ಕಲಬುರಗಿ ನಗರ - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು

ಕಲಬುರಗಿ ನಗರ - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು

ಕಲಬುರಗಿ ನಗರ  - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು
       ನಮ್ಮ ರಾಜ್ಯ ಸರಕಾರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು  ನೀಡುವ ದುಷ್ಟಿಯಿಂದ ಕರ್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು ವಿಭಾಗಗಳಾಗಿ ರೂಪಿಸಿದೆ. ಕಲಬುರಗಿಯು ಈ  ನಾಲ್ಕು ವಿಭಾಗಗಳಾಗಿ ಒಂದಾಗಿ ಗುರುತಿಸಲಾಯಿತು. ನಂತರ ಕಲಬುರಗಿ ನಗರವನ್ನು  ಕಲ್ಯಾಣ ಕರ್ನಾಟಕ ಭಾಗದ ಆಳ್ವಿಕೆಯ ವಿಭಾಗೀಯ ಕೇಂದ್ರವಾಗಿ ರೂಪಿಸಲಾಗಿದೆ. ಇಂದು ಕಲಬುರಗಿ ನಗರವು ಕಲ್ಯಾಣ ಕರ್ನಾಟಕ ಭಾಗದ ವಿಭಾಗೀಯ ಕೇಂದ್ರವಾಗಿ ಬೆಳೆದಿದೆ. ಈ ನಗರದಲ್ಲಿರುವ ಪ್ರಮುಖ ಕಚೇರಿಗಳೆಂದರೆ
ಮಿನಿ ವಿಧಾನಸೌಧ, ಕಲಬುರಗಿ :
      ನಗರದ ಬೇರೆಬೇರೆ ಕಡೆಗೆ  ಇರುವ ಸರಕಾರೀ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ಸ್ಥಾಪಿಸಿ ಜನರ ಅಲೆದಾಟವನ್ನು ತಪ್ಪಿಸಲು, ಬೆಂಗಳೂರು ನಗರದಲ್ಲಿರುವ ನಮ್ಮ ರಾಜ್ಯ ಸರಕಾರದ ಶಕ್ತಿ ಕೇಂದ್ರ  ವಿಧಾನಸೌಧದ ಮಾದರಿಯಲ್ಲಿಯೇ ಕಲಬುರಗಿಯಲ್ಲಿಯು ಮಿನಿ ವಿಧಾನಸೌದ ಕಟ್ಟಡವನ್ನು ಕಟ್ಟಲಾಗಿದೆ. ನಂತರ ಕಲಬುರಗಿ ನಗರದಲ್ಲಿನ ಹಲವಾರು ಸರಕಾರೀ ಕಚೇರಿಗಳನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇಲ್ಲಿ ರಾಜ್ಯ ಸರಕಾರವು ಮೂರು ಭಾರಿ ಸಚಿವ ಸಂಪುಟ  ಸಭೆಯನ್ನು ನಡೆಸಿದೆ.
ಈ ಕಟ್ಟಡದಲ್ಲಿರುವ ಪ್ರಮುಖ ಸರಕಾರೀ ಕಚೇರಿಗಳೆಂದರೆ
ಪ್ರಾದೇಶಿಕ ಆಯುಕ್ತರ ಕಚೇರಿ : ಕಲ್ಯಾಣ ಕರ್ನಾಟಕ ಭಾಗದ ೬ ಜಿಲ್ಲೆಗಳನ್ನು ಒಟ್ಟುಗೂಡಿಸಿ ಒಂದು ಪ್ರಾದೇಶಿಕ ವಿಭಾಗವನ್ನು  ರೂಪಿಸಿ, ಈ ಪ್ರಾದೇಶಿಕ ವಿಭಾಗಕ್ಕೆ ಒಬ್ಬ ಆಯುಕ್ತರನ್ನು ನೇಮಕಮಾಡಲಾಗಿದೆ. ಅವರ ಕಚೇರಿಯು ಕಲ್ಯಾಣ ಕರ್ನಾಟಕ ಭಾಗದ ವಿಭಾಗೀಯ ಕೇಂದ್ರ ಕಲಬುರಗಿ ನಗರದಲ್ಲಿದೆ.
