ಫೆಂಗ್ ಶುಯಿ ಬಗ್ಗೆ ಒಂದಿಷ್ಟು!

ಫೆಂಗ್ ಶುಯಿ ಬಗ್ಗೆ ಒಂದಿಷ್ಟು!

ಗಣೇಶ ಕುಂಜ್, ಕುಂಜ್ ಸಾಯಿ....  ಇವೆಲ್ಲಾ ಹಿಂದೆ ನಾನು ನೋಡಿದ ಮನೆ ಹೆಸರುಗಳು. ಆಗೆಲ್ಲ ಈ ಹೆಸರುಗಳು ವಿಚಿತ್ರವೆನಿಸಿದ್ದವು. ಇವು ಕನ್ನಡವೋ ಸಂಸ್ಕೃತವೋ ಅತ್ವ ಚೀನಿ ಹೆಸರೋ ಅಂತ ಗೊತ್ತಾಗ್ತಾ ಇರ್ಲಿಲ್ಲ.  ಅಲ್ಲೊಮ್ಮೆ ಆ ಮನೆಯವರೊಬ್ಬರು ಆಚೆ ನಾಯಿ ಆಡಿಸುತ್ತಿದ್ದರು. ಅವರನ್ನು ನಿಮ್ಮ ಮನೆಗೆ ಯಾಕೆ ಈ ರೀತಿ ಹೆಸರು ಇಟ್ಟಿದ್ದೀರಿ? ಅಂತ ಹೇಗೆ ಕೇಳಲಿ. ಅವ್ರು ನಿಮಿಗ್ಯಾಕೆ ಅಂತ ಕೋಪ ಮಾಡಿಕೊಂಡ್ರೆ? ಆದ್ರೂ ಮನಸ್ಸು ಮಾಡಿ ಕೇಳಿಯೇ ಬಿಟ್ಟಿದ್ದೆ.. ನಿಮ್ಮ ಮನೆಗೆ ಗಣೇಶ ಕುಂಜ್ ಅಂತ ಯಾಕೆ ಹೆಸ್ರು ಇಟ್ಟಿದ್ದೀರಾ ಅಂತ!. ಅವರ ಉತ್ತರ ಹೀಗಿತ್ತು. ಅವರಮನೆಯ ಹಣಕಾಸು ಪರಿಸ್ಥಿತಿ ಚೆನ್ನಾಗಿರಲಿಲ್ಲ ಅವರ ಆಫೀಸಿನಲ್ಲಿ ಅವರ ಗೆಳತಿಯ ಸಲಹೆ ಮೇರೆಗೆ ಫೆಂಗ್ ಶುಯಿ ಅನುಸರಿಸಿದರಂತೆ ಆವಾಗಿನಿಂದ ಅವರ ಪರಿಸ್ಥಿತಿ ಸುಧಾರಿಸಿತಂತೆ. ಆ ವಾಸ್ತುವಿನ ಪ್ರಕಾರ ಮನೆಯ ಹೆಸರು ಬದಲಾಯಿಸಿದರಂತೆ!

 

ಫೆಂಗ್ಶುಯಿ ಅಂದ್ರೆ ಏನು ಅಂತ ಆಗ ನಂಗೆ ಗೊತ್ತಿರ್ಲಿಲ್ಲ.  ಇದರ ಬಗ್ಗೆ ಸ್ವಲ್ಪ ಮಿಂಬಲೆಯನ್ನ ತಡಕಾಡಿದಾಗ ನನಗೆ ಕಂಡ ಕೆಲ ವಿಷಯಗಳನ್ನ ಇಲ್ಲಿ ಬರೀತಾ ಇದ್ದೀನಿ! 

