ಕಲಬುರಗಿ ನಗರದ ಕಲಿಕೆಯ ಏಳಿಗೆಯ ಒಂದು ಪರಿಚಯ

ಕಲಬುರಗಿ ನಗರದ ಕಲಿಕೆಯ ಏಳಿಗೆಯ ಒಂದು ಪರಿಚಯ

             ಕಲಬುರಗಿ ನಗರವು ಕೆಲವು ವರ್ಷಗಳಿಂದ ಎಲ್ಲಾ ವಿಭಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ್ಷಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ್ನಾಟಕ ಭಾಗದ ಕಲಿಕೆಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ.  ಕಲಿಕೆಯ ಸಂಸ್ಥೆಗಳ ಹುಟ್ಟು ಕಲಬುರಗಿ ನಗರದಲ್ಲಿ ಬಹಳ ಹಿಂದೆಯೇ ಆಗಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹಾಗೂ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಕಲಿಕೆಗಾಗಿ ವಲಸೆ ಬರುತ್ತಿದ್ದಾರೆ.
ಕಲಿಕೆಯ ಏಳಿಗೆ : ಕಲಬುರಗಿ ನಗರದಲ್ಲಿ ಒಟ್ಟು ಮೂರು ವಿಶ್ವವಿದ್ಯಾಲಯಗಳಿವೆ. ಅದರಲ್ಲಿ  ಎರಡು ಸರಕಾರೀ ವಿಶ್ವವಿದ್ಯಾಲಯಗಳು ಮತ್ತು ಒಂದು ಖಾಸಗಿ ವಿಶ್ವವಿದ್ಯಾಲಯ.
೧) ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ,೨) ಸೆಂಟ್ರಲ್ ಯುನಿವರ್ಸಿಟಿ ಕರ್ನಾಟಕ ಕಲಬುರಗಿ
೩) ಶರಣಬಸವೆಶ್ವರ ವಿದ್ಯಾವರ್ಧಕ ಸಂಘ ಖಾಸಗಿ ವಿಶ್ವವಿದ್ಯಾಲಯ
       ಹಾಗಿಯೇ ಇಲ್ಲಿ ನಾಲ್ಕು   ವೈದ್ಯಕೀಯ ಕಾಲೇಜುಗಳಿವೆ. ಅದರಲ್ಲಿ  ೨ ಸರಕಾರೀ ಹಾಗೂ ೨ ಖಾಸಸಿಗಿ ಕಾಲೇಜುಗಳು. ಒಟ್ಟು 6  ಇಂಜಿನಿಯರಿಂಗ್ ಕಾಲೇಜುಗಳಿವೆ. ಎಲ್ಲಾ ಆರು ಕಾಲೇಜುಗಳು ಖಾಸಿಗಿಯಾಗಿವೆ. ನಮ್ಮ  ರಾಜ್ಯದ ಹೆಮ್ಮೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಾಗೀಯ ಕಚೇರಿಯನ್ನು ಹೊಂದಿದೆ.  ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು, ಕರ್ನಾಟಕ -  ಜರ್ಮನಿ ಮಲ್ಟಿ ಸ್ಕಿಲ್ಲ್ ಡೆವಲಪಮೆಂಟ ಕೇಂದ್ರ ಹಾಗೂ ಅಗ್ರಿಕಲ್ಜರಲ್ ಕಾಲೇಜುಯನ್ನು ಹೊಂದಿದೆ.ಕಲಬುರಗಿ ನಗರದಲ್ಲಿಯೆ ಸುಮಾರು ೩೫ ಪದವಿ ಪೂರ್ವ ಕಾಲೇಜುಗಳು,೨೦ ಪದವಿ ಕಾಲೇಜುಗಳು,೩೫ ಡಿ.ಎಡ್.ಮತ್ತು ಬಿ.ಎಡ್  ಕಾಲೇಜುಗಳುಲಿವೆ. ಸುಮಾರು ೩೦ ಪ್ರತಿಷ್ಠಿತ ಖಾಸಗಿ  ಶಾಲೆಗಳಲಿವೆ.
ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ :  ಈ ವಿಶ್ವವಿದ್ಯಾಲಯವನ್ನು ೧೯೮೦ ರಲ್ಲಿ ಸುಮಾರು ೮೬೦ ಎಕರೆ ಪ್ರದೇಶದಲ್ಲಿ  ನಿರ್ಮಾಣ ಮಾಡಿಲಾಗಿದೆ.ಈ ವಿಶ್ವವಿದ್ಯಾಲಯ ಘೋಷ ವಾಕ್ಯ " ವಿದ್ಯೇಯೆ ಅಮೃತ " ಹಾಗೂ ಚಿಹ್ನೆ ಹಂಪಿಯ ಐತಿಹಾಸಿಕ  ಕಲ್ಲಿನ ರಥವಾಗಿದೆ. ವಿಶ್ವವಿದ್ಯಾಲಯವು ೩೮ ಸ್ನಾತಕೋತ್ತರ ವಿಭಾಗಗಳನ್ನು ಹಾಗೂ ೪ ಸ್ನಾತಕೋತ್ತರ ಸ್ಟಡಿ ಸೆಂಟರಗಳನ್ನು ಹೊಂದಿದೆ.ಈ ವಿಶ್ವವಿದ್ಯಾಲಯ ಅಧೀನದಲ್ಲಿ ಕಲಬುರಗಿ, ಬೀದರ, ರಾಯಚೂರು, ಯಾದಗೀರಿ ಜಿಲ್ಲೆಯ ಕಾಲೇಜುಗಳು ಬರುತ್ತವೆ. ಮೊದಲು ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುತ್ತಿದ್ದವು ಆದರೆ ಬಳ್ಳಾರಿಯಲ್ಲಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಸ್ಥಾಪನೆಯಾದ ಮೇಲೆ  ಎರಡು ಜಿಲ್ಲೆಗಳ ಕಾಲೇಜುಗಳನ್ನು ಆ ವಿಶ್ವವಿದ್ಯಾಲಯಕ್ಕೆ ಸೇರಿಸಲಾಯಿತು. ವಿಶ್ವವಿದ್ಯಾಲಯದಲ್ಲಿ ಬೋಧನಾ ವಿಭಾಗದಲ್ಲಿ ೧೬೦ ಸಿಬ್ಬಂದಿಗಳನ್ನು , ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗದಲ್ಲಿ ೭೦೦  ಸಿಬ್ಬಂದಿಗಳನ್ನು ಹೊಂದಿದೆ.ಬೀದರ್, ರಾಯಚೂರು ಮತ್ತು ಬಸವಕಲ್ಯಾಣದಲ್ಲಿ  ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. 
ಸೆಂಟ್ರಲ್ ಯುನಿವರ್ಸಿಟಿ ಕರ್ನಾಟಕ, ಕಲಬುರಗಿ : ಕರ್ನಾಟಕ ರಾಜ್ಯದಲ್ಲಿ ಸೆಂಟ್ರಲ್ ಯುನಿವರ್ಸಿಟಿ (Central University),ಐಐಟಿ(Inadian Institute of Techonlogy)  ಹಾಗೂ ಏಮ್ಸ್(All India Institue of Medical Sciences) ಸ್ಥಾಪನೆಯಾಗಬೇಕು ಎನ್ನುವುದು  ಕನ್ನಡಿಗರ ಹಲವು ವರ್ಷಗಳ ಬೇಡಿಕೆಯಾಗಿತ್ತು.ಅವುಗಳಲ್ಲಿ ಸೆಂಟ್ರಲ್ ಯುನಿವರ್ಸಿಟಿ ಹಾಗೂ ಐಐಟಿ ಬೇಡಿಕೆ ಪೂರ್ಣಗೊಂಡಿವೆ.  