ಕರ್ನಾಟಕ ಲೋಕಸೇವಾ ಆಯೋಗದ ಪ್ರಾದೇಶಿಕ  ಕಚೇರಿ : ಕರ್ನಾಟಕದ ಲೋಕಸೇವಾ ಆಯೋಗದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ. ಇದರ ನಾಲ್ಕು ಪ್ರಾದೇಶಿಕ  ಕಚೇರಿಗಳು ಕಲಬುರಗಿ, ಮೈಸೂರು, ಬೆಳಗಾವಿ, ಶಿವಮೊಗ್ಗ ನಗರಗಳಲ್ಲಿ  ಸ್ಥಾಪಿಸಲಾಗಿದೆ.
ಈ ಕಟ್ಟಡದಲ್ಲಿರುವ ಇತರೆ ಕಚೇರಿಗಳು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕಲಬುರಗಿ ಹಾಗೂ ಇನ್ನೂ ಹಲವಾರು ಇಲಾಖೆಯ ಕಚೇರಿಗಳು ಹೊಂದಿದೆ.
ಕರ್ನಾಟಕ  ಹೈಕೋರ್ಟಿನ ಖಾಯಂ ವಿಭಾಗೀಯ ಪೀಠ, ಕಲಬುರಗಿ :
            ಕಲ್ಯಾಣ ಕರ್ನಾಟಕ ಭಾಗದಲ್ಲಿ ಕರ್ನಾಟಕ  ಹೈಕೋರ್ಟಿನ ಖಾಯಂ ವಿಭಾಗೀಯ ಪೀಠ ಸ್ಥಾಪನೆಯಾಗಬೇಕು ಎನ್ನುವುದು ಈ ಭಾಗದ ಜನರ ಬಹಳ ವರ್ಷಗಳ  ಬೇಡಿಕೆಯಾಗಿತ್ತು. ಯಾಕೆಂದರೆ ಬೆಂಗಳೂರು ನಗರವು ಈ ಭಾಗದಿಂದ ತುಂಬಾ ದೂರದಲ್ಲಿರುವುದರಿಂದ ಇಲ್ಲಿಯ ಜನರ ಹೈಕೋರ್ಟು ಕಲಾಪಗಳಿಗೆ ಹಾಜರಾಗಲು ತುಂಬಾ ಹಣವು ಖರ್ಚುವಾಗುವುದರ ಜೊತೆಯಲ್ಲಿ  ಬಹಳ ಸಮಯವು ಬೇಕಾಗುತ್ತಿತ್ತು. ಇದರಿಂದ ಜನರಿಗೆ ತುಂಬಾ ಕಷ್ಟವಾಗುತ್ತಿತ್ತು . ಇದಕ್ಕಾಗಿ ಈ  ಭಾಗದಲ್ಲಿ ವಕೀಲರು, ಜನಸಾಮಾನ್ಯರರು ಹಾಗೂ ವಿವಿಧ ಸಂಘಟನೆಗಳಿಂದ ಉಗ್ರವಾದ ಹೋರಾಟಗಳು ನಡೆದವು. ಕಡೆಗೂ ಈ ಭಾಗದ ಜನರ ಆಸೆ ಈಡೇರುವ ಕಾಲಬಂತು, ೨೦೦೬ ರಲ್ಲಿ  ನಮ್ಮ ರಾಜ್ಯ ಸರಕಾರವು ಕಲಬುರಗಿ ಹಾಗೂ ಧಾರವಾಡ ನಗರಗಳಲ್ಲಿ ಕರ್ನಾಟಕ ಹೈಕೋರ್ಟಿನ ಸಂಚಾರಿ ಪೀಠವನ್ನು ಸ್ಥಾಪಿಸಲು ಅನುಮೋದನೆ ನೀಡಿತ್ತು. ಅದರಂತೆ ಜುಲೈ ೫, ೨೦೦೮ ರಂದು ಕಲಬುರಗಿ ನಗರದಲ್ಲಿ ಕರ್ನಾಟಕ ಹೈಕೋರ್ಟಿನ ಸಂಚಾರಿ ಪೀಠದ ಉದ್ಘಾಟನೆ   ನೇರವೇರಿಸಲಾಯಿತು. ಮುಂದೆ ಈ ಸಂಚಾರಿ ಪೀಠಗಳನ್ನು ಖಾಯಂಗೊಳಿಸುವ ಬೇಡಿಕೆ ಕೇಳಿಬಂತು, ಹಾಗಾಗಿಯೇ ೩೧ ಆಗಸ್ಟ್ ೨೦೧೩ ರಂದು ಕಲಬುರಗಿಯಲ್ಲಿನ ಕರ್ನಾಟಕ ಹೈಕೋರ್ಟಿನ ಸಂಚಾರಿ ಪೀಠವನ್ನು ಖಾಯಂ ಪೀಠವನ್ನಾಗಿ ಮತ್ತು ೨೫ ಆಗಸ್ಟ್ ೨೦೧೩ ರಂದು ಧಾರವಾಡ ಸಂಚಾರಿ ಪೀಠವನ್ನು ಖಾಯಂ ಪೀಠವನ್ನಾಗಿ ಪರಿವರ್ತಿಸಲಾಯಿತು.
 
ಇನ್ಸ್ಪೆಕ್ಟರ್ ಜನರಲ್  ಆಫ್ ಪೋಲಿಸ್ (Inspector General of Police)  ಕಚೇರಿ, ಕಲಬುರಗಿ :  
     ನಮ್ಮ ರಾಜ್ಯ ಸರಕಾರದ ಗೃಹ ಇಲಾಖೆಯು  ನಾಲ್ಕು  ಆಯುಕ್ತರನ್ನು ಹಾಗೂ ಆರು ಇನ್ಸ್‌ಪೆಕ್ಟರ್  ಜನರಲ್   ಆಫ್ ಪೊಲೀಸ್ ರನ್ನು ಹೊಂದಿದೆ. ಈ ಇಲಾಖೆಯು ರಾಜ್ಯವನ್ನು ಆರು ವ್ಯಾಪ್ತಿಗಳಲ್ಲಿ ವಿಂಗಡಿಸಿದೆ, ಅವುಗಳ ವಿವರಣೆಯನ್ನು ಈ ಕೆಳಗಿನ ಪಟ್ಟಿಯಲ್ಲಿ  ನೀಡಲಾಗಿದೆ.

ಸಂಖ್ಯೆ

ವ್ಯಾಪ್ತಿ

.ಜಿ ಕಚೇರಿ ಸ್ಥಳ

ದಕ್ಷಿಣ

ಮೈಸೂರ

ಉತ್ತರ

ಬೆಳಗಾವಿ

ಕೇಂದ್ರೀಯ

ಬೆಂಗಳೂರ

ಈಶಾನ್ಯ

ಕಲಬುರಗಿ

ಪಶ್ಚಿಮ

ಮಂಗಳೂರ

ಪೂರ್ವ

ದಾವಣಗೆರೆ

 
     ಈಶಾನ್ಯ ವ್ಯಾಪ್ತಿಯ ಇನ್ಸ್‌ಪೆಕ್ಟರ್ ಜನರಲ್  ಆಫ್ ಪೊಲೀಸ್ ಕಚೇರಿಯು ಕಲಬುರಗಿ ನಗರದಲ್ಲಿದು, ಇದರ ವ್ಯಾಪ್ತಿಯಲ್ಲಿ ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಕಲಬುರಗಿ ಒಟ್ಟು ಐದು ಜಿಲ್ಲೆಗಳನ್ನು ಸೇರಿಸಲಾಗಿದೆ. ಈ ಕಚೇರಿಯ ಕಟ್ಟಡದಲ್ಲಿರುವ ಒಂದು ವಿಶೇಷತೆ ಏನೆಂದರೆ, ಹಸಿರು ಕಟ್ಟಡದ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ನಮ್ಮ ದೇಶದ ಮೊದಲ ಸರಕಾರಿ ಕಟ್ಟಡವಿದು. ಇದರ ನಿರ್ಮಾಣದ ಕಾರ್ಯ ೨೦೦೩ ರಲ್ಲಿ  ಪ್ರಾರಂಭವಾಯಿತು. ಈ ಕಟ್ಟಡವನ್ನು ಕನಿಷ್ಠ  ವೆಚ್ಚದಲ್ಲಿ ಹಾಗೂ  ಪರಿಸರ ಚಳಕವನ್ನು ಉಪಯೋಗಿಸಿ ೨೦೦೪ರಲ್ಲಿ ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ನ ಅವರು ನಿರ್ಮಿಸಿದರು.
ಗುಲಬರ್ಗಾ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕೇಂದ್ರ ಕಚೇರಿ : ೧೯೯೯ ರಲ್ಲಿ ಆಡಳಿತ ಸುಧಾರಣೆಗಾಗಿ ಇಂಧನ  ಇಲಾಖೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಯಿತು. ಮೊದಲಿಗೆ ಕರ್ನಾಟಕ ವಿದ್ಯುಚ್ಛಕ್ತಿ ಸಂಸ್ಥೆಯನ್ನು, ಕರ್ನಾಟಕ ವಿದ್ಯುತ ಪ್ರಸರಣ ನಿಗಮ ನಿಯಮಿತ  ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಎಂದು ಎರಡು ವಿಭಾಗಗಳಾಗಿ ಒಡೆಯಲಾಗಿದೆ.
