ಪಂಚಕರ್ಮರು - ಸಣ್ಣ ಕಥೆ

ಪಂಚಕರ್ಮರು - ಸಣ್ಣ ಕಥೆ

 
ಕತ್ತಲೆಯ ಗರ್ಭ ಸೀಳಿ ಬೆಳಕು ಹರಿಯುವ ಮುನ್ನ ಸ್ಟೇಷನ್ ತಲುಪಿದ ಗಾಡಿ ಕೂಡಲೇ ಇಳಿಯಿರಿ ಎಂಬಂತೆ ತನ್ನ ಶಂಖನಾದವ ಮೊಳಗಿಸಿತು.
ಎಲ್ಲಡೆ ಗಾಢಂಧಕಾರ ಗಾಡಿ ಸ್ಟೇಷನ್‍ನಲ್ಲಿ ಬಂದು ನಿಂತಿದ್ದರೂ ಕರೆಂಟ್ ಇಲ್ಲದ್ದರಿಂದ ಯಾವ ಸ್ಟೇಷನ್‍ನಲ್ಲಿz್ದÉೀವೆ ಎಂಬುದು ಒಂದು ಕ್ಷಣ ಅರಿವಿಗೆ ಬಾರದಿದ್ದರೂ ಹಲವರಾರು ವರ್ಷಗಳಿಂದ ನಿರಂತರವಾಗಿ ಪ್ರಯಾಣ ಮಾಡುತ್ತಿದ್ದ ನಿಂಗಪ್ಪನಿಗೆ ಯಾದಗಿರಿ ಸ್ಟೇಷನ್ ಎಂದು ಕಂಡು ಹಿಡಿಯಲು ತಡವಾಗಲಿಲ್ಲ.
ರಾತ್ರಿ ಕಳೆದು ಬೆಳಕು ಹರಿಯುವ ಸೂಚನೆ ಇದ್ದರೂ ಇನ್ನು ಕತ್ತಲು ಬಹಳ ಇದ್ದುದರಿಂದ ಸ್ಟೇಶನನಲ್ಲಿ ಯಾರ ಚಲನವಲನಗಳಿರಲಿಲ್ಲ. ಕತ್ತಲ ಬಾಳಾದರೀ ಇಲ್ಲೆ ಇದ್ದು ಬೆಳಕರಿದ ಮ್ಯಾಲೆ ಬಸ್ಟಾೃಂಡ್‍ಗೆ ಹೋಗಮ ಎಂದ ಹೆಣ್ತಿ ಮಾತು ಸರಿ ಅನಿಸಿ ಸ್ಟೇಷನ್‍ನ ಒಂದು ಮೂಲೆಯಲ್ಲಿ ಸಾಮಾನುಗಳನ್ನಿಟ್ಟು ಕುಳಿತರು.
ರಾತ್ರಿ ಎತ್ತ ನೋಡಿದರು ಕತ್ತಲು. ಮೊದಲೆ ಇಲ್ಲಿ ಯಾರು ಕಾಣುತ್ತಿಲ್ಲ. ಕೆಲವು ಮಂದಿ ಅಲ್ಲಲ್ಲೇ ಮಲಗಿಕೊಂಡಾರ. ಬೊಂಬಾಯಿಯಿಂದ ಬರೋ ಗಾಡಿಗೆ ಇಳಿದವರಲ್ಲಿ ಕೆಲವರು ತಮ್ಮ ಗಾಡಿ ತಗೊಂಡು ಮನಿಗೆ ಹೋಗುತ್ತಿರುವುದು ಕಂಡು ಮನದೊಳಗೆ ನಿಂಗಪ್ಪ  ಮನಸಿನ್ಯಾಗಿನ ಮಾತು ಆಡುತ್ತಿದ್ದ. ನಮ,್ಮಂಥ ಬಡವರಿಗೆಲ್ಲಿಂದ ಗಾಡಿ ನಮ್ಮೂರ ಬಸ್ ಮುಂಜಾನಿ ಬರ್ತದ ಅಲ್ಲಿವರಿಗೆ ನಮ್ಗಾ ಇದೆ ಸ್ಟೇಶನ ಗತಿ ಅಂತ ವಿಚಾರ ಮಾಡ್ತ ನೀ ಮಲಕೊ ನಾ ಕುಂಡ್ರುತಿನಿ ಅಂತ ಹೆಣ್ತಿಗೆ ಹೇಳಿದ. ಮಲಗಾಕ ಮನಿಲಿಂದ ಏನು ತರಲಿಲ್ಲ. ಹಾಸಿಗಿ ಇಲ್ಲ. ಬೊಂಬಾಯಿಯಿಂದ ನಿಂತೆ ಬಂದಿದ್ದರಿಂದ ಹಾಸಿಗಿ ವಿಚಾರನಾ ಬಂದಿಲ್ಲ ನೋಡು. ಇಲ್ಲಿಗಿ ಬಂದ್ ಮ್ಯಾಕ್ ಹಾಸಗಿ ವಿಚಾರ ಬಂತು. ಬೇರೆ ಯಾವ ದಾರಿ ಇಲ್ಲ. ಏನ್ ಮಾಡೋದು ಅಂತ ಮತ್ತ ಚಿಂತಿ ಮಾಡಹತ್ತಿದ. ಬಹಳ ದಿನದ ನಂತರ ಪೇಪರ್ ಓದೋಮ ಅಂತ ಸಂಜಿಮುಂದ ಸೋಲ್ಲಾಪುರ ಸ್ಟೇಷನ್ಯಾಗ ಖರೀದಿಸಿದ ಪೇಪರ್ ಬಲ್ಲಿ ಇತ್ತು ಅದನಾ ಹಾಸಿಗೊಂಡು ಮಲಗು ಅಂತ ನನ್ ಹೆಣ್ತಿಗೆ ಹೇಳಿದ. ಹೊಚಿಗ್ಯಾಕ ಇಲ್ಲ. ಇಲ್ಲಿ ದ್ವಾಮಿ ಬಾಳ್ ಆಂವ. ಕಡ್ಲಿಕತ್ಯಾವ ಅಂತ ಅಂದಳು. ನಮ್ ದೇಶಾದಾಗ ದಿನ ನಮ್ ರಕ್ತ ಕುಡಿಯೊ ಮಂದಿನೆ ಬಾಳ್ ಅದಾರಲೇ. ಕೆಲಸ ಇದ್ದಾಗ ನಮ್ಮಪ್ಪ ಇಲ್ಲಂದ್ರ ಸೂಳೆರ್‍ಪ್ಪ . ದುಡಿದು ದುಡಿದು ಬಟ್ಟಿ, ರಟ್ಟಿ ಎರಡು ಕೆಟ್ಟಾವ್ ಇಷ್ಟವರ್ಷ ದುಡಿದ್ರು ಸ್ವಲ್ಪರ ಕನುಕರ ಬರಲಾರಾದ ನಮ್‍ನ ಕೆಲಸದಿಂದ ತೆಗಿಲಿಲ್ಲ. ಇಪ್ಪತ್ತವರ್ಷ ನಿಯತ್ತಿಂದ ದುಡಿದದಕಾ ಅವರ ನಮಗಾ ಇಂಥ ಶಿಕ್ಷಾೃ ಕೊಟ್ಟಾರಲೇ. ಅವರಿಗಿಂತ ಈ ದ್ವಾಮಿನೇ ಪಾಡಲ್ಲೇನ. ಸುಮ್ಕೆ ಮಲಗು ಅಂದ. ಕೆಳಗ ಪೇಪರ ಹಾಸಿಗೆಂದ್ ಹುಟ್ಟ ಸೀರಿನೇ ಹೊಚಿಗೆಂದ್ ಮಲಗಿದಳು. ದ್ವಾಮಿ ಕಾಟಕ್ಕ ಅಕಿನ ತ್ರಾಸ್ ನೋಡಲಾರದಂಗಾತು ನಿಂಗಪ್ಪನಿಗೆ.
ಬೊಂಬಾಯಿ ಬಿಟ್ಟಮ್ಯಾಕ್ ಊರಿಗೆ ಬಂದ್ರ ಹುಟುಗೋಕ ಪಂಜಿ ಬೇಕಲಾ ಅಂತ ಊರಿಗೆ ಬರೋ ಮುಂದ ಪಂಜಿ ತರುತ್ತಿದ್ದ. ಅದು ಬಾಳ್ ಹುಟಗಲಾರದಕಾ ಬಾಳ್ ವರ್ಷದಿಂದೆ ಅದೇ ಪಂಜಿ ಇದ್ದುದು ನೆನಪ್ ಬಂದು ಬ್ಯಾಗಿನಾಗಿಂದ ಅದನಾ ತೆಗದು ಮಲಕೊಂಡ ಹೆಣ್ತಿಗಿ ಹೊಚ್ಚಿದ.
ಬೊಂಬಾಯಿಯಲ್ಲಿ ಬಾಳ್ ದಿನದಿಂದ ಇದ್ದದಕ ಪಂಜಿ ಅವಶ್ಯಕತೆ ಬಂದಿರಲಿಲ್ಲ. ಈಗ ನೋಡಿದರ ಅದು ಅಲ್ಲಲ್ಲಿ ಹರಿದು ತೂತು ಬಿದ್ದಿತ್ತು. ಆ ತೂತು ನಿಂಗಪ್ಪನ ನೋಡಿ ನೀನ್ನ ಜೀವನಾನೂ ಇದೆ ತರಹ ಅಲ್ವಾ ಅಂತ ಅಣಕಿಸುವಂತಿತ್ತು. 