 

ಚೀನಾವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ದೇಶಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕೃಷಿ ಪ್ರಧಾನ ದೇಶ. ಚೀನಾದಲ್ಲಿ ಬೌಧ್ಧ ಮತವನ್ನು ಅನುಸರಿಸುವವರೇ ಹೆಚ್ಚು. ಕನ್ ಫ್ಯೂಶಿಯಸ್ ಧರ್ಮ ಅನುಸರಿಸುವವರೂ ಇದ್ದಾರೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಚೀನಾ ಪ್ರಾಚೀನ ನಾಗರೀಕತೆಯ ದೇಶವೂ ಹೌದು. ಚೀನೀಯರು ಆಹಾರ ಸೇವಿಸುವ ವಿಧಾನವೇ ವಿಶೇಷ .ತಾವು ತಿನ್ನುವ ಊಟ ನೋಡಲು ಆಕರ್ಷಕವಾಗಿರಬೇಕು, ಶುಚಿಯಾಗಿ, ಸುಹಾಸನಾಭರಿತವಾಗಿರಬೇಕೆಂದು, ಔಷಧೀಯ ಗುಣಗಳನ್ನು ಹೊಂದಿರಬೇಕು ಹಾಗು ದೇಹದ ಸಮತೋಲನವನ್ನು ಕಾಪಾಡುವಂಥದ್ದಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕೇ ಇರಬೇಕು ಚೀನೀ ತಾತ,ಅಜ್ಜಿ ವಯಸ್ಸಿನವರು ಹುಡುಗ ಹುಡುಗಿಯರಂತೆ ಕಾಣುವುದು!. ಚೀನಿಯರು ತಮ್ಮ ದೇಶದಲ್ಲೇ ಇರಲಿ, ಹೊರ ದೇಶಗಳಲ್ಲೇ ಇರಲಿ ತಮ್ಮದೇ ಆದ ಆಹಾರ ಪದ್ದತಿಯನ್ನು ಅನುಸರಿಸುತ್ತಾರೆ. ಹಾಗೇ ವಾಸ್ತು ವಿಚಾರದಲ್ಲಿಯೂ ತಮ್ಮದೇ ಆದ ಫೆಂಗ್ ಶುಯಿಯನ್ನು ಆಚರಣೆಯಲ್ಲಿಟ್ಟಿದ್ದಾರೆ. ಚೀನಿಯರ ಯಾವುದೇ ನ್ಯೂಸ್ ಪೇಪರ್ನಲ್ಲಿ ಪ್ರತಿದಿನ ಫೆಂಗ್ ಶುಯಿ ಗೆ ಸಂಭಂದಿಸಿದ ಒಂದಲ್ಲಾ ಒಂದು ಸುದ್ದಿ ಇದ್ದೇ ಇರುತ್ತದೆ. ನಾವುಗಳು ಹೇಗೆ ಮನೆಗಳಲ್ಲಿ ಸಂಪತ್ತು ನೆಮ್ಮದಿ ನೆಲೆಸಲು ಅದೃಷ್ಟಶಾಲಿಗಳಾಗಿ ಬದುಕಲು ವಾಸ್ತು ಶಾಸ್ತ್ರವನ್ನು ನಂಬುತ್ತೇವೆಯೋ ಹಾಗೆ ಚೀನೀಯರು ಫೆಂಗ್ ಶುಯಿ ಯನ್ನು ನಂಬಿದರೆ  ಮತ್ತು ಪಾಲಿಸಿದರೆ ಶುಭ ಫಲ ಕೊಡುತ್ತದೆ ಎಂದು ನ೦ಬುತ್ತಾರೆ.

 

ಚೀನಾದ ಪುರಾತನ ಶಾಸ್ತ್ರ  ಗ್ರಂಥಗಳ ಆಧಾರಿತವಾದರೂ ವಾಂಗ್ ಚಿ ಮತ್ತಿತರ ಶ್ಹುಂಗ್ ವಂಶದ ವಿದ್ವಾಂಸರಿಂದ (ಕ್ರಿ.ಶ.1126-1278)ರಿಂದ ರೂಪುಗೊಂಡಿರುವಂಥದ್ದು ಎಂದೂ ಹೇಳಲಾಗುತ್ತದೆ.
 