          ನಂತರ ಜೂನ್ ೨೦೦೨ ರಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವನ್ನು ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ,  ಮಂಗಳೂರು ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಾಲ್ಕು  ಕಂಪನಿಗಳಾಗಿ ಒಡೆಯಲಾಯಿತು. ಇದಾದನಂತರ ಗುಲಬರ್ಗಾ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ವಿದ್ಯುತ್ ಹಂಚುವ ಜವಾಬ್ದಾರಿಯನ್ನು ನೀಡಲಾಗಿದೆ. ಇದರ ಕೇಂದ್ರ ಕಚೇರಿಯನ್ನು ಕಲಬುರಗಿ ನಗರದಲ್ಲಿ ಸ್ಥಾಪಿಸಲಾಗಿದೆ.
ಈಶಾನ್ಯ ಕರ್ನಾಟಕ ರಸ್ತೆ  ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿ, ಕಲಬುರಗಿ :
ಕರ್ನಾಟಕ ರಸ್ತೆ  ಸಾರಿಗೆ ಸಂಸ್ಥೆಯು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು  ನೀಡುವ ದುಷ್ಟಿಯಿಂದ ಕ.ರಾ.ರ.ಸಾ.ಸಂ ಯನ್ನು ಕರ್ನಾಟಕ ಸರಕಾರವು  ೨೨, ಪ್ರೇಬವರಿ, ೧೯೯೭ ರಲ್ಲಿ ೪ ವಿಭಾಗಗಳಾಗಿ  ಒಡೆಯಲಾಯಿತು. ಅವುಗಳೆಂದರೆ
೧) ವಾಯವ್ಯ ಕರ್ನಾಟಕ ರಸ್ತೆ  ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿ, ಹುಬ್ಬಳ್ಳಿ 
೨) ಈಶಾನ್ಯ ಕರ್ನಾಟಕ ರಸ್ತೆ  ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿ, ಕಲಬುರಗಿ
೩)  ಕರ್ನಾಟಕ ರಸ್ತೆ  ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿ, ಬೆಂಗಳೂರು.
೪) ಬೆಂಗಳೂರು  ಮಹಾನಗರ ಸಾರಿಗೆ ಸಂಸ್ಥೆ, ಕೇಂದ್ರ ಕಛೇರಿ, ಬೆಂಗಳೂರು.
             ಈಶಾನ್ಯ ಕರ್ನಾಟಕ ರಸ್ತೆ  ಸಾರಿಗೆ ಸಂಸ್ಥೆ ಅಧೀನದಲ್ಲಿ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯನ್ನು ಸೇರಿಸಲಾಗಿದೆ. ಈ ಸಂಸ್ಥೆಯ ಕೇಂದ್ರ ಕಚೇರಿಯು ಕಲಬುರಗಿ ನಗರದಲ್ಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ, ಕಾರ್ಯಾಲಯ ಕಲಬುರಗಿ : ನಮ್ಮ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ  ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹಾಗಿಯೇ ಬೆಂಗಳೂರು, ಕಲಬುರಗಿ, ಧಾರವಾಡ ವಿಭಾಗಗಳಲ್ಲಿ ತನ್ನ ಆಯುಕ್ತರ ಕಚೇರಿಯನ್ನು ಸ್ಥಾಪಿಸಿದೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿನ ಶಾಲೆಗಳನ್ನು ಕಲಬುರಗಿ ಆಯುಕ್ತರ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿ, ಕಲಬುರಗಿ : ಈ ಇಲಾಖೆಯು ಕೂಡ ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ನಾಲ್ಕು ಪ್ರಾದೇಶಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಕಲಬುರಗಿ ವಿಭಾಗದಲ್ಲಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿನ ಪದವಿ ಪೂರ್ವ ಕಾಲೇಜುಗಳನ್ನು ಸೇರಿಸಿ, ಈ ವಿಭಾಗದ ಪ್ರಾದೇಶಿಕ ಕಚೇರಿಯನ್ನು ಕಲಬುರಗಿ ನಗರದಲ್ಲಿ ಸ್ಥಾಪಿಸಲಾಗಿದೆ.
ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಕಚೇರಿ, ಕಲಬುರಗಿ : ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿ ಯೋಜನೆಗಾಗಿ ೨೦೦೯ ರಲ್ಲಿ ಈ ಮಂಡಳಿಯನ್ನು ಸ್ಥಾಪಿಸಲಾಯಿತು. ೨೦೧೩ ರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಈ ಮಂಡಳಿಯನ್ನು  ಪುನರ್  ರಚಿಸಲಾಯಿತು. ಈ  ಮಂಡಳಿಯ ಕಚೇರಿಯು ಕಲಬುರಗಿ ನಗರದಲ್ಲಿದೆ.
ವಿ.ಟಿ.ಯು ವಿಭಾಗೀಯ ಕೇಂದ್ರ, ಕಲಬುರಗಿ :  ೧೫ ಎಕರೆ ಭೂಮಿಯಲ್ಲಿ ವಿಶ್ವೆಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕಲಬುರಗಿ ನಗರದಲ್ಲಿ  ತನ್ನ ವಿಭಾಗೀಯ ಕೇಂದ್ರವನ್ನು  ಸ್ಥಾಪಿಸಿದೆ. ಈ ವಿಶ್ವವಿದ್ಯಾಲಯವು ಕಲಬುರಗಿ, ಮೈಸೂರು, ಬೆಂಗಳೂರು ಮೂರು ಕಡೆಗೆ ತನ್ನ  ವಿಭಾಗೀಯ ಕೇಂದ್ರವನ್ನು  ಹೊಂದಿದೆ.
ಕೇಂದ್ರ ಕಾರಾಗೃಹ, ಕಲಬುರಗಿ : ನಮ್ಮ ರಾಜ್ಯದಲ್ಲಿ ಬೆಂಗಳೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಕಲಬುರಗಿ, ತುಮಕೂರು ಹೀಗೆ ಒಟ್ಟು ೬ ಕೇಂದ್ರ ಕಾರಾಗೃಹಗಳಿವೆ. ಕಲಬುರಗಿಯಲ್ಲಿನ ಕೇಂದ್ರ ಕಾರಾಗೃಹವು ನಗರದಿಂದ ಸುಮಾರು ೬ ಕಿಲೋಮೀಟರ್ ದೂರದಲ್ಲಿದು, ಅಂದಾಜು ೧೦೦೦ ಕೈದಿಗಳು ಇರುವ ಜಾಗವನ್ನು ಹೊಂದಿದೆ.