ಒಂದಡೆ ಸಾಮಾನ್ ಕಾಯೋ ಕೆಲಸ. ಮತ್ತೊಂದಡೆ ಕಳ್ಳರ ಭಯ. ಸ್ವಲ್ಪ ನಿದ್ದೆ ಹತ್ತಿದರ ಮುಗಿತು. ನಾವು ಬರಿಗೈಲಿ ಮನೆಗೆ ಹೋಗಬೇಕಾಗತದ. ಏನ್ ಮಾಡಮ ಅಂತ ಸುಮ್ಮನೆ ಕುಂತಲ್ಲೆ ಜೋಲಿ ಹೊಡಿತಿದ್ದ. ದಿಗ್ಗನೆ ಎz್ದÉೀಳುವುದು. ಮತ್ತೆ ಕಣ್ಣುಮುಚ್ಚುವುದು ನಡೆದೆ ಇತ್ತು. ಚುಮಚುಮ ಚಳಿಯಲ್ಲಿ ಮಂದ  ಬೆಳಕು ಮೂಡಿ ಬೆಳಕು ಹರಿದಿರಬಹುದು ಅಂತ ಎದ್ದು ನೋಡಿದ ಆಗ್ಲೆ ಭಜಿ,ಚಾಹ, ವಗ್ರಾಣಿ ಮಾಡೋ ಬಂಡಿ ಮಂದಿ ಬರ್ರಿ ಬರ್ರಿ ಅಂತ ಕರಿತಿದ್ದರು. ಗರಂ ಗರಂ ಚಾಯ್, ವಗ್ರಾಣಿ ಗರಂ ಬರ್ರಿ ಅಂತ ಕೂಗುತ್ತಿರುವುದು ಕೇಳಿ ಬರುತ್ತಿತ್ತು. 
ಬೆಳಗೆದ್ದು ಬಸ್ ಹತ್ತಿ ಊರಿಗ ಬಂದ ಮನಿ ಮುಂದ ನಿಂತು ಒಂದರಕ್ಷಣ ಮನಿ ನೋಡಿದ ನಿಂಗಪ್ಪನಿಗೆ ಎದಿ ದಸ್ಕಕ್ಕೆಂದಿತು.
ಮನಿ ಅಂದ್ರ ಅದು ಮನೆ ಆಗಿರಲಿಲ್ಲ. ಅರ್ಧ ಮುರಿದು ಬಿದ್ದ ಬಾಕ್ಲಿ, ಮಳಿಗಾಲದಾಗ ಸೋರಿ ಸೋರಿ ಸಾಕಾಗಿ ಅಲ್ಲಲ್ಲೇ ಹರಿದ ಮಣ್ಣು, ಗ್ವಾಡಿಗಿ ಸಾರಿಸಿದ ಮಣ್ಣಿನ ಬಣ್ಣ ಹೋಗಿ ಕೆಂಪು, ಬಿಳಿ ಎಲ್ಲಾ ತೇಲಿತ್ತು. ಒಕ್ಕಲುತನ ಬಿಟ್ಟೋಗಿದ್ರಿಂದ ಬಂಡಿ ಗಾಲಿ ಆಸರಕ್ಕ ಇರಲಿ ಅಂತ ಮನಿ ಬಾಗಿಲಿಗಿ ಹಚ್ಚಿದ್ದು ಬಾಳ್ ದಿನದಿಂದ ಬಿಸಿಲ ಮಳಿ ತಿಂದು ಅಲ್ಲಲ್ಲಿ ಗೀರಿಕೊಂಡ್ ತಿಂದ ಜೇಡಿ ಮಣ್ಣ ಹತ್ತಿ ಹುಳ ತಿಂದೋಗಿತ್ತು. ಮುಟ್ಟಿದರೆ ಇನ್ನೇನು ನಮ್ಮ ಮ್ಯಾಲ ಬೀಳತದ ಏನ್ ಅನ್ನೋ ಹಂಗಾಗಿದ್ದ ಮನೆ ಮುಂದಿನ ಚಪ್ಪರಾ. ಅರ್ಧ ಗ್ವಾಡಿ ಬಿದ್ದಿದ್ದರಿಂದ ಅದರ ಮೇಲೆ ಇಟ್ಟಿದ್ದ ಮನೆಯ ತುಂಡು ನಿಂಗಪ್ಪನ ನೋಡಿ ನಾ ಇನ್ನಾ ಜೀವಂತ ಇದ್ದಿನಿ ನಿನ್ನಂಗ ಅಂತ ಅಣಕಿಸುತ್ತಿತ್ತು. ಇವೇಲ್ಲ ನೋಡಿ ನಿಂಗಪ್ಪನಿಗೆ ತಲೆ ತಿರುಗಿದಂಗಾಗಿತ್ತು. ಮನಿ ಎದರು ಹಾಕಿದ್ದ ಬೇನಿಗಿಡ ಯಾರು ದಿಕ್ಕಿಲ್ಲದಿದ್ದರೂ ಅವರು ಇವರು ಕಡಿದು ಸಣ್ಣಗಾಗುತ್ತಿದ್ದರೂ ತನ್ನ ಜೀವನಾನ ಇನ್ನು ಉಳಿಸಿಕೊಂಡು ಅರ್ಧಂಬರ್ಧ ನೆಳ್ಳು ಕೊಡುತ್ತಿತ್ತು. ಗಿಡದ ಬದಿಗಿ ಸಾಮಾನು ಇಟ್ಟು ನಿಂಗಪ್ಪನ ಹೆಣ್ತಿ ಮನೆ ಹಸ ಮಾಡಿಲ್ಲಿಕ್ಕತ್ತಿದಳು. ಹೊತ್ತು ಏರುತ್ತಿತ್ತು. ಗಿಡದ ನೆಳ್ಳಿಗೆ ಕುಳಿತು ಸಾಕಾಗಿತ್ತು ಕೆಲಸ ಇಲ್ಲ. ಬರಿಗೈ ಬೇರೆ ತಿಂಗಳೋಪ್ಪತ್ತಿನಿಂದ ಇರೋ ಕೆಲಸ ಕಳದದ್ದರಿಂದ ಎಲ್ಲಾ ಖಾಲಿ ಆಗಿ ಇಪ್ಪತ್ತು ವರ್ಷದಿಂದ ಹೇಗೆ ಬರಿಗೈಲಿ ಬೊಂಬಾಯಿ ಸೇರಿದ್ದನೋ ಅದೇ ರೀತಿ ಇಂದು ಬರಿಗೈಲಿ ಊರು ಸೇರಿದ್ದ ನಿಂಗಪ್ಪ. ಚಿಂತೆಯ ಕಾರ್ಮೋಡ ವ್ಯಾಪಕವಾಗಿ ಸುಡುತ್ತಿದ್ದರು ಚಂಚಲ ಮನಸ್ಸು ಸೀಮಿತಕ್ಕೆ  ಬರದೇ ಹೋಯ್ದಾಡುತಿತ್ತು. ಹೊಯ್ದಾಟದ ನಡುವಯೇ ಭಾರ ಅತಿಭಾರ ಎಂದೆಣಿಸಿ ಏನು ಮಾಡಿದರು ಸರಿಹೋದ ಸಮಯ ಸರಿದೋಗಿಸಲು ಏನು ಯೋಚನೆ ಬಾರದೆ ಚಹಾ ಕುಡಿಲಿಕ್ಕೆ ಹೋಟೆಲ್‍ಗೆ ಹೋಗೋದು ಎಂದು ಹೋಟೆಲ್ ಹಾದಿ ಹಿಡಿದ.
ಬಾಪ್ಪಾ ನಿಂಗ ಎಲ್ಲಿಗಿ ಹೊಂಟಿದಿ. ಅಂತ ಹಿಂದಿನಿಂದ ಬಂದ ಧ್ವನಿ ಕೇಳಿ ಹಿಂತುರಿಗಿ ನೋಡಿದ ಊರಗೌಡ ಭರಮಣ್ಣಗೌಡ ಕರೆದದ್ದು ಕಂಡಿತು. ಎಲ್ಲಿಗಿಲ್ಲ ಯಪ್ಪಾ ಸುಮಮನೆ ಕುಂತು ಬ್ಯಾಸರಕಿ ಆಗ್ಯಾದ ಚಾ ಕುಡಿಲಿಕ್ಕೆ ಹೊಂಟಿನಿ. ಬಾ ಲೇ ಇಲ್ಲಿಗೆ ತರಸಮು. ಬಾಳ್ ದಿನಾ ಆಯ್ತು. ಬೇಟ್ಯಾಗಿಲ್ಲ. ಗೌಡ ಮನಿಮುಂದಿನ ಕಟ್ಟಿಮ್ಯಾಗ ಕುಂತಿದ್ದ  ಕುಳಿತಲ್ಲಿಂದಲೇ ಹಿಡಿ ಸೇದ್ ಬಿಡಿ ಸೇದ್ ಅಂತ ಒಂದ್ ಬೀಡಿ ಎಸಿದಾ. ಬೊಗಸ್ಯಾಗ ಬಿದ್ದ ಬೀಡಿ ಹಿಡಿದ ಒಂದ್ ಝುರಿ ಎಳಿದ್ ಮ್ಯಾಗ ಪ್ರಪಂಚದಾಗ ಸುಖ ಅಂದ್ರೆ ಇದೆ ಇರಬೇಕು ಅಂತೇಣಿಸಿ ನಿಂಗಪ್ಪ ಸ್ವಲ್ಪ ಅರಾಮ ಎಣಿಸಿ. ಅಲ್ಲೆ ಹತ್ತಿರ ಇದ್ದ ದೊಡ್ಡ ಕಲ್ಲಿಗಿ ಬೆನ್ನು ಆಣಿಸಿ ಸ್ವಲ್ಪ ಅರಾಮ ಎಣಿಸುವಂತೆ ಒರಗಿ ಕುಂತ. ಅಲ್ಲಲೇ ಕೋಡಿ ಬೊಂಬಾಯಿ ಸೇರಿದಮ್ಯಾಗ ಮನಿ, ಹೊಲ, ಊರೆ ಮರ್ತಲ್ಲಲೇ ಅಂತ ಭರಮಣ್ಣಗೌಡ ಮಾತಿಗೆ ಪೀಠಿಕೆ ಹಾಕಿದೆ. ಹಂಗ್ಯಾಕ್ ಅಂತಿರೀ ಯಪ್ಪ. ಈ ಮಣ್ಣಿನ ಋಣ ಇನ್ನ ತೀರಿಲ್ಲ ಅಂತ ನಿಂಗಪ್ಪ ತನ್ನ ದಯಾನಿಯ ಸ್ಥಿತಿಯನ್ನ ಬಿಚ್ಚುವುದರಲ್ಲಿದ್ದ. 
ಈಗೇನ್ ಮಕ್ಳು ಮರಿ ಎಲ್ಲಾ ದೊಡ್ಡೋರೋ ಆಗ್ಯಾರ್ ಬಾಳ್ ಗಳಿಕಿ ನಡದಿರಬೇಕಲ್ಲಲೇ ಅಂತ ನಿಂಗಪ್ಪನ ಯೋಚನಾ ಶಕ್ತಿಗೆ ಬ್ರೆಕ್ ಹಾಕಿದ ಗೌಡ ನಿಂಗಪ್ಪನ ಬೆಂದ ಬದುಕಿನ ಒಲೆಗೆ ಕಿಡಿಹೊತ್ತಿಸಿದ. 
ಎಲ್ಲಾ ನೀವ್ ಹಾಕಿದ ಬಿಕ್ಷಾರೀ ಯಪ್ಪ. ಅಂತ ನಿಂಗಪ್ಪ ಗೌಡನ ಕಿಡಿಗೆ ಹೊಗೆಯಾಕಿದೆ. ಅಲ್ಲಲೇ ಕೋಡಿ ನಿಮಗೇನ್ ನಮ್ಮ ಹಿರೇರ್ ಬಿಟ್ಟಿ ಕೊಟ್ಟಾರೇನ್ ರಟ್ಟಿ ಮುರಿವಂಗ ದುಡಿದ್ರಿ. ನಿಮ್ಮ ಮುತ್ತಾತನ ಕಾಲದಿಂದ ನಮ್ಮನಿಗಿ ಜೀವ ಸವೆಸಿದ್ರಿ ಅಂತ ನಾಕ್ ಎಕಿರ್ಯಾ ಹೊಲ ಕೊಟ್ಟಾರಪ್ಪ. ಅದೇನ್ ದೊಡ್ ಇಷ್ಯಾ. ಅಂತ ಗೌಡ ತಾವು ಏನ್ ದೊಡ್ಡ ಸಹಾಯ ಮಾಡಿಲ್ಲ ಅನ್ನುವಂಗ ತೋರಿಕೆ ಮಾತನಾಡಿದ.
