ಓ ಶಿವನೇ
ನೀನು ಸೃಷ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ,
ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ,
ಆದರೆ ಅದನ್ನು ದುರಾಸೆಯನ್ನಾಗಿ ಪರಿವರ್ತಸಿ,
ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ.
ಇವನಿಗೆ ಬದುಕಲು ಸುಂದರವಾದ ಪರಿಸರವನ್ನು ನೀ ನೀಡಿದೆ,
ಆದರೆ ಆ ಪರಿಸರವನ್ನೇ ನಾಶಮಾಡಿ,
ಸುಂದರ ಬದುಕು ಕಟ್ಟಲು ಹೊರಟಿದ್ದಾನೆ, ಅದು ಸಾಧ್ಯವೇ ಓ ಶಿವನೇ.
ಜೀವನದಲ್ಲಿ ಏನಾದರೂ ಸಾಧಿಸಲು ‘ನಾನು’ ಅನೋದನು ನೀ ನೀಡಿದೆ,
ಇಂದು ಇವನು ಇಡೀ ವಿಶ್ವಕ್ಕೆ ನಾನೇ ಅಧಿಪತಿ ಎಂದು,
ಹೇಗೆ ಹೊಡೆದಾಡಿಕೊಂಡು ಸಾಯುತ್ತಿದ್ದಾನೆ ನೋಡು ಓ ಶಿವನೇ,
ಬಾಳಿನಲ್ಲಿ ಪ್ರೀತಿಯನ್ನು ತುಂಬಲು ಸಂಬಂಧಗಳ ಆಸರೆಯನ್ನು ನೀ ನೀಡಿದೆ
ಆದರೆ ಇವನು ಅವುಗಳನ್ನು ತನ್ನ ಸ್ವಾರ್ಥಕ್ಕೆ ಬಳಿಸಿ,
ಅವುಗಳಿಗೆ ಬೆಲೆಯೆ ಇಲ್ಲದಾಗೆ ಮಾಡಿದ್ದಾನೆ ಓ ಶಿವನೇ
ಈ ಭೂಮಿ ಮೇಲೆ ಬದುಕಲು ಪುಟ್ಟ ಜಾಗವನ್ನು ನೀ ನೀಡಿದೆ,
ಆದರೆ ಇವನು ದುಡ್ಡಿನ ವ್ಯಾಮೋಹದಲ್ಲಿ
ಇಡೀ ಭೂಮಿಯನ್ನು ಕೊಂಡುಕೊಳ್ಳಲು ಹೊರಟಿದ್ದಾನೆ ಓ ಶಿವನೇ.
ಭೂಮಿಯ ಮೇಲೆ ನೀನು ಸೃಷ್ಟಿಸಿದ ಬುದ್ಧಿ ಜೀವಿ ಇವನೇ ಅಲ್ಲವೇ
ಆದರೆ ಇಂದು ಇವನು ಬುದ್ಧಿಯಿಲ್ಲದ ಜೀವಿಯಾಗಿ ಉಳಿದಿದ್ದಾನೆ ಓ ಶಿವನೇ.
ನೀನು ಮುಂದೆ ಸೃಷ್ಟಿಸಲು ಹೊರಟಿರುವ,
ಮಾನವನಲ್ಲಿ ಇವುಗಳನ್ನು ಸರಿಪಡಿಸಲಿಲ್ಲ ಎಂದರೆ,
ನೀನು ಸೃಷ್ಟಿಸಿದ ಈ ಸುಂದರ ಜಗತ್ತಿಗೆ ಉಳಿಗಾಲಿಲ್ಲ ಓ ಶಿವನೇ.
Comments
ಉ: ಓ ಶಿವನೇ
ಜಗತ್ತೇ ಹೀಗೆ! ಅದು ಇರುವಂತೆ ಒಪ್ಪಿಕೊಳ್ಳಬೇಕಾಗಿದೆ. ಸೃಷ್ಟಿ, ಸ್ಥಿತಿ. ಲಯಗಳಿದ್ದರೇನೇ ಜಗತ್ತು ಸುಂದರ, ಪರಿಪೂರ್ಣವಾಗುವುದು! ಸದಾ ಸುಂದರವಾಗಿರಲಿ ಎಂದು ಬಯಸುವುದೇ ಕವಿಹೃದಯ!!
In reply to ಉ: ಓ ಶಿವನೇ by kavinagaraj
ಉ: ಓ ಶಿವನೇ
ನಮಸ್ಕಾರ ಸರ್.ಪ್ರತಿಕ್ರಿಯೆಗೆ ವಂದನೆಗಳು. ಕವಿ ಮನಸ್ಸು ಯಾವಾಗಲೂ ಸುಂದರ ಜಗತ್ತನು ಬಯಸುತ್ತದೆ ಸರ್.ನೀವು ಹೇಳಿದು ನಿಜ.