 

ಪರಿಸರದೊಂದಿಗೆ ಭಾವನಾತ್ಮಕ ಸಂಬಂಧವನ್ನು ಫೆಂಗ್ ಶುಯಿ  ವ್ಯವಸ್ಥೆ ಆಧರಿಸಿದೆ. ಪ್ರಕೃತಿ ಇಲ್ಲಿ ಉಸಿರಾಡುವ ಸಜೀವಿ ಎಂದು ನಂಬಲಾಗುತ್ತದೆ. ಜಗತ್ತಿನ ಪ್ರತೀ ಅಂಶವೂ ಆತ್ಮ ಸಂಬಂಧಿತವಾದ ಜೀವನವನ್ನು ನಡೆಸುತ್ತದೆ ಎಂದು ನಂಬಲಾಗುತ್ತದೆ.  ಫೆಂಗ್ ಶುಯಿ ವಿದ್ವಾಂಸರ ಪ್ರಕಾರ ಮೂಲದಲ್ಲಿ ಒಂದು ಅಮೂರ್ತ ತತ್ವವಿದ್ದು ಅದೇ ಎಲ್ಲದರ ಇರುವಿಕೆಗೆ ಕಾರಣ ಮತ್ತು ಮೂಲವಾಗಿದೆ.  ಈ ತತ್ವವು ಶುರುವಿನ ಮೊದಲು ಉಸಿರು (ಜೀವವು) ಯಾಂಗ್ (ಪುರುಷ ತತ್ವ)ನ್ನು ನಿಶ್ಚಲ ಅಂದರೆ ವಿಶ್ರಾಂತ ಸ್ಥಿತಿಗೆ ಬಂದಾಗ ಸ್ತ್ರೀ ತತ್ವ (ಯಿನ್ )ನನ್ನು ,ಪಡೆಯಿತು.ಈ ಎರಡು ತತ್ವ ಗಳಿಗೆ ಜೀವ ತುಂಬಿದ ಚೈತನ್ಯ( ಚಿ ) ಅಥವಾ ನಿಸರ್ಗದ ಉಸಿರು ಸಂಚರಿಸಿದಾಗ ಪ್ರಥಮ ಪುರುಷ ಮತ್ತು ಸ್ತ್ರೀ ಗಳನ್ನು ಹುಟ್ಟು ಹಾಕಿತು. ನಂತರ ಇಡೀ ವಿಶ್ವ ಮತ್ತು ಅದರೊಳಗಿನ ಎಲ್ಲವು ಜನಿಸಿದವು .ಇವುಗಳನ್ನು (ಲಿ)ಎಂದು ಕರೆಯಲಾಗುವ ನಿಶ್ಚಿತ ಮತ್ತು ಬದಲಾವಣೆ ಹೊಂದುವ ನಿಯಮಗಳಿಗನುಸಾರವಾಗಿ ಉಂಟಾದವು ಎಂದು ಹೇಳಲಾಗುತ್ತದೆ.

 

ಫೆಂಗ್ ಶುಯಿ ಎಲ್ಲಾ ನಿಯಮಗಳು ನಿಖರ ಗಣಿತ ತತ್ವಗಳಿಗೆ ಅನುಗುನವಾಗಿ ನಡೆಯುತ್ತವೆ ಎಂಬುದನ್ನು ಪ್ರಾಚೀನ ವಿದ್ವಾಂಸರು ಗಮನಿಸಿದ್ದರು. ಈ ಗಣಿತ ತತ್ವಗಳನ್ನು (ಸೋ)ಎಂದು ಕರೆದರೂ. ಇಲ್ಲಿ ಸಂಖ್ಯಾ ಶಾಸ್ತ್ರವೂ ಇದೆ.ಸಾಮಾನ್ಯವಾಗಿ ಇವು (ಯಂಗ್ )ಎನ್ನುವ ನಿಸರ್ಗದ ಪ್ರಕ್ರಿಯೆ ಹಾಗೂ ಭೌತಿಕ ಜಗತ್ತಿನ ಬಾಹ್ಯ ರೂಪಗಳಲ್ಲಿ ಗೂಢವಾಗಿರುವಂತೆ ತೋರುತ್ತವೆ.ಚಿ  ,ಲಿ,ಸೋ,ಯಂಗ್,ಈ 4 ವಿಭಾಗಗಳೇ ಫೆಂಗ್ ಶುಯಿ ತಾತ್ವಿಕ ವ್ಯವಸ್ತೆಯನ್ನು ರೂಪಿಸಿವೆ .