ಭರಮಣ್ಣಗೌಡನ ಭಾವನಾತ್ಮಕ ಮಾತು ಕೇಳಿ ನಿಂಗಪ್ಪನ ಕಣ್ಣಿನಿಂದ ನೀರ್ ಹನಿ ತೊಟ್ಟಿಕ್ಕಿದ್ದು ನೋಡಿ. ಏನ್ ಇಷ್ಟ್ ಸಣ್ಣ ವಿಷಯಕ್ಕೆಲ್ಲ ಕಣ್ಣೀರ್ ಹಾಕಿದ್ರ ಹೆಂಗ್ ನಿಂಗ. ಮಾನೋರಾಗಿ ಹುಟ್ಟಿದ ಮ್ಯಾಲ್ ಇಷ್ಟು ಮಾಡದಿದ್ರ ಹೆಂಗಾ ಕೋಡಿ ಅಂತ ಹಳ್ಳಿಗೌಡ್ರು ಅಂದ್ರ ಹಳ್ಳಿಗಿ ಅಪ್ಪ ಇದ್ದಂಗಲೆ ಮಕ್ಕಳಿಗೆ ಕಷ್ಟ ಆದ್ರ ನೋಡ್ದ ಕುಂಡ್ರಂಗಾತದೇನ್. ಈ ಹಳ್ಳಿ ಜನ ಕಷ್ಟ ಬಂದ್ರ ಎಲ್ಲಿಗೋಗತಾರ. ಅಂತ ನಂಬಲ್ಲಿ ಬರ್ತಾರಲ ಅದಕಾ ಅವರನ ನೋಡೋ ಕಾರ್ಯ ನಮ್ದಪ ಅಂದ ಗೌಡ. ಅಲ್ರಿ ಯಪ್ಪ. ಇಷ್ಟ್ ದೊಡ್ಡ್ ಮನಸ್ ಇರೋ ಹಳ್ಳಿ ಬಿಟ್ಟು , ಕೆಟ್ಟ್ ಪಟ್ಟಣ ಸೇರ್ ಅಂತ ಹೇಳೋದನ್ನ ಕೇಳಿ ನಮ್ಮ ಹಿರಿಕರು ಮಡಿದ ಮಣ್ಣ ಬಿಟ್ಟು  ಹಣದ ಮಾಯೆ ಅರಸಿ ಬೊಂಬಾಯಿಗೆ ಹೋಗಿ ಮತ್ತಾ ತಿರುಗಿ ಮರಳಿ ಮಣ್ಣಿಗೆ ಸೇರುವಂಗಾತು ನೋಡ್ರಿ ಅಂತ ನಿಂಗಪ್ಪ ತನ್ನ ಬೆಂದ ಬದುಕಿನ ಪುಟಗಳನ್ನ ತಿರುವಿದ.
ಮತ್ತೇನ್ ಕಥಿನಿಂದು ಏನೋ ಹೇಳಿಕತ್ತಿದಿ. ಮನಿಕಡಿ ಎಲ್ಲಾ ಅರಾಮಾದರಾ ಇಲ್ಲ ಅಂತ ಗೌಡ ಕೇಳಿದ. ಎಲ್ಲ ಅರಾಮದರಾ ಯಪ್ಪ. ಕಲಿಗಾಲ ನಾವು ನಮ್ಮೋರು ಅನ್ನೋಂಗಿಲ್ಲ. ರೊಟ್ಟಿದ್ರ ಹೊಟ್ಟಿ. ಇಲ್ಲಂದ್ರ ಬಾಳ್ ಮೂರಾಬಟ್ಟಿ. ಅಂತ ನಿಂಗಪ್ಪ ತನ್ನ ಜೀವನದಲ್ಲಿ ಘಟಿಸಿದ ನೋವು ನಲಿವುಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ನಿಂಬಲ್ಲಿ ಕೆಲಸ ಬಿಟ್ಟ ಮ್ಯಾಲ ಬೊಂಬಾಯಿಗಿ ಹೋದಿವ್ರಿ. ಅಲ್ಲಿ ನಮ್ಮ ಬೀಗ ಒಬ್ಬಾಂವ ಮುನ್ಸಿಪಾಲಿಟಿನ್ಯಾಗ ಕೆಲಸ ಮಾಡತ್ತಿದ್ದ. ಅಂವ ನಮಗಾ ಕೆಲಸ ಹಚ್ಚಿದ. ಎಲ್ಲಾ ನಿಮ್ಮ ಪುಣ್ಯ ಅಂತಂದ ನಿಂಗಪ್ಪನ ಮಾತ ಕೇಳಿದ ಗೌಡ ಎಲ್ಲಿ ಪುಣ್ಯಲೇ ಪುಣ್ಯ ಪಾಪ ಪುಸ್ತಕದ ಮ್ಯಾಲ ದುಡಿಯೋನ್ ಶಕ್ತಿ ರಟ್ಟಿಮ್ಯಾಲ ಅನೋದು ಗೊತ್ತಿರಲಿ. ಒಟ್ಟಿನಲ್ಲಿ ಅರಾಮಿದ್ರಿ ಇಲ್ಲ ಅಂತ ಗೌಡ ಕರುಣೆ ತೋರಿಸಿದ. ಎಲ್ಲಾ ಅರಾಮಿದ್ದಿವ್ರಿ ಯಪ್ಪ ಅಂದ ನಿಂಗ್ಪಪನಿಗೆ ಮಕ್ಕಳೇಷ್ಟ್ ಆವಾ ಅಂತ ಗೌಡ ಕೇಳಿದ ನಾಕ್ ಅದಾವ್ರಿ. ಎರಡ್ ಹೆಣ್ಣು, ಎರಡ್ ಗಂಡ್, ಇಬ್ಬರನ್ನ  ಅಲ್ಲೆ ಸಾಲಿಗಿ ಹಾಕಿನಿ. ಒಬ್ಬಾಂವ ಅಲ್ಲಿ ಮುನಿಸಿ ಪಾಲಿಟಿನ್ಯಾಗ ಕೆಲಸ ಮಾಡ್ತಾನ. ಇನ್ನೊಬ್ಬಾಕಿ ದೊಡ್ಡಾಕಿ ಆಗ್ಯಾಳ ಈ ವರ್ಷ ಗಂಡ್ ನೋಡಿ ಮದುವಿ ಮಾಡಮ ಅಂತ ಇತ್ತು.  ಈಗ ನಮ್ಮ ಬಾಳ್ ಟೆಂಗ್ ಹೊಡದು ನಾಕ್ ಹೋಳ್ ಆಗ್ಯಾದ ಅಂತ ನಿಂಗಪ್ಪ ಬಾಳಿನ ಒಂದೊಂದು ಪುಟಗಳನ್ನ ತಿರುವುತ್ತ ಗೌಡನಿಗೆ ತನ್ನ ಕಥೆ ಹೇಳ್ಲಕ್ಕತ್ತಿದ. ನನ್ ಮೈಯಾಗ ತ್ರಾಣ ಇಲ್ಲ. ಹೆಣ್ತಿಗಿ ಕೆಲಸ ಮಾಡೋದು ಆಗಲ್ಲ. ದುಡಿಯೋ ಒಬ್ಬ ಮಗಾನಾ ಕೆಲಸದಿಂದ ತೆಗದಾರ ಅಂತ ಹೇಳಿದ. ಯಾಕಂತಲೇ? ಅಂತ ಗೌಡ ಆಶ್ಚರ್ಯ ಚಕಿತನಾಗಿ ಕೇಳಿದ. ಅದೇನೋ ಸ್ವಚ್ಛತಾ ಆಂದೋಲನ ಅಂತ. ಹೇಸರೇಳಿ ದೊಡ್ಡ ದೊಡ್ಡ ಮಷೀನ್ ತಂದಾರಾ. ಅವರು ರೋಡ್ ಬಳಿಲ್ಯಾಕ. ಆ ರಸ್ತಿ ಅಳೆದ್ರ ಇಡೀ ನಮ್ಮೂರೇ ಅರ್ಧ ಊರಾಗುತ್ತದ್ರಿ ಅಷ್ಟು ದೊಡ್ಡದು ಆದ ಆ ರಸ್ತೆ. ನಮ್ಮೂರ ಅರ್ಧದಷ್ಟಿರೋ ರೋಡನಾ ಅರ್ಧ ಗಂಟ್ಯಾಗ ಬಳಿದು. ರೋಡಿನ್ ಮ್ಯಾಗ ಬಿಳೋ ಬಿಸಿಲಿಗಿ ನಮ್ ತೆಲಿ ಬಾಚಿಗ್ಯಾಬಹುದು ನೋಡ್ ಯಪ್ಪ ಹಂಗ್ ಕಿಲಿನ್ ಮಾಡ್ತಾವ. ಈವರ್ಷ ಬಾಳ್ ಮಂದಿ ಬೇಕಾಗಿಲ್ಲ ಅಂತ ಅರ್ಧ ಮಂದಿನ್ ತೆಗದಾರ ಅದರಲ್ಲಿ ನನ್ ಮಗನೂ ಇದ್ದಾನ.ಅವನಲಿಂದ ಮನಿ ನಡಿತಿತ್ತು. ಅಲ್ಲಿ ಕುಂತ್ರು, ನಿಂತ್ರು, ರೊಕ್ಕ ಬೇಕ್ರಿ. ಅದು ದುಡ್ಡು ಇದ್ದೋರ್ ದುನಿಯಾ. ಕೆಲಸದಿಂದ ಯಾಕ್ ತೆಗೆದ್ರಿ ಅಂತ ಕೇಳಾಕ್ ಹೋದ್ರ ನಮ್ ಮಾತ್ ಯಾರ್ ಕೇಳ್ಲಕ್ಕ ತಯಾರಿಲ್ಲ. ಅಲ್ಲಿ ಕಮಿಷ್ನರ್ ತಮ್ಮ ಮಂದಿಗಿ ಇಟಗೊಂಡ ಉಳಿದೋರ್ನ ಕೆಲಸದಿಂದ ತೆಗೆದಾನ.