ನಾನು ನೋಡಿದ ಸಿನಿಮಾ

Submitted by kamala belagur on Tue, 01/26/2016 - 00:29

ನಾನು ನೋಡಿದ ಸಿನಿಮಾ ಡಾ ಬಿಜು ರವರ  -- "Veettilekkulla Vazhi". (The Way home).
ಚಿಕ್ಕದಾದರೂ ಮನ ಕಲಕುವ ಕಥೆ ಹೊಂದಿದ್ದು ಭಯೋತ್ಪಾದಕತೆಯ ವಿರುದ್ಧ ಕಟುವಾದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ . 
ದೆಹಲಿಯ ಭಯೋತ್ಪಾದಕ ದಾಳಿಗೆ ತನ್ನ ಹೆಂಡತಿ ,ಮಗು ಅಹುತಿಯಾದಾಗ ಮೂಕ ಸಾಕ್ಷಿಯಾಗಿದ್ದ                    ನಾಯಕ ಪೃಥ್ವಿರಾಜ್ ಜೈಲಿನ ಕೈದಿಗಳ ಶುಶ್ರೂಷೆಗಾಗಿ ನಿಯುಕ್ತಗೊಂಡ ವೈದ್ಯ.ಮಹಿಳಾ ಸುಯಿಸೈಡ್ ಬಾಂಬರ್ ಒಬ್ಬರ ಉಪಚರಿಸುವ ಸಂಧರ್ಭವೊಂದರಲ್ಲಿ ಆಕೆಯ ಅಂತಿಮ ಆಸೆಯಂತೆ  ಕೇರಳದ ಹಳ್ಳಿಯೊಂದರಲ್ಲಿರುವ ಆಕೆಯ ಮಗನನ್ನು ಅವನ ಅಪ್ಪನಲ್ಲಿಗೆ ಸೇರಿಸುವ ಹೊಣೆಯನ್ನು ಹೊರುತ್ತಾನೆ. 
                      ವೈದ್ಯ ಕುಟುಂಬದ ಬಲಿ ತೆಗೆದುಕೊಂಡ ದೆಹಲಿ ಸ್ಫೋಟದ ಹಿಂದಿನ ರೂವಾರಿ ಎಂದು ಪರಿಗಣಿಸಲ್ಪಟ್ಟ ಅಬ್ದುಲ್ ತಾರಿಕ಼್ ಆ ಮಗುವಿನ ತಂದೆ. ತನಗೊಬ್ಬ ಮಗನಿರುವುದೇ ತಿಳಿಯದ ಆ ಭಯೋತ್ಪಾದಕನ ಮಡಿಲಿಗೆ ಸೇರಿಸಲು ಅವನ ಮಗನೊಂದಿಗೆ  ನಾಯಕನ ಪ್ರಯಾಣ ಆರಂಭವಾಗುತ್ತದೆ. ಜೈಸಾಲ್ಮೆರ್, ಪುಷ್ಕರ್ ದಾಟಿ ಲಡಾಕ್ ತಲುಪಬೇಕಾದ ಹಾದಿ ಬಲು ತ್ರಾಸದಾಯಕವಾಗಿರುತ್ತದೆ. ಪೋಲೀಸರ ಕಣ್ತಪ್ಪಿಸಿ, ಭಯೋತ್ಪಾದಕ ತಂಡದ ಬೆಂಗಾವಲಿನಲ್ಲಿ  ಅಬ್ದುಲ್ ತಾರಿಕ಼್ ನನ್ನು ಭೇಟಿಮಾಡುವುದು ಸರಳವಾಗಿರಲಿಲ್ಲ .  
ಪೋಲೀಸರಷ್ಟೇ ಅಲ್ಲದೆ ಭಯೋತ್ಪಾದಕ ತಂಡದವರು ಕೂಡ ನಾಯಕನನ್ನು ಸಂಶಯದಿಂದಲೇ ನೋಡುತ್ತಾರೆ.
        ನಿನಗೆ ಸಂಬಂಧಿಸದ ಮಗುವಿನ ವಿಷಯದಲ್ಲಿ ಆಸಕ್ತಿಯನ್ನು ಹೊಂದಿ, ನಿನ್ನ ಜೀವನವನ್ನು ಪಣವಾಗಿಟ್ಟ ನಿನ್ನ ಬಗ್ಗೆ ನಿಮ್ಮ ಸಮಾಜ ಕೂಡ ಅನುಮಾನದ ದೃಷ್ಟಿಯಿಂದಲೇ ನೋಡಿದರೆ ಆಶ್ಚರ್ಯವಿಲ್ಲ ಎಂದ ಭಯೋತ್ಪಾದಕ ತಂಡದ ಸದಸ್ಯನಿಗೆ ಉತ್ತರ ನೀಡುತ್ತಾ ನಿಮ್ಮ ಕೃತ್ಯದಿಂದ ನಿಮಗೆ ಸಂಬಂಧಿಸದ ಜೀವಗಳ ಬಲಿಯಾಗುತ್ತೆ . ನನ್ನದು ಜೀವ ಉಳಿಸುವ ಶ್ರೇಷ್ಠ ಕೆಲಸ. ಏನೇ ಆದರೂ ಹಿಂದೆಗೆಯಲಾರೆ ಎನ್ನುವ ನಾಯಕನ ಮಾತಿನಲ್ಲಿ ಅವನ ದೃಡ ಸಂಕಲ್ಪ ವ್ಯಕ್ತವಾಗುತ್ತದೆ. 
          ಈ ನಡುವೆ ಭಯೋತ್ಪಾದಕ ತಂಡದ ಮೇಲಾದ ದಾಳಿ, ಹಸಿವು ನೀರಡಿಕೆಗಳು, ದಟ್ಟ ಮರುಭೂಮಿಯ ತಾಪಕ್ಕೆ ನಾಯಕ ನಲುಗುತ್ತಾನೆ. ಈ ನಡುವೆ  ಮಗು ಮತ್ತು ನಾಯಕನ ನಡುವೆ ಭಾಂದವ್ಯ ಉಂಟಾಗಿರುತ್ತದೆ. 
          ತಂಡದ ಮುಖ್ಯಸ್ಥನನ್ನು ಭೇಟಿ ಮಾಡುವ ಸಂಧರ್ಭ ಅನಿವಾರ್ಯವಾಗಿ ಒದಗಿ ಬರುತ್ತದೆ.ಗುಂಡೇಟಿನಿಂದ ಗಾಯಗೊಂಡು ಸತ್ತಿರುತ್ತಾನೆ. ಅವನ ಮಗುವನ್ನು ಅವನಿಗೆ ಮರಳಿಸಿ ತನ್ನ ಕುಟುಂಬದ ಸಾವಿಗೆ ಕಾರಣನಾದ ಅವನ ಮೇಲೆ ಸೇಡು ತೀರಿಸಿಕೊಳ್ಳುವ ತನ್ನ ಆಸೆ ಫಲಿಸದಿದ್ದುದಕ್ಕಾಗಿ ನಾಯಕನಿಗೆ  ನಿರಾಸೆಯಾಗುತ್ತದೆ .

Rating
No votes yet