ನಾನು ಮತ್ತು ನ್ಯಾನೋ ಕಥೆಗಳು ೧

ನಾನು ಮತ್ತು ನ್ಯಾನೋ ಕಥೆಗಳು ೧

                                                                                ದೆವ್ವಗಳು

ಅಂದು ಅಮಾವಸ್ಯೆ ರಾತ್ರಿ, ಯಾಕೋ ಏನೋ ಮನಸ್ಸಿಗೆ ಬೇಜಾರಾಯಿತು, ತೋಟದ ಬಳಿಗೆ ಒಬ್ಬನೇ ಹೋಗ್ತಿದ್ದೆ ಅಲ್ಲೇ ಒಂದು ಸ್ಮಶಾನ ಇತ್ತು, ಎರಡು ದೆವ್ವಗಳು ಕೂತು ಮಾತಾಡ್ತಾ ಇದ್ದವು (ಉತ್ಪ್ರೇಕ್ಷೆ ಅಲ್ಲ) ಅರೇ ಇವು ಏನು ಮಾತಾಡ್ತಾ ಇದ್ದಾವೆ ಅಂತ ಅಲ್ಲಿಗೋದೆ, ಅವುಗಳ ಮಾತು ಕೇಳಿ ನಂಗೇ ಶಾಕ್! ಹೊಡೀತು, ಅಬ್ಬಾ! ದೆವ್ವಗಳೆಷ್ಟು ಕರುಣಾಮಯಿಗಳು, ಮಾನವನ ಬಗ್ಗೆ ಎಂತಾ ಒಳ್ಳೆ ಅಭಿಪ್ರಾಯಗಳು ದೆವ್ವಗಳಿವೆ. ದೆವ್ವಗಳೆಂದರೆ ಭಯಾ ಪಡ್ತಾ ಇದ್ದ ನಾನು, ಅಂದಿನಿಂದ ದೆವ್ವಗಳನ್ನು ನನ್ನ ಸಹೋದರ-ಸಹೋದರಿ(?) ಅಂತಾ ಭಾವಿಸಿಬಿಟ್ಟೆ, ಮನುಷ್ಯರಿಗಿಂತ ದೆವ್ವಗಳೇ ಎಷ್ಟೋ ವಾಸಿ, ಮನುಷ್ಯ ಮಾತ್ರ ಸ್ವಾರ್ಥಕ್ಕಾಗಿ ಮಾತ್ರ ಬದುಕುತ್ತಾರೆ, ಅದ್ರೆ ದೆವ್ವಗಳು...? ಹಾಗಾದ್ರೆ ದೆವ್ವಗಳೇನು ಮಾತಾಡ್ತಾ ಇದ್ವು ಅಂದ್ರೆ.....? ಅಯ್ಯೋ ನಂಗೆ ಶಾಕ್ ಹೊಡ್ದಿದೆ ಅಲ್ವಾ......ಶಾಕಿಂದ ಹೊರಬಂದ್ಮೇಲೆ ಹೇಳ್ತೀನಿ.....!