 

ಚೆನೀ ತತ್ವ ಶಾಸ್ತ್ರಜ್ಞ ಲವೂತ್ಸೆ ಎಂಬುವವನು (ಯಿನ್ ಮತ್ತು ಯಾಂಗ್) ಎಂಬ ತತ್ವಗಳು ಒಳ್ಳೆಯದು &ಕೆಟ್ಟದು ,ಕತ್ತಲೆ,ಬೆಳಕು ಸಾಮರ್ಥ್ಯ, ದೌರ್ಬಲ್ಯ, ಸ್ತ್ರೀ, ಪುರುಷ ಎಂಬ ದ್ವಂದ್ವ ಬಲಗಳ ಪ್ರಭಾವಕ್ಕೊಳಗಾಗಿ ಮನುಷ್ಯ ಪಾಲಿಸಿಕೊಂಡುಬಂದಿರುವ ಸದಾಚಾರಗಳೇ ಫಲಿತಾಂಶ ನಿರ್ಧರಿಸುತ್ತವೆ ಎಂದಿದ್ದಾನೆ.ಇದಕ್ಕೆ ನಮ್ಮಲ್ಲಿನ ಮಾಡಿದ್ದುಣ್ಣಾ ಮಾರಾಯ ಎಂಬ ಮಾತು  ತುಂಬಾ ಹತ್ತಿರವಿದೆ ಎಂದು ನನಗನ್ನಿಸುತ್
 

ಯಿನ್ ಯಾಂಗ್ ಬಿಲ್ಲೆ  

 

ಫೆಂಗ್ ಶುಯಿ ಶಬ್ಧದ ಅರ್ಥ ಗಾಳಿ,ನೀರು .ನಾವುಗಳು ಭೂಮಿಯ ಮೇಲೆ ಕುಟುಂಬದಲ್ಲಿ ಬದುಕು ಸಾಮರಸ್ಯದಿಂದ ಹೇಗೆ ಬದುಕಬೇಕೆಂದು ತಿಳಿಸುವ ನಿಯಮ ಅಥವಾ ಕಲೆಯೇ ಈ ಫೆಂಗ್ ಶುಯಿ.

 

ನಾವುಗಳು ಭಾರತ ದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪೂಜಿಸುವಂತೆ ಚೀನಿಯರು ಫುಕ್, ಲುಕ್, ಸಾಯುರನ್ನು ಆರಾಧಿಸುತ್ತಾರೆ.ಆದರೆ ಪೂಜೆ ಪುನಸ್ಕಾರಗಲಿಲ್ಲ.ಸಾಮಾನ್ಯವಾಗಿ ಎಲ್ಲ ಚೀನಿ ಮನೆಗಳಲ್ಲೂ ಈ ಮೂವರ ವಿಗ್ರಹಗಳಿರುತ್ತವೆ. ಅವುಗಳ ಸಾನಿಧ್ಯ ಸಾಂಕೇತಿಕವಸ್ಟೆ ಇದರಿಂದ ಸುಖ,ಸಮೃಧಿ ಮತ್ತು ಭಾಗ್ಯ  ಬರುತ್ತದೆ ಎಂದು ನಂಬುತ್ತಾರೆ.

ಲುಕ್ ಪುಕ್ ಸಾಯು

ಫುಕ್---ಸಮೃದ್ಧಿ ದಯಪಾಲಿಸುವ ದೇವರು.ಇತರ ಎರಡು ವಿಗ್ರಹ ಗಳಿಗಿಂತ ಸ್ವಲ್ಪ ಎತ್ತರ ನಿಲುವು ಎದ್ದು ಕಾಣುತ್ತದೆ.ಈ ವಿಗ್ರಹವನ್ನು ಮಧ್ಯೆ ಇರಿಸಲಾಗುತ್ತದೆ.