ಜಿಲ್ಲಾ ವಿಜ್ಞಾನ ಕೇಂದ್ರ, ಕಲಬುರಗಿ :
         ಜಿಲ್ಲಾ ವಿಜ್ಞಾನ ಕೇಂದ್ರ, ಕಲಬುರಗಿ ಒಂದು ನ್ಯಾಶನಲ್ ಕೌನ್ಸಿಲ್ ಆಫ್ ಸೈನ್ಸ್ ಮುಸ್ಯಿಂಯನ ಸಂವಿಧಾನ  ಘಟಕ ಹಾಗೂ ಸ್ವಾಯತ್ತ ಸಂಸ್ಥೆ. ಇದು ಭಾರತ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ರ್ಕತಿ ಸಚಿವಾಲಯದ ಅಧೀನದಲ್ಲಿ ಬರುತ್ತದೆ. ಇದರ ಕೇಂದ್ರ ಕಛೇರಿಯು ಕೋಲ್ಕತಾದಲ್ಲಿದು. ಇದರ ಅಧೀನದಲ್ಲಿ ಒಟ್ಟು ೨೭ ವಿಜ್ಞಾನ ಕೇಂದ್ರಗಳಿವೆ. ರಾಷ್ಟ್ರೀಯ ವಿಜ್ಞಾನ ಕೇಂದ್ರಗಳು ಬೆಂಗಳೂರು, ಮುಂಬಯಿ, ದೆಹಲಿ, ಕೋಲ್ಕತಾ ನಗರಗಳಲ್ಲಿವೆ. ಇವುಗಳ ಅಧೀನದಲ್ಲಿ ಪ್ರಾದೇಶಿಕ, ಸಹ ಪ್ರಾದೇಶಿಕ ಮತ್ತು ಜಿಲ್ಲಾ ಮಟ್ಟದ ವಿಜ್ಞಾನ  ಕೇಂದ್ರಗಳಿವೆ. ಜಿಲ್ಲಾ ವಿಜ್ಞಾನ ಕೇಂದ್ರ, ಕಲಬುರಗಿ ನಮ್ಮ ರಾಜ್ಯದಲ್ಲಿರುವ ಒಂದೇ ಜಿಲ್ಲಾ ಮಟ್ಟದ ವಿಜ್ಞಾನ ಕೇಂದ್ರವಾಗಿದ್ದು, ಜನವರಿ ೬, ೧೯೮೪ ರಲ್ಲಿ ಸ್ಥಾಪಿಸಲಾಗಿದೆ. 
ಇಲ್ಲಿ ಲಭ್ಯವಿರುವ ಸೌಲಭ್ಯಗಳು: ಫನ್  ಸೈನ್ಸ್ (Fun Science), ಎಲೆಟ್ರಾನಿಕ್ಸ್  ಗ್ಯಾಲರಿ (Electronics Gallery), ವಿಜ್ಞಾನ ಉದ್ಯಾನ( Science Park), ೩ಡಿ ತೇಟರ್ (3D Theater),  ಡಿಜಿಟಲ್ ಪ್ಲಾನೆಟೋರಿಯಂ (Digital Planetarium) ಹಾಗೂ ರಾತ್ರಿಯ ಸಮಯದಲ್ಲಿ ಆಕಾಶವನ್ನು ವೀಕ್ಷಿಸಲು ದೂರತೋರುಕ (Telescope). ಇತಿಹಾಸದ ಮುಂಚಿನ (Prehistoric Park) ಉದ್ಯಾನ ನಿರ್ಮಾಣದ ಕಾರ್ಯ ಚಾಲ್ತಿಯಲ್ಲಿದೆ.
ಚಂದ್ರಶೇಕರ ಪಾಟೀಲ ಜಿಲ್ಲಾ ಕ್ರೀಡಾಂಗಣ ಕಲಬುರಗಿ :
             ಜಿಲ್ಲಾ ಕ್ರೀಡಾಂಗಣವು ಕ್ರಿಕೆಟ್, ಹಾಕಿ, ವಾಲಿಬಾಲ್, ಬಾಸ್ಕೆಟ್ ಬಾಲ್ ಕೀಡ್ರಾಂಗಣಗಳನ್ನು ಒಳಗೊಂಡಿದೆ. ಈ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೆನಿಸ್ ಕೋರ್ಟಯಿದು. ಇಲ್ಲಿ ಕೆಲವು ಅಂತರರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳು ಕೂಡ ನಡೆದಿವೆ. ಇನ್ನೂ ರಾಷ್ಟ್ರೀಯ ಮಟ್ಟದ ಈಜು ಕೊಳಯಿದು, ಇಲ್ಲಿ ಹಲವಾರು ರಾಷ್ಟ್ರೀಯ ಈಜು ಪಂದ್ಯಾವಳಿಗಳು ನಡೆದಿವೆ.