ಕಲಬುರಗಿ ನಗರದಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿರುವ ಕಡಗಂಚಿ ಗ್ರಾಮದ ಹತ್ತಿರ ೬೫೪ ಎಕರೆ ಪ್ರದೇಶದಲ್ಲಿ ೨೦೦೯ ರಲ್ಲಿ  ಸೆಂಟ್ರಲ್ ಯುನಿವರ್ಸಿಟಿಯನ್ನು ಸ್ಥಾಪಿಸಲಾಗಿದೆ. ಇದು ನಮ್ಮ ರಾಜ್ಯದಲ್ಲಿ ಸ್ಥಾಪಿಸಲಾದ  ಮೊದಲ ಸೆಂಟ್ರಲ್ ಯುನಿವರ್ಸಿಟಿವಾಗಿದೆ.  ಇದು ೧೬ ವಿಭಾಗಗಳು, ೯ ಡಿಗ್ರಿ ಪ್ರೋಗ್ರಾಂಗಳನ್ನು ,೧೫ ಸ್ನಾತಕೋತ್ತರ ಪ್ರೋಗ್ರಾಂಗಳನ್ನು ಹಾಗೂ ೧೬ ರಿಸರ್ಚ್ ಪ್ರೋಗ್ರಾಂಗಳನ್ನು ಒಳಗೊಂಡಿದೆ.
          ಈ ವಿಶ್ವವಿದ್ಯಾಲಯವು ಕಲಾ,ವಿಜ್ಞಾನ, ವಾಣಿಜ್ಯ, ವ್ಯವಹಾರ ನಿರ್ವಹಣೆ ಹಾಗೂ ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೋರ್ಸ್ ಗಳನ್ನು ಹಾಗೂ ೧೬ ಸಂಶೋಧನಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಈ ವಿಶ್ವವಿದ್ಯಾಲಯದ ಚಿಹ್ನೆ ಜೀವನದ ವೃಕ್ಷ (Tree of life) , ಚಿಹ್ನೆಯ ಕೆಳಗೆ ಒಂದು ವಿಗ್ರಹವಿದೆ,ಅದು ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಜ್ಞಾನೋದಯ  ಹಾಗೂ ಅರಿವಿನ ಮೂಲಕ  ತಲುಪಲು ಪ್ರಯತ್ನಿಸಿರುವುದನ್ನು ಬಿಂಬಿಸುತ್ತದೆ. ಈ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ,ಡಾಕ್ಟರೇಟ್ ಕಲಿಕೆ, ಸಂಶೋಧನೆ,  ಚಳಕ ತರಬೇತಿಯನ್ನು ನೀಡುವುದಾಗಿದೆ. ಭಾರತ ಸರಕಾರದ ಯು.ಜಿ.ಸಿ ಯ ೧೧ ನೇ ಯೋಜನೆ ಅಡಿಯಲ್ಲಿ  ದೇಶದ ಎಲ್ಲಾ ಭಾಗಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಕಲಿಕೆಯಲ್ಲಿ ಹಿಂದುಳಿದ ಜಿಲ್ಲೆಗಳ ಜನರಿಗೆ ಒಳ್ಳೆಯ ಗುಣಮಟ್ಟದ ಉನ್ನತ ಕಲಿಕೆಯನ್ನು  ನೀಡುವ ನಿಟ್ಟಿನಲ್ಲಿ ೧೬ ಸೆಂಟ್ರಲ್ ಯುನಿವರ್ಸಿಟಿಗಳನ್ನು ದೇಶದ ವಿವಿಧ ಭಾಗಗಳಲ್ಲಿ   ಸ್ಥಾಪಿಸಲಾಯಿತು. ಅದರಲ್ಲಿ ಇದು ಒಂದಾಗಿದ್ದು , ಅವುಗಳಲ್ಲಿ ಅತ್ಯಂತ ವೇಗವಾಗಿ ಶಾಶ್ವತ ವಿಶ್ವವಿದ್ಯಾಲಯದ ಆವರಣವನ್ನು ನಿರ್ಮಾಣ ಮಾಡಿಕೊಂಡ ವಿಶ್ವವಿದ್ಯಾಲಯ ಎಂಬ ಖ್ಯಾತಿ ಪಡೆದಿದೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘ:  ಶರಣಬಸವೇಶ್ವರ ಸಂಸ್ಥಾನದ ೮ ನೇ ಪೀಠಾಧಿಪತಿ ಶ್ರೀ ಪೂಜ್ಯ ಡಾ||  ಶರಣಬಸವೇಶ್ವರ ಅಪ್ಪಾ ಅವರು ಕಲಬುರಗಿ ನಗರದಲ್ಲಿ ಕಲಿಕೆಯ ಕ್ರಾಂತಿಯನ್ನೇ ಹುಟ್ಟಿಹಾಕಿದರು.  ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ವಿಶ್ವಗುರು,ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿದ ರೂವಾರಿಯಾಗಿದ್ದಾರು. ಅವರ ಆಡಳಿತದಲ್ಲಿನ ಚಾಣಾಕ್ಷತನದಿಂದ ಅವರ ಅಧಿಕಾರದ ಅವಧಿಯಲ್ಲಿ ಈ ಸಂಸ್ಥೆಯು ತುಂಬಾ ಎತ್ತರಕ್ಕೆ ಬೆಳೆಯಿತು. ಇಂದು ಈ ಸಂಸ್ಥೆಯು 77 ಕಲಿಮನೆಗಳನ್ನು ಹೊಂದಿದೆ. ಅವುಗಳಲ್ಲಿ ಶರಣಬಸವೇಶ್ವರ ಪಬ್ಲಿಕ್ ಕಲಿಮನೆಯು ದೇಶದ ಅತ್ಯುತ್ತಮ ೬೬ ಪಬ್ಲಿಕ್ ಕಲಿಮನೆಗಳಲ್ಲಿ ಒಂದಾಗಿದೆ. ಹಾಗಿಯೇ ಇದು ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದೆ.
ಅಪ್ಪಾ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜು, ಕಲುಬರಗಿ:  ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ೨೦೦೨ ರಲ್ಲಿ ಕಲುಬರಗಿ ನಗರದಲ್ಲಿ ಈ ಕಾಲೇಜನ್ನು ಸ್ಥಾಪಿಸಿತು.
ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜು, ಕಲುಬರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಥಮಬಾರಿಗೆ   ವಿದ್ಯಾರ್ಥಿನಿಯರಿಗಾಗಿ  ಪ್ರತ್ಯೇಕವಾಗಿ ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿತು.
ವೀರಭದ್ರಪ್ಪ ನಿಸ್ಟಿ  ಇಂಜಿನಿಯರಿಂಗ್ ಕಾಲೇಜು : ೨೦೧೦ ರಲ್ಲಿ ಕಲಬುರಗಿಯ ನೆರೆಯ ಜಿಲ್ಲೆಯಾದ ಯಾದಗೀರಿಯ ಸುರಪುರ ತಾಲ್ಲೂಕು ಕೇಂದ್ರದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಈ ಕಾಲೇಜನ್ನು ಸ್ಥಾಪಿಸಿತು.
ಲಿಂಗರಾಜ ಅಪ್ಪಾ ಇಂಜಿನಿಯರಿಂಗ್ ಕಾಲೇಜು : ೨೦೧೧ ರಲ್ಲಿ ಕಲಬುರಗಿ ಜಿಲ್ಲೆಯ ನೆರೆಯ ಜಿಲ್ಲೆಯಾದ ಬೀದರ್ ನಗರದಲ್ಲಿ ಕಟ್ಟಲಾಗಿದೆ.