ಲುಕ್ ---ಪ್ರಭಾವ ಮತ್ತು ಸಿರಿವಂತಿಕೆಯ ದೈವ ,

ಸಾಯು ---ದೀರ್ಘಾಯುಶ್ಯದ ದೈವ.ಲುಕ್ ಗೆ ಪ್ರಥಮ ಸ್ಥಾನ ,ಸಾಯು ವನ್ನು ಕೊನೆಯಲ್ಲಿ ಇರಿಸಬಹುದು.ಸಾಯುವಿನ ತಲೆ ಗುಂಡಾಗಿರುತ್ತದೆ.ಈ ವಿಗ್ರಹ ಇರಿಸುವ ಜಾಗದ ಹಿಂದೆ ಮುಂದೆ ಶೌಚಾಲಯ,ಕಿಟಕಿ, ಅಡುಗೆಮನೆ ಇರಬಾರದು.ಸಾಯು ಒಬ್ಬ ವಯಸ್ಸಾದ ಮನುಷ್ಯ.ಕೈಯಲ್ಲೊಂದು ದಂಡ ಹಿಡಿದಿರುತ್ತಾನೆ.ಆ ದಂಡಕ್ಕೆ ಒಂದು ಮಾಯಾವಿ ಸೋರೆಕಾಯಿಯನ್ನು ಕಟ್ಟಿರಲಾಗುತ್ತದೆ.ಸಾಯುವನ್ನು ಆರಾಧಿಸುವುದಿಲ್ಲ ಕೇವಲ ಪ್ರದರ್ಶನಕ್ಕೆ ಮಾತ್ರ.ಈ ಮೂರೂ ವಿಗ್ರಹಗಳನ್ನು  ಒಟ್ಟಾಗಿ ಇರಿಸಿದಾಗ ಶುಭ ಫಲಿತಾಂಶಗಳು ಸಿಗುತ್ತವೆ.

ಹೊಲು---

ಹೊಲು

ಇದು ಒಳ್ಳೆಯ ಅದ್ರುಸ್ಟ ದೀರ್ಘಯುಶ್ಯದ ವಿಗ್ರಹ .ಹೊಲು ಇದು ಸೋರೆಕಾಯಿಯ ಆಕಾರ ಹೊಂದಿರುತ್ತದೆ.ಸ್ವರ್ಗ ನರಕಗಳ ಒಗ್ಗೂಡುವಿಕೆಯ ಸಂಕೇತ ಎಂದು ಹೇಳಬಹುದು.ಮೇಲಿನ ಅರ್ಧ ಭಾಗ ಸ್ವರ್ಗ ಕೆಳ ಅರ್ಧ ಭೂಮಿ .ಒಣಗಿದ ಸೋರೆಕಾಯಿಯನ್ನು ಮನೆ ಒಳಗೋ ಅಥವಾ ಹೊರಗೋ ಪ್ರದರ್ಶನಕ್ಕೆ ಇಟ್ಟರೆ ಮನೆ ಸೌಖ್ಯದಿ೦ದಿರುತ್ತದೆ .ಹೊಲುವಿನ ಮಾದರಿಯನ್ನು ಹಿತ್ತಾಳೆ ಯಲ್ಲಿಯೂ ಮಾಡಿಸಿ ಬಳಸಬಹುದು.ಅನಾರೋಗ್ಯದಿಂದಿರುವವರ ಹಾಸಿಗೆಯ ಪಕ್ಕದಲ್ಲಿ ಹೊಲು ಇಟ್ಟರೆ ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆಯಿದೆ.
 

