ನಾನು ಮತ್ತು ನ್ಯಾನೋ ಕಥೆಗಳು ೨

ನಾನು ಮತ್ತು ನ್ಯಾನೋ ಕಥೆಗಳು ೨

ವಿಪರ್ಯಾಸ
ಸದಾ ದೇವರ ಭಕ್ತಿಯಲ್ಲಿರುತ್ತಿದ್ದ ಒಬ್ಬಾತ ಎಲ್ಲಿಯೇ ಆಗಲಿ ಗುಡಿಗೋಪುರ ಕಂಡ ತಕ್ಷಣ ದೇವರಿಗೊಂದು ನಮಸ್ಕಾರ ಹಾಕುವುದು ಅವನಿಚ್ಛೆ, ಒಂದು ದಿನ ಮೋಟಾರ್ ಬೈಕಿನಲ್ಲಿ ಹೋಗುತ್ತಿರುವಾಗ ದೇವಸ್ಥಾನ ಕಾಣಿಸಿತು, ತಿರುಗಿ ದೇವರಿಗೆ ನಮಸ್ಕಾರ ಹಾಕಿದ, ತಿರುವಿನಿಂದ ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆಯಿತು, ಭಕ್ತ ಸ್ಥಳದಲ್ಲೇ ಸಾವನ್ನಪ್ಪಿದ, ತಿರುಗಿ ನೋಡದೆ ದೇವರು ಮರೆಯಾದ.