  ಮಾಸ್ಟರ್ ಆಫ್ ಟೂರೀಸಂಮ್ ,ಬ್ಯಾಚುಲರ್ ಆಫ್ ಟೂರೀಸಂಮ್  ಕಲಿಕೆಯನ್ನು ಪ್ರಥಮಬಾರಿಗೆ ರಾಜ್ಯದ ಐದು ಕೇಂದ್ರಗಳಲ್ಲಿ ೨೦೦೭ ಪ್ರಾರಂಭಿಸಲಾಯಿತು.  ಅವುಗಳಲ್ಲಿ ಒಂದು ಕಲಬುರಗಿಯ  ಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಸ್ಥಾಪಿಸಲಾಗಿದೆ. 
ಸುಮಾರು ಒಂದು ವರ್ಷದ ಹಿಂದೆ ನಮ್ಮ ರಾಜ್ಯ ಸರಕಾರವು ಈ ಸಂಸ್ಥೆಗೆ ಖಾಸಗಿ ವಿಶ್ವವಿದ್ಯಾಲಯದ  ಮಾನ್ಯತೆಯನ್ನು ನೀಡಿದೆ. ಈ ಸಂಸ್ಥೆಯ ಬೆಳ್ಳಿಯ ಹಬ್ಬದ ಸಂಭ್ರಮಾಚರಣೆಯನ್ನು ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ.ಏ.ಪಿ.ಜಿ ಅಬ್ದುಲ್ ಕಲಾಂರವರು ಉದ್ಗಾಟಿಸಿ ವಿದ್ಯಾರ್ಥಿಗಳ ಜೊತೆಗೆ ಸಂವಾದವನ್ನು ನಡೆಸಿದ್ದರು.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ:  ಕಲ್ಯಾಣ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಕಲಿಕೆಯ ಕ್ರಾಂತಿಯನ್ನು ಮಾಡಿದ ಹೆಮ್ಮೆಯ ಸಂಸ್ಥೆ.ಈ ಸಂಸ್ಥೆಯನ್ನು ೧೯೫೮ ರಲ್ಲಿ ದಿವಂಗತ ಶ್ರೀ ಮಾಹದೇವಪ್ಪ ರಾಮಪೂರೆರವರು ಸ್ಥಾಪಿಸಿದರು. ಈ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್, ದಂತ, ಹೋಮಿಯೋಪತಿ,ಆರ್ಯುವೇದ,ಕಾನೂನು, ವಿಜ್ಞಾನ, ಕಲೆ ಹೀಗೆ ವಿವಿಧ ವಿಭಾಗಗಳಲ್ಲಿ  ಮೇಲ್ಮಟ್ಟದ ಕಲಿಕೆಯನ್ನು ನೀಡುವ ಉದ್ದೇಶದಿಂದ ಕಲಿಕೆಯ ಸಂಸ್ಥೆಯನ್ನು ಪ್ರಾರಂಭಿಸಿದರು. ಕಲಬುರಗಿ, ಬೀದರ, ರಾಯಚೂರು ಜಿಲ್ಲೆಗಳಲ್ಲಿ ತನ್ನ ಕಲಿಕೆಯ   ಸಂಸ್ಥೆಗಳನ್ನು ಸ್ಥಾಪಿಸಿದೆ. ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ಒಟ್ಟು ೩೯ ಕಲಿಮನೆಗಳನ್ನು ಹೊಂದಿದೆ. ಅವುಗಳಲ್ಲಿ  ಕಲಬುರಗಿ ನಗರದಲ್ಲಿ ೩೦, ಬೀದರ್ ನಗರದಲ್ಲಿ ೪, ರಾಯಚೂರು ನಗರದಲ್ಲಿ ೩, ಬೆಂಗಳೂರು ನಗರದಲ್ಲಿ ೨ ಕಲಿಮನೆಗಳನ್ನು ಹೊಂದಿದೆ. ಈ ಸಂಸ್ಥೆಯ ವಿವಿಧ ಕಾಲೇಜುಗಳು ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪತಿ, ಆರ್ಯವೇಧ, ಇಂಜಿನಿಯರಿಂಗ್, ಪಾರ್ಮಸಿ, ವಿಜ್ಞಾನ, ಕಲೆ, ವಾಣಿಜ್ಯ, ವ್ಯವಹಾರ ನಿರ್ವಹಣೆ, ಕಾನೂನು ಮುಂತಾದವುಗಳ ಕಲಿಕೆಯನ್ನು ನೀಡುತ್ತಿವೆ. ಈ ಸಂಸ್ಥೆಯು ಪ್ರಮುಖ ಕಲಿಮನೆಗಳೆಂದರೆ
1 ) ಪೂಜ್ಯ ದೊಡ್ಡಪ್ಪ ಅಪ್ಪಾ ಇಂಜಿನಿಯರಿಂಗ ಕಾಲೇಜು
2) ಮಹಾದೇವಪ್ಪ ರಾಮಪುರೆ ವೈದ್ಯಕೀಯ ಕಾಲೇಜು
3) ಹೋಮಿಯೋಪತಿ ವೈದ್ಯಕೀಯ ಕಾಲೇಜು
4) ಶೇಠ ಶಂಕರಲಾಲ್ ಲಾಹೋಟಿ ಕಾನೂನು ಕಾಲೇಜು
5) ನಿಜಿಲಿಂಗಪ್ಪ ಇಸ್ಟಿಟೂಟ್ ಆಫ್ ಡೆಟಲ್ ಸೈನ್ಸ್ ಅಂಡ್ ರಿಸರ್ಚ್
6) ಬಿ.ವಿ ಭೂಮರೆಡ್ಡಿ ವಿಜ್ಞಾನ ಹಾಗೂ ಕಲಾ ಕಾಲೇಜು, ಬೀದರ್
7) ಎಸ್.ಎಲ್.ಎನ್ ಇಂಜಿನಿಯರಿಂಗ್ ಕಾಲೇಜು ರಾಯಚೂರು
 ಪೂಜ್ಯ ದೊಡ್ಡಪ್ಪ ಅಪ್ಪಾ ಇಂಜಿನಿಯರಿಂಗ ಕಾಲೇಜು :  ಅಕ್ಟೋಬರ್ ೧೫,೧೯೫೮ ರಲ್ಲಿ ಅಂದಿನ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ|| ಎಸ್. ರಾಧಾಕೃಷ್ಣನ್ ವರು ಈ ಕಾಲೇಜಿನ  ಸ್ಥಾಪನೆಗೆ ಶೀಲಾನ್ಯಾಸವನ್ನು ಮಾಡಿದರು. ಸುಮಾರು ೭೦ ಎಕರೆ ಜಮೀನಿನಲ್ಲಿ  ೧೯೫೮ ರಲ್ಲಿ ಈ ಕಾಲೇಜನ್ನು ಸ್ಥಾಪಿಸಲಾಯಿತು. ಎಲೆಕ್ಟ್ರಾನಿಕ್ಸ್ ಮತ್ತು  ಕಮ್ಯುನಿಕೇಶನ್ ಇಂಜನಿಯರಿಂಗ್  ವಿಭಾಗವನ್ನು ಕರ್ನಾಟಕದ ರಾಜ್ಯದಲ್ಲಿ ಮೊದಲು ಪ್ರಾರಂಭಸಿದ ಕಾಲೇಜು ಇದಾಗಿದೆ. ಸಿರಾಮಿಕ್ ಹಾಗೂ  ಸಿಮೆಂಟ್ ತಂತ್ರ ಜ್ಞಾನ ವಿಭಾಗವನ್ನು ಹೊಂದಿರುವ ಕರ್ನಾಟಕ ರಾಜ್ಯದ ಏಕೈಕ ಹಾಗೂ ಭಾರತದಲ್ಲಿ ವಿಭಾಗವನ್ನು ಹೊಂದಿರುವ ಮೂರು ಕಾಲೇಜಗಳಲ್ಲಿ ಒಂದಾಗಿದೆ. ಈ ಕಾಲೇಜು ೧೧ ಪದವಿ ವಿಭಾಗಗಳನ್ನು, ೧೦ ಉನ್ನತ ವ್ಯಾಸಂಗ ವಿಭಾಗಗಳನ್ನು ಹಾಗೂ ೭ ಸಂಶೋಧನಾ ಕೇಂದ್ರಗಳನ್ನು ಹೊಂದಿದೆ.