ಕುವಾನ್ ಕುಂಗ್ ---

ಕುವಾನ್ ಕುಂಗ್

ಹೋರಾಟ,ಶ್ರೀಮತಿಕೆಯ ದೇವರು.ಈ ವಿಗ್ರಹ ಅತ್ಯಂತ ಸಮರ್ಥ ಶಕ್ತಿಗಳನ್ನು ಮನೆ ರಕ್ಷಿಸುವ ಸಲುವಾಗಿ ಬರಮಾಡಿಕೊಳ್ಳಲು ಇಡಲಾಗುತ್ತದೆ.ಕುವಾನ್ ಕುಂಗ್ ನಿoತಿರುವ,ಕುಳಿತಿರುವ,ಕುದುರೆ ಏರಿ ಕುಳಿತಿರುವ, ಜೊತೆಯಲ್ಲಿ ಈತನ ಕೈಯಲ್ಲಿ ಎರೆಡು ಮುಖ್ಯ ಆಯುಧಗಲಿರುತ್ತವೆ ದಂಡ ,ಖಡ್ಗ ಇವು ಸರಿಯಾದ ಸ್ಥಾನಗಳಲ್ಲಿರುವ ವಿಗ್ರಹ ಕೊಂಡುಕೊಳ್ಳಬೇಕು.ಮನೆ ಯಜಮಾನನನ್ನು ರಕ್ಷಣೆ ಮಾಡುವದು,ಅವನಿಗೆ ಸಿರಿ ಸಂಪತ್ತು ದೊರೆಯುವಂತೆ ಮಾಡುತ್ತಾನೆ.ಕುವನ್ ಕುಂಗ್ ವಿಗ್ರಹವನ್ನು (NW)ವಾಯುವ್ಯ ಮೂಲೆಯಲ್ಲಿ ಮುಂಬಾಗಿಲಿಗೆ ಅಭಿಮುಖವಾಗಿ, ವಿಗ್ರಹ ಬಾಗಿಲು ಕಾಯುವಂತೆ, ಸ್ವಲ್ಪ ಎತ್ತರವಾಗಿ ಕಾಣುವಂತೆ ಇರಿಸಬೇಕು.ಕಛೇರಿಗಳಲ್ಲಿ ಕುಳಿತುಕೊಳ್ಳುವ ಕುರ್ಚಿಯ ಹಿಂದುಗಡೆ ಇರಿಸಬೇಕು.

 

ತ್ಸಾಯಿ ಶೆನ್ ಯೆಹ್---

ತ್ಸಾಯಿ ಶೆನ್ ಯೆಹ್

ಚೀನೀಯರು ಈ ದೇವರನ್ನು ಸಿರಿ ಸಂಪದದ ಸಂಕೇತ ಈ ದೇವರು ಎಂದು ನಂಬುತ್ತಾರೆ.ಹುಲಿಯೊಂದರಮೇಲೆ ತ್ಸಾಯಿ ಕುಳಿತಿರುವಂತೆ ಈ ವಿಗ್ರಹ ಗೋಚರಿಸುತ್ತದೆ.ವಾಸದ ಕೋಣೆಯು ಈ ವಿಗ್ರಹವನ್ನಿರಿಸಲು ಪ್ರಾಶಸ್ತ್ಯ ಜಾಗ.ಈ ವಿಗ್ರಹ ಮನೆಯ ಮುಖ್ಯ ಬಾಗಿಲನ್ನು ನೇರವಾಗಿ ಇಲ್ಲವೇ ಕರ್ಣಾರೀತ ನೋಡುವಂತೆ ಇರಿಸಬೇಕು.ಈ ವಿಗ್ರಹ ನೋಡಲು ಭಯ ಹುಟ್ಟಿಸುವoತಿದ್ದರು ಇದು ಕೆಟ್ಟದ್ದನ್ನು ಹೊರಹಾಕಿ ಬಡತನ ತೊಲಗಿಸುತ್ತದೆ.ಸಿರಿ ಒದಗಿ ಬರುತ್ತದೆ. ಕಾಲಕಾಲಕ್ಕೆ ಶಾಂತಿ –ವಿಶ್ರಾಂತಿ ಮನೋಭಾವವನ್ನು ಉಂಟುಮಾಡುತ್ತದೆ .ಈ ವಿಗ್ರಹವನ್ನು ಮಲಗುವ ಕೋಣೆಯಲ್ಲಿಟ್ಟರೆ ಅಶುಭ .

