವಾಗಿ ತಿಂದು ತೇಗಿ,,,,,
ನಗುತ್ತಿದ್ದಾರೆ ನಮ್ಮ ನೋಡಿ,,,,,

ಇವರಿಗೆ ವಿಷಯಗಳಷ್ಟೇ ಮುಖ್ಯ,,,
ವಿಷಯದ ಆಳವಾಗಲಿ, ಪರಿಣಾಮವಾಗಲಿ
ಯಾವುದೂ ಬೇಕಿಲ್ಲ,,,,

ಕೊಲ್ಲಬೆಕಿದೆ ಮಾಧ್ಯಮದವರ ಮನಸ್ಥಿತಿಯನ್ನು,,,
ಬಿತ್ತಬೇಕಿದೆ ಅವರ ಎದೆಯೊಳಗೆ ಒಂದಷ್ಟು ಪ್ರೇಮದ ಬೀಜಗಳನ್ನು,,,,
ಅವರ ಚಾನಲ್ಲಿನಲಿ ಬೆಳೆದ ಪ್ರೇಮದ ಮರದ ನೆರಳಿನಲಿ
ಮುಂದಿನ ಜನಾಂಗವಿಡೀ ಬದುಕಬೇಕಿದೆ,,,,,,,

Comments