ಮಹಾದೇವಪ್ಪ ರಾಮಪುರೆ ವೈದ್ಯಕೀಯ ಕಾಲೇಜು : ಮಹಾದೇವಪ್ಪ ರಾಮಪುರೆ ಅವರ ನೇತೃತ್ವದಲ್ಲಿ 
೧೯೬೩ ರಲ್ಲಿ  ಈ ಖಾಸಗಿ ವೈದ್ಯಕೀಯ ಕಾಲೇಜನ್ನು ಕಟ್ಟಲಾಗಿದೆ.  ೧೯೭೩ ರಲ್ಲಿ ಮಹಾದೇವಪ್ಪ ರಾಮಪುರೆಯವರ ನಿಧನರಾದರು. ನಂತರ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಅವರ ಕೊಡುಗೆ ಹಾಗೂ ಶ್ರಮವನ್ನು ಗೌರವಿಸಲು  ವೈದ್ಯಕೀಯ ಕಾಲೇಜಿಗೆ ಅವರ ಹೆಸರನ್ನು ಇಡಲಾಗಿದೆ.
ಹೋಮಿಯೋಪತಿ ವೈದ್ಯಕೀಯ ಕಾಲೇಜು : ಕರ್ನಾಟಕ ರಾಜ್ಯದ ಮೊದಲ  ಹೋಮಿಯೋಪತಿ ವೈದ್ಯಕೀಯ ಕಾಲೇಜು ಹಾಗೂ  ಹೋಮಿಯೋಪತಿ ಆಸ್ಪತ್ರೆ ಇದಾಗಿದೆ.೧೯೮೦ ರಲ್ಲಿ ಈ ಕಾಲೇಜನ್ನು  ಕಟ್ಟಲಾಗಿದೆ.  ೧೯೯೯ ರಲ್ಲಿ ಕರ್ನಾಟಕ ಸರಕಾರದ ಸಹಭಾಗಿತ್ವದಲ್ಲಿ ೨೫ ಹಾಸಿಗೆಗಳ ಆರ್ಯವೇದ ಹಾಗೂ ಹೋಮಿಯೋಪತಿ ಚಿಕಿತ್ಸೆಯನ್ನು ಒಳಗೊಂಡ  ಆಸ್ಪತ್ರೆಯನ್ನು ಸ್ಥಾಪಿಸಿತು. ನಂತರದ ದಿನಗಳಲ್ಲಿ ಇದನ್ನು ೭೫ ಹಾಸಿಗೆಗೆ ಏರಿಸಲಾಯಿತು.
ನಿಜಿಲಿಂಗಪ್ಪ ಇಸ್ಟಿಟೂಟ್ ಆಫ್ ಡೆಟಲ್ ಸೈನ್ಸ್ ಅಂಡ್ ರಿಸರ್ಚ್ : ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ದಂತ  ವೈದ್ಯಕೀಯದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ೧೯೮೬ ರಲ್ಲಿ ಈ ಕಾಲೇಜನ್ನು ಕಟ್ಟಲಾಗಿದೆ. ೧೯೯೬ ರಲ್ಲಿ ಈ ಕಾಲೇಜಿಗೆ ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಎಸ್.ನಿಜಿಲಿಂಗಪ್ಪರವರ ಹೆಸರಿಡಲಾಗಿದೆ.
ಶೇಠ ಶಂಕರಲಾಲ್ ಲಾಹೋಟಿ ಕಾನೂನು ಕಾಲೇಜು : ೧೯೬೦ ರಲ್ಲಿ ಕಲಬುರಗಿ ನಗರದಲ್ಲಿ ಈ ಕಾನೂನು ಕಾಲೇಜನ್ನು ಆರಂಬಿಸಲಾಯಿತು.