(ತುಮ್‍ಲೋಗ್ ಹಚ್ಚಾ ಕಾಮ್ ನೈಕರತಿ  ಲೋಕಲ್ ವಾಲೋಂಕು ಲೇತೆ ಹೈ ಹಮ್. ಕ್ಯಾ ಕರಗಿ ಕರಲೋ) ಅಂತೇಳಿ ದಬಾಯಿಸಿ ಹೊರಗ ಕಳಿಸಿದಾ ಅಂತಿನಿ. ಸ್ಥಳೀಯರ ಹೆಸರಲ್ಲಿ ಜಾತಿ ರಾಜಕೀಯ ಮಾಡ್ತಾನ ಬೇಕೂಪ್ ಅಂತ ನಿಂಗಪ್ಪ ಸಿಟ್ಟಿನ ಭರದಾಗ ಜೋರಾಗಿ ಮಾತಾಡ್‍ಲಿಕ್ಕತ್ತಿದ. ನಿಂಗಪ್ಪನಿಗೆ ಸಿಟ್ಟು ಬಂದಿದೆ ಎಂದರಿತ ಗೌಡ ಇರಲಿ ಬಿಡಲೇ ಹುಟ್ಟಿಸಿದ ದೇವರು ಹುಲ್ಲು ಮೇಯಸ್ತಾನ್ ಏನ್ ನಿನ್ನ ಮಕ್ಕಳ್ ರಟ್ಯಾಗ ಬಲ ಆದ ಯಾಕ್ ಚಿಂತಿ ಮಾಡ್ತಿ ಅಂದನು.
ಇಲ್ಲ ಯಪ್ಪಾ ಎಲ್ಲಾ ಕಡೆ ತಮ್ ಮಂದಿನಾ ಇಡಿತಾರ ಆದ್ರ ನಮ್ ಜಾತಿ ಮಾತ್ರ ಖೂನ್ ಇಲ್ಲದ್ದು. ನಮ್ ಮಂದ್ಯಾವ ಒಬ್ಬ ಕಾಪೆರ್Çೀರೇಟರ್ ಅದಾನ ಅವನ ಮನಿಗಿ ಹೋದ್ರ ಯಾಕ್ ಬಂದ್ರಿ ಅಂತ ಬಾಗಿಲಲ್ಲೆ ನಿಲ್ಲಿಸಿ ಕೇಳಿ ಮಹಾರಾಷ್ಟ್ರ ಮದಿ ಕಾಮ್ ಕರಾಲಾ ಪಾಯಿಜೆ ಹಮ್ಚಾ ಮಾನುಷ್ ನಹಿ ಪಾಯಿಜೆ ಚಲೋ ಅಂತ ಬಾಗಿಲಾಕಿಬಿಟ್ಟ. ಬೋಸುಡಿಕೆ ಅಂತ ನಿಂಗಪ್ಪ ತನ್ನ ಒಡಲಾಳದ ನೋವನ್ನು ಊರಗೌಡನ ಮುಂದೆ ತೋಡಿಕೊಂಡ. ಈಗ ಅಕಾಡಿ ಕೆಲಸ ಇಲ್ಲ. ಇಕಾಡಿ ದುಡ್ಡಿನ್ ಆಮದಾನಿ ಇಲ್ಲ. ಹಿಂಗಾಗದ್ರಿ ನಮ್ ಬಾಳವಿ ಅಂತ ನಿಂಗಪ್ಪ ಗೌಡನ ಎದುರಲ್ಲಿ ಕಣ್ಣೀರ ತೆಗೆದು. ಈ ಮನುಷ್ಯರಾ ಸ್ವಾರ್ಥ, ಶೋಷಣೆಯಿಂದ ನಮ್ ದೇಶಾ ಆಳಾಗ್‍ತೈತಿ. ಇದನಾ ಕಾಪಾಡಕ್ಕ ಮತ್ತಾ ಮಹಾತ್ಮರು ಹುಟ್ಟಿ ಬರಬೇಕಾಗ್ಯಾದ ಶಿವ..ಅಂತ ನಿಂಗಪ್ಪ ಗೌಡನ ಎದುರು ಕೈಜೋಡಿಸಿ ಕುಳಿತಿರುವ ಭಂಗಿ ಎಂಥ ಕಲ್ಲು ಹೃದಯದವರಲ್ಲೂ ಕೂಡ ಭಾವನೆಗಳು ಉಕ್ಕಿ ಬಂದು ಕಣ್ಣಿರಿನ ಕೋಡಿ ಹರಿಸುವಂತಿತ್ತು..........