 

ನಗುವ ಬುದ್ಧ ----–
 

ನಗುವ ಬುದ್ದ

ಸಂಪತ್ತಿನ ದೇವರು.ಈ ಪ್ರತಿಮೆಯು ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ ಇದು ಮನೆಗೆ  ಸಂರುದ್ಧಿ ಯಶಸ್ಸು, ಆರ್ಥಿಕ ಲಾಭ ಗಳನ್ನು ತಂದುಕೊಡುತ್ತದೆ.ಈ ವಿಗ್ರಹವನ್ನು ಎಲ್ಲಿ ಹೇಗೆ ಇರಿಸಬೇಕೆoಬುದು ಮುಖ್ಯ.ನೆಲಮಟ್ಟದಿಂದ ಎರೆಡುವರೆ ಅಡಿ ಎತ್ತರದಲ್ಲಿ ಮನೆಯ ಮುಖ್ಯ ದ್ವಾರವನ್ನು ನೋಡುವಂತೆ ಇರಿಸಬೇಕು.ಮನೆಯನ್ನು ಪ್ರವೇಶಿಸುವ ಒಳ್ಳೆಯ ಶಕ್ತಿಯನ್ನು ಬುದ್ಧನ ಪ್ರತಿಮೆ ನಗುನಗುತ್ತ ಸ್ವಾಗತಿಸುತ್ತದೆ.ಈ ಶಕ್ತಿ ಕ್ರಿಯಾತ್ಮಕ ಬೆಳವಣಿಗೆಗೆಗೆ ಕಾರಣ ವಾಗುತ್ತದೆ.ನಗುವ ಬುದ್ಧ ನನ್ನು ಮಲಗುವ ಕೋಣೆ ಅಥವಾ ಊಟದ ಕೋಣೆಯಲ್ಲಿ ಇಡಬೇಡಿ.ಈ ದೇವರನ್ನು ಆರಾಧಿಸುವುದಿಲ್ಲ.ಅದರ ಸಾನಿದ್ಯವೇ ಶುಭಕಾರಕ.ನಗುವಬುದ್ಧನ ಅನೇಕಾನೇಕ ಪ್ರತಿಮೆಗಳನ್ನು ನಾವು ಕಾಣುತ್ತೇವೆ ನಿಂತಿರು ಕುಂತಿರುವ,ಹಿಂದೆ ಹಣದ ಚೀಲ ವಿರುವ ಬುದ್ಧ ರೂಪ ಎಲ್ಲದಕ್ಕಿಂತ ಉತ್ತಮ ಎಂದು ನಂಬಲಾಗುತ್ತದೆ.ಇದನ್ನು ಕಾರ್ಡ್ಗಳ ರೂಪದಲ್ಲಿಯೂ, ಪರ್ಸ್, ಜೇಬುಗಳಲ್ಲಿಯೂ ಇಟ್ಟುಬಹುದು.ಇನ್ನೊoದು ಬಗೆಯ ಕಾರ್ಡ್ ಎಂದರೆ ಕುವಾನ್ ಯಿನ್ ಬುದ್ಧ ಇದು ಸುರಕ್ಷೆ ಮತ್ತು ರಕ್ಷಣೆಯ ಸಂಕೇತ.

 

ಈ ದೇವರುಗಳಲ್ಲದೆ ಸುಖ,ಶಾಂತಿ,ಸಮೃಧಿ ಮತ್ತು ದೀರ್ಘಯುಷ್ಯವನ್ನು ಇಮ್ಮಡಿಗೊಳಿಸಬಲ್ಲ 3 ಚಿನ್ಹೆಗಳನ್ನು ಚೀನೀಯರು ಬಳಕೆಯಲ್ಲಿಟ್ಟುಕೊಂಡಿದ್ದಾರೆ.

 

1).ಇಮ್ಮಡಿ ಸುಖ ತರುವ ಸಂಕೇತ.---

ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಉಂಟಾಗಲು,ಸಮರ್ಥವಾಗಿ ಕುಟುಂಬ ನಿಭಾಯಿಸಲು ಮಲಗುವ ಕೋಣೆಯ ನೈಋತ್ಯ ಭಾಗದಲ್ಲಿ ತೂಗುಹಾಕಲಾಗುತ್ತದೆ.ಈ ಸಂಕೇತ ಗಾಢ ರಕ್ತ ಕೆಂಪುಬಣ್ಣದಲ್ಲಿ ಚಿತ್ರಿತವಾಗಿರುತ್ತದೆ.ಈ ಕೆಂಪು ಬಣ್ಣ ಜೀವನದಲ್ಲಿ ಪ್ರೀತಿ ,ಪ್ರೇಮ ಪ್ರಣಯಗಳನ್ನು ಇಮ್ಮಡಿಗೊಳಿಸುತ್ತದೆ ಎಂಬ ನಂಬಿಕೆಯಿದೆ.ಚೀನಾದ ಪೀಟ್ಹೋಪಕರಣಗಳ ಮೇಲೆ ಈ ಸಂಕೇತವನ್ನು ಕೆತ್ತಿರಲಾಗುತ್ತದೆ.ಈ ಸಂಕೇತ ಕೊನೆಯಿರದ ಪ್ರೀತಿಯಾ ಸಂಕೇತ.ವಿವಾಹಿತ ದಂಪತಿಗಳು ತಮ್ಮ ಹಾಸಿಗೆಯ ಅಡಿಯಲ್ಲೂ ಈ ಸಂಕೆತವನ್ನಿರಿಸಬಹುದು.
 

2 )  ದೀರ್ಘಾಯುಶ್ಯದ ಸಂಕೇತ------

ಇದು ಒಂದು ಶುಭ ಹಾಗೂ ಫಲದಾಯಕ ಸಂಕೇತ.ಇದು ಒಳ್ಳೆಯ ಆರೋಗ್ಯ ಮತ್ತು ಕುಟುಂಬದಲ್ಲಿ ಹಿತ ಸೌಖ್ಯವನ್ನು ತಂದುಕೊಡುವಂಥದ್ದು ಜೊತೆಗೆ ದೀರ್ಘಯುಷ್ಯವನ್ನು ಕೊಡುವದು ಎಂದು ನಂಬಲಾಗುತ್ತದೆ.

3)  ಪ್ರೇಮದ ಗಂಟು ---


ಇದೊಂದು ಆದಿಯೂ ಅಂತ್ಯವೂ ಇಲ್ಲದ ನಿಗೂಢ ಪ್ರೇಮದ ಗಂಟು.ಈ ಗಂಟು ಜನನ ಮರಣಗಳಿಗೆ ಹೇಗೆ ಅದಿ ,ಅಂತ್ಯ ವಿಲ್ಲವೋ ಹಾಗೇ ಪ್ರೀತಿ, ಪ್ರೇಮಕ್ಕೂ ಆದಿ ಅಂತ್ಯವಿಲ್ಲ ಎಂದು ತಿಳಿಸುತ್ತದೆ.ಬೌದ್ಧ ಸಿದ್ಧಾoತವೂ ಈ ಅನಂತ ಚಕ್ರವನ್ನು ಒಪ್ಪಿದೆ.ಈ ಪ್ರೇಮದ ಚಿನ್ಹೆಯು ಕುಟುಂಬ ಸದಸ್ಯರ ನಡುವೆ ಒಗ್ಗಟ್ಟು,ಜಗಳವಿಲ್ಲದ ವಾತ್ಸಲ್ಯಕ್ಕೆ ಪ್ರತೀಕ ಈ ಸಂಕೇತ ಎಂದು ಪರಿಗಣಿಸುತ್ತಾರೆ.ಈ ಗಂಟಿನ ಬಣ್ಣ ಕೆಂಪು.ಮಲಗುವ ಕೋಣೆಯ ನೈಋತ್ಯ ಮೂಲೆಯಲ್ಲಿಟ್ಟರೆ  ದಂಪತಿಗಳ ಸಂಬಂದ ಉತ್ತಮಗೊಳ್ಳುತ್ತದೆ.ಕಛೇರಿಗಳಲ್ಲಿಯು ಮುಖ್ಯಸ್ಥ ಮತ್ತು ಸಿಬ್ಬಂದಿಗಳ ನಡುವೆ ಸಾಮರಸ್ಯ ಹೆಚ್ಚುತ